ಒಂದು ವೇಳೆ ಮಧ್ಯಸ್ಥಿಕೆ ಸಮಿತಿ ವಿಫಲವಾದರೆ ಜುಲೈ 25ರಿಂದ ಅಯೋಧ್ಯೆ ಪ್ರಕರಣ ವಿಚಾರಣೆ; ಸುಪ್ರೀಂಕೋರ್ಟ್​

ಮಧ್ಯಸ್ಥಿಕೆ ಸಮಿತಿಯ ಪ್ರಗತಿಯ ವರದಿಯನ್ನು ಜುಲೈ 18ರಂದು ಸಲ್ಲಿಸಬೇಕು. ಒಂದು ವೇಳೆ ವಿವಾದ ಬಗೆಹರಿಸಲು ಸಮಿತಿ ವಿಫಲವಾದರೆ, ಜುಲೈ 25ರಿಂದ ವಿಚಾರಣೆ ಆರಂಭಿಸುವುದಾಗಿ ನ್ಯಾಯಾಲಯ ಹೇಳಿದೆ.

HR Ramesh | news18
Updated:July 11, 2019, 12:06 PM IST
ಒಂದು ವೇಳೆ ಮಧ್ಯಸ್ಥಿಕೆ ಸಮಿತಿ ವಿಫಲವಾದರೆ ಜುಲೈ 25ರಿಂದ ಅಯೋಧ್ಯೆ ಪ್ರಕರಣ ವಿಚಾರಣೆ; ಸುಪ್ರೀಂಕೋರ್ಟ್​
ರೇಖಾ ಚಿತ್ರ - ಮಿರ್ ಸುಹೇಲ್​
  • News18
  • Last Updated: July 11, 2019, 12:06 PM IST
  • Share this:
ನವದೆಹಲಿ: ಅಯೋಧ್ಯೆ ರಾಮಜನ್ಮ ಭೂಮಿ-ಬಾಬರಿ ಮಸೀದಿ ಜಾಗ ವಿವಾದ ಬಗೆಹರಿಸುವ ಸಂಬಂಧ ರಚನೆಯಾಗಿದ್ದ ಮಧ್ಯಸ್ಥಿಕೆ ಸಮಿತಿ ವಿಫಲವಾದರೆ ಸುಪ್ರೀಂಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ಜುಲೈ 25ರಿಂದ ಪ್ರತಿದಿನ ನಡೆಯಲಿದೆ.

ಮಧ್ಯಸ್ಥಿಕೆ ಸಮಿತಿಯ ಪ್ರಗತಿಯ ವರದಿಯನ್ನು ಜುಲೈ 18ರಂದು ಸಲ್ಲಿಸಬೇಕು. ಒಂದು ವೇಳೆ ವಿವಾದ ಬಗೆಹರಿಸಲು ಸಮಿತಿ ವಿಫಲವಾದರೆ, ಜುಲೈ 25ರಿಂದ ವಿಚಾರಣೆ ಆರಂಭಿಸುವುದಾಗಿ ನ್ಯಾಯಾಲಯ ಹೇಳಿದೆ.

ಇದನ್ನು ಓದಿ: ಸಂಜೆ 6 ಗಂಟೆಯೊಳಗೆ ಸ್ಪೀಕರ್​ ಮುಂದೆ ಹಾಜರಾಗಿ ಖುದ್ದು ರಾಜೀನಾಮೆ ಸಲ್ಲಿಸಲು ಅತೃಪ್ತ ಶಾಸಕರಿಗೆ ಸುಪ್ರೀಂಕೋರ್ಟ್​ ಸೂಚನೆ
ಅಯೋಧ್ಯೆ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸುವಂತೆ ಸುಪ್ರೀಂಕೋರ್ಟ್​ ಮಾರ್ಚ್​ನಲ್ಲಿ ಮೂರು ಜನರ ಮಧ್ಯಸ್ಥಿಕೆ ಸಮಿತಿಯನ್ನು ರಚಿಸಿತ್ತು. ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಫಖ್ರಿ ಮೊಹಮ್ಮದ್​ ಇಬ್ರಾಹ್ಮಿಂ ಕಾಲಿಫುಲ್ಲಾ ಅವರ ಅಧ್ಯಕ್ಷತೆಯ ಸಮಿತಿಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಹಾಗೂ ಮದ್ರಾಸ್ ಹೈಕೋರ್ಟ್​ನ ಹಿರಿಯ ವಕೀಲ ಶ್ರೀರಾಮ್​ ಪಂಚು ಅವರು ಇದ್ದಾರೆ. ವಿವಾದ ಇತ್ಯರ್ಥಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಮಿತಿಗೆ ಸುಪ್ರೀಂಕೋರ್ಟ್​ ಆಗಸ್ಟ್​ 15ರವರೆಗೆ ಸಮಯಾವಕಾಶ ನೀಡಿತ್ತು.

First published:July 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ