ಹೊಸ ವರ್ಷವನ್ನು ಸ್ವಾಗತಿಸಿದ ವಿಶ್ವದ ಮೊದಲ ನಗರ ಇದು!

G Hareeshkumar | news18
Updated:December 31, 2018, 10:16 PM IST
ಹೊಸ ವರ್ಷವನ್ನು ಸ್ವಾಗತಿಸಿದ ವಿಶ್ವದ ಮೊದಲ ನಗರ ಇದು!
  • News18
  • Last Updated: December 31, 2018, 10:16 PM IST
  • Share this:
ಆಸ್ಟ್ರೇಲಿಯಾ (ಡಿ.31) :  ವಿಶ್ವದೆಲ್ಲೆಡೆ ಜನರು 2018ಕ್ಕೆ ವಿದಾಯ ಹೇಳಿ ಹೊಸ ವರ್ಷ 2019ನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಇಲ್ಲೊಂದು ನಗರ ಇತರ ದೇಶಗಳಿಗಿಂತ ಮೊದಲೇ ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸಿದೆ.

ನ್ಯೂಜಿಲೆಂಡ್ ನ ಆಕ್ಲೆಂಡ್'ನಲ್ಲಿ ಸಾವಿರಾರು ಜನರು ಹೊಸ ವರ್ಷವನ್ನು ಸ್ವಾಗತಿಸಿ ಸಂಭ್ರಮಾಚರಣೆ ಮಾಡಿದರು. ನ್ಯೂಜಿಲೆಂಡ್ ಬಳಿಕ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಲಾಗುವುದು. ಸಿಡ್ನಿ ಒಪೇರಾ ಹೌಸ್'ನ ಪಟಾಕಿಗಳು ವಿಶ್ವದೆಲ್ಲೆಡೆ ಪ್ರಸಿದ್ಧವಾಗಿವೆ.

ಇದನ್ನೂ ಓದಿ :  2018ರಲ್ಲಿ ಗೂಗಲ್​ನಲ್ಲಿ ಜಾಲಾಡಿದ ಟಾಪ್​ 10 ಸೆಲೆಬ್ರಿಟಿಗಳು ಇವರು!

ವಿಶ್ವದ ಇತರ ದೇಶಗಳಂತೆ ಭಾರತದಲ್ಲಿಯೂ ಸಹ ಜನರು ಹೊಸ ವರ್ಷವನ್ನು ಸ್ವಾಗತಿಸಲು ಉತ್ಸುಕರಾಗಿ ಕಾಯುತ್ತಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು, ಕೊಲ್ಕತ್ತಾ , ಮುಂಬೈ ಸೇರಿದಂತೆ ಇತರ ನಗರಗಳಲ್ಲಿ ಈಗಾಗಲೇ 2019ರ ಸ್ವಾಗತಕ್ಕೆ ಭರದ ಸಿದ್ಧತೆ ನಡೆದಿದೆ.
First published: December 31, 2018, 10:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading