Aurangabad Train Accident: ಔರಂಗಾಬಾದ್​ ದುರಂತ; ರೈಲು ನಿಲ್ಲಿಸಲು ಚಾಲಕ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದ ರೈಲ್ವೆ ಇಲಾಖೆ

Aurangabad Train Accident: ಇಂದು ಮುಂಜಾನೆ ಗೂಡ್ಸ್​ ರೈಲು ಹೋಗುವ ಹಳಿಯ ಮೇಲೆ ಜನರು ಮಲಗಿರುವುದು ಲೋಕೋ ಪೈಲಟ್ ಗಮನಕ್ಕೆ ಬಂದಿದೆ. ತಕ್ಷಣ ಅವರು ರೈಲನ್ನು ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ರೈಲು ವಲಸೆ ಕಾರ್ಮಿಕರ ಮೇಲೆ ಹರಿದಿದೆ.

ಅಪಘಾತ ನಡೆದ ಔರಂಗಾಬಾದ್​ನ ಸ್ಥಳದಲ್ಲಿ ಪೊಲೀಸರ ತಪಾಸಣೆ ನಡೆಸುತ್ತಿರುವುದು.

ಅಪಘಾತ ನಡೆದ ಔರಂಗಾಬಾದ್​ನ ಸ್ಥಳದಲ್ಲಿ ಪೊಲೀಸರ ತಪಾಸಣೆ ನಡೆಸುತ್ತಿರುವುದು.

  • Share this:
ಔರಂಗಾಬಾದ್ (ಮೇ 8): ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ಇಂದು ಬೆಳಗ್ಗೆ ಗೂಡ್ಸ್​ ರೈಲು ಹರಿದು 16 ವಲಸೆ ಕಾರ್ಮಿಕರು ಸಾವನ್ನಪ್ಪಿದ್ದರು. ಈ ಬಗ್ಗೆ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಿದ್ದು, ಲೋಕೋ ಪೈಲಟ್ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಈ ಘಟನೆ ನಡೆದಿದೆ ಎಂದು ತಿಳಿಸಿದೆ. ರೈಲ್ವೆ ಹಳಿಯನ್ನು ಅನುಸರಿಸಿ ಮಧ್ಯಪ್ರದೇಶದ ತಮ್ಮ ಊರಿನತ್ತ ನಡೆದು ಸಾಗುತ್ತಿದ್ದ ಕಾರ್ಮಿಕರು ನಿನ್ನೆ ರಾತ್ರಿ ಹಳಿಯ ಮೇಲೆ ಮಲಗಿದ್ದರು. ಇಂದು ಬೆಳಗ್ಗೆ ಜಾಲ್ನಾದಿಂದ ಔರಂಗಾಬಾದ್​ನತ್ತ ತೆರಳುತ್ತಿದ್ದ ಗೂಡ್ಸ್​ ರೈಲು ಹಳಿಯ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಹರಿದಿತ್ತು. ಈ ಘಟನೆಯಲ್ಲಿ 16 ಕಾರ್ಮಿಕರು ಸಾವನ್ನಪ್ಪಿದ್ದಾರೆ, ಐವರ ಸ್ಥಿತಿ ತೀರಾ ಗಂಭೀರವಾಗಿದೆ ಎನ್ನಲಾಗಿದೆ.

ಈ ದುರ್ಘಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: Aurangabad Accident: ಔರಂಗಾಬಾದ್‌ನಲ್ಲಿ ರೈಲ್ವೆ ಹಳಿಯ ಮೇಲೆ ಮಲಗಿದ್ದ 17 ವಲಸೆ ಕಾರ್ಮಿಕರ ಮೇಲೆ ಹರಿದ ರೈಲು

170 ಕಿ.ಮೀ. ದೂರದ ತಮ್ಮ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರು ವಿಶ್ರಾಂತಿಗಾಗಿ ರೈಲ್ವೆ ಹಳಿಯ ಮೇಲೆ ಮಲಗಿದ್ದರು. ಬೆಳಗ್ಗೆ ಎದ್ದು ಊರಿನತ್ತ ಹೊರಟರಾಯಿತು ಎಂದು ಮಲಗಿದ್ದವರು ಈ ಲೋಕವನ್ನೇ ತ್ಯಜಿಸಿದ್ದಾರೆ. ಈ ಘಟನೆಯ ಬಗ್ಗೆ ರೈಲ್ವೆ ಇಲಾಖೆ ವಿಷಾದ ವ್ಯಕ್ತಪಡಿಸಿದೆ.ಇಂದು ಮುಂಜಾನೆ ಗೂಡ್ಸ್​ ರೈಲು ಹೋಗುವ ಹಳಿಯ ಮೇಲೆ ಜನರು ಮಲಗಿರುವುದು ಲೋಕೋ ಪೈಲಟ್ ಗಮನಕ್ಕೆ ಬಂದಿದೆ. ತಕ್ಷಣ ಅವರು ರೈಲನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಅದು ಸಾಧ್ಯವಾಗದೆ ರೈಲು ವಲಸೆ ಕಾರ್ಮಿಕರ ಮೇಲೆ ಹರಿದಿದೆ. ಬದ್ನಾಪುರ್ ಮತ್ತು ಕರ್ಮಾಡ್​ ರೈಲ್ವೆ ನಿಲ್ದಾಣಗಳ ನಡುವೆ ಈ ದುರಂತ ನಡೆದಿದೆ. ಗಾಯಗೊಂಡವರನ್ನು ಔರಂಗಾಬಾದ್​ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಆದರೆ, ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬ ಅಧಿಕೃತ ಮಾಹಿತಿ ನೀಡಿಲ್ಲ.
First published: