ಸುಸ್ಥಿರ ಕೃಷಿಯು (Sustainable agriculture) ಪ್ರಸ್ತುತ ಅಥವಾ ಭವಿಷ್ಯದ ಪೀಳಿಗೆಗೆ (future generations) ತಮ್ಮ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ರಾಜಿ ಮಾಡಿಕೊಳ್ಳದೆ, ಸಮಾಜದ ಪ್ರಸ್ತುತ ಆಹಾರವನ್ನು (Food) ಪೂರೈಸುವ ವಿಧಾನವಾಗಿದೆ. ಸಾವಯವ ಗೊಬ್ಬರಗಳ (Organic fertilizers) ಬಳಕೆ, ಮಣ್ಣಿನ ಸಂರಕ್ಷಣೆ (Soil conservation) ಮಾಡುವ ಕೃಷಿ ವಿಧಾನವನ್ನು ಒಳಗೊಂಡಂತೆ ಪ್ರಸಕ್ತ ಸುಸ್ಥಿರ ಕೃಷಿ ಹೆಚ್ಚಿನ ಪ್ರಾಶಸ್ತ್ಯವನ್ನು ಪಡೆದುಕೊಳ್ಳುತ್ತಿದೆ. ಈ ಸುಸ್ಥಿರ ಕೃಷಿ ಪದ್ಧತಿಯನ್ನೇ ಸಣ್ಣ ಹಿಡುವಳಿದಾರ ರೈತರಿಗೆ ಪರಿಚಯಿಸುವ ಮೂಲಕ, ಅದರಲ್ಲಿ ಹೊಸ ಕಲ್ಪನೆಗಳ ಬಗ್ಗೆ ಶಿಕ್ಷಣ ನೀಡುವ ಮೂಲಕ ಇಲ್ಲೊಬ್ಬ ವ್ಯಕ್ತಿ ರೈತರ ಬಾಳಿನ ಗೇಮ್‌ಚೇಂಜರ್ ಆಗಿದ್ದಾರೆ ನೋಡಿ.
ರೈತರ ಪಾಲಿನ ದಾರಿದೀಪವಾದ ರಾಮ್‌ನರೇಶ್ ಸಿಂಗ್
ಸಾವಯವ ಮತ್ತು ಸುಸ್ಥಿರ ಆಹಾರವು ಕೇವಲ ಫ್ಯಾಶನ್ ಆಹಾರವಾಗಿ ಮಾರ್ಪಟ್ಟಿರುವ ಯುಗದಲ್ಲಿ, ಹಾರ್ವೆಸ್ಟಿಫೈ ಪ್ರೈವೇಟ್‌ನ ಸಹ-ಸಂಸ್ಥಾಪಕ ಮತ್ತು ಸಂಕಲ್ಪ್ ಜನ್ ಜಾಗರಣ ಸಮಿತಿಯ ಸಿಇಒ ಆಗಿರುವ ರಾಮ್‌ನರೇಶ್ ಸಿಂಗ್ ಅವರು ಸಣ್ಣ ಹಿಡುವಳಿದಾರ ರೈತರಿಗೆ ಸುಸ್ಥಿರ ಕೃಷಿಯ ಇಂಚಿಂಚೂ ಮಾಹಿತಿ ನೀಡಿ ಅವರ ಬಾಳಲ್ಲಿ ಭರವಸೆ ತುಂಬಿದ್ದಾರೆ.
6 ರೈತ ಉತ್ಪಾದಕ ಸಂಸ್ಥೆಗಳು, 5 ಸಹಕಾರಿ ಸಂಘಗಳು, 2 ಎನ್‌ಜಿಒಗಳು, 3 ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು 12000 ರೈತರ ಸಹಭಾಗಿತ್ವದಲ್ಲಿ, ಹಾರ್ವೆಸ್ಟಿಫೈ ಪ್ರೈವೇಟ್ ಲಿಮಿಟೆಡ್ ಕಾರ್ಯನಿರ್ವಹಿಸುತ್ತಿದೆ.
ಸುಸ್ಥಿರ ಕೃಷಿ ಬಗ್ಗೆ ಸಂಪೂರ್ಣ ಮಾರ್ಗದರ್ಶನ
ರಾಮ್‌ನರೇಶ್ ಸಿಂಗ್ ಅವರ ಎರಡೂ ಕಂಪನಿಗಳು ಸಣ್ಣ ಹಿಡುವಳಿದಾರರಿಗೆ ಸುಸ್ಥಿರ ಕೃಷಿಯತ್ತ ಮಾರ್ಗದರ್ಶನ ನೀಡುತ್ತವೆ. ಹೆಚ್ಚುತ್ತಿರುವ ಆರೋಗ್ಯ ಕಾಳಜಿಯ ಮಧ್ಯದಲ್ಲಿ ಸಾವಯವ ಉತ್ಪನ್ನಗಳ ಪ್ರಯೋಜನಗಳ ಬಗ್ಗೆ ಜಾಗೃತಿಯನ್ನು ನೀಡುತ್ತಿದ್ದಾರೆ.
ಏಕಸಂಕಲ್ಪ್ ಜನ ಜಾಗರಣಸಮಿತಿಯು ರೈತರಿಗೆ ಸುಧಾರಿತ ಕೃಷಿ ಪದ್ಧತಿಗಳಲ್ಲಿ ತರಬೇತಿ ನೀಡಲು ಕೆಲಸ ಮಾಡುತ್ತಿದೆ. ಇದು ರೈತರಿಗೆ ಅತಿ ಹೆಚ್ಚು ಇಳುವರಿ ನೀಡುವ ಬೀಜಗಳು ಮತ್ತು ಪ್ರೀಮಿಯಂ ಬೆಳೆಗಳನ್ನು ಗುರುತಿಸುವುದು, ಸಾವಯವ ಮಣ್ಣಿನ ಗುಣಮಟ್ಟದ ಬಗ್ಗೆ ತಿಳಿಸುವುದು, ಸಮರ್ಥ ಕೃಷಿ ವಿಧಾನಗಳು, ಡಿಜಿಟಲ್ ಸಾಧನ ಮತ್ತು ಕೃಷಿಯ ಡಿಜಿಟಲೀಕರಣದ ಬಗ್ಗೆ ತಿಳಿಸುತ್ತದೆ.
ಸರ್ಕಾರಿ ಯೋಜನೆಗಳು ಮತ್ತು ನಿಧಿಗಳ ಬಗ್ಗೆ ತಿಳಿಸುತ್ತದೆ ಸಮಿತಿ
ರಾಮ್‌ನರೇಶ್ ಸಿಂಗ್ ತಮ್ಮ ಎರಡೂ ಕಂಪನಿಗಳ ಮೂಲಕ ಸಣ್ಣ ಹಿಡುವಳಿದಾರ ರೈತರ ಆರ್ಥಿಕ ಸಂಕಷ್ಟಗಳನ್ನು ಪರಿಹರಿಸುತ್ತಿದ್ದಾರೆ. ಲಭ್ಯವಿರುವ ಸರ್ಕಾರಿ ಯೋಜನೆಗಳು ಮತ್ತು ನಿಧಿಗಳನ್ನು ಪ್ರವೇಶಿಸಲು ಸಹಾಯ ಮಾಡುವ ಮೂಲಕ ರೈತರಿಗೆ ಅವರ ಹಕ್ಕುಗಳ ಕುರಿತು ತಿಳಿಸುತ್ತಿದ್ದಾರೆ.
ರೈತರಲ್ಲಿ ಡಿಜಿಟಲ್ ಅರಿವು ಮೂಡಿಸಲು ಯೋಜನೆ
2030 ರ ವೇಳೆಗೆ ಭಾರತದ ಗ್ರಾಮೀಣ ಭಾರತದ ಲಕ್ಷಾಂತರ ಜನರ ಬಡ ಜೀವನ ಪರಿಸ್ಥಿತಿಗಳನ್ನು ನಿವಾರಿಸಲು ಕಂಪನಿಯು ಪಣ ತೊಟ್ಟಿದ್ದು, ಅದರಲ್ಲಿ ಮುಖ್ಯವಾಗಿ ರೈತರಿಗೆ ಡಿಜಿಟಲ್ ಅರಿವು ಮೂಡಿಸಲು ಯೋಜನೆ ರೂಪಿಸಿಕೊಂಡಿದೆ.
ಸುಸ್ಥಿರ ಕೃಷಿ ವಿಧಾನಗಳನ್ನು ಆವಿಷ್ಕರಿಸಲು ಮತ್ತು ಕಾರ್ಬನ್ ಕ್ರೆಡಿಟ್ ಮಾರುಕಟ್ಟೆಯನ್ನು ಪ್ರವೇಶಿಸಲು ತಂತ್ರಜ್ಞಾನ ಅವಶ್ಯವಾಗಿದ್ದು, ಇದನ್ನು ರೈತರಿಗೆ ಪರಿಚಯಿಸುವ ಗುರಿಯನ್ನು ಸಂಕಲ್ಪ್ ಜನ್ ಜಾಗರಣ ಸಮಿತಿಯು ಕಾರ್ಯರೂಪಕ್ಕೆ ತರಲು ಎದುರು ನೋಡುತ್ತಿದೆ.
ಇದನ್ನೂ ಓದಿ:Farmers: ರೈತರಿಗಾಗಿ ಅಂತಾನೇ ಇರೋದು ಈ ಯೋಜನೆಗಳು, ಪ್ರತಿ ವರ್ಷ ನಿಮ್ಮ ಖಾತೆ ಸೇರುತ್ತೆ 42 ಸಾವಿರ!
ರೈತರ ಬದುಕನ್ನು ಸುಧಾರಿಸುವ ಏಕ್ ಸಂಕಲ್ಪ್ ಜನ ಜಾಗರಣ ಸಮಿತಿಯ ಕಠಿಣ ಕಾರ್ಯಕ್ಕೆ ಪೂರಕವಾಗಿ, ಹಾರ್ವೆಸ್ಟಿಫೈ ಪ್ರೈ. Ltd. ಬಹುರಾಷ್ಟ್ರೀಯ ಆಹಾರ ಉತ್ಪನ್ನಗಳ ತಯಾರಕರ ನಡುವೆ ಸಣ್ಣ ಹಿಡುವಳಿದಾರ ರೈತರು ಮಾತ್ರ ಉತ್ಪಾದಿಸುವ ಸುಸ್ಥಿರವಾಗಿ ಬೆಳೆದ ತಳೀಯವಾಗಿ ಮಾರ್ಪಡಿಸದ ಧಾನ್ಯಗಳನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ.
ರಾಮನರೇಶ್ ಸಿಂಗ್ ಮುಡಿಗೆ ಪ್ರತಿಷ್ಠಿತ ಇಂಡಿಯನ್ ಅಚೀವರ್ಸ್ ಪ್ರಶಸ್ತಿ
ರಾಮ್‌ನರೇಶ್ ಸಿಂಗ್ ಅವರ ಈ ಕೆಲಸ ಕಾರ್ಯಗಳಿಗೆ ಪ್ರತಿಷ್ಠಿತ ಇಂಡಿಯನ್ ಅಚೀವರ್ಸ್ ಪ್ರಶಸ್ತಿ ಕೂಡ ಸಿಕ್ಕಿದೆ. ಸಾಮಾಜಿಕ ವಾಣಿಜ್ಯೋದ್ಯಮಿ ಗ್ರಾಮೀಣ ಭಾರತದ ಸವಾಲುಗಳನ್ನು ಪರಿಹರಿಸುವ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ