ದೋಹಾ ವಿಮಾನ ನಿಲ್ದಾಣ(Doha airport)ದಲ್ಲಿ, ಕತಾರ್ ಅಧಿಕಾರಿಗಳಿಂದ ಆಕ್ರಮಣಶೀಲ ಸ್ತ್ರೀರೋಗ ಶಾಸ್ತ್ರ ಪರಿಶೀಲನೆಗೆ ಒಳಗಾಗಿದ್ದ ಮಹಿಳೆಯರ ಒಂದು ಗುಂಪು, ಆ ಅಧಿಕಾರಿಗಳ ಮೇಲೆ ಮೊಕದ್ದಮೆ ಹೂಡಲಿದ್ದು, ಜಾಗತಿಕ ಖಂಡನೆಗೆ ಒಳಗಾಗಿದ್ದ ಈ ಘಟನೆಗೆ ಪರಿಹಾರ ಕೋರಲಿದೆ ಎಂದು ಆ ಮಹಿಳೆಯರ ಪರ ವಕೀಲರು ಸೋಮವಾರ ತಿಳಿಸಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ, ವಿಮಾನ ನಿಲ್ದಾಣದ ಸ್ನಾನಗೃಹದಲ್ಲಿ ( airport bathroom) ಅನಾಥವಾಗಿದ್ದ ನವಜಾತ ಶಿಶುವಿನ (Newborn Baby) ತಾಯಿ (Mother) ಹುಡುಕುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ತೊಡಗಿದ್ದಾಗ, 13 ಆಸ್ಟ್ರೇಲಿಯನ್ನರು ( Australians) ಸೇರಿದಂತೆ, ದೋಹಾದ ಕತಾರ್ ಏರ್ವೇಸ್ ವಿಮಾನ(Qatar Airways flights)ಗಳಲ್ಲಿನ 10 ಜನ ಮಹಿಳೆಯರನ್ನು (Women) ಪರೀಕ್ಷೆಗೆ ಒಳಪಡಿಸಲಾಯಿತು.
ಈ ಘಟನೆಯು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟು ಮಾತ್ರವಲ್ಲ, 2022ರ ಫುಟ್ಬಾಲ್ ವಿಶ್ವಕಪ್ಗೆ (2022 football World Cup) ಸಾವಿರಾರು ವಿದೇಶಿ ಸಂದರ್ಶಕರನ್ನು ಎದುರುಗೊಳ್ಳಲು ಗಲ್ಫ್ ರಾಜ್ಯವು ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ, ಕತಾರ್ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಕಳವಳ ಉಂಟು ಮಾಡುವಂತೆ ಮಾಡಿದೆ.
7 ಪೀಡಿತ ಪ್ರಯಾಣಿಕರು ಈಗ ''ನೀವು ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಕತಾರಿ ಅಧಿಕಾರಿಗಳಿಗೆ ಕಳುಹಿಸಲು” ಕಾನೂನು ಕ್ರಮ ಕೈಗೊಳ್ಳುವ ಕುರಿತು ಆಲೋಚಿಸುತ್ತಾರೆ ಎಂದು ಹೇಳಿದ್ದಾರೆ.
“ಮಹಿಳೆಯರ ಗುಂಪು , ಒಂದು ವರ್ಷದ ಹಿಂದೆ ಸಂಜೆ ನಡೆದ ಆ ಘಟನೆಯಿಂದಾಗಿ ಅಗಾಧವಾದ ಸಂಕಟ ಅನುಭವಿಸಿದೆ ಮತ್ತು ಅದರ ಪರಿಣಾಮವಾಗಿ ಈಗಲೂ ಯಾತನೆ , ದುಷ್ಪರಿಣಾಮ ಹಾಗೂ ಅಘಾತವನ್ನು ಅನುಭವಿಸುತ್ತಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಆ ಮಹಿಳೆಯರು , ಒಂದು ಔಪಚಾರಿಕ ಕ್ಷಮಾಯಾಚನೆ, ಪರಿಹಾರ ಧನ ಮತ್ತು ಆ ವಿಮಾನ ನಿಲ್ದಾಣದ ಮೂಲಕ ಸಾಗುವ ಭವಿಷ್ಯದ ಪ್ರಯಾಣಿಕರಿಗೆ ರಕ್ಷಣೆ ಕೋರುತ್ತಿದ್ದಾರೆ ಎಂದು ಸ್ಟರ್ಜೆಕರ್ ಹೇಳಿದ್ದಾರೆ.
ಕತಾರ್ ಒಂದು ಅತಿ ಸಂಪ್ರದಾಯವಾದಿ ಮುಸ್ಲಿಂ ರಾಜ ಪ್ರಭುತ್ವವಾಗಿದ್ದು, ಅಲ್ಲಿ ವಿವಾಹೇತರ ಲೈಂಗಿಕತೆಗೆ ಮತ್ತು ಹೆರಿಗೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಪ್ರಯಾಣಿಕರ ಭವಿಷ್ಯದ ಸುರಕ್ಷತೆ ಮತ್ತು ಭದ್ರತೆ
ವಿಶ್ವಕಪ್ಗೆ ಮೊದಲೇ, ತಮ್ಮ ದೇಶದಲ್ಲಿ ಮಹಿಳೆಯರ ಹಕ್ಕುಗಳು, ಕಾರ್ಮಿಕ ಸಂಬಂಧಗಳು ಮತ್ತು ಪ್ರಜಾಪ್ರಭುತ್ವದ ಮೇಲಿನ ಭರವಸೆಗಳು ವಿಶ್ವಾಸಾರ್ಹವಾಗಿದೆ ಎಂದು ತಮ್ಮನ್ನು ಟೀಕೆ ಮಾಡುತ್ತಿರುವವರಿಗೆ ಭರವಸೆ ನೀಡಲು ದೇಶವು ಒದ್ದಾಡುತ್ತಿದೆ.
ಆ ಘಟನೆಯ ನಂತರ, ಸಂಭಾವ್ಯ ವಿನಾಶಕಾರಿ ವಾಣಿಜ್ಯ ಮತ್ತು ಗೌರವ ಹಾನಿ ಎದುರಿಸುತ್ತಿರುವ ಕತಾರ್, ಪ್ರಯಾಣಿಕರ ಭವಿಷ್ಯದ “ಸುರಕ್ಷತೆ ಮತ್ತು ಭದ್ರತೆ”ಯನ್ನು ಖಾತರಿ ಪಡಿಸುವುದಾಗಿ ಪ್ರತಿಜ್ಞೆ ಮಾಡಿದೆ.
ಈ ಘಟನೆಯ ಕುರಿತು ದೇಶದ ಪ್ರಧಾನ ಮಂತ್ರಿ ಕೂಡ ಕ್ಷಮೆ ಯಾಚಿಸಿದ್ದು, ಆ ಹುಡುಕಾಟದ ಮೇಲ್ವಿಚಾರಣೆ ಮಾಡಿದ್ದ ವಿಮಾನ ನಿಲ್ದಾಣದ ಅಧಿಕಾರಿಯನ್ನು ದೋಷಿ ಎಂದು ಪರಿಗಣಿಸಿ ವರದಿ ಮಾಡಲಾಗಿದೆ.
ಆದರೆ ಸ್ಟರ್ಜೆಕರ್ ಅವರು, ವಿಮಾನ ನಿಲ್ದಾಣದ ಕಾರ್ಯ ವಿಧಾನಗಳಿಗೆ ಯಾವುದೇ ಸುಧಾರಣೆಗಳು ಮಹಿಳೆಯರಿಗೆ ತಿಳಿದಿರಲಿಲ್ಲ ಮತ್ತು ಈ ಕುರಿತು ಮಧ್ಯಸ್ಥಿಕೆ ಪಡೆಯುವ ಅವರ ಪ್ರಯತ್ನಗಳು ವಿಫಲವಾಗಿವೆ ಎಂದು ಹೇಳಿದರು.
ಫಿಫಾ ಪಂದ್ಯಾವಳಿಗೆ ಮೊದಲು, ಕತಾರ್ಗೆ ಭೇಟಿ ನೀಡುವ ಇತರ ಪ್ರಯಾಣಿಕರಿಗೆ ಉತ್ತಮ ಮಾಹಿತಿ ಇದೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಮಹಿಳೆಯರು ಈ ಪ್ರಕರಣವನ್ನು ಎತ್ತಿ ತೋರಿಸಲು ಬಯಸಿದ್ದಾರೆ ಎಂದು ಸ್ಟರ್ಜೆಕರ್ ಹೇಳಿದರು.
"ಹೆಚ್ಚು ಅಭಿವೃದ್ಧಿ ಹೊಂದಿದ, ಹೆಚ್ಚು ಆಧುನೀಕರಿಸಿದ ವಿಮಾನ ನಿಲ್ದಾಣ ಮತ್ತು ರಾಷ್ಟ್ರೀಯ ವಾಹಕದಲ್ಲಿ ಈ ಘಟನೆಗಳು ನಡೆದಿವೆ. ಅಲ್ಲದೆ, ಅವುಗಳನ್ನು ಮತ್ತೆ ಸಂಭವಿಸದಂತೆ ತಡೆಯಲು ಏನೂ ಇಲ್ಲ – ಎಂಬುವುದನ್ನು ಅವರು ಅರಿತಿರಬೇಕು” ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯೆ ನೀಡಬೇಕೆಂಬ ವಿನಂತಿಗೆ, ಕ್ಯಾನ್ಬೆರಾದಲ್ಲಿನ ಕತಾರ್ನ ರಾಯಭಾರಿ ಕಚೇರಿ ಮತ್ತು ಕತಾರ್ ಏರ್ವೇಸ್ ತಕ್ಷಣವೇ ಪ್ರತಿಕ್ರಿಯಿಸಲಿಲ್ಲ.
ಇನ್ನು, ಕೆಲ ವಾರಗಳಲ್ಲಿ ಕತಾರ್ ನಾಗರಿಕ ವಿಮಾನ ಯಾನ ಪ್ರಾಧಿಕಾರ, ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕತಾರ್ ಏರ್ವೇಸ್ ಮತ್ತು ದೇಶದ ಸರ್ಕಾರದ ವಿರುದ್ಧ ಆಸ್ಟ್ರೇಲಿಯಾದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಸ್ಟರ್ಜೆಕರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ