ಅಯೋಧ್ಯೆಯದ್ದೇ ಮತ್ತೊಂದು ಪ್ರಕರಣ: ಬಾಬರಿ ಮಸೀದಿ ಧ್ವಂಸಗೊಳಿಸಿದವರ ಹಣೆಬರಹ ಶೀಘ್ರದಲ್ಲೇ ನಿರ್ಧಾರ

ವರ್ಷಗಟ್ಟಲೆ ಈ ಪ್ರಕರಣಕ್ಕೆ ಕಾನೂನು ತೊಡರುಗಳು, ಬಿಕ್ಕಟ್ಟುಗಳು ನಿರ್ಮಾಣವಾದವು. ಆರೋಪಿಗಳ ಪೈಕಿ 21 ಮಂದಿಯ ವಿರುದ್ಧ ವಿವಿಧ ಕಾರಣಗಳಿಗೆ ವಿಚಾರಣೆ ಕೈಬಿಡಲಾಯಿತು. ಟ್ರಯಲ್ ಕೋರ್ಟ್ ಮತ್ತು ಹೈಕೋರ್ಟ್​ನಲ್ಲಿ ಹಲವು ವಿಚಾರಣೆಗಳ ಬಳಿಕ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಸಿಬಿಐ 2011ರಲ್ಲಿ ಕೆಲ ಪ್ರಮುಖ ಸಾಕ್ಷ್ಯಗಳನ್ನ ಒದಗಿಸಿತು.

news18
Updated:November 9, 2019, 11:46 AM IST
ಅಯೋಧ್ಯೆಯದ್ದೇ ಮತ್ತೊಂದು ಪ್ರಕರಣ: ಬಾಬರಿ ಮಸೀದಿ ಧ್ವಂಸಗೊಳಿಸಿದವರ ಹಣೆಬರಹ ಶೀಘ್ರದಲ್ಲೇ ನಿರ್ಧಾರ
ಬಾಬರಿ ಮಸೀದಿ
  • News18
  • Last Updated: November 9, 2019, 11:46 AM IST
  • Share this:
ಐದು ಶತಮಾನಗಳ ಹಿಂದಿನ ಅಯೋಧ್ಯೆ ಬಾಬರಿ ಮಸೀದಿ ಮತ್ತು ರಾಮಜನ್ಮಭೂಮಿ ವಿವಾದದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡುವ ಹೊತ್ತಿನಲ್ಲೇ, ಅಯೋಧ್ಯೆ ಬಾಬರಿ ಮಸೀದಿಗೆ ಸಂಬಂಧಿಸಿದ 27 ವರ್ಷಗಳ ಹಿಂದಿನ ಪ್ರಕರಣವೊಂದು ಲಕ್ನೋ ನ್ಯಾಯಾಲಯದ ಅಂಗಣದಲ್ಲಿದೆ. 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕಟ್ಟಡವನ್ನು ಧ್ವಂಸಗೊಳಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಮಸೀದಿ ಧ್ವಂಸಗೊಳಿಸಿದವರು ಯಾರು, ಚಿತಾವಣಿ ಮಾಡಿದವರು ಯಾರು ಎಂಬುದರ ವಿಚಾರಣೆ ನಡೆಯುತ್ತಿದೆ.. 27 ವರ್ಷಗಳ ಹಿಂದಿನ ಈ ಪ್ರಕರಣ ಹಲವು ಏಳು ಬೀಳು, ತೊಡರುಗಳ ಮಧ್ಯೆ ಅಂತಿಮ ಹಂತದ ವಿಚಾರಣೆಗೆ ಬಂದಿದೆ. ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ ಶೀಘ್ರದಲ್ಲೇ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಬಿಜೆಪಿ ಮತ್ತು ಸಂಘಪರಿವಾರದ ಹಿಂದಿನ ತಲೆಮಾರಿನ ಹಿರಿಯ ಮುಖಂಡರಾದ ಲಾಲ್ ಕೃಷ್ಣ ಆಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ವಿನಯ್ ಕಟಿಯಾರ್, ಸಾಧ್ವಿ ರಿತಂಬರಾ ಮೊದಲಾದವರ ಹೆಸರು ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿರುವುದು ಕೋರ್ಟ್ ತೀರ್ಪಿನ ಬಗ್ಗೆ ಹೆಚ್ಚು ಆಸಕ್ತಿ ಉಳಿಸಿಕೊಂಡಿದೆ.

ಇದನ್ನೂ ಓದಿ: Ayodhya Verdict: ಅಯೋಧ್ಯೆ ಸುಪ್ರೀಂ ತೀರ್ಪು; ಹಿಂದೂಗಳಿಗೆ ಕೆಲ ನಿರ್ಬಂಧ ವಿಧಿಸಿ ಜಾಗ, ಮುಸ್ಲಿಮರಿಗೆ ಬದಲಿ ಜಾಗ

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಒಟ್ಟು 49 ಮಂದಿ ಆರೋಪಿಗಳಾಗಿದ್ಧಾರೆ. ಅವರ ಪೈಕಿ ಬಹುತೇಕ ಮಂದಿ ಈಗ ಬದುಕಿಲ್ಲ. ಉಳಿದಿರುವ ಕೆಲ ಆರೋಪಿಗಳು ಎಲ್.ಕೆ. ಆಡ್ವಾಣಿ ಅವರಂಥ ಹೆಸರಾಂತ ವ್ಯಕ್ತಿಗಳೇ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ಹಾಲಿ ಸಂಸದರೂ ಆರೋಪಿಗಳಾಗಿದ್ದಾರೆ.

ಮೂರು ರೀತಿಯ ಎಫ್​ಐಆರ್:

1992, ಡಿ. 6ರಂದು ಬಾಬರಿ ಮಸೀದಿ ಧ್ವಂಸವಾದ ಕೆಲವೇ ಕ್ಷಣಗಳಲ್ಲಿ ಮೊದಲ ಎಫ್​ಐಆರ್ ದಾಖಲಾಯಿತು. ಸಂಜೆ 5:15ಕ್ಕೆ ಅಪರಿಚಿತ ಕರಸೇವಕರ ಮೇಲೆ ವಿವಿಧ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಯಿತು.

ಹತ್ತು ನಿಮಿಷಗಳ ನಂತರ ಎಲ್.ಕೆ. ಆಡ್ವಾಣಿ, ಅಶೋಕ್ ಸಿಂಘಾಲ್, ಗಿರಿರಾಜ್ ಕಿಶರ್, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ, ವಿನಯ್ ಕಟಿಯಾರ್, ವಿಷ್ಣು ಹರಿ ದಾಲ್ಮಿಯಾ ಮತ್ತು ಸಾಧ್ವಿ ರಿತಂಬರಾ ವಿರುದ್ಧ ಸೆಕ್ಷನ್ 153ಎ, 153ಬಿ, 505 ಅಡಿ ಪ್ರಕರಣಗಳು ದಾಖಲಾದವು. ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಇವರ ಮೇಲೆ ಹೊರಿಸಲಾಯಿತು.ಮುಂದಿನ ದಿನಗಳಲ್ಲಿ ಹಲ್ಲೆ, ಲೂಟಿ ಇತ್ಯಾದಿ ಪ್ರಕರಣಗಳ ಸಂಬಂಧ 47 ಇತರ ಎಫ್​ಐಆರ್​ಗಳು ಅಯೋಧ್ಯೆಯಲ್ಲಿ ದಾಖಲಾದವು. ಹೀಗೆ ಒಟ್ಟು 49 ಎಫ್​ಐಆರ್​ಗಳು ರಿಜಿಸ್ಟರ್ ಆದವು.

ಇದನ್ನೂ ಓದಿ: ಅಯೋಧ್ಯೆ ವಿವಾದದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಸಂಪೂರ್ಣ ಇತಿಹಾಸ

1993ರಲ್ಲಿ ಎಲ್ಲಾ 49 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲಾಯಿತು. ಅದೇ ವರ್ಷ ಅಕ್ಟೋಬರ್ 5ರಂದು ಸಿಬಿಐ ಈ ಎಲ್ಲಾ 49 ಪ್ರಕರಣಗಳನ್ನ ಕ್ರೋಢೀಕರಿಸಿ ಒಟ್ಟು 40 ಮಂದಿಯ ವಿರುದ್ಧ ಒಂದೇ ಚಾರ್ಜ್​ಶೀಟ್ ಹಾಕಿತು. 1996ರಲ್ಲಿ 9 ಪ್ರಮುಖ ವ್ಯಕ್ತಿಗಳ ಹೆಸರನ್ನು ಸೇರಿಸಿ ಹೆಚ್ಚುವರಿ ಚಾರ್ಜ್​ಶೀಟ್ ಫೈಲ್ ಮಾಡಲಾಯಿತು. ಅಲ್ಲಿಗೆ ಆರೋಪಪಟ್ಟಿಯಲ್ಲಿ ದಾಖಲಾದವರ ಸಂಖ್ಯೆ 49ಕ್ಕೆ ಏರಿತು.

ಅದಾದ ಬಳಿಕ ವರ್ಷಗಟ್ಟಲೆ ಈ ಪ್ರಕರಣಕ್ಕೆ ಕಾನೂನು ತೊಡರುಗಳು, ಬಿಕ್ಕಟ್ಟುಗಳು ನಿರ್ಮಾಣವಾದವು. ಆರೋಪಿಗಳ ಪೈಕಿ 21 ಮಂದಿಯ ವಿರುದ್ಧ ವಿವಿಧ ಕಾರಣಗಳಿಗೆ ವಿಚಾರಣೆ ಕೈಬಿಡಲಾಯಿತು. ಟ್ರಯಲ್ ಕೋರ್ಟ್ ಮತ್ತು ಹೈಕೋರ್ಟ್​ನಲ್ಲಿ ಹಲವು ವಿಚಾರಣೆಗಳ ಬಳಿಕ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ ಸಿಬಿಐ 2011ರಲ್ಲಿ ಕೆಲ ಪ್ರಮುಖ ಸಾಕ್ಷ್ಯಗಳನ್ನ ಒದಗಿಸಿತು. ಎಲ್ಲಾ 49 ಆರೋಪಿಗಳು ಮಸೀದಿ ಧ್ವಂಸಕ್ಕೆ ನಡೆದ ಚಿತಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ದಾಖಲೆಗಳ ಸಮೇತ ತಿಳಿಸಿತು. ಆರು ವರ್ಷಗಳ ಬಳಿಕ ಅಂದರೆ 2017ರಲ್ಲಿ ಕೆಲ ಆರೋಪಿಗಳ ವಿರುದ್ಧದ ವಿಚಾರಣೆ ಕೈಬಿಟ್ಟ ಅಲಹಾಬಾದ್ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತು. ಆಡ್ವಾಣಿ ಮತ್ತಿತರರ ವಿರುದ್ಧದ ಪ್ರಕರಣಗಳನ್ನು ಮತ್ತೆ ವಿಚಾರಣೆ ನಡೆಸುವಂತೆ ಲಕ್ನೋ ಹೈಕೋರ್ಟ್​ಗೆ ನಿರ್ದೇಶನ ನೀಡಿತು.

ಅಲ್ಲಿಂದ, ಅಂದರೆ 2017ರಿಂದ ಈ ಪ್ರಕರಣದಲ್ಲಿ ತ್ವರಿತಗತಿಯಲ್ಲಿ ವಿಚಾರಣೆ ನಡೆದಿದೆ. ಈವರೆಗೆ 300ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ಆಗಿದೆ. ಲಿಖಿತ ಹೇಳಿಕೆ, ಪತ್ರಿಕಾ  ಹೇಳಿಕೆ, ಸರ್ಕಾರೀ ಆದೇಶ ಇತ್ಯಾದಿ ದೊಡ್ಡ ಪ್ರಮಾಣದ ಕಾಗದಪತರಗಳ ರಾಶಿಯು ಪ್ರಕರಣಕ್ಕೆ ಸಾಕ್ಷಿಗಳಾಗಿವೆ. ಮಾಜಿ ಸಿಎಂ ಕಲ್ಯಾಣ್ ಸಿಂಗ್ ವಿರುದ್ಧ ಕೆಲ ಸಾಕ್ಷಿಗಳ ವಿಚಾರಣೆ ನಡೆಯುವುದು ಬಾಕಿ ಇದೆ. ಕೆಲವೇ ದಿನಗಳಲ್ಲಿ ಸಿಬಿಐ ಕೋರ್ಟ್​ನಲ್ಲಿ ಈ ಪ್ರಕರಣದ ವಿಚಾರಣೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading