Ayodhya Ram Mandir: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧ; ಹೇಗಿರಲಿದೆ ಗೊತ್ತಾ ಬೃಹತ್ ದೇಗುಲ?

Ayodhya Judgement: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ನೀಲನಕ್ಷೆ ರಚಿಸಲಾಗಿದೆ. ಇಲ್ಲಿನ ಸರಯೂ ನದಿಯ ದಂಡೆಯ ಮೇಲೆ ರಾಮ ಮಂದಿರ ನಿರ್ಮಿಸಲು ಕಳೆದ ವರ್ಷವೇ ಉತ್ತರ ಪ್ರದೇಶ ಸರ್ಕಾರ ನೀಲನಕ್ಷೆ ಸಿದ್ಧಪಡಿಸಿದೆ.

Sushma Chakre | news18-kannada
Updated:November 9, 2019, 4:06 PM IST
Ayodhya Ram Mandir: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧ; ಹೇಗಿರಲಿದೆ ಗೊತ್ತಾ ಬೃಹತ್ ದೇಗುಲ?
ಸಾಂದರ್ಭಿಕ ಚಿತ್ರ
Sushma Chakre | news18-kannada
Updated: November 9, 2019, 4:06 PM IST
ನವದೆಹಲಿ (ನ. 9): 5 ಶತಮಾನಗಳ ಬಹುಚರ್ಚಿತ ವಿವಾದವಾದ ಅಯೋಧ್ಯೆ ಪ್ರಕರಣದಲ್ಲಿ ಇಂದು ಸುಪ್ರೀಂಕೋರ್ಟ್​ ಮಹತ್ವದ ತೀರ್ಪು ಪ್ರಕಟಿಸಿದೆ. ಕೆಲವು ಷರತ್ತುಗಳನ್ನು ವಿಧಿಸಿ ಹಿಂದುಗಳಿಗೆ ಅಯೋಧ್ಯೆಯಲ್ಲಿ ಜಾಗ ನೀಡಲಾಗಿದೆ. ಹಾಗೇ, ಮುಸ್ಲಿಮರಿಗೆ ಬದಲಿ ಜಾಗವನ್ನು ನೀಡಲಾಗಿದೆ. ಈ ಮೂಲಕ ಅತ್ಯಂತ ಹಳೆಯ ವಿವಾದಕ್ಕೆ ಕೊನೆಗೂ ತೆರೆ ಬಿದ್ದಂತಾಗಿದೆ. ವಿವಾದಕ್ಕೊಳಗಾಗಿದ್ದ ಜಾಗದಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಈಗಾಗಲೇ ನೀಲನಕ್ಷೆ ಸಿದ್ಧಗೊಂಡಿದೆ.

ಸುಪ್ರೀಂಕೋರ್ಟ್​​ ಅಯೋಧ್ಯೆಯ ವಿವಾದಿತ ಜಾಗವನ್ನು ರಾಮಲಲ್ಲಾಗೆ ನೀಡಿದೆ. ಆದರೆ, ರಾಮಲಲ್ಲಾಗೆ ಮಂದಿರ ನಿರ್ಮಾಣದ ಹಕ್ಕಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ವಿವಾದಿತ ಜಾಗವನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಬೇಕು. ಕೇಂದ್ರ ಸರ್ಕಾರ 3 ತಿಂಗಳ ಒಳಗೆ ಟ್ರಸ್ಟ್ ರಚಿಸಬೇಕು. ನಂತರ ಈ ಜಾಗ ಟ್ರಸ್ಟ್​ಗೆ ಹಸ್ತಾಂತರವಾಗಲಿದೆ. ಟ್ರಸ್ಟ್ ಮೇಲುಸ್ತುವಾರಿಯಲ್ಲೇ ಮಂದಿರ ನಿರ್ಮಾಣವಾಗಬೇಕು. ಇದರಲ್ಲಿ ಬೇರೆ ಯಾರೊಬ್ಬರೂ ತಲೆ ಹಾಕುವಂತಿಲ್ಲ ಎಂದು ಕೋರ್ಟ್​ ಹೇಳಿದೆ.

ಜಾಗದ ಹಕ್ಕುದಾರಿಕೆಗೆ ಅರ್ಜಿ ಹಾಕಿದ್ದ ಸುನ್ನಿ ಬೋರ್ಡ್​​ಗೆ 5 ಎಕರೆ ಪರ್ಯಾಯ ಜಾಗ ನೀಡಲಾಗುತ್ತಿದೆ. ಇಲ್ಲಿ ಮಸೀದಿ ನಿರ್ಮಾಣ ಮಾಡಬೇಕೋ ಅಥವಾ ಬೇಡವೋ ಎನ್ನುವುದು ಸುನ್ನಿ ಬೋರ್ಡ್ ವಿವೇಚನೆಗೆ ಬಿಟ್ಟಿದ್ದು. ಪರ್ಯಾಯ ಜಾಗವನ್ನು ಇತರೆ ಅವಶ್ಯಕತೆಗೂ ಬಳಸಬಹುದು ಎಂದು ಸುಪ್ರೀಂಕೋರ್ಟ್​​ ಆದೇಶದಲ್ಲಿ ತಿಳಿಸಿದೆ.

Ayodhya Judgement: ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ವಿಧಿಸಿದ ಷರತ್ತುಗಳೇನು?

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ನೀಲನಕ್ಷೆ ರಚಿಸಲಾಗಿದೆ. ಇಲ್ಲಿನ ಸರಯೂ ನದಿಯ ದಂಡೆಯ ಮೇಲೆ ರಾಮ ಮಂದಿರ ನಿರ್ಮಿಸಲು ಕಳೆದ ವರ್ಷವೇ ಉತ್ತರ ಪ್ರದೇಶ ಸರ್ಕಾರ ನೀಲನಕ್ಷೆ ಸಿದ್ಧಪಡಿಸಿದೆ.

ಹೇಗಿರಲಿದೆ ರಾಮಮಂದಿರ?:
ರಾಮಜನ್ಮಭೂಮಿ ಎಂದೇ ಕರೆಯಲ್ಪಡುವ ಅಯೋಧ್ಯೆಯಲ್ಲಿ ಇಡೀ ಜಗತ್ತಿನಲ್ಲಿ ಎಲ್ಲೂ ಇರದ ರೀತಿಯಲ್ಲಿ ರಾಮ ಮಂದಿರ ಕಟ್ಟಿಸಲು ಉತ್ತರ ಪ್ರದೇಶ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷವೇ ನೀಲನಕ್ಷೆ ಸಿದ್ಧಪಡಿಸಿಕೊಂಡಿತ್ತು. ಮಂದಿರದ ಪ್ರಮುಖ ಆಕರ್ಷಣೆಯಾಗಿ 221 ಅಡಿ ಎತ್ತರದ ಬಿಲ್ಲು- ಬಾಣ ಹಿಡಿದಿರುವ ಶ್ರೀರಾಮನ ಪ್ರತಿಮೆಯನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಉತ್ತರ ಪ್ರದೇಶ ಸರ್ಕಾರ ಹೊಂದಿದೆ.
Loading...

Ayodhya Verdict: ಅಯೋಧ್ಯೆಯಲ್ಲಿ ರಾಮಮಂದಿರ; ಹಿಂದೂಗಳಿಗೆ ನಿರ್ಬಂಧ ವಿಧಿಸಿ ಜಾಗ, ಮುಸ್ಲಿಮರಿಗೆ ಬದಲಿ ಜಾಗ

ಹಾಗೇ, ದೇವಾಲಯದೊಂದಿಗೆ ವಸ್ತುಪ್ರದರ್ಶನ, ಐತಿಹಾಸಿಕ ಕೇಂದ್ರವನ್ನೂ ನಿರ್ಮಾಣ ಮಾಡಲಾಗುತ್ತದೆ. ರಾಮಾಯಣದ ಕತೆ ಹೇಳುವಂತಹ ವಸ್ತುಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಅಯೋಧ್ಯೆ ನಗರದ ಕತೆ ಹೇಳಲಿರುವ ಐತಿಹಾಸಿಕ ಕೇಂದ್ರವಾಗಿ ಈ ಮಂದಿರವನ್ನು ನಿರ್ಮಾಣ ಮಾಡಲಾಗುತ್ತದೆ. ಜೊತೆಗೆ, ವಿಷ್ಣುವಿನ ದಶಾವತಾರ ಪ್ರದರ್ಶನಕ್ಕೆ ಏರ್ಪಾಟು ಮಾಡಲಾಗುತ್ತದೆ. ಇವಿಷ್ಟೂ ಈಗಾಗಲೇ ಸಿದ್ಧಗೊಂಡಿರುವ ನೀಲನಕ್ಷೆಯಲ್ಲಿರುವ ಪ್ರಮುಖ ಅಂಶಗಳು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ರಚಿಸುವ ಟ್ರಸ್ಟ್​ನಿಂದ ಅನುಮತಿ ಸಿಕ್ಕ ನಂತರ ಕೆಲಸಗಳು ಆರಂಭವಾಗಲಿವೆ.

(ವರದಿ: ಧರಣೀಶ್ ಬೂಕನಕೆರೆ)

First published:November 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...