"Dear Friend ಮೋದಿ"ಗಾಗಿ ಕಿಚಡಿ ಮಾಡಿದ ಆಸ್ಟ್ರೇಲಿಯಾ ಪ್ರಧಾನಿ! ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸ್ಕಾಟ್ ಮಾರಿಸನ್

 ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ತಾವು ಕಿಚಡಿ ತಯಾರಿಸಿದ್ದಾಗಿ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಭಾರತದೊಂದಿಗಿನ ನಮ್ಮ ಹೊಸ ವ್ಯಾಪಾರ ಒಪ್ಪಂದವನ್ನು ಆಚರಿಸಲು ನಾನು ಇಂದು ರಾತ್ರಿ ಖಿಚಡಿ ಮಾಡುವುದನ್ನು ಆಯ್ಕೆ ಮಾಡಿಕೊಂಡೆ ಎಂದಿದ್ದಾರೆ.

ಸ್ಕಾಟ್ ಸ್ಕಾಟ್ ಮಾರಿಸನ್ ಹಾಗೂ ನರೇಂದ್ರ ಮೋದಿ

ಸ್ಕಾಟ್ ಸ್ಕಾಟ್ ಮಾರಿಸನ್ ಹಾಗೂ ನರೇಂದ್ರ ಮೋದಿ

  • Share this:
ಭಾರತ (India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಸ್ನೇಹ (Friendship) ಸಂಬಂಧ (Relationship) ಯಾವಾಗಲೂ ಚೆನ್ನಾಗಿಯೇ ಇದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಧಿಕಾರಕ್ಕೆ ಬಂದ ಮೇಲೆ ಆಸ್ಟ್ಪೇಲಿಯಾ ಜೊತೆಗಿನ ಸಂಬಂಧ ಇನ್ನಷ್ಟು ವೃದ್ಧಿಸಿದೆ. “ನರೇಂದ್ರ ಮೋದಿ ನನ್ನ ಅತ್ಯುತ್ತಮ ಗೆಳೆಯರು (Friend), ಭಾರತ ಆಸ್ಟ್ರೇಲಿಯಾದ ಮಿತ್ರ ರಾಷ್ಟ್ರ ಅಂತ ಆಸ್ಟ್ರೇಲಿಯಾ ಪ್ರಧಾನಿ (Australia PM) ಸ್ಕಾಟ್ ಮಾರಿಸನ್ (Scott Morrison) ಹೇಳುತ್ತಲೇ ಇದ್ದಾರೆ. ಇದೀಗ ಏಪ್ರಿಲ್ 2 ರಂದು ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳು ಆರ್ಥಿಕ ಸಹಕಾರ ಮತ್ತು ಪ್ರಮುಖ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿವೆ. ಇದರ ಬೆನ್ನಲ್ಲೇ ಭಾರತದ ಪ್ರಮುಖ ಆಹಾರ (Food) ಪದಾರ್ಥವಾದ, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಫೆವರೇಟ್ (Favorite) ಎನಿಸಿದ ‘ಕಿಚಡಿ’ಯನ್ನು (Kichadi) ಖುದ್ದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ತಯಾರಿಸಿದ್ದಾರೆ.

 ಕಿಚಡಿ ತಯಾರಿಸಿದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ನೆಚ್ಚಿನ ಭಕ್ಷ್ಯವಾದ ಖಿಚಡಿಯನ್ನು ತಯಾರಿಸುವ ಮೂಲಕ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಭಾರತದೊಂದಿನ ಹೊಸ ವ್ಯಾಪಾರ ಒಪ್ಪಂದದ ಸಂಭ್ರಮ ಆಚರಿಸಿದ್ದಾರೆ. ವಿವಿಧ ಸಾಮಗ್ರಿಗಳನ್ನು ಬಳಸಿ, ತಾವು ಕಿಚಡಿ ತಯಾರಿಸಿದ್ದಾಗಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಜೊತೆಗೆ ತಾವು ಕಿಚಡಿ ತಯಾರಿಸುತ್ತಿರುವ ವಿಡಿಯೋವನ್ನು ತಮ್ಮ ಇನ್ಸಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಇತೀಗ ಆ ಫೋಟೋಗಳು ವೈರಲ್ ಆಗಿವೆ.

ಭಾರತ-ಆಸ್ಟ್ರೇಲಿಯಾ ಒಪ್ಪಂದ ಖುಷಿಗೆ ಕಿಚಡಿ!

 ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ತಾವು ಕಿಚಡಿ ತಯಾರಿಸಿದ್ದಾಗಿ ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹೇಳಿದ್ದಾರೆ. ಭಾರತದೊಂದಿಗಿನ ನಮ್ಮ ಹೊಸ ವ್ಯಾಪಾರ ಒಪ್ಪಂದವನ್ನು ಆಚರಿಸಲು ನಾನು ಇಂದು ರಾತ್ರಿ ಖಿಚಡಿ ಮಾಡುವುದನ್ನು ಆಯ್ಕೆ ಮಾಡಿಕೊಂಡೆ ಎಂದಿದ್ದಾರೆ.

ಇದನ್ನೂ ಓದಿ: Imran Khan: ಕೊನೆಗೂ 'Out' ಆದ ಇಮ್ರಾನ್‌ ಖಾನ್! 'ವಿಶ್ವಾಸ' ಕಳೆದುಕೊಂಡಿದ್ದಕ್ಕೆ ಪಾಕ್ ಪ್ರಧಾನಿ ಪದಚ್ಯುತಿ

ಇದಕ್ಕೆ ಬೇಕಾದ ಪದಾರ್ಥಗಳು ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಪ್ರಾಂತ್ಯದಿಂದ ಬಂದವು. ಅವರ ನೆಚ್ಚಿನ ಖಿಚಡಿ ತಯಾರಾಗುತ್ತಿದೆ ನೋಡಿ ಎಂದು ಮೋರಿಸನ್ ತಮ್ಮ ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌ ಹ್ಯಾಂಡಲ್‌ಗಳಲ್ಲಿ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದ

ಭಾರತ ಹಾಗೂ ಆಸ್ಟ್ಪೇಲಿಯಾ ಮಧ್ಯೆ ಆರ್ಥಿಕ ಸಂಬಂಧಗಳನ್ನು ಹೆಚ್ಚಿಸುವ ಉದ್ದೇಶದಿಂದ ಭಾರತ ಮತ್ತು ಆಸ್ಟ್ರೇಲಿಯಾ ಏಪ್ರಿಲ್ 2ರಂದು ಆರ್ಥಿಕ ಸಹಕಾರ ಹಾಗೂ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಮಧ್ಯೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಗುರುವಾರ ಆಸ್ಟ್ರೇಲಿಯಾದೊಂದಿಗೆ ಆಡಿಯೋ-ದೃಶ್ಯ ಸೇವೆಗಳಲ್ಲಿ ಜಂಟಿ ಉತ್ಪಾದನಾ ಪಾಲುದಾರಿಕೆಗಾಗಿ ಮಾತುಕತೆ ನಡೆಸಿದ್ದಾರೆ.

ಮುಂದಿನ 5 ವರ್ಷಗಳಿಗೆ ಒಪ್ಪಂದ

ಈ ಒಪ್ಪಂದವು ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಪ್ರಸ್ತುತ 27.5 ಶತಕೋಟಿಯಿಂದ 45-50 ಶತಕೋಟಿ ಅಮೆರಿಕನ್ ಡಾಲರ್‌ಗೆ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಗೋಯಲ್ ಹೇಳಿದ್ದಾರೆ. ಒಪ್ಪಂದದ ಅಡಿಯಲ್ಲಿ, ಆಸ್ಟ್ರೇಲಿಯಾವು ಮೊದಲ ದಿನದಿಂದ ಸುಮಾರು 96.4 ಪ್ರತಿಶತ ರಫ್ತುಗಳಿಗೆ (ಮೌಲ್ಯದಿಂದ) ಭಾರತಕ್ಕೆ ಶೂನ್ಯ ಸುಂಕದ ಪ್ರವೇಶವನ್ನು ನೀಡುತ್ತಿದೆ. ಇದು ಪ್ರಸ್ತುತ ಆಸ್ಟ್ರೇಲಿಯಾದಲ್ಲಿ 4-5 ಪ್ರತಿಶತ ಕಸ್ಟಮ್ಸ್ ಸುಂಕವನ್ನು ಆಕರ್ಷಿಸುವ ಅನೇಕ ಉತ್ಪನ್ನಗಳನ್ನು ಒಳಗೊಂಡಿದೆ.

ಇದನ್ನೂ ಓದಿ: Arrest: ಪ್ರಸಿದ್ಧ ಮಸೀದಿಯಲ್ಲಿ ಕೇಳಿ ಬಂತು ದೇಶದ್ರೋಹಿ ಘೋಷಣೆ! 13 ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಖಾಕಿ

ಮತ್ತೊಂದೆಡೆ ಭಾರತವು ಕಲ್ಲಿದ್ದಲು, ಕುರಿ ಮಾಂಸ, ಉಣ್ಣೆ, ಎಲ್‌ಎನ್‌ಜಿ, ಕಲ್ಲಿದ್ದಲು, ಅಲ್ಯೂಮಿನಾ, ಮ್ಯಾಂಗನೀಸ್, ತಾಮ್ರ ಮತ್ತು ಲೋಹೀಯ ಅದಿರುಗಳಂತಹ ಉತ್ಪನ್ನಗಳನ್ನು ಒಳಗೊಂಡಿರುವ ಆಸ್ಟ್ರೇಲಿಯಾಕ್ಕೆ ತನ್ನ ಶೇಕಡಾ 85 ರಷ್ಟು ಸುಂಕದ ರೇಖೆಗಳಿಗೆ ಶೂನ್ಯ ಸುಂಕ ಪ್ರವೇಶವನ್ನು ನೀಡಲಿದೆ. ಏಪ್ರಿಲ್ 2 ರಂದು ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳು ಆರ್ಥಿಕ ಸಹಕಾರ ಮತ್ತು ಪ್ರಮುಖ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿವೆ.
Published by:Annappa Achari
First published: