ಜುಜುಬಿ ಬಿಯರ್​ಗೆ 48 ಲಕ್ಷ ರೂ. ಪಾವತಿಸಿದ ಮದ್ಯಪ್ರಿಯ!; ಕಾರಣ ಮಾತ್ರ ವಿಚಿತ್ರ

ಪೀಟರ್ ಪಾವತಿಸಿರುವ 48 ಲಕ್ಷ ರೂ. ಹಣ ಅವರ ಬ್ಯಾಂಕ್​ ಖಾತೆಗೆ ಮರುಪಾವತಿಯಾಗಬೇಕಾದರೆ 10 ವ್ಯವಹಾರ ದಿನಗಳು ಬೇಕು.

Latha CG | news18-kannada
Updated:September 9, 2019, 5:01 PM IST
ಜುಜುಬಿ ಬಿಯರ್​ಗೆ 48 ಲಕ್ಷ ರೂ. ಪಾವತಿಸಿದ ಮದ್ಯಪ್ರಿಯ!; ಕಾರಣ ಮಾತ್ರ ವಿಚಿತ್ರ
ಬಿಯರ್​
  • Share this:
ಆಸ್ಟ್ರೇಲಿಯಾದ ವ್ಯಕ್ತಿಯೋರ್ವ  ಬ್ರಿಟನ್​​​​ನ ಹೋಟೆಲ್​ನಲ್ಲಿ ಒಂದು ಬಾಟಲ್​ ಬಿಯರ್​ಗೆ 48 ಲಕ್ಷ ರೂ. ಬಿಲ್​ ಕಟ್ಟಿದ್ದಾರೆ. ಬಿಯರ್​ ಕುಡಿದ ಬಳಿಕ 'ನಾನು ವಿಶ್ವದ ಅತೀ ದುಬಾರಿ ಬಿಯರ್​ ಕುಡಿದಿದ್ದೇನೆ' ಎಂದು ಹೇಳಿಕೊಂಡಿದ್ದಾರೆ! ಅಷ್ಟಕ್ಕೂ ಈ ಅವಾಂತರ ನಡೆಯಲು ಕಾರಣವೇನು ಗೊತ್ತಾ? ಈ ಸ್ಟೋರಿ ಓದಿ.

ಪೀಟರ್​ ಲಾಲೋರ್ ಆಸ್ಟ್ರೇಲಿಯಾದ ಕ್ರಿಕೆಟ್​ ಬರಹಗಾರರು. ಸೆಪ್ಟೆಂಬರ್​ 1ರಂದು ಮ್ಯಾಂಚೆಸ್ಟರ್​ನಲ್ಲಿ ನಡೆದ 4ನೇ  ಆ್ಯಷಸ್ ಟೆಸ್ಟ್​ ಮ್ಯಾಚ್​​​​ಗೆ ನೋಡಲು ಬ್ರಿಟನ್​ಗೆ ತೆರಳಿದ್ದರು. ಆಗ ಮ್ಯಾಂಚೆಸ್ಟರ್​​​ನಲ್ಲಿರುವ ಮಲ್ಮಾಯಿಸನ್​ ಹೋಟೆಲ್​​ವೊಂದಕ್ಕೆ ಹೋಗಿ Deuchars IPA ಬಿಯರ್​ ಆರ್ಡರ್​ ಮಾಡಿದ್ದಾರೆ.

ಬಿಯರ್​ ಕುಡಿದ ಬಳಿಕ ಪೀಟರ್ ಕನ್ನಡಕ ಹಾಕದೆ ವೀಸಾ ಕಾರ್ಡ್​​ ಮೂಲಕ ಬಿಲ್​ ಕಟ್ಟಿದ್ದಾರೆ. ಬಳಿಕ ಗೊಂದಲದಿಂದ ಆ ಬಿಯರ್​ಗೆ ಎಷ್ಟು ಹಣ ಕೊಟ್ಟೆ ಎಂದು ಕೇಳಿದ್ದಾರೆ. ಆಗ ಬಾರ್​ನ ಅಟೆಂಡೆಂಟ್​​​ ಪೆಟರ್​ ಕಟ್ಟಿದ​ ಬಿಲ್​ ನೋಡಿ ಕಿಸಿ ಕಿಸಿ ನಕ್ಕು, ಪಾವತಿ ಮಾಡಿರುವ ಬಿಲ್ ಎಷ್ಟೆಂದು ಹೇಳಲು ನಿರಾಕರಿದ್ದ.  ಆ ಬಿಯರ್​ನ ನೈಜ ಬೆಲೆ 483 ರೂಗಳಷ್ಟೇ. ಆದರೆ ಪೀಟರ್​ ಪಾವತಿಸಿದ ಹಣ ಬರೋಬ್ಬರಿ 48 ಲಕ್ಷ ರೂಗಳು.
ಪೀಟರ್​ಗೆ ತಾನು ಕುಡಿದ ಬಿಯರ್​ಗೆ ನೈಜ ಬೆಲೆಗಿಂತ ಹೆಚ್ಚು ಹಣ ಪಾವತಿ ಮಾಡಿದ್ದೇನೆ ಎಂಬ ಅರಿವಾಗುತ್ತದೆ. ಬಳಿಕ ಬಾರ್ ಅಟೆಂಡೆಂಟ್​ ಬಳಿ ಪೆಟೆರ್ ವಿಷಯ​ ಹೇಳಿದಾಗ ಆಕೆ ಬಾರ್​ ಮ್ಯಾನೇಜರ್​​ ಹತ್ತಿರ ಮಾತನಾಡುತ್ತಾಳೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಬಾರ್​ ಮ್ಯಾನೇಜರ್​​, ಪೀಟರ್​​​ ಪಾವತಿಸಿದ ಹೆಚ್ಚುವರಿ ಹಣವನ್ನು ಮರುಪಾವತಿ ಮಾಡುವುದಾಗಿ ಭರವಸೆ ನೀಡುತ್ತಾರೆ.

ಪೀಟರ್ ಪಾವತಿಸಿರುವ 48 ಲಕ್ಷ ರೂ. ಹಣ ಅವರ ಬ್ಯಾಂಕ್​ ಖಾತೆಗೆ ಮರುಪಾವತಿಯಾಗಬೇಕಾದರೆ 10 ವ್ಯವಹಾರ ದಿನಗಳು ಬೇಕು.

Chandrayaan-2: ಸುಸ್ಥಿತಿಯಲ್ಲಿದೆ ಲ್ಯಾಂಡರ್​ ವಿಕ್ರಂ; ಸಂಪರ್ಕ ಸಾಧಿಸಲು ಇಸ್ರೋ ಶತಪ್ರಯತ್ನ

ಸಾಮಾನ್ಯವಾಗಿ ಆಸ್ಟ್ರೇಲಿಯನ್ನರು ಇಂಗ್ಲೆಂಡ್​ನ್ನು ದುಬಾರಿ ಎಂದೇ ಪರಿಗಣಿಸುತ್ತಾರೆ. ಆದರೆ ಈ ಘಟನೆ ನನಗೆ ಹೊಸ ಅನುಭವ ನೀಡಿದೆ. ಅದು ದೊಡ್ಡ ಮೊತ್ತದ ಹಣ. ನಾನು ಕೇವಲ ಕ್ರಿಕೆಟ್​ ಬರಹಗಾರ. ನಾನು ಹೆಚ್ಚು ಸಂಪಾದನೆ ಮಾಡುವುದಿಲ್ಲ. ಇದು ನನ್ನ ಜೀವನದಲ್ಲಿ ಮಾಡಿದ ಅತಿದೊಡ್ಡ ಖರ್ಚು ಎಂದು ಪೀಟರ್​ ನೋವಿನಿಂದಲೇ ಹೇಳುತ್ತಾರೆ.

ಆಗಿರುವ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಪೀಟರ್​ ಅವರನ್ನು ಸಂಪರ್ಕಿಸಿ ಆದಷ್ಟು ಬೇಗ ಅವರ ಹಣವನ್ನು ಮರುಪಾವತಿ ಮಾಡಲು  ಪ್ರಯತ್ನಿಸುತ್ತೇವೆ.  ಹೋಟೆಲ್​​ನಲ್ಲಿ ಗ್ರಾಹಕರು ಬಿಲ್​ ಪಾವತಿಸಿದ ಬಳಿಕ ಒಂದು ಬಾರಿ ಪರಿಶೀಲಿಸಬೇಕು ಎಂಬ ವಿಷಯ ಮುಖ್ಯವಾಗುತ್ತದೆ ಎಂದು ಹೋಟೆಲ್​​ನ ವಕ್ತಾರರು ಹೇಳಿದ್ದಾರೆ.

First published:September 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading