Ayodhya Verdict: ಅಯೋಧ್ಯೆಯಲ್ಲಿ ರಾಮಮಂದಿರ; ಹಿಂದೂಗಳಿಗೆ ನಿರ್ಬಂಧ ವಿಧಿಸಿ ಜಾಗ, ಮುಸ್ಲಿಮರಿಗೆ ಬದಲಿ ಜಾಗ

Supreme Court Judgement On Ayodhya Case: 2010ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಈ ಮೂರೂ ಗುಂಪುಗಳಿಗೆ ವಿವಾದಿತ ಭೂಮಿಯನ್ನು ಸಮಾನವಾಗಿ ಹಂಚುವ ತೀರ್ಪು ನೀಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಹಲವು ಮೇಲ್ಮನವಿಗಳು ದಾಖಲಾದವು. ಈಗ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ನ್ಯಾಯಪೀಠವು ಇದರ ವಿಚಾರಣೆ ನಡೆಸಿ, ತೀರ್ಪು ನೀಡಿದೆ. 

Rajesh Duggumane | news18-kannada
Updated:November 9, 2019, 12:35 PM IST
Ayodhya Verdict: ಅಯೋಧ್ಯೆಯಲ್ಲಿ ರಾಮಮಂದಿರ; ಹಿಂದೂಗಳಿಗೆ ನಿರ್ಬಂಧ ವಿಧಿಸಿ ಜಾಗ, ಮುಸ್ಲಿಮರಿಗೆ ಬದಲಿ ಜಾಗ
ಸಾಂದರ್ಭಿಕ ಚಿತ್ರ
Rajesh Duggumane | news18-kannada
Updated: November 9, 2019, 12:35 PM IST
ನವದೆಹಲಿ: ವಿವಾದಿತ ರಾಮಜನ್ಮಭೂಮಿ ಪ್ರಕರಣದ ವಿವಾದ ವಿಚಾರದಲ್ಲಿ ಸುಪ್ರೀಂಕೋರ್ಟ್​ ಇಂದು ತೀರ್ಪು ಪ್ರಕಟ ಮಾಡಿದೆ. ಎಲ್ಲಾ ಧರ್ಮವನ್ನೂ ಗೌರವಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್​ನ ಸಾಂವಿಧಾನಿಕ ಪೀಠ, ಕೇವಲ ನಂಬಿಕೆಗಳಿಂದ ಭೂಮಿಯ ಹಕ್ಕುದಾರಿಕೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಜತೆಗೆ ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ಅಯೋಧ್ಯೆಯಲ್ಲಿ ಜಾಗವನ್ನು ನೀಡಿ ಸುಪ್ರೀಂ ಕೋರ್ಟ್​ ಆದೇಶಿಸಿದೆ.  ಇನ್ನು ಮುಸ್ಲಿಂ ಸಮುದಾಯಕ್ಕೆ ಬದಲಿ ಜಾಗವನ್ನು ನೀಡಲು ಸಹ ಸುಪ್ರೀಂ ಕೋರ್ಟ್​ ಆದೇಶಿಸಿದೆ. ಈ ಮೂಲಕ ಅತಿ ಹಳೆಯ ವಿವಾದಕ್ಕೆ ತೆರೆ ಎಳೆದಿದೆ. 

ಇದೇ ತಿಂಗಳ 17ರಂದು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ನವೆಂಬರ್​ 17ರಂದು ತೀರ್ಪು ಪ್ರಕಟವಾಗಲಿದೆ ಎನ್ನಲಾಗಿತ್ತು. ಆದರೆ, ಅಚ್ಚರಿ ಎಂಬಂತೆ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟವಾಗಿದೆ.

ಸುಪ್ರೀಂ ಕೋರ್ಟ್​ನಲ್ಲಿ ನಡೆದಿದ್ದೇನು?:

ರಾಮಜನ್ಮಭೂಮಿ ಪ್ರಕರಣದ ತೀರ್ಪು ಓದಲು ಆರಂಭಿಸಿದ ನ್ಯಾಯಮೂರ್ತಿಗಳು ಕೆಲವು ವಿಚಾರಗಳನ್ನು ಸ್ಪಷ್ಟಪಡಿಸಿದರು. ನ್ಯಾಯಾಲಯ ದೇಶದ ಸಮತೋಲನ ಕಾಪಾಡಬೇಕು. ಬಾಬರ್​ ಆದೇಶದ ಮೇಲೆ ಮಸೀದಿ ನಿರ್ಮಿಸಲಾಗಿದೆ. 1949ರಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ವಾದಿಸಿದ್ದಾರೆ. ನಮ್ಮ ಸಂವಿಧಾನ ನಿರ್ಮಾಣ ಆಗಿರೋದು ಜ್ಯಾತ್ಯಾತೀತ ತತ್ವದಡಿಯಲ್ಲಿ. ಜ್ಯಾತ್ಯಾತೀತತೆ ಉಳಿಸೋದು ಸಂವಿಧಾನದ ಮೂಲ ಆಶಯ ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯ ಪಟ್ಟಿತು.

ಅದರ ಜತೆಗೆ ನಿರ್ಮೋಹಿ ಅಖಾಡ ಮತ್ತು ಶೀಯಾ ವಕ್ಫ್​ ಬೋರ್ಡ್​ ಸಲ್ಲಿಸಿದ್ದ ಹಕ್ಕುದಾರಿಕೆ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿತು. ಫೈಜಾಬಾದ್​ ಕೋರ್ಟ್​ ಅರ್ಜಿಯನ್ನೂ ನ್ಯಾಯಮೂರ್ತಿಗಳು ವಜಾಗೊಳಿಸಿದರು.

ತೀರ್ಪು ಓದಲು ಆರಂಭಿಸಿದ ನ್ಯಾಯಮೂರ್ತಿಗಳು, ಸಂಪೂರ್ಣ ತೀರ್ಪು ಓದಲು 30 ನಿಮಿಷ ಬೇಕು ಎಂದು ಹೇಳಿದರು. ಎಲ್ಲಾ ಧರ್ಮಗಳ ನಂಬಿಕೆಯನ್ನೂ ಸುಪ್ರೀಂ ಕೋರ್ಟ್​ ಗೌರವಿಸುತ್ತದೆ ಮತ್ತು ನಂಬಿಕೆಗಳಿಗೆ ಧಕ್ಕೆ ಮಾಡುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿತು.

ಇದನ್ನೂ ಓದಿ: Ayodhya Veridct Live: ಮೂರು ತಿಂಗಳಲ್ಲಿ ಟ್ರಸ್ಟ್ ರಚಿಸಲು ಕೇಂದ್ರಕ್ಕೆ ಸುಪ್ರೀಂ ಆದೇಶ
Loading...

ಮಸೀದಿಯಲ್ಲಿ ನಮಾಜ್​ ಮಾಡುವ ನಂಬಿಕೆ ಪ್ರಶ್ನಿಸಲು ಸಾಧ್ಯವಿಲ್ಲ. ನ್ಯಾಯಾಲಯ ನಂಬಿಕೆ ಮತ್ತು ಸಾಕ್ಷಿ ಆಧಾರದಲ್ಲಿ ಕೆಲಸ ನಿರ್ವಹಣೆ ಮಾಡುತ್ತದೆ ಎಂದ ಸುಪ್ರೀಂ, ನ್ಯಾಯಾಲಯ ದೇಶದ ಸಮತೋಲನ ಕಾಪಾಡಬೇಕು ಎಂದು ಅಭಿಪ್ರಾಯ ಪಟ್ಟಿತು. ಬಾಬರ್​ ಆದೇಶದ ಮೇಲೆ ಮಸೀದಿ ನಿರ್ಮಿಸಲಾಗಿದೆ ಎಂಬುದು ಸಾಕ್ಷಿ ಸಮೇತ ಬೆಳಕಿಗೆ ಬಂದಿದೆ. 1949ರಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ ಎಂದು ವಾದಿಸಿದ್ದಾರೆ. ನಮ್ಮ ಸಂವಿಧಾನ ನಿರ್ಮಾಣ ಆಗಿರೋದು ಜ್ಯಾತ್ಯಾತೀತದಡಿ ಸ್ಥಾಪನೆ
ಜ್ಯಾತ್ಯಾತೀತತೆ ಉಳಿಸೋದು ಸಂವಿಧಾನದ ಮೂಲ ಆಶಯ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ರಾಮ ಜನ್ಮ ಭೂಮಿ ನ್ಯಾಯಶಾಸ್ತ್ರವಾಗಿ ಇಲ್ಲ, ಹಾಗೇ ಬಾಬ್ರಿ ಮಸೀದಿಯೂ ಖಾಲಿ ಜಾಗದಲ್ಲಿ ಕಟ್ಟಿಲ್ಲ. ಅಲ್ಲಿ ಈ ಹಿಂದೆ ಯಾವುದೋ ಕಟ್ಟಡ ಇತ್ತು ಎನ್ನುವುದಕ್ಕೆ ಸಾಕ್ಷಿಯಿದೆ. ಅಲ್ಲಿದ್ದ ಕಟ್ಟಡ ಮುಸ್ಲಿಮೇತರ ಕಟ್ಟಡ ಎಂಬುದನ್ನು ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ. 12ನೇ ಶತಮಾನದ ಕಟ್ಟಡ ಆಗಿದ್ರೂ ಅದು ದೇಗುಲ ಎಂದು ಹೇಳಿಲ್ಲ. ಹಿಂದೂಗಳ ಪ್ರಕಾರ ಆ ಜಾಗ ರಾಮನ ಜನ್ಮಭೂಮಿ. ಶ್ರೀರಾಮ ಇಲ್ಲೇ ಹುಟ್ಟಿದ್ದು ಎಂಬ ನಂಬಿಕೆ ಹಿಂದೂಗಳದ್ದು. ಹಿಂದೂಗಳ ನಂಬಿಕೆಯನ್ನೂ ನಾವು ತೆಗೆದು ಹಾಕಲು ಆಗಲ್ಲ ಎಂದು ಸುಪ್ರೀಂ ಆದೇಶದಲ್ಲಿ ತಿಳಿಸಿತು.

ಕಟ್ಟಡದ ಮಧ್ಯಭಾಗದಲ್ಲಿ ಶ್ರೀರಾಮ ಹುಟ್ಟಿದ್ದು ಅನ್ನೋದು ವಾದ. ನಂಬಿಕೆ ಅನ್ನೋದು ಪಕ್ಕಾ ಎಂದಾಗ ಮಧ್ಯ ಪ್ರವೇಶ ಸರಿಯಲ್ಲ. ನಂಬಿಕೆಗಳನ್ನ ಕೋರ್ಟ್​ ಒಪ್ಪಬೇಕಾಗುತ್ತೆ. ಹಿಂದೂಗಳ ಪ್ರಕಾರ ಇದು ಶ್ರೀರಾಮನ ಜನ್ಮಭೂಮಿ. ಮುಸ್ಲೀಮರ ಪ್ರಕಾರ ಇದು ಐತಿಹಾಸಿಕ ಮಸೀದಿ ಕಟ್ಟಡ . ಯಾರ ನಂಬಿಕೆಗಳನ್ನ ಕೋರ್ಟ್​ ಪ್ರಶ್ನೆ ಮಾಡೋದಿಲ್ಲ ಎಂದ ಕೋರ್ಟ್​ ಕೇವಲ ನಂಬಿಕೆ ಆಧಾರದ ಮೇಲೆ ಭೂಹಕ್ಕು ಸ್ಥಾಪನೆ ಸಾಧ್ಯವಿಲ್ಲ ಎಂದೂ ಸ್ಪಷ್ಟವಾಗಿ ತಿಳಿಸಿತು.

ಸುನ್ನಿ , ರಾಮಲಲ್ಲಾ ವಾದವನ್ನ ಪರಿಗಣಿಸಬಹುದು ಎಂದು ಅಭಿಪ್ರಾಯ ಪಟ್ಟ ಸಂವಿಧಾನಿಕ ಪೀಠ,  ಶಿಯಾ, ನಿರ್ಮೋಹಿ ಅರ್ಜಿಯನ್ನು ಪರಿಗಣಿಸಲು ಆಗಲ್ಲ ಎಂಬ ನಿರ್ಣಯ ತಳೆಯಿತು.

ವಿವಾದಿತ ಭೂಮಿಯಲ್ಲಿ ಮುಸ್ಲೀಮರ ಸಂಪೂರ್ಣ ಹಕ್ಕು ಕಳೆದುಕೊಂಡಿಲ್ಲ. ಇದಕ್ಕೆ ಬೇಕಾದ ಯಾವುದೇ ಸೂಕ್ತ ಸಾಕ್ಷಿಗಳು ಇಲ್ಲ . ಎರಡು ಅರ್ಜಿ ವಜಾಗೊಳಿಸಿ, ಎರಡನ್ನು ನ್ಯಾಯಪೀಠ ಪರಿಗಣಿಸಿತು.

1856 ರಿಂದ 1857ರ ಅವಧಿಯಲ್ಲಿ ನಮಾಜ್​ ನಡೀತಿತ್ತು. ವಿವಾದಿತ ಜಾಗ ಸರ್ಕಾರದ ವಶ ಆಗೋವರೆಗೂ ಪ್ರಾರ್ಥನೆ. ಪ್ರಾರ್ಥನೆ ಮಾಡಿದ ಮಾತ್ರಕ್ಕೆ ಹಕ್ಕು ಸ್ಥಾಪನೆ ಸಾಧ್ಯವಿಲ್ಲ ಎಂದು ಸುಪ್ರೀಂ ಅಭಿಪ್ರಾಯ ಪಟ್ಟಿತು. ವಿವಾದಿತ ಜಾಗದಲ್ಲಿ ಹಿಂದೂಗಳಿಂದ ಪೂಜೆಯೂ ನಡೆಯುತ್ತಿತ್ತು. ಮುಸ್ಲೀಮರು ಅವಕಾಶ ಇಲ್ಲದಿದ್ದರೂ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇದು ಸೌಹಾರ್ದತೆಯಿಂದ ನಡೆಯುತ್ತಿತ್ತು ಎಂದು ಸುಪ್ರೀಂ ಅಭಿಪ್ರಾಯ ಪಟ್ಟಿತು.

ರಾಜ್ಯದಲ್ಲೂ ಕಟ್ಟೆಚ್ಚರ:

ಅಯೋಧ್ಯೆ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಕೋಮು ಗಲಭೆ ಮತ್ತು ಅಹಿತಕರ ಘಟನೆಗಳು ಉಂಟಾಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ತೀರ್ಪು ಪ್ರಕಟವಾದಾಗ ಪೊಲೀಸರ ಕೊರತೆ ಉಂಟಾಗಬಾರದು ಎಂಬ ಕಾರಣಕ್ಕೆ ಪೊಲೀಸರ ವಾರದ ರಜೆಯನ್ನು ಕಡಿತಗೊಳಿಸಿ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸೆಕ್ಷನ್​ 144 ಜಾರಿ; ಅಂಗಡಿ ಮುಂಗಟ್ಟುಗಳು ಬಂದ್​

ಏನಿದು ಪ್ರಕರಣ?:

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇದ್ದ ಜಾಗದ 2.77 ಎಕರೆ ವಿವಾದಿತ ಭೂಮಿ ಯಾರಿಗೆ ಸೇರಿದ್ದು ಎಂಬುದೇ ಈಗ ಈ ಪ್ರಕರಣದ ವಸ್ತುವಾಗಿದೆ. 1528 ಶ್ರೀರಾಮ ಹುಟ್ಟಿದ ಸ್ಥಳ ಎಂದು ನಂಬಲಾಗುವ ಅಯೋಧ್ಯೆಯಲ್ಲಿ ಬಾಬರ್‌ ಮಸೀದಿ ನಿರ್ಮಾಣ ಮಾಡಿದ್ದ. ರಾಮ ಮಂದಿರ ಕೆಡವಿ ದೇವಾಲಯ ನಿರ್ಮಿಸಲಾಗಿದೆ ಎಂಬುದು ಆರೋಪ.

ಇದು ಸುಳ್ಳು. ಬಾಬ್ರಿ ಮಸೀದಿ ಜಾಗ ತಮಗೆ ಸೇರಿದ್ದು ಎಂಬುದು ಸುನ್ನಿ ವಕ್ಫ್ ಮಂಡಳಿಯ ವಾದ. ಹಾಗೆಯೇ ನಿರ್ಮೋಹಿ ಅಖಾಡ ಕೂಡ ಇದು ತನಗೆ ಸೇರಿದ್ದೆಂದು ಹೇಳುತ್ತಿದೆ. 2010ರಲ್ಲಿ ಅಲಾಹಾಬಾದ್ ಉಚ್ಚ ನ್ಯಾಯಾಲಯವು ಈ ಮೂರೂ ಗುಂಪುಗಳಿಗೆ ವಿವಾದಿತ ಭೂಮಿಯನ್ನು ಸಮಾನವಾಗಿ ಹಂಚುವ ತೀರ್ಪು ನೀಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಹಲವು ಮೇಲ್ಮನವಿಗಳು ದಾಖಲಾದವು. ಈಗ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ನ್ಯಾಯಪೀಠವು ಇದರ ವಿಚಾರಣೆ ನಡೆಸಿ, ತೀರ್ಪು ನೀಡಿದೆ.

First published:November 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...