Ayodhya Ram Mandir: ವಿಡಿಯೋ ಕಾನ್ಫರೆನ್ಸ್​ ಮೂಲಕ ರಾಮ ಮಂದಿರ ಅಡಿಗಲ್ಲು ಕಾರ್ಯಕ್ರಮ ವೀಕ್ಷಿಸಲಿದ್ದಾರೆ ಎಲ್​ಕೆ ಅಡ್ವಾಣಿ

Ayodhya Ram Mandir Bhumi Puja: ಕೊರೋನಾ ವೈರಸ್​ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಹೊರ ಬರುವುದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಎಂ.ಎಂ. ಜೋಶಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ.  

news18-kannada
Updated:August 5, 2020, 11:23 AM IST
Ayodhya Ram Mandir: ವಿಡಿಯೋ ಕಾನ್ಫರೆನ್ಸ್​ ಮೂಲಕ ರಾಮ ಮಂದಿರ ಅಡಿಗಲ್ಲು ಕಾರ್ಯಕ್ರಮ ವೀಕ್ಷಿಸಲಿದ್ದಾರೆ ಎಲ್​ಕೆ ಅಡ್ವಾಣಿ
ಅಡ್ವಾಣಿ
  • Share this:
Ayodhya Ram Mandir Bhumi Puja: ನವದೆಹಲಿ (ಆ.5): ದಶಕಗಳ ಕಾಲ ವಿವಾದದ ಸುಳಿಯಲ್ಲಿ ಸಿಲುಕಿದ್ದ ರಾಮ ಜನ್ಮಭೂಮಿ ಪ್ರಕರಣ ಕೊನೆಗೂ ಇತ್ಯರ್ಥವಾಗಿತ್ತು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಸುಪ್ರೀಂಕೋರ್ಟ್​ ಅನುಮತಿ ನೀಡಿತ್ತು. ಹೀಗಾಗಿ ಇಂದು ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದ್ದು, 175 ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ವಿಶೇಷ ಎಂದರೆ, ರಾಮ ಮಂದರಿ ನಿರ್ಮಾಣಕ್ಕಾಗಿ ಹೋರಾಡಿದವರಲ್ಲಿ ಪ್ರಮುಖರಾದ ಎಲ್​.ಕೆ ಅಡ್ವಾಣಿ ಆನ್​ಲೈನ್​ನಲ್ಲೇ ರಾಮಮಂದಿರದ ಅಡಿಗಲ್ಲು ಕಾರ್ಯಕ್ರಮ ವೀಕ್ಷಿಸಲಿದ್ದಾರೆ.

175 ಅತಿಥಿಗಳ ಪೈಕಿ 135 ಮಂದಿ ಸಾಧು-ಸಂತರಿದ್ದಾರೆ. ಕಾರ್ಯಕ್ರಮಕ್ಕೆ ನೇಪಾಳದ ಸಂತರಿಗೂ ಆಹ್ವಾನ ನೀಡಿರುವುದು ವಿಶೇಷ. ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಅಶೋಕ್ ಸಿಂಘಾಲ್ ಕುಟುಂಬ ಪ್ರತಿನಿಧಿಸುವ ಮಹೇಶ್ ಭಗಚಂದ್ಕಾ ಮತ್ತು ಪವನ್ ಸಿಂಘಾಲ್ ಗೆ ಆಹ್ವಾನ ನೀಡಲಾಗಿದೆ. ಇವರೆಲ್ಲರಿಗೂ ಪಿಎಂ ಮೋದಿ ಜೊತೆಯಲ್ಲೇ ಆಸನದ ವ್ಯವಸ್ಥೆ ಮಾಡಲಾಗಿದೆ.

ಅಯೋಧ್ಯೆ ಭೂ ವಿವಾದ ಪ್ರಕರಣದ ಮಾಜಿ ದಾವೆದಾರ ಇಕ್ಬಾಲ್ ಅನ್ಸಾರಿ ಮತ್ತು ಮೊಹಮ್ಮದ್ ಷರೀಫ್ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಸಚಿವೆ ಸ್ಮೃತಿ ಇರಾನಿ ಸೇರಿ ಅನೇಕರು ಕಾರ್ಯಕ್ರನಮದಲ್ಲಿ ಭಾಗಿಯಾಗಿದ್ದಾರೆ.

ಕೊರೋನಾ ವೈರಸ್​ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಹೊರ ಬರುವುದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಎಂ.ಎಂ. ಜೋಶಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ.

ಇದನ್ನೂ ಓದಿ: ಕುರ್ತಾ, ಪಂಚೆ ತೊಟ್ಟು ಅಯೋಧ್ಯೆಯತ್ತ ಹೊರಟ ಪ್ರಧಾನಿ ಮೋದಿ

ಭದ್ರತೆ ಹೆಚ್ಚಳ:

ಅಯೋಧ್ಯೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗುತ್ತಿದೆ. ಇದರ ಜೊತೆ ಗಣ್ಯಾತಿ ಗಣ್ಯರು ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಈ ಭಾಗದಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ. ಅಯೋಧ್ಯೆಗೆ ಆಗಮಿಸುವ ಎಲ್ಲ ವಾಹನಗಳನ್ನು ಪರೀಕ್ಷಿಸಿ ಒಳಗೆ ಬಿಡಲಾಗುತ್ತಿದೆ. ಇನ್ನು, ಅಯೋಧ್ಯೆಯಾದ್ಯಂತ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಸಂತರಿಗೆ ಕೊರೋನಾ:

ರಾಮ ಜನ್ಮಭೂಮಿಯಲ್ಲಿರುವ ಸಂತರಿಗೆ ಒಬ್ಬರಾದ ಮೇಲೆ ಒಬ್ಬರಿಗೆ ಕೊರೋನಾ ಅಂಟುತ್ತಿದೆ. ಸೋಮವಾರ ಒಬ್ಬರಿಗೆ ಕೊರೋನಾ ಪಾಸಿಟಿವ್​ ಬಂದ ಬೆನ್ನಲ್ಲೇ ಇಂದು ಮತ್ತೋರ್ವ ಸಂತರಿಗೆ ಕೊರೋನಾ ಪಾಸಿಟಿವ್​ ಬಂದಿದೆ. ಇದು ಸಾಕಷ್ಟು ಆತಂಕ ಮೂಡಿಸಿದೆ.
Published by: Rajesh Duggumane
First published: August 5, 2020, 10:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading