ಜಾಗತಿಕ ತಾಪಮಾನ (Global warming) ಹೆಚ್ಚಾದಂತೆ ಪರಿಸರ ವ್ಯವಸ್ಥೆ ಮೇಲೆ ಅದರ ನೇರ ಪರಿಣಾಮ (Effect) ಬೀರುತ್ತದೆ ಮತ್ತು ಪ್ರಾಕೃತಿಕವಾಗಿ ಹಲವಾರು ಬದಲಾವಣೆಗಳು ಸಹ ಆಗುತ್ತವೆ. ಜಾಗತಿಕ ತಾಪಮಾನದ ಪರಿಣಾಮವಾಗಿ ಭೂಮಿಯ ಮೇಲ್ಭಾಗದ ನೀರು ಹೆಚ್ಚಾಗಿ ಆವಿಯಾಗುತ್ತದೆ. ಇದು ನೀರಿನ ಮೂಲಗಳು, ಅರಣ್ಯ, ನೈಸರ್ಗಿಕ ಸಂಪತ್ತಿನ (Natural wealth) ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮ ಪರಿಸರ ಸಂಕುಲವನ್ನು ಹಾನಿಗೊಳಿಸುತ್ತದೆ. ಜಾಗತಿಕ ತಾಪಮಾನ ನೀರಿನ ಜೀವಿಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದು ಆಸ್ಟ್ರೇಲಿಯನ್ ತಜ್ಞರು (Australian Experts) ವರದಿ ಮಾಡಿದ್ದಾರೆ. ಆಸ್ಟ್ರೇಲಿಯನ್ ತಜ್ಞರು ಸಮುದ್ರದಲ್ಲಿನ ಹವಳಗಳು, ಅಕಶೇರುಕಗಳು ಸೇರಿದಂತೆ 45,000 ಬೇರೆ ಬೇರೆ ಸಮುದ್ರ ಪ್ರಭೇದಗಳು ವಿನಾಶದ ಅಂಚಿನಲ್ಲಿರುವ ಬಗ್ಗೆ ಗುರುತಿಸಿದ್ದಾರೆ.
ಕ್ವೀನ್ಸ್ಲ್ಯಾಂಡ್ ವಿಶ್ವವಿದ್ಯಾನಿಲಯದ (UQ) ಸಮುದ್ರ ತಜ್ಞರ ತಂಡವೊಂದು ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಸ್ಟ್ರೇಲಿಯನ್ ತಜ್ಞರು ಸಂಗ್ರಹಿಸಿದ ವಿವರಗಳ ಪ್ರಕಾರ, ಜಾಗತಿಕ ತಾಪಮಾನ ಮತ್ತು ಇತರ ಅಂಶಗಳ ದುಷ್ಪರಿಣಾಮಗಳು ಸಮುದ್ರದಲ್ಲಿ ವಾಸಿಸುತ್ತಿರುವ ಜೀವಿಗಳ ವಿನಾಶಕ್ಕೆ ಕಾರಣವಾಗುತ್ತಿವೆ ಎಂದಿದ್ದಾರೆ. UQ ಸ್ಕೂಲ್ ಆಫ್ ಅರ್ಥ್ ಅಂಡ್ ಎನ್ವಿರಾನ್ಮೆಂಟಲ್ ಸೈನ್ಸಸ್ನ ಡಾ. ನಥಾಲಿ ಬಟ್ ಸಂಶೋಧನೆಯನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ.
ವಿನಾಶದ ಅಂಚಿನಲ್ಲಿದೆ ಜೀವರಾಶಿಗಳು
ಸಮುದ್ರದಲ್ಲಿರುವ ಮೀನು, ಅಕಶೇರುಕ, ಹವಳ ಇನ್ನೂ ಬೇರೆ ಬೇರೆ 45,000ಕ್ಕೂ ಹೆಚ್ಚು ಪ್ರಭೇದಗಳು ದುರ್ಬಲವಾಗುತ್ತಿವೆ ಮತ್ತು ಅಳಿವಿನಂಚಿನಲ್ಲಿದೆ ಎಂದು ಈ ಅಧ್ಯಯನದ ಸಂಶೋಧಕ ಡಾ. ನಥಾಲಿ ಬಟ್ ಹೇಳಿದ್ದಾರೆ. ಈ ಅಂಕಿ ಅಂಶ ಸಮುದ್ರ ಜೀವಿಗಳ ಅವನತಿಯನ್ನು ಸೂಚಿಸುತ್ತಿದೆ.
ಕ್ವೀನ್ಸ್ಲ್ಯಾಂಡ್ ವಿಶ್ವವಿದ್ಯಾಲಯದ ವರದಿ
ಕ್ವೀನ್ಸ್ಲ್ಯಾಂಡ್ ವಿಶ್ವವಿದ್ಯಾನಿಲಯ ಸಂಗ್ರಹಿಸಿರುವ ವರದಿಯ ಅಧ್ಯಯನವನ್ನು ಎನ್ವೈರೆನ್ಮೆಂಟಲ್ ಸೊಸೈಟಿ ಆಫ್ ಅಮೇರಿಕಾ (ESA) ಜರ್ನಲ್ನಲ್ಲಿ ಪ್ರಕಟಿಸಲಾಗಿದೆ ಮತ್ತು ಸಾರ್ವಜನಿಕರಿಗಾಗಿ ಅಂಕಿ ಅಂಶವನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ; Belgium: ವಾರದಲ್ಲಿ 4 ದಿನ ಕೆಲಸ, 3 ದಿನ ರಜಾ-ಮಜಾ, ನೌಕರರಿಗೆ ಬಂಪರ್ ಗಿಫ್ಟ್, ಇಲ್ಲಿ ಅಂತೀರಾ ಈ ಸ್ಟೋರಿ ಓದಿ
ಹವಳಗಳು ಮತ್ತು ಇತರ ಸೆಸೈಲ್ ಅಕಶೇರುಕಗಳು ಕಲ್ಲಿಗೆ ಅಂಟಿಕೊಂಡಿರುವ ಬೆನ್ನೆಲುಬು ಇಲ್ಲದ ಜೀವಿಗಳು ಆಮ್ಲೀಯತೆ ಮತ್ತು ಲವಣಾಂಶದಂತಹ ನೀರಿನ ಪರಿಸ್ಥಿತಿಗಳಲ್ಲಿ 0.4 -0.5 ರ ಮತ್ತು 0 ರಿಂದ 1 ಪ್ರಮಾಣದಲ್ಲಿ ಪ್ರಭಾವಿತವಾಗಿರುತ್ತದೆ. ನೀರಿನ ಮೇಲ್ಭಾಗ ಹೆಚ್ಚು ತಾಪಮಾನದಿಂದ ಕೂಡಿದ್ದರೆ ಇವುಗಳ ಉಳಿವಿಕೆಗೆ ಕಷ್ಟವಾಗುತ್ತದೆ. ಹೀಗಾಗಿ ಇವುಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದಿದ್ದಾರೆ.
ಹೆಚ್ಚುತ್ತಿರುವ ನೀರಿನ ತಾಪಮಾನವು ಸಮುದ್ರದ ಹೆಚ್ಚುತ್ತಿರುವ ಆಮ್ಲೀಯತೆಗೆ ಸಂಬಂಧಿಸಿದೆ. ಆದ್ದರಿಂದ, ಶೆಲ್ ರಚನೆಗಳನ್ನು ಹೊಂದಿರುವ ಜೀವಿಗಳು ಹೆಚ್ಚುತ್ತಿರುವ ಆಮ್ಲೀಯತೆಯ ಅಡಿಯಲ್ಲಿ ಆ ರಚನೆಗಳನ್ನು ರೂಪಿಸಲು ಕಷ್ಟಕರವಾಗಿದೆ ಎಂದು ಸಂಶೋಧಕ ಬಟ್ ಹೇಳಿದ್ದಾರೆ.
ಪ್ಲಾಸ್ಟಿಕ್ನಿಂದ ಸಮುದ್ರ ಮಾಲಿನ್ಯ
ಇದರ ಮದ್ಯೆ, ದೊಡ್ಡ ಪ್ರಾಣಿಗಳ ಆವಾಸಸ್ಥಾನದ ನಾಶ ಮತ್ತು ಮೀನುಗಾರಿಕೆಯಂತಹ ನೇರ ಪರಿಣಾಮಗಳಿಗೆ ಸಮುದ್ರ ಜೀವಿಗಳು ಒಳಗಾಗುತ್ತವೆ. ಮೀನುಗಾರಿಕೆಯು ಸಮುದ್ರ ಮಾಲಿನ್ಯಕ್ಕೆ ಪ್ರಮುಖ ಕೊಡುಗೆಯಾಗಿದೆ. ಅಲ್ಲದೇ ಪ್ಲಾಸ್ಟಿಕ್ ನಿಂದ ಸಮುದ್ರ ಮಾಲಿನ್ಯವಾಗುತ್ತಿದ್ದು ದೊಡ್ಡ ದೊಡ್ಡ ಪ್ರಾಣಿಗಳ ವಿನಾಶಕ್ಕೆ ಕಾರಣವಾಗಿದೆ ಎಂದು ಅಧ್ಯಯನಗಳು ಹೇಳುತ್ತಿದೆ.
ಹೆಚ್ಚಿದ ತಾಪಮಾನ, ಸಮುದ್ರ ಜೀವಿಗಳ ಮೇಲೆ ಪ್ರಭಾವ
ಡಾಲ್ಫಿನ್ಗಳು, ಆಮೆಗಳು, ಶಾರ್ಕ್ಗಳು ಮತ್ತು ಸಮುದ್ರ ಪಕ್ಷಿಗಳು ಮೀನುಗಾರಿಕೆ ಚಟುವಟಿಕೆಗಳಿಂದಾಗಿ 0.5 ಮತ್ತು 0.6 ರ ನಡುವೆಯ ಸೂಕ್ಷ್ಮತೆಯ ಮಟ್ಟವನ್ನು ಹೊಂದಿರುತ್ತವೆ. ಒಟ್ಟಾರೆಯಾಗಿ, ಅಜೈವಿಕ ಮಾಲಿನ್ಯ ಮತ್ತು ನೀರಿನ ತಾಪಮಾನವು ಹೆಚ್ಚಿನ ಸಂಖ್ಯೆಯ ಸಮುದ್ರ ಜೀವಿಗಳ ಪ್ರಭೇದದ ಮೇಲೆ ಪರಿಣಾಮ ಬೀರಿದೆ. ಈ ತಾಪಾಮಾನ ವೈಪರಿತ್ಯವು ಸಮುದ್ರ ಜೀವಿಗಳ ಮೆಲೆ ಪ್ರತಿಶತ 31 ರಷ್ಟು ಪರಿಣಾಮ ಬೀರಿದೆ.
ಇದನ್ನೂ ಓದಿ: Breast milk: ಎದೆ ಹಾಲು ಮಾರಿ ಲಕ್ಷಾಂತರ ಹಣ ಗಳಿಸುತ್ತಿದ್ದಾಳೆ ಈ ತಾಯಿ! 30 ml ಹಾಲಿನ ಬೆಲೆ ಎಷ್ಟು ಗೊತ್ತಾ?
"ಸಂರಕ್ಷಣಾವಾದಿಗಳು ಸಂಪನ್ಮೂಲಗಳ ರಕ್ಷಣೆ ಮತ್ತು ಅವುಗಳಿಗೆ ಆದ್ಯತೆ ನೀಡಲು ಮುಂದಾಗಬೇಕು. ನಿರ್ವಹಣಾ ಕ್ರಮಗಳು ನಿರ್ದಿಷ್ಟ ಜಾತಿಗಳು ಅಥವಾ ಜಾತಿಗಳ ಗುಂಪುಗಳನ್ನು ಎಲ್ಲಿ ಉತ್ತಮವಾಗಿ ರಕ್ಷಿಸುತ್ತವೆ ಎಂಬುದರ ಬಗ್ಗೆ ಚೌಕಟ್ಟನ್ನು ಬಳಸಬಹುದು ಎಂದು ಸಂಶೋಧಕ ಅಸೋಸಿಯೇಟ್ ಪ್ರೊಫೆಸರ್ ಕ್ಯಾರಿಸ್ಸಾ ಕ್ಲೈನ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ