ಈ ಪ್ರೀತಿಯೇ (Love) ಹೀಗೆ ನೋಡಿ.. ಯಾರ ಜೊತೆ? ಯಾವಾಗ? ಎಲ್ಲಿ? ಆಗುತ್ತೆ ಅಂತ ಊಹೆ ಸಹ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರೀತಿ ಒಮ್ಮೆ ಆದರೆ ಸಾಕು, ಆಗ ಪ್ರೀತಿಯಲ್ಲಿರುವವರು ಎಂತಹ ತ್ಯಾಗಕ್ಕೂ ಸಹ ಸಿದ್ದರಾಗಿರುತ್ತಾರೆ ಅಂತ ಹೇಳಿದರೆ ಸುಳ್ಳಲ್ಲ. ನಾವು ಈಗಾಗಲೇ ಎಷ್ಟೋ ಪ್ರೀತಿಯ ಕಥೆಗಳಲ್ಲಿ ವಿದೇಶಿ ವ್ಯಕ್ತಿ (Foreigner) ತನ್ನ ಪ್ರೀತಿಯನ್ನು ಹುಡುಕಿಕೊಂಡು ಭಾರತಕ್ಕೆ (India) ಬಂದಿದ್ದು, ಭಾರತದಲ್ಲಿರುವ ಹುಡುಗಿ (Indian Girl) ತನ್ನ ಪ್ರೀತಿಯನ್ನು ಅರಿಸಿ ಬೇರೆ ದೇಶಕ್ಕೆ ಹೋಗಿದ್ದ ಅನೇಕ ಪ್ರಸಂಗಗಳನ್ನು ನೋಡಿರುತ್ತೇವೆ. ಪ್ರೀತಿ ನಮ್ಮನ್ನು ಇಷ್ಟ ಪಡುವವರ ಬಳಿಗೆ ನಮ್ಮನ್ನು ಒಳ್ಳೆ ಅಯಸ್ಕಾಂತದ (Magnet) ರೀತಿಯಲ್ಲಿ ತನ್ನೆಡೆಗೆ ಸೆಳೆದುಕೊಳ್ಳುತ್ತದೆ ಎಂಬುದಕ್ಕೆ ಇಲ್ಲೊಂದು ಜ್ವಲಂತ ಸಾಕ್ಷಿ ಇದೆ ನೋಡಿ.
ತನ್ನ ಪ್ರಿಯತಮೆಗಾಗಿ ಭಾರತಕ್ಕೆ ಬಂದ ಆಸ್ಟ್ರೇಲಿಯ ವ್ಯಕ್ತಿ..
ಇಲ್ಲಿಬ್ಬರು ಪ್ರೇಮಿಗಳು ಇದ್ದಾರೆ ನೋಡಿ, ಅವರಿಗೆ ಈ ‘ದೂರ’ ಅಂತ ಹೇಳುವ ಮಾತು ಬಹುಶಃ ಗೊತ್ತಿರಲಿಕ್ಕಿಲ್ಲ ಅಂತ ಅನ್ನಿಸುತ್ತದೆ. ಆಸ್ಟ್ರೇಲಿಯಾದ ಬ್ರಿಸ್ಬೇನ್ ಮೂಲದ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯೊಂದಿಗೆ ಮದುವೆಯಾಗಲು ಮಧ್ಯಪ್ರದೇಶದ ಧಾರ್ ನ ಮನವಾರ್ ಎಂಬ ಸಣ್ಣ ಪಟ್ಟಣಕ್ಕೆ ಬಂದಿಳಿದಿದ್ದಾರೆ.
ಇಲ್ಲಿಗೆ ಈ ಪ್ರಿಯಕರ ಬಂದಿಳಿದಿದ್ದು ಅಲ್ಲದೆ, ಡಿಸೆಂಬರ್ 18 ರಂದು ಭಾರತೀಯ ವಿವಾಹ ವಿಧಿವಿಧಾನಗಳ ಪ್ರಕಾರ ತಬಸ್ಸುಮ್ ಹುಸೇನ್ ಅವರನ್ನು ಮದುವೆಯಾಗಿದ್ದಾರೆ.
ಇವರಿಬ್ಬರ ನಡುವಿನ ಪ್ರೀತಿಯನ್ನು ನೋಡಿ ಆ ಪಟ್ಟಣದಲ್ಲಿರುವ ಸ್ಥಳೀಯರು ಸಹ ಮದುವೆಯಲ್ಲಿ ತುಂಬಾನೇ ಉತ್ಸಾಹದಿಂದ ಓಡಾಡಿ ಮದುವೆ ಮಾಡಿಸಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ತನ್ನ ವರದಿಯಲ್ಲಿ ತಿಳಿಸಿದೆ.
ವಿದೇಶಿ ವರನನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲು ಜನರೆಲ್ಲರೂ ಒಟ್ಟುಗೂಡಿದರು. ಅವರ ಮದುವೆ ಭಾರತದಲ್ಲಿ ನಡೆದಿರಬಹುದು, ಆದರೆ ಆಶ್ ಮತ್ತು ತಬಸ್ಸುಮ್ ಅವರ ಪ್ರೇಮಕಥೆ ಸಾವಿರಾರು ಕಿಲೋಮೀಟರ್ ದೂರದ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಯಿತು.
ಇವರಿಬ್ಬರ ನಡುವೆ ಪ್ರೀತಿ ಶುರುವಾಗಿದ್ದು ಆಸ್ಟ್ರೇಲಿಯಾದಲ್ಲಿ...
ತಬಸ್ಸುಮ್ ಆಸ್ಟ್ರೇಲಿಯಾದಲ್ಲಿ ತನ್ನ ಉನ್ನತ ಶಿಕ್ಷಣವನ್ನು ಮುಂದುವರಿಸಲು ಮುಂದಾದಾಗ ಇವರಿಬ್ಬರ ನಡುವೆ ಪ್ರೇಮಾಂಕುರವಾಯಿತು ಎಂದು ಹೇಳಲಾಗುತ್ತಿದೆ.
ವಧುವಿನ ತಂದೆ ಸಾದಿಕ್ ಹುಸೇನ್ ಬಸ್ ನಿಲ್ದಾಣದಲ್ಲಿ ಸಣ್ಣ ಬೈಸಿಕಲ್ ರಿಪೇರಿ ಅಂಗಡಿಯನ್ನು ನಡೆಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ, 2016 ರಲ್ಲಿ, ತಬಸ್ಸುಮ್ ಅವರಿಗೆ ಉನ್ನತ ಶಿಕ್ಷಣಕ್ಕಾಗಿ ಮಧ್ಯಪ್ರದೇಶ ಸರ್ಕಾರವು 45 ಲಕ್ಷ ಮೌಲ್ಯದ ವಿದ್ಯಾರ್ಥಿವೇತನವನ್ನು ಸಹ ನೀಡಿತು.
2017 ರಲ್ಲಿ ಆಸ್ಟ್ರೇಲಿಯಾಗೆ ತೆರಳಿದ್ದ ಆಶ್ರನ್ನು ಭೇಟಿಯಾಗಿದ್ದ ಯುವತಿ
ಇದಾದ ನಂತರ, ಅವರು ಒಂದು ವರ್ಷದ ನಂತರ, 2017 ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್ ಗೆ ತೆರಳಿದರು. ಅಲ್ಲಿಯೇ ಅವಳು ಆಶ್ ನನ್ನು ಭೇಟಿಯಾದಳು. ಅವರು ಒಟ್ಟಿಗೆ ಅಧ್ಯಯನ ಮಾಡಿದ ಕಾಲೇಜಿನಲ್ಲಿ ಅವನು ಅವಳ ಹಿರಿಯನಾಗಿದ್ದನು. ಅಂತಿಮವಾಗಿ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿತು.
ತಬಸ್ಸುಮ್ ಅವರ ತಾಯಿ ಜುಲುಖಾ ತನ್ನ ಮಗಳು ಮದುವೆಯಾಗುವುದಿಲ್ಲ ಎಂದು ಭಾವಿಸಿದ್ದರಂತೆ. ಆಶ್ ಭೇಟಿಯು ಅವರ ಅಭಿಪ್ರಾಯವನ್ನು ಬದಲಾಯಿಸಿತು ಮತ್ತು ಅವರು ಈಗ ತುಂಬಾ ಸಂತೋಷಪಟ್ಟಿದ್ದಾರೆ.
ಒಂದು ಸಂಸ್ಥೆಯಲ್ಲಿ ಹಿರಿಯ ವ್ಯವಸ್ಥಾಪಕರಾಗಿರುವ ತಬಸ್ಸುಮ್
ಅಂತಿಮವಾಗಿ ಈ ಜೋಡಿ ಮದುವೆಯಾದರು. ಅಷ್ಟಕ್ಕೂ, ಆಶ್ ತನ್ನನ್ನು ಮದುವೆಯಾಗುವಂತೆ ಕೇಳಿದಾಗ ತಬಸ್ಸುಮ್ ಗೆ ಇಲ್ಲ ಎಂದು ಹೇಳಲು ಸಾಧ್ಯವಾಗಲಿಲ್ಲ. ಸದ್ಯಕ್ಕೆ ಒಂದು ಸಂಸ್ಥೆಯಲ್ಲಿ ಹಿರಿಯ ವ್ಯವಸ್ಥಾಪಕರಾಗಿ ತಬಸ್ಸುಮ್ ಅವರು ಕೆಲಸ ಮಾಡುತ್ತಿದ್ದಾರೆ.
So heartwarming 😊 pic.twitter.com/60kqvCKeNj
— Gabbbar (@GabbbarSingh) December 1, 2022
ಇದನ್ನೂ ಓದಿ:Allu Arjun-Sneha Reddy: ಅಲ್ಲು ಅರ್ಜುನ್ ಹೆಂಡತಿಯನ್ನು ಪ್ರೀತಿಯಿಂದ ಕರೆಯೋದು ಹೀಗಂತೆ!
ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ಇಂತಹದೇ ಒಂದು ಮದುವೆ ಸಮಾರಂಭದ ವೀಡಿಯೋದಲ್ಲಿ ಹಾಸ್ಟೆಲ್ ನ ಯುವಕನೊಬ್ಬ ಮದುವೆ ಮಂಟಪದ ಗೇಟ್ ಅನ್ನು ದಾಟಿಕೊಂಡು ಮದುವೆಯಲ್ಲಿ ಊಟ ಮಾಡಲು ವೇದಿಕೆಯ ಮೇಲೆ ನಿಂತಿದ್ದ ವರನ ಅನುಮತಿಯನ್ನು ಗೌರವಪೂರ್ವಕವಾಗಿ ಕೇಳಿದನು. ಆಗ ಆ ವರನು ಸಂತೋಷದಿಂದ ಯುವಕನಿಗೆ ತನ್ನ ಅನುಮತಿಯನ್ನು ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ