ರಾತ್ರಿ ವೇಳೆ Bike Ride‌ ಮಾಡುವಾಗ ಗಾಢ ಬಣ್ಣದ ಬಟ್ಟೆ ಧರಿಸಬೇಡಿ.. ಕೋಲ್ಕತ್ತಾ ಪೊಲೀಸರ ಸೂಚನೆ

ರಾತ್ರಿ ಹೊತ್ತು ಬೈಕ್ ಚಲಾಯಿಸುವ ಸವಾರರು ಹೆಚ್ಚು ಹೊಳಪಿರುವ ಬಟ್ಟೆಗಳನ್ನು ಧರಿಸಬೇಕು. ಸಾಧ್ಯವಾದರೆ ತಮ್ಮ ಹೆಲ್ಮೆಟ್‌ನಲ್ಲಿ ಬೆಳಗುವ ದೀಪವೊಂದನ್ನು ಅಳವಡಿಸಿಕೊಳ್ಳಬೇಕು ಎಂದು ಪೊಲೀಸ್ ಸಲಹೆ ನೀಡಿದ್ದಾರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ರಾತ್ರಿ ಹೊತ್ತು ವಾಹನಗಳ ( Night accidents) ಅಪಘಾತವಾಗುವುದು ಸರ್ವೇಸಾಮಾನ್ಯ ಸಂಗತಿ. ಅದರಲ್ಲೂ ಬೈಕ್ ಸವಾರರು ಹೆಚ್ಚು ಅಪಘಾತಕ್ಕೀಡಾಗುತ್ತಾರೆ. ಈ ಬೈಕ್ ಅಪಘಾತಗಳಿಗೆ ಸವಾರರು ಕಡು ಬಣ್ಣದ ಬಟ್ಟೆ ಧರಿಸಿರುವುದೇ ಪ್ರಮುಖ ಕಾರಣ ಎಂದು ನಿರ್ಧರಿಸಿರುವ ಕೋಲ್ಕತ್ತಾ ಸಂಚಾರಿ ಪೊಲೀಸರು, ರಾತ್ರಿ(Night) ಹೊತ್ತು ದ್ವಿಚಕ್ರ ( Bike accident) ವಾಹನ ಚಲಾಯಿಸುವಾಗ ಕಡು ಬಣ್ಣದ (Dark clothing) ಬಟ್ಟೆಗಳನ್ನು ಧರಿಸದಿರಿ ಎಂದು ಮನವಿ (Requested) ಮಾಡಿದ್ದಾರೆ.

ಅಪಘಾತ ಹೆಚ್ಚಳ
ಬೈಕ್ ಅಪಘಾತಗಳ ಕುರಿತು ವಿಶ್ಲೇಷಿಸಿರುವ ಕೋಲ್ಕತ್ತಾ ಸಂಚಾರಿ ಪೊಲೀಸರ ಅಪಘಾತ ದಳವು, ರಾತ್ರಿ ಹೊತ್ತಿನಲ್ಲಿ ಹೆದ್ದಾರಿಯಲ್ಲಿ ಭಾರಿ ವಾಹನಗಳ ದಟ್ಟಣೆಯಿರುವಾಗ ಸಂಭವಿಸಿರುವ ಅಪಘಾತಗಳಲ್ಲಿ ಬಲಿಯಾಗಿರುವ ಕನಿಷ್ಠ 6 ಮಂದಿ ಬೈಕ್ ಸವಾರರು ಕಡು ಬಣ್ಣದ ಬಟ್ಟೆಗಳನ್ನು ಧರಿಸಿದ್ದರು. ಹೀಗಾಗಿ ದೂರದಿಂದ ಬರುತ್ತಿದ್ದ ಭಾರಿ ವಾಹನ ಚಾಲಕರಿಗೆ ಬೈಕ್ ಸವಾರರು ವಾಹನ ಚಲಾಯಿಸುತ್ತಿರುವುದನ್ನು ಗುರುತಿಸಲು ಕಷ್ಟವಾಗಿದೆ ಎಂದು ಹೇಳಿದೆ. ಮುಖ್ಯವಾಗಿ ಚಳಿಗಾಲದಲ್ಲಿ ಕಡು ಬಣ್ಣದ ಬಟ್ಟೆ ಧರಿಸಿ ರಾತ್ರಿ ಹೊತ್ತು ಬೈಕ್ ಚಲಾಯಿಸುತ್ತಿರುವ ಸವಾರರು ಅಪಘಾತಕ್ಕೀಡಾಗಿದ್ದಾರೆ ಎಂದು ವಿಶ್ಲೇಷಿಸಿದೆ.

ಇದನ್ನೂ ಓದಿ: Viral Video: ಕ್ರಿಸ್​ಮಸ್​ ಪರೇಡ್​ ಮಾಡ್ತಿದ್ದವರ ಮೇಲೆ ಹರಿದ SUV ಕಾರು: ಭಯಾನಕ ವಿಡಿಯೋ ಇಲ್ಲಿದೆ!

ಪೊಲೀಸರು ಕಾರ್ಯಾಗಾರ
ಬಂದರುಗಳಿಗೆ ತೆರಳುವ ಮಾರ್ಗಗಳನ್ನು ನಿರ್ವಹಿಸುವ ನೈರುತ್ಯ ಸಂಚಾರಿ ರಕ್ಷಕರ ನೇತೃತ್ವದ ಸಂಚಾರಿ ಪೊಲೀಸರು ಇದೀಗ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದು, ದ್ವಿಚಕ್ರ ವಾಹನ ಸವಾರರಿಗೆ ದೂರದಿಂದಲೂ ಕಾಣುವಂತಹ ಹೊಳಪಿರುವ ಬಟ್ಟೆ ಮತ್ತು ಜಾಕೆಟ್‌ಗಳನ್ನು ಧರಿಸುವಂತೆ ಸಲಹೆ ನೀಡುತ್ತಿದ್ದಾರೆ. ಬುಧವಾರ ತಾರ್ತಲ ತಿರುವಿನ ಬಳಿ ಇಂತಹದೊಂದು ಕಾರ್ಯಾಗಾರ ಹಮ್ಮಿಕೊಂಡಿದ್ದ ಸಂಚಾರಿ ಪೊಲೀಸರು, ವಾಸ್ತವ ಸಮಯದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಭಾವಚಿತ್ರಗಳನ್ನು ಪ್ರದರ್ಶಿಸಿ, ಬೈಕ್ ಸವಾರರು ಹೇಗೆ ಸುರಕ್ಷಿತವಾಗಿ ಮನೆ ಸೇರಬಹುದು ಎಂದು ವಿವರಿಸಿದರು. ಇತರ ಸಂಚಾರಿ ರಕ್ಷಕರೂ ಈ ಕುರಿತಂತೆ ಬೈಕ್ ಸವಾರರನ್ನು ಭೇಟಿ ಮಾಡಲಿದೆ ಎಂದು ಲಾಲ್‌ಬಜಾರ್ ವರದಿ ಮಾಡಿದೆ.

ಹೊಳಪಿರುವ ಬಟ್ಟೆ
ಕೋಲ್ಕತ್ತಾ ಸಂಚಾರಿ ಪೊಲೀಸರು ಈ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ತನ್ನ ಫೇಸ್‌ಬುಕ್ ಪುಟದಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದು, ರಾತ್ರಿ ಹೊತ್ತು ಬೈಕ್ ಚಲಾಯಿಸುವ ಸವಾರರು ಹೆಚ್ಚು ಹೊಳಪಿರುವ ಬಟ್ಟೆಗಳನ್ನು ಧರಿಸಬೇಕು. ಸಾಧ್ಯವಾದರೆ ತಮ್ಮ ಹೆಲ್ಮೆಟ್‌ನಲ್ಲಿ ಬೆಳಗುವ ದೀಪವೊಂದನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಸಂಚಾರ ಸುರಕ್ಷತೆಯ ಜಾಗೃತಿ
"ಬೈಕ್ ಅಥವಾ ಸ್ಕೂಟರ್ ಅಪಘಾತಗಳನ್ನು ವಿಶ್ಲೇಷಿಸಿದಾಗ ದೂರದ ವಾಹನ ಚಾಲಕರಿಗೆ ಕಾಣುವಂಥ ಹೊಳಪಿನ ಬಟ್ಟೆಯನ್ನು ದ್ವಿಚಕ್ರ ವಾಹನ ಸವಾರರು ಧರಿಸದೆ ಇರುವುದರಿಂದ ಅಪಘಾತಗಳು ಸಂಭವಿಸಿರುವುದು ಕಂಡು ಬಂದಿದೆ. ಈ ಕುರಿತು ಬೈಕ್ ಸವಾರರಲ್ಲಿ ಜನಜಾಗೃತಿ ಮೂಡಿಸಲು ನೈರುತ್ಯ ಸಂಚಾರಿ ರಕ್ಷಕರ ವಲಯದ ಹಿರಿಯ ಪೊಲೀಸ್ ಅಧಿಕಾರಿ ಪ್ರೊಸೆಂಜಿತ್ ಚಟರ್ಜಿ ನೇತೃತ್ವದಲ್ಲಿ ಮಂಗಳವಾರ ತಡರಾತ್ರಿ ತಾರ್ತಲಾ ತಿರುವಿನ ಬಳಿ ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಬೈಕ್ ಸವಾರರಿಗೆ ಸಂಚಾರ ಸುರಕ್ಷತೆಯ ಜಾಗೃತಿ ಮೂಡಿಸುವುದರೊಂದಿಗೆ ಹೆಚ್ಚು ಹೊಳಪಿರುವ ಬಟ್ಟೆಗಳನ್ನು ಧರಿಸುವಂತೆ ತಿಳಿ ಹೇಳಲಾಯಿತು" ಎಂದು ಪೊಲೀಸರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಹೇಳಿಕೊಂಡಿದ್ದಾರೆ.

ಬೈಕ್ ಸವಾರರಿಗೆ ಕಿವಿಮಾತು
ಈ ಕುರಿತು ಪ್ರತಿಕ್ರಿಯಿಸಿರುವ ಉಪ ಆಯುಕ್ತ (ಸಂಚಾರ) ಅರಿಜಿತ್ ಸಿನ್ಹಾ, ಕಾರ್ಯಾಗಾರವು ಪ್ರಮುಖವಾಗಿ ರಸ್ತೆ ಮೇಲಿನ ಚಾಲಕರು ಮತ್ತು ಪೊಲೀಸರ ಅನುಭವದ ಫಲಿತಾಂಶ. ಬೈಕ್ ಸವಾರರು ಸಾಮಾನ್ಯವಾಗಿ ಕಪ್ಪು ಮತ್ತು ಕಡು ಬಣ್ಣದ ಬಟ್ಟೆಗಳನ್ನು ಧರಿಸಲು ಆದ್ಯತೆ ನೀಡುತ್ತಾರೆ. ವಾಹನ ಸವಾರನಾಗಿ ಸುರಕ್ಷಿತ ಸವಾರಿ ಮಾಡಲು ನಾನು ನನ್ನ ಕಡೆಯಿಂದ ಎಲ್ಲ ಬಗೆಯ ಸುರಕ್ಷತೆಗಳನ್ನು ಪಾಲಿಸಬೇಕಾಗುತ್ತದೆ. ವಿಷಾದ ವ್ಯಕ್ತಪಡಿಸುವುದಕ್ಕಿಂತ ಸುರಕ್ಷಿತವಾಗಿರುವುದು ಹೆಚ್ಚು ಉತ್ತಮವಾಗಿರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕರೇ ಎಚ್ಚರ: ಮನೆಯ ಮುಂದೆ ವಾಹನಗಳನ್ನ ನಿಲ್ಲಿಸ್ತೀರಾ? ಹಾಗಾದ್ರೆ ಈ ಸುದ್ದಿ ಓದಿ

ಪೊಲೀಸರ ಪ್ರಕಾರ, ಹೆಚ್ಚು ಹೊಳಪಿರುವ ಬಣ್ಣದ ಬಟ್ಟೆಗಳನ್ನು ಧರಿಸಿರುವ ಸವಾರ ಪೈಕಿ ಶೇ. 37 ಮಂದಿ ಅಪಘಾತಕ್ಕೀಡಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಮುಖ್ಯವಾಗಿ ನಿಮ್ಮ ಬೈಕ್‌ನ ಗೇರ್‌ಗಳು ಹಿಮ್ಮುಖವಾಗಿ ಪ್ರತಿಫಲಿಸಿವ ಫಲಕಗಳನ್ನು ಒಳಗೊಂಡಿರುವುದನ್ನು ಖಾತ್ರಿಗೊಳಿಸಿಕೊಳ್ಳಿ. ನಿಮ್ಮ ಬೈಕಿನ ಮುಂಭಾಗದ ದೀಪವು ಹೊತ್ತಿಕೊಂಡಾಗ ಆ ಫಲಕವು ಹೊಳೆಯುತ್ತದೆ. ಇದೇ ನಿಮ್ಮ ಬೈಕ್ ಸವಾರಿಯನ್ನು ವಿಶಿಷ್ಟಗೊಳಿಸುವ ಅಂಶವಾಗಿದೆ ಎಂದು ಪೊಲೀಸರು ಬೈಕ್ ಸವಾರರಿಗೆ ಕಿವಿಮಾತು ಹೇಳಿದ್ದಾರೆ
Published by:vanithasanjevani vanithasanjevani
First published: