Ram Mandir: ಸಾವಿರಾರು ವರ್ಷಗಳಾದರೂ ಅಲುಗಾಡಲ್ಲ ಅಯೋಧ್ಯೆ ರಾಮ ಮಂದಿರ: ಅಂತಹ ವಿಶೇಷತೆ ಏನು ಅಂತೀರಾ?

ಈಗಾಗಲೇ ಇಂಜಿನಿಯರ್​ಗಳು ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿರುವ ಜಾಗದ ಮಣ್ಣಿನ ಪರೀಕ್ಷೆ ಮಾಡುತ್ತಿದ್ದಾರೆ. 36ರಿಂದ 40 ತಿಂಗಳೊಳಗೆ ಆ ಜಾಗದಲ್ಲಿ ಐತಿಹಾಸಿಕ ರಾಮ ಮಂದಿರ ತಲೆಯೆತ್ತಲಿದೆ.

news18-kannada
Updated:September 9, 2020, 11:35 AM IST
Ram Mandir: ಸಾವಿರಾರು ವರ್ಷಗಳಾದರೂ ಅಲುಗಾಡಲ್ಲ ಅಯೋಧ್ಯೆ  ರಾಮ ಮಂದಿರ: ಅಂತಹ ವಿಶೇಷತೆ ಏನು ಅಂತೀರಾ?
ರಾಮ ಮಂದಿರ
  • Share this:
ಕೋಟ್ಯಾಂತರ ಭಾರತೀಯರ ಕನಸಾಗಿದ್ದ ಅಯೋಧ್ಯೆ ರಾಮ ಮಂದಿರಕ್ಕೆ ಕಳೆದ ತಿಂಗಳು ಪ್ರಧಾ‌ನಿ ನರೇಂದ್ರ ಮೋದಿ ಅವರ ಸಮಕ್ಷದಲ್ಲಿ ಶಿಲನ್ಯಾಸ ನೆರವೇರಿದೆ. ಅಂದು ಅಯೋಧ್ಯೆಯಲ್ಲಿ ಬಹಳ ಅದ್ಧೂರಿಯಾಗಿ ಸಂಭ್ರಮದಲ್ಲಿ, ಸಾಂಪ್ರದಾಯಿಕ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ಬಹಳ ಅಚ್ಚುಕಟ್ಟಾಗಿ ರಾಮ ಮಂದಿರ ಶಿಲಾನ್ಯಾಸ ನಡೆಸಲಾಯಿತು. ಈಗಾಗಲೇ ರಾಮ ಮಂದಿರದ ಕಾಮಗಾರಿಗೆ ಕೆಲಸಗಳು ಆರಂಭವಾಗಿದ್ದು, 36ರಿಂದ 40 ತಿಂಗಳಲ್ಲಿ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಗಿಯಲಿದೆ. ಭವ್ಯ ರಾಮಮಂದಿರ ನಿರ್ಮಾಣವು ಸಾಕಷ್ಟು ಎಚ್ಚರಿಕೆಯಿಂದ ನಡೆಯುತ್ತಿದೆ. ಅಯೋಧ್ಯೆಯ ರಾಮ ಮಂದಿರವನ್ನು ಕಲ್ಲುಗಳನ್ನು ಮಾತ್ರ ಉಪಯೋಗಿಸಿ ಕಟ್ಟಲಾಗುತ್ತದೆ. ಇದು ಸುಮಾರು 1 ಸಾವಿರ ವರ್ಷಗಳ ವರೆಗೆ ಗಟ್ಟಿಯಾಗಿ ನಿಲ್ಲಲಿದೆ.

ಐಐಟಿ ಚೆನ್ನೈ, ಸೆಂಟ್ರಲ್ ಬ್ಯುಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗಳಿಂದ ಪ್ರತಿಭಾನ್ವಿತ ಹಾಗೂ ಪರಿಣಿತರನ್ನು ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಲಾರ್ಸೆನ್ ಮತ್ತು ಟರ್ಬೋ (L & T) ದೇವಾಲಯದ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದು, ಐಐಟಿ ಚೆನ್ನೈ ಮಣ್ಣಿನ ಸಾಮರ್ಥ್ಯ ಮತ್ತು ಗುಣಮಟ್ಟವನ್ನು ಪರಿಶೀಲಿಸಲಿದೆಯಂತೆ.

ಶ್ರೀಲಂಕಾದಲ್ಲಿ ಶೀಘ್ರವೇ ಗೋ ಹತ್ಯೆ ನಿಷೇಧ?; ಪ್ರಧಾನಿ ಮಹಿಂದಾ ರಾಜಪಕ್ಸೆ ಚಿಂತನೆ

ಅಯೋಧ್ಯೆಯ ರಾಮ ಮಂದಿರ ವಿಶ್ವದ ಮೂರನೇ ಅತಿ ದೊಡ್ಡ ಹಿಂದೂ ದೇವಾಲಯವಾಗಲಿದೆ. ಹೊಸ ವಿನ್ಯಾಸದ ಪ್ರಕಾರ ದೇವಾಲಯವನ್ನು 76,000-84,000 ಸ್ಕ್ವೇರ್ ಫೀಟ್​ಗೆ ಏರಿಕೆ ಮಾಡಲಾಗಿದೆ, ಈ ಹಿಂದಿನ ವಿನ್ಯಾಸದ ಪ್ರಕಾರ ದೇವಾಲಯವನ್ನು 37,590 ಸ್ಕ್ವೇರ್ ಫೀಟ್​ಗೆ ನಿಗದಿಪಡಿಸಲಾಗಿತ್ತು. ಉತ್ತರ ಭಾರತದಲ್ಲಿ ಪ್ರಸಿದ್ಧವಾಗಿರುವ ನಾಗರ ಶೈಲಿಯಲ್ಲಿ ದೇವಾಲಯ ನಿರ್ಮಾಣವಾಗುತ್ತಿದ್ದು, ಈ ಹಿಂದೆ ಯೋಜಿಸಿದ್ದ ಎರಡು ಅಂತಸ್ತಿನ ಬದಲಾಗಿ 3 ಅಂತಸ್ತುಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಇನ್ನೂ ಈಗಾಗಲೇ ಇಂಜಿನಿಯರ್​ಗಳು ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿರುವ ಜಾಗದ ಮಣ್ಣಿನ ಪರೀಕ್ಷೆ ಮಾಡುತ್ತಿದ್ದಾರೆ. 36ರಿಂದ 40 ತಿಂಗಳೊಳಗೆ ಆ ಜಾಗದಲ್ಲಿ ಐತಿಹಾಸಿಕ ರಾಮ ಮಂದಿರ ತಲೆಯೆತ್ತಲಿದೆ. ಐಐಟಿ ಚೆನ್ನೈ ಮತ್ತು ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆಗಳು ರಾಮಮಂದಿರದ ನಿರ್ಮಾಣ ಕಾರ್ಯದಲ್ಲಿ ತೊಡಗಲಿವೆ.

ಪ್ರಮುಖವಾಗಿ ರಾಮ ಮಂದಿರ ನಿರ್ಮಾಣಕ್ಕೆ ಸುಮಾರು 10 ಸಾವಿರ ತಾಮ್ರದ ಸಲಾಕೆಗಳನ್ನು ಬಳಸಲಾಗುತ್ತದೆ. ದೇಶದಲ್ಲಿ ಹಲವರಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಒಂದು ಭಾವನಾತ್ಮಕ ವಿಷಯವಾಗಿದ್ದು ನಿರ್ಮಾಣ ಕಾರ್ಯಕ್ಕೆ ಕೊಡುಗೆ ನೀಡಲು ಇಚ್ಛಿಸುವವರು ತಾಮ್ರದ ರಾಡುಗಳಿಗೆ ಹಣವನ್ನು ದಾನ ಮಾಡಬಹುದು.

Bengaluru Weather: ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆ; ಇಂದಿನ ವಾತಾವರಣ ಹೇಗಿರಲಿದೆ?ಭವಿಷ್ಯದಲ್ಲಿ ಮಂದಿರದ ಕಟ್ಟಡಕ್ಕೆ ಭೂಕಂಪ ಆದರೂ ಕೂಡಾ ಹಾನಿಯಾಗದಿರುವ ನಿಟ್ಟಿನಲ್ಲಿ ಸೆಂಟ್ರಲ್ ಬ್ಯುಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಕೆಲಸ ಮಾಡಲಿದೆ. ಏಕೆಂದರೆ ಕಬ್ಬಿಣದ ಬದಲು ಕೇವಲ ಕಲ್ಲುಗಳನ್ನು ಬಳಸಿ ರಾಮ ಮಂದಿರ ಕಟ್ಟುವುದರಿಂದ 1 ಸಾವಿರ ವರ್ಷವಾದರೂ ಮಂದಿರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಗಾಳಿ, ಬೆಳಕು, ನೀರಿನಿಂದ ಕಲ್ಲಿನ ಕಟ್ಟಡ ಬೇಗ ಹಾಳಾಗುವುದಿಲ್ಲ. ಹೀಗಾಗಿ, ಕಲ್ಲುಗಳನ್ನು ಮಾತ್ರ ಬಳಸಿ ಈ ಮಂದಿರ ನಿರ್ಮಿಸಲಾಗುತ್ತಿದೆ.

ಭಾರತದ ಅತಿದೊಡ್ಡ ಹಿಂದೂ ದೇವಾಲಯವಾಗಲಿದೆ ಎನ್ನಲಾಗಿರುವ ರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ವಿನ್ಯಾಸ ಸಿದ್ಧವಾಗಿದೆ. 161 ಅಡಿ ಎತ್ತರದ ಈ ದೇವಾಲಯವು ಐದು ಗುಮ್ಮಟಗಳನ್ನು ಹೊಂದಲಿದೆ. 1983ರಲ್ಲಿ ಸಿದ್ಧಪಡಿಸಲಾಗಿರುವ ರಾಮ ಮಂದಿರದ ವಿನ್ಯಾಸಕ್ಕೆ ಕೊಂಚ ಬದಲಾವಣೆ ಮಾಡಲಾಗಿದೆ.
Published by: Vinay Bhat
First published: September 9, 2020, 11:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading