ಬಾಹುಬಲಿಯನ್ನು ಹಿಂದಿಕ್ಕುವಲ್ಲಿ ಸೋತ ಅವೆಂಜರ್ಸ್​: ಇನ್ಫಿನಿಟಿ ವಾರ್​ : ತೆರೆಗೂ ಮುನ್ನವೇ 10 ಲಕ್ಷ ಟಿಕೆಟ್​ ಮಾರಾಟ

news18
Updated:April 27, 2018, 12:44 PM IST
ಬಾಹುಬಲಿಯನ್ನು ಹಿಂದಿಕ್ಕುವಲ್ಲಿ ಸೋತ ಅವೆಂಜರ್ಸ್​: ಇನ್ಫಿನಿಟಿ ವಾರ್​ : ತೆರೆಗೂ ಮುನ್ನವೇ 10 ಲಕ್ಷ ಟಿಕೆಟ್​ ಮಾರಾಟ
news18
Updated: April 27, 2018, 12:44 PM IST
ನ್ಯೂಸ್​ 18 ಕನ್ನಡ

ಹಾಲಿವುಡ್​ನ ಬಹು ನಿರೀಕ್ಷಿತ ಸಿನಿಮಾ 'ಅವೆಂಜರ್ಸ್​: ಇನ್ಫಿನಿಟಿ ವಾರ್​' ಭಾರತದಲ್ಲಿ ಇಂದು ತೆರೆ ಕಾಣುವ ಮುನ್ನ ಆನ್​ಲೈನ್​ನಲ್ಲಿ 10 ಲಕ್ಷ ಟಿಕೆಟ್ ಮಾರಾಟವಾಗಿದೆ. ​ನಮ್ಮ ದೇಶದಲ್ಲಿ ಬುಕ್​ಮೈಷೋ ಮೂಲಕ ಸಿನಿಮಾ ತೆರೆಗೂ ಮುನ್ನವೇ ಇಷ್ಟು ಟಿಕೆಟ್​ ಮಾರಾಟವಾಗಿರುವುದು ಇದು ಎರಡೇ ಬಾರಿ.

ಹೌದು ಈ ಹಿಂದೆ 'ಬಾಹುಬಲಿ 2: ದ ಕನ್​ಕ್ಲೂಷನ್​' ಸಿನಿಮಾದ ಟಿಕೆಟ್​ಗಳು ಅತಿ ಹೆಚ್ಚು ಮಾರಾಟವಾಗಿ ಟ್ರೆಂಡ್​ ಆಗಿತ್ತು. ಈಗ 'ಅವೆಂಜರ್ಸ್​: ಇನ್ಫಿನಿಟಿ ವಾರ್​' ಸಿನಿಮಾದ ಟಿಕೆಟ್​ಗಳ ಮಾರಾಟ ಸಹ ಇದೇ ರೀತಿ ಟ್ರೆಂಡ್​ ಆಗಿದ್ದು, 'ಬಾಹುಬಲಿ 2: ದ ಕನ್​ಕ್ಲೂಷನ್​' ಸಿನಿಮಾದ ನಂತರದ ಸ್ಥಾನವನ್ನು ಪಡೆದುಕೊಂಡಿದೆ ಎಂದು ಬುಕ್​ಮೈಷೋ ಗುರುವಾರ ತಿಳಿಸಿದೆ.

ಮೆಟ್ರೊ ನಗರಗಳಾದ ಬೆಂಗಳೂರು, ದೆಹಲಿ, ಮುಂಬೈನಲ್ಲಿ ಟಿಕೆಟ್​ ಮಾರಾಟ ಹೆಚ್ಚಾಗಿದ್ದು, ಎರಡನೇ ಸ್ತರದ (ಟಿಯರ್​ 2) ಟೌನ್​ಗಳಾದ ಭುವನೇಶ್ವರ್​ ಹಾಗೂ ತಿರುವನಂತಪುರದಲ್ಲೂ ಮಾರಾಟವಾಗಿರುವ ಟಿಕೆಟ್​ಗಳ ಸಂಖ್ಯೆ ಹೆಚ್ಚಿದೆ. ಪ್ರಾದೇಶಿಕ ಭಾಷೆಗಳಲ್ಲಿ ತೆರೆ ಕಂಡಿರುವ ಈ ಸಿನಿಮಾದ ಟಿಕೆಟ್​ಗಳೂ ಒಟ್ಟಾರೆ ಮಾರಾಟವಾಗಿರುವ ಸಂಖ್ಯೆಗೆ ಶೇ 25ರಷ್ಟು ಕೊಡುಗೆ ನೀಡಿವೆ. ಇದರಲ್ಲಿ ಹಿಂದಿ ಭಾಷೆ ಮುಂದಿದೆ. ಹೆಚ್ಚುವರಿಯಾಗಿ ಐಮ್ಯಾಕ್ಸ್​ ಟಿಕೆಟ್​ಗಳಲ್ಲಿ ಶೇ 65ರಷ್ಟನ್ನು ಕೇವಲ ಬುಕ್​ಮೈಷೋ  ಒಂದೇ ಮಾರಾಟ ಮಾಡಿದೆ.

'ಅವೆಂಜರ್ಸ್​: ಇನ್ಫಿನಿಟಿ ವಾರ್​' ಮಾರ್ವೆಲ್ಸ್​ನ ಸಿನಿಮಾಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದು, ಇದು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಈ ಸಿನಿಮಾದಲ್ಲಿ 22 ಸೂಪರ್​ ಹಿರೋಗಳನ್ನು ಒಂದೇ ವೇದಿಕೆಗೆ ತರಲಾಗಿದ್ದು, ಐರನ್​ ಮ್ಯಾನ್​, ಥೋರ್​, ಹಲ್ಕ್​ನಂತಹ ಹಿರೋಗಳು ಸೂಪರ್​ ವಿಲನ್​ ಥಾನ್ಸ್​ ವಿರುದ್ಧ ಹೋರಾಡಲಿದ್ದಾರೆ. ಇವರೊಂದಿಗೆ ಕ್ಯಾಪ್ಟನ್​ ಅಮೆರಿಕ, ಡಾಕ್ಟರ್ ಸ್ಟ್ರೇಂಜ್​, ಹೊಸ ಯಂಗ್​ ಸ್ಪೈಡರ್​ ಮ್ಯಾನ್, ಬ್ಲಾಕ್​ ಪ್ಯಾಂಥರ್​​ ಸೇರಿದಂತೆ ಹಲವರು ಸಹ ಕಾಣಿಸಿಕೊಳ್ಳಲಿದ್ದಾರೆ. ಜೋ ರುಸ್ಸೋ ನಿರ್ದೇಶನದ ಈ ಸಿನಿಮಾ ಭಾರತದಲ್ಲಿ ಇಂಗ್ಲಿಷ್​, ಹಿಂದಿ , ತೆಲುಗು ಹಾಗೂ ತಮಿಳಿನಲ್ಲಿ 2 ಸಾವಿರ ತೆರೆಗಳಲ್ಲಿ ಪ್ರದರ್ಶನ ಕಾಣುತ್ತಿದೆ.
First published:April 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ