• Home
  • »
  • News
  • »
  • national-international
  • »
  • Iran Violence: ಇರಾನ್‌ನಲ್ಲಿ ಇದ್ದಾನೆ ಒಬ್ಬ ಸುಪ್ರೀಂ ಲೀಡರ್, ಈತ ಹೇಳಿದ್ದೇ ಅಲ್ಲಿ ಫೈನಲ್!

Iran Violence: ಇರಾನ್‌ನಲ್ಲಿ ಇದ್ದಾನೆ ಒಬ್ಬ ಸುಪ್ರೀಂ ಲೀಡರ್, ಈತ ಹೇಳಿದ್ದೇ ಅಲ್ಲಿ ಫೈನಲ್!

ಇರಾನ್‌ನ ಹಿಂಸಾಚಾರ

ಇರಾನ್‌ನ ಹಿಂಸಾಚಾರ

ಇರಾನ್‌ನಲ್ಲಿ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿದ್ದು, ಕನಿಷ್ಠ 150 ಜನರು ಸಾವನ್ನಪ್ಪಿದ್ದಾರೆ. ಇಷ್ಟೆಲ್ಲಾ ಹಿಂಸಾಚಾರ ನಡೆಯುತ್ತಿದ್ದರೂ ಸರ್ಕಾರ ಏನು ಮಾಡುತ್ತಿದೆ ಎಂಬುದೇ ದೊಡ್ಡ ಪ್ರಶ್ನೆ. ಹಾಗಾದರೆ ಇರಾನ್‌ನಲ್ಲಿ ಈ ಗಲಭೆಗಳನ್ನು ಹತ್ತಿಕ್ಕುವ ಅಧಿಕಾರ ಸರ್ಕಾರಕ್ಕೆ ಇಲ್ಲವೇ? ಹಾಗಾದರೆ ಇಲ್ಲಿನ ಆಡಳಿತವನ್ನು ನಿಯಂತ್ರಿಸುವುದು ಯಾರು? ಇರಾನ್‌ನಲ್ಲಿ ಹೆಚ್ಚು ಅಧಿಕಾರ ಹೊಂದಿರುವವರು ಯಾರು ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ...

ಮುಂದೆ ಓದಿ ...
  • Share this:

ಇರಾನ್‌ನಲ್ಲಿ (Iran) ಮಹಿಳೆಯೊಬ್ಬರು ನೈತಿಕ ಪೊಲೀಸ್‌ಗಿರಿಗೆ ಸಿಲುಕಿ ಮೃತಪಟ್ಟ (died) ಬಳಿಕ ಆರಂಭವಾದ ಹಿಂಸಾಚಾರ ದಿನೇ ದಿನೇ ತೀವ್ರ ರೂಪ ಪಡೆಯುತ್ತಿದೆ. ದೇಶಾದ್ಯಂತ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿದ್ದು, ಕನಿಷ್ಠ 150 ಜನರು ಸಾವನ್ನಪ್ಪಿದ್ದಾರೆ ಎಂದು ಮಾನವ ಹಕ್ಕುಗಳ (Human Rights) ಗುಂಪುಗಳು ಹೇಳಿವೆ. ಇಷ್ಟೆಲ್ಲಾ ಹಿಂಸಾಚಾರ ನಡೆಯುತ್ತಿದ್ದರೂ ದೇಶ, ಸರ್ಕಾರ ಏನು ಮಾಡುತ್ತಿದೆ ಎಂಬುದೇ ದೊಡ್ಡ ಪ್ರಶ್ನೆ. ಹಾಗಾದರೆ ಇರಾನ್‌ನಲ್ಲಿ ಈ ಗಲಭೆಗಳನ್ನು ಹತ್ತಿಕ್ಕುವ ಅಧಿಕಾರ ಸರ್ಕಾರಕ್ಕೆ (Government) ಇಲ್ಲವೇ? ಹಾಗಾದರೆ ಇಲ್ಲಿನ ಆಡಳಿತವನ್ನು ನಿಯಂತ್ರಿಸುವುದು ಯಾರು? ಇರಾನ್‌ನಲ್ಲಿ ಹೆಚ್ಚು ಅಧಿಕಾರ ಹೊಂದಿರುವವರು ಯಾರು ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.


ಇರಾನ್‌ನಲ್ಲಿ ಅಯತೊಲ್ಲಾ ಅಲಿ ಖಮೇನಿ ಸರ್ವೋಚ್ಚ ನಾಯಕ
ಇರಾನ್‌ ಅಧ್ಯಕ್ಷಸ್ಥಾನ ಹೆಸರಿಗೇ ಮಾತ್ರ ಇದ್ದಂತಿದೆ. ಏಕೆಂದರೆ ಇರಾನ್‌ನ ಅತ್ಯಂತ ಶಕ್ತಿಶಾಲಿ ವ್ಯಕ್ತಿ ಅಯತೊಲ್ಲಾ ಅಲಿ ಖಮೇನಿ, 1989ರಿಂದ ದೇಶದ ಸರ್ವೋಚ್ಚ ನಾಯಕನಾಗಿದ್ದಾರೆ. ಈತ ರಾಜ್ಯದ ಮುಖ್ಯಸ್ಥ ಮತ್ತು ಕಮಾಂಡರ್-ಇನ್-ಚೀಫ್ ಆಗಿದ್ದು, ರಾಷ್ಟ್ರೀಯ ಪೊಲೀಸ್ ಮತ್ತು ನೈತಿಕತೆಯ ಪೊಲೀಸರ ಮೇಲೆ ಸಂಪೂರ್ಣ ಅಧಿಕಾರವನ್ನು ಹೊಂದಿದ್ದಾರೆ.


ಅಯತೊಲ್ಲಾ ಖಮೇನಿ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (IRGC), ಆಂತರಿಕ ಭದ್ರತೆಯ ಉಸ್ತುವಾರಿ ಮತ್ತು ಅದರ ಸ್ವಯಂಸೇವಕ ವಿಭಾಗವಾದ ಬಸಿಜ್ ರೆಸಿಸ್ಟೆನ್ಸ್ ಫೋರ್ಸ್ ಕೂಡ ಇವರ ನಿಯಂತ್ರಣದಲ್ಲಿಯೇ ಇದೆ. ಅಷ್ಟೇ ಏಕೆ ಗಾರ್ಡಿಯನ್ ಕೌನ್ಸಿಲ್ ಸದಸ್ಯರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಇರಾನ್‌ನ ಸರ್ವೋಚ್ಚ ನಾಯಕರೇ ಆಯ್ಕೆ ಮಾಡುತ್ತಾರೆ. ಗಾರ್ಡಿಯನ್ ಕೌನ್ಸಿಲ್ ನಿರ್ದಿಷ್ಟ ವ್ಯಕ್ತಿಗಳ ಮೇಲಿನ ನಿಷೇಧವನ್ನು ಖಮೇನಿಯವರು ಆದೇಶಿಸಿದ ನಂತರ ಹಿಂತೆಗೆದುಕೊಂಡ ಸಂದರ್ಭಗಳೂ ಇವೆ. ಹೀಗೆ ಆರ್ಮಿ, ಬಸಿಜ್‌, ನೈತಿಕ ಪೊಲೀಸ್‌ ಪಡೆ, ನ್ಯಾಯಾಂಗ, ಸಂಸತ್ತು ಎಲ್ಲದರ ಅಧಿಕಾರವೂ ಇವರ ಕೈಕೆಳಗೆ ಇವೆ.


ಅಧ್ಯಕ್ಷರ ಪಾತ್ರವೇನು?
ಇನ್ನೂ ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ, ಉನ್ನತ ಚುನಾಯಿತ ಅಧಿಕಾರಿ ಮತ್ತು ಸರ್ವೋಚ್ಚ ನಾಯಕನ ಶ್ರೇಣಿಯಲ್ಲಿ ಎರಡನೇ ಸ್ಥಾನದಲ್ಲಿ ಬರುತ್ತಾರೆ. ಸರ್ಕಾರದ ದಿನನಿತ್ಯದ ಚಾಲನೆಗೆ ಜವಾಬ್ದಾರರಾಗಿದ್ದಾರೆ ಮತ್ತು ದೇಶೀಯ ನೀತಿ ಮತ್ತು ವಿದೇಶಾಂಗ ವ್ಯವಹಾರಗಳ ಮೇಲೆ ಗಮನಾರ್ಹ ಅಧಿಕಾರವನ್ನು ಹೊಂದಿದ್ದಾರೆ. ಇಷ್ಟೆಲ್ಲಾ ಅಧಿಕಾರಗಳು ಇದ್ದರೂ ಕೂಡ ಅವೆಲ್ಲಾ ತುಂಬಾನೇ ಸೀಮಿತವಾಗಿವೆ. ವಿಶೇಷವಾಗಿ ಭದ್ರತೆ ವಿಷಯದಲ್ಲಿ ಅಧ್ಯಕ್ಷರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನಬಹುದು.


ಇದನ್ನೂ ಓದಿ:  Elnaaz Norouzi: ಹಿಜಾಬ್​ಗೆ ವಿರೋಧ, ಕ್ಯಾಮೆರಾದೆದುರೇ ಬಟ್ಟೆ ಕಳಚಿಟ್ಟು ಅರೆಬೆತ್ತಲಾದ ಖ್ಯಾತ ನಟಿ!


ಆದಾಗ್ಯೂ ಅಧ್ಯಕ್ಷರ ಆಂತರಿಕ ಸಚಿವಾಲಯವು ರಾಷ್ಟ್ರೀಯ ಪೊಲೀಸ್ ಪಡೆಯನ್ನು ನಡೆಸಿದರೂ ಕೂಡ ಅದರ ಕಮಾಂಡರ್ ಅನ್ನು ಸರ್ವೋಚ್ಚ ನಾಯಕನಾದ ಅಯತೊಲ್ಲಾ ಅಲಿ ಖಮೇನಿ ಅವರೇ ನೇಮಕ ಮಾಡುತ್ತಾರೆ. ಈ ಕಮಾಂಡರ್‌ ಕೂಡ ಎಲ್ಲಾ ವರದಿಗಳನ್ನು ಸರ್ವೋಚ್ಚ ನಾಯಕನಿಗೆ ಒಪ್ಪಿಸುತ್ತಾನೆ.


ನೈತಿಕ ಪೊಲೀಸರು ಯಾರು?
ಇರಾನ್‌ನಲ್ಲಿ ನೈತಿಕ ಪೊಲೀಸರ ಪಾತ್ರ ಕೂಡ ಮುಖ್ಯವಾಗಿದೆ. ಇದು ರಾಷ್ಟ್ರೀಯ ಪೊಲೀಸ್ ಭಾಗವಾಗಿದೆ. 1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ಉಡುಪಿನ ಮೇಲಿನ ಕೆಲ ನಿಬಂಧನೆಗಳನ್ನು ಹಾಕಲಾಯಿತು. ಇದನ್ನು ಮೇಲ್ವಿಚಾರಣೆ ಮಾಡಲು ಇಸ್ಲಾಮಿಕ್ ನೈತಿಕತೆ ಮತ್ತು ಕಾನೂನುಗಳನ್ನು ಎತ್ತಿಹಿಡಿಯಲು 2005 ರಲ್ಲಿ ಈ ಪಡೆಯನ್ನು ಸ್ಥಾಪಿಸಲಾಯಿತು. ಇದರಲ್ಲಿ ಅಂದಾಜು 7,000 ಪುರುಷ ಮತ್ತು ಮಹಿಳಾ ಅಧಿಕಾರಿಗಳಿದ್ದು, ನಿಯಮ ಉಲ್ಲಂಘಿಸಿದವರಿಗೆ ಎಚ್ಚರಿಕೆಗಳನ್ನು ನೀಡುವ, ದಂಡ ವಿಧಿಸುವ ಅಥವಾ ಶಂಕಿತರನ್ನು ಬಂಧಿಸುವ ಅಧಿಕಾರವನ್ನು ಹೊಂದಿದ್ದಾರೆ.


ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್
ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ ಕಾರ್ಪ್ಸ್ (IRGC), ಆಂತರಿಕ ಭದ್ರತೆಯನ್ನು ಕಾಪಾಡಿಕೊಳ್ಳಲು ಇರಾನ್‌ನ ಪ್ರಮುಖ ಸಂಸ್ಥೆಯಾಗಿದೆ, ದೇಶದ ಇಸ್ಲಾಮಿಕ್ ವ್ಯವಸ್ಥೆಯನ್ನು ರಕ್ಷಿಸಲು ಕ್ರಾಂತಿಯ ನಂತರ ಇದನ್ನು ಸ್ಥಾಪಿಸಲಾಯಿತು. IRGC ಈಗ ಇರಾನ್‌ನಲ್ಲಿ ಪ್ರಮುಖ ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ಶಕ್ತಿಯಾಗಿದ್ದು, 150,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದೆ. ಇದು ತನ್ನದೇ ಆದ ನೆಲದ ಪಡೆಗಳು, ನೌಕಾಪಡೆ ಮತ್ತು ವಾಯುಪಡೆಗಳನ್ನು ಹೊಂದಿದೆ ಮತ್ತು ಇರಾನ್‌ನ ಕಾರ್ಯತಂತ್ರದ ಶಸ್ತ್ರಾಸ್ತ್ರಗಳನ್ನು ನೋಡಿಕೊಳ್ಳುತ್ತದೆ.


ಇದು ಕುಡ್ಸ್ ಫೋರ್ಸ್ ಎಂಬ ಸಾಗರೋತ್ತರ ಪಡೆಯನ್ನು ಸಹ ಹೊಂದಿದೆ, ಇದು ಮಧ್ಯಪ್ರಾಚ್ಯದಾದ್ಯಂತ ಮಿತ್ರರಾಷ್ಟ್ರಗಳಿಗೆ ರಹಸ್ಯವಾಗಿ ಹಣ, ಶಸ್ತ್ರಾಸ್ತ್ರಗಳು, ತಂತ್ರಜ್ಞಾನ ಮತ್ತು ತರಬೇತಿಯನ್ನು ಒದಗಿಸುತ್ತದೆ. ಜೊತೆಗೆ ಇದು ಬಸಿಜ್ ರೆಸಿಸ್ಟೆನ್ಸ್ ಫೋರ್ಸ್ ಅನ್ನು ಸಹ ನಿಯಂತ್ರಿಸುತ್ತದೆ.


ಬಸಿಜ್ ಎಂದರೇನು?
ಬಸಿಜ್ ರೆಸಿಸ್ಟೆನ್ಸ್ ಫೋರ್ಸ್ ಅನ್ನು ಔಪಚಾರಿಕವಾಗಿ ಆರ್ಗನೈಸೇಶನ್ ಫಾರ್ ದಿ ಮೊಬಿಲೈಸೇಶನ್ ಆಫ್ ದಿ ಒಪ್ರೆಸ್ಡ್ ಎಂದು ಕರೆಯಲಾಗುತ್ತದೆ, ಇದನ್ನು 1979 ರಲ್ಲಿ ಸ್ವಯಂಸೇವಕ ಅರೆಸೈನಿಕ ಸಂಘಟನೆಯಾಗಿ ರಚಿಸಲಾಯಿತು. ಇದು ಇರಾನ್‌ನ ಪ್ರತಿಯೊಂದು ಪ್ರಾಂತ್ಯ ಮತ್ತು ನಗರದಲ್ಲಿ ಮತ್ತು ದೇಶದ ಹಲವು ಅಧಿಕೃತ ಸಂಸ್ಥೆಗಳಲ್ಲಿ ಶಾಖೆಗಳನ್ನು ಹೊಂದಿದೆ. ಇದರಲ್ಲಿರುವ ಪುರುಷ ಮತ್ತು ಮಹಿಳಾ ಸದಸ್ಯರನ್ನು "ಬಸಿಜಿಗಳು" ಎಂದು ಕರೆಯಲಾಗುತ್ತದೆ.


ಇದನ್ನೂ ಓದಿ:  Muslim Marriage: ಮುಸ್ಲಿಂ ಪುರುಷರ ಮದುವೆ ಬಗ್ಗೆ ಹೈಕೋರ್ಟ್​ನಿಂದ ಮಹತ್ವದ ಆದೇಶ


ಸುಮಾರು 100,000 ಜನರು ಆಂತರಿಕ ಭದ್ರತಾ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಎಂದು ವರದಿಗಳು ಹೇಳುತ್ತವೆ.2009 ರಲ್ಲಿ ವಿವಾದಿತ ಅಧ್ಯಕ್ಷೀಯ ಚುನಾವಣೆಯ ನಂತರ ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಈ ಪಡೆ ಪ್ರಮುಖ ಪಾತ್ರವಹಿಸಿತ್ತು.

Published by:Ashwini Prabhu
First published: