• Home
 • »
 • News
 • »
 • national-international
 • »
 • Mahant Nitya Gopal Das Health: ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ದಾಸ್ ಆರೋಗ್ಯ ಚಿಂತಾಜನಕ

Mahant Nitya Gopal Das Health: ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ದಾಸ್ ಆರೋಗ್ಯ ಚಿಂತಾಜನಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಂತ್ ಅವರಿಗೆ ಶ್ವಾಸಕೋಶ ಮತ್ತು ಯೂರಿನ್ ಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದು, ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ. ಮಹಂತ್ ಅವರಿಗೆ ಉಸಿರಾಟಕ್ಕಾಗಿ ಕೃತಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೇದಾಂತ್ ಆಸ್ಪತ್ರೆಯ ವೈದ್ಯರ ತಂಡ ಮಾಹಿತಿ ನೀಡಿದೆ.

 • Share this:

  ಲಕ್ನೋ: ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಕ್ಷೇತ್ರದ (Shri Ram Janmabhoomi Teerth Kshetra) ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ (Mahant Nitya Gopal Da) (83) ಆರೋಗ್ಯ ಮತ್ತಷ್ಟು ಬಿಗಡಾಯಿಸುತ್ತಿದೆ. ಭಾನುವಾರ ಬೆಳಗಿನ ಜಾವ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆ ಲಕ್ನೋ ನಗರದ ಮೇದಾಂತಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಮಹಂತ್ ಅವರಿಗೆ ಶ್ವಾಸಕೋಶ ಮತ್ತು ಯೂರಿನ್ ಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದು, ಸೋಂಕು ತಗುಲಿರುವ ಬಗ್ಗೆ ವರದಿಯಾಗಿದೆ. ಮಹಂತ್ ಅವರಿಗೆ ಉಸಿರಾಟಕ್ಕಾಗಿ ಕೃತಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮೇದಾಂತ್ ಆಸ್ಪತ್ರೆಯ ವೈದ್ಯರ ತಂಡ ಮಾಹಿತಿ ನೀಡಿದೆ. ಡಾ.ರಾಕೇಶ್ ಕಪೂರ್ ಅವರ ನಿಗಾರಣೆಯಲ್ಲಿ ಮಹಂತ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.


  ಆರೋಗ್ಯ ಮಾಹಿತಿ ಪಡೆಯುತ್ತಿರುವ ಸಿಎಂ ಕಾರ್ಯಾಲಯ


  ಮಹಂತ್ ಅವರನ್ನ ಆಕ್ಸಿಜನ್ ಸಪೋರ್ಟ್ ಮೇಲೆ ಇರಿಸಲಾಗಿದೆ. ಈ ನಡುವೆ ಮುಖ್ಯಮಂತ್ರಿಗಳ ಕಾರ್ಯಲಯ ಸಹ ನಿರಂತರವಾಗಿ ಆರೋಗ್ಯದ ಮಾಹಿತಿಯನ್ನು ಪಡೆದುಕೊಳ್ಳುತ್ತಿದೆ. ಈ ಮೊದಲು ಡಾ.ರಾಕೇಶ್ ಕಪೂರ್ ಅಯೋಧ್ಯೆ(Ayodhya)ಗೆ ತೆರಳಿ ಮಹಂತ್ ಅವರಿಗೆ ಚಿಕಿತ್ಸೆ ನೀಡುವ ಬಗ್ಗೆ ಹೇಳಿದ್ದರು. ಆದ್ರೆ ರಾತ್ರಿ ಆರೋಗ್ಯ ಕ್ಷೀಣವಾಗಿದ್ದ ಹಿನ್ನೆಲೆ ಆಸ್ಪತ್ರೆ ಕರೆತರಲಾಗಿದೆ. ಆಸ್ಪತ್ರೆಗೆ ರಾಜಕಾರಣಿಗಳು, ವಿವಿಧ ಮಠಾಧೀಶರು ಭೇಟಿ ಮಹಂತ್ ಅವರ ಆರೋಗ್ಯದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.


  "ರಾತ್ರಿ ಆಕ್ಸಿಜನಲ್ ಲೆವಲ್ 83ಕ್ಕೆ ಇಳಿದಿತ್ತು"


  ಗುರುಗಳ ಆಕ್ಸಿಜನ್ ಲೆವಲ್ 83ಕ್ಕೆ ಇಳಿದಿತ್ತು. ಕೆಮ್ಮು ಮತ್ತು ಯೂರಿನ್ ಡಿಸ್ಚಾರ್ಜ್ ಹೆಚ್ಚಾಗಿತ್ತು. ಜೊತೆಗೆ ಅವರ ದೇಹ ನಿರಂತರವಾಗಿ ಕಂಪಿಸುತ್ತಿತ್ತು. ರಾತ್ರಿ ವೈದ್ಯರ ತಂಡ ಅವರನ್ನ ಪರೀಕ್ಷಿಸಿ  ಕೆಲ¸ ಔಷಧಿ ಸಹ ನೀಡಿದ್ದರು. ಔಷಧಿ ಸೇವಿಸಿದ ನಂತರ ಗುರುಗಳಿಗೆ ಚೆನ್ನಾಗಿದ್ದರು. ಆದ್ರೆ ದಿಢೀರ್ ಅಂತ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಲಾರಂಭಿಸಿತು. ಸದ್ಯ ಗುರುಗಳು ಆಕ್ಸಿಜನ್ ಸಪೋರ್ಟ್ ಮೇಲಿದ್ದು, ಬೈಪಾಸ್ ಮೂಲಕ ಯೂರಿನ್ ಪಾಸ್ ಮಾಡಿಸಲಾಗುತ್ತಿದೆ ಎಂದು ಮಹಂತ್ ನೃತ್ಯ ಗೋಪಾಲ ದಾಸ್ ಅವರ ಉತ್ತರಾಧಿಕಾರಿ ಕಮಲ್ ನಯನ್ ದಾಸ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


  ಮಹಾಮಾರಿ ಕೊರೊನಾ ಗೆದ್ದಿದ್ರು


  ನವೆಂಬರ್ 9, 2020ರಂದು ಮಹಂತ್ ಅವರ ಆರೋಗ್ಯ ಬಿಗಡಾಯಿಸಿತ್ತು. ಉಸಿರಾಟದ ಸಮಸ್ಯೆದ ಜೊತೆ ಕಡಿಮೆ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿತ್ತು. ಅಂದು ಮೇದಾಂತಾ ಆಸ್ಪತ್ರೆಗೆ ದಾಖಲಾಗಿ 14 ದಿನ ಚಿಕಿತ್ಸೆ ಪಡೆದುಕೊಂಡಿದ್ದರು. ತದನಂತರ ಜನ್ಮಾಷ್ಟಮಿಯಲ್ಲಿ ಭಾಗಿಯಾದ ಬಳಿಕ ಕೊರೊನಾ ಸೋಂಕಿಗೆ (Corona Virus) ತುತ್ತಾಗಿದ್ದರು. ಅಂದು 26 ದಿನ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿದ್ದರು.


  ಇದನ್ನೂ ಓದಿ: Lakhimpur Kheri ಹಿಂಸಾಚಾರದಲ್ಲಿ ಐವರು ರೈತರ ಸಾವು; ಬಲಿದಾನ ವ್ಯರ್ಥವಾಗಲು ಬಿಡಲ್ಲ ಎಂದ ರಾಹುಲ್ ಗಾಂಧಿ


  ಮಹಂತರು ಶ್ರೀಕೃಷ್ಣ ಜನ್ಮಭೂಮಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಯಂದು ಮಥುರಾಗೆ ತೆರಳುತ್ತಾರೆ. ಪ್ರತಿವರ್ಷದಂತೆ ಕಳೆದ ಬಾರಿಯೂ ತೆರಳಿದ್ದಾಗ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಅಯೋಧ್ಯೆಯಲ್ಲಿ ವಿವಾದಾತ್ಮಕ ಕಟ್ಟಡ ತೆರವುಗೊಳಿಸಿದಾಗ ರಾಮಲಲ್ಲಾ ವಿಗ್ರಹವನ್ನು ತಾತ್ಕಲಿಕ ಟೆಂಟ್‍ಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ಮಹಂತರು 28 ವರ್ಷ ರಾಮಲಲ್ಲಾ ದರ್ಶನಕ್ಕೆ ತೆರಳಿರಲಿಲ್ಲ. ಕಳೆದ ವರ್ಷ ತಾತ್ಕಲಿಕ ದೇವಸ್ಥಾನದಲ್ಲಿ ರಾಮಲಲ್ಲಾ ವಿಗ್ರಹ ಸ್ಥಾಪನೆ ಮಾಡಿದಾಗ ತೆರಳಿ ಪೂಜೆ ಸಲ್ಲಿಸಿದ್ದರು.


  ವರದಿ: ಮೊಹ್ಮದ್​ ರಫೀಕ್​ ಕೆ 

  Published by:Kavya V
  First published: