• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • ಮನೆಯವರ ವಿರೋಧಿಸಿ ಮದುವೆಯಾದ ಅಕ್ಕನ ಕತ್ತು ಸೀಳಿ ಸೆಲ್ಪಿ ತೆಗೆದುಕೊಂಡ ತಮ್ಮ; ಮಹಾರಾಷ್ಟ್ರದಲ್ಲೊಂದು ಮರ್ಯಾದಾ ಹತ್ಯೆ

ಮನೆಯವರ ವಿರೋಧಿಸಿ ಮದುವೆಯಾದ ಅಕ್ಕನ ಕತ್ತು ಸೀಳಿ ಸೆಲ್ಪಿ ತೆಗೆದುಕೊಂಡ ತಮ್ಮ; ಮಹಾರಾಷ್ಟ್ರದಲ್ಲೊಂದು ಮರ್ಯಾದಾ ಹತ್ಯೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Honor Killing in Aurangabad: ಹೆತ್ತ ತಾಯಿಯೇ ಮಗನಿಗೆ  ಅಕ್ಕನನ್ನು ಕೊಲ್ಲುವಂತೆ ತಿಳಿಸಿದ್ದಾಳೆ . ಅಷ್ಟೇ ಅಲ್ಲದೇ, ಮಗಳ ರುಂಡದ ಜೊತೆಯೇ ಅಮ್ಮ -ಮಗ  ಸೆಲ್ಫಿ ಕ್ಲಿಕಿಸಿ ಕೊಂಡಿರುವ ಘೋರ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ. 

 • Share this:

  ಔರಾಂಗಬಾದ್ (ಡಿ. 6): ಕಳೆದ ಕೆಲವು ವರ್ಷಗಳ ಹಿಂದೆ ಮರಾಠಿಯಲ್ಲಿ ಬಂದಿದ್ದ ಸೈರಾಟ್ (Sairat Movie)​ ಎಂಬ ಸಿನಿಮಾ ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೇ , ಇಡೀ ದೇಶದಲ್ಲಿ ಸುದ್ದಿಯಾಗಿತ್ತು. ಅನ್ಯ ಜಾತಿ ಯುವಕನನ್ನು ಪ್ರೀತಿಸಿ, ಮನೆ ಬಿಟ್ಟು ಹೋದ ಮಗಳು  ಸುಖ ಸಂಸಾರ ನಡೆಸುತ್ತಿದ್ದರೂ ಆಕೆಯನ್ನು ಹೇಗೆ ಕುಟುಂಬಸ್ಥರು ಕೊಲ್ಲುತ್ತಾರೆ ಎಂಬ ಕಥಾ ಹಂದರವನ್ನು ಈ ಚಿತ್ರ ಹೊಂದಿತ್ತು. ಥೇಟ್​ ಇದೇ ಚಿತ್ರ ಕಥೆಯಂತೆ ಮಹಾರಾಷ್ಟ್ರದ ಔರಾಂಗಬಾದ್​ನಲ್ಲಿ (Aurangabad) ಮರ್ಯಾದಾ ಹತ್ಯೆ (Honor Killing) ಘಟನೆಯೊಂದು ನಡೆದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮಗಳು ಮನೆಯವರ ಇಚ್ಛೆ ವಿರುದ್ಧ ಹುಡುಗನನ್ನು ಮದುವೆಯಾದಳು ಎಂಬ ಕಾರಣಕ್ಕೆ ಹೆತ್ತ ತಾಯಿಯೇ ಮಗನಿಗೆ  ಅಕ್ಕನನ್ನು ಕೊಲ್ಲುವಂತೆ ತಿಳಿಸಿದ್ದಾಳೆ . ಅಷ್ಟೇ ಅಲ್ಲದೇ, ಮಗಳ ರುಂಡದ ಜೊತೆಯೇ ಅಮ್ಮ -ಮಗ  ಸೆಲ್ಫಿ ಕ್ಲಿಕಿಸಿ ಕೊಂಡಿರುವ ಘೋರ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ. 


  ಏನಿದು ಘಟನೆ
  ಔರಾಂಗಬಾದ್​ನ 19 ವರ್ಷದ ಯುವತಿ ಕೀರ್ತಿ ಎಂಬಾಕೆ ಕಾಲೇಜಿನಲ್ಲಿ ಪರಿಚಯವಾಗಿದ್ದ ಹುಡುಗನನ್ನು ಪ್ರೀತಿಸುತ್ತಿದ್ದಳು. ಮನೆಯವರು ಒಪ್ಪದ ಹಿನ್ನಲೆ ಕಳೆದ ಆರೇಳು ತಿಂಗಳ ಹಿಂದೆ ಹುಡುಗನ ಜೊತೆ ಓಡಿ ಹೋಗಿ ಮದುವೆಯಾಗಿದ್ದಳು. ಮಗಳು ಈ ರೀತಿ ಓಡಿ ಹೋದ ಪ್ರಕರಣದಿಂದ ಯುವತಿ ಕುಟುಂಬಸ್ಥರು ಸಾಕಷ್ಟು ಅವಮಾನಕ್ಕೆ ಒಳಗಾಗಿದ್ದು, ಇದರಿಂದ ಸಿಟ್ಟು ಹೋದಿದ್ದರು. ಇದರಿಂದ ಕುಟುಂಬದ ಮಾರ್ಯಾದೆ ಹೋಯಿತು ಎಂದು ಕೋಪಗೊಂಡಿದ್ದರು


  ಎಲ್ಲಾ ಮರೆಯುವ ನೆಪದಲ್ಲಿ ಮಗಳನ್ನೇ ಮಸಣಕ್ಕೆ ಕಳುಹಿಸಿದ ತಾಯಿ
  ಇಚ್ಛೆ ವಿರುದ್ಧ ಮದುವೆಯಾದ ಮಗಳು ಮನೆ ಬಿಟ್ಟು ಹೋದ ಹಲವು ತಿಂಗಳ ಬಳಿಕ ಮಗಳು ಸುಳಿವು ಸಿಕ್ಕ ಹಿನ್ನಲೆ  ಆಕೆ ಮನೆಗೆ ತಾಯಿ  ಆಗಮಿಸಿದ್ದಳು . ಈ ವೇಳೆ ತಾಯಿ ಆಗಿ ಹೋಗಿದ್ದೇಲ್ಲಾ ಆಯಿತು. ನಿಮ್ಮ ಮದುವೆಯನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಭರವಸೆಯ ಮಾತುಗಳನ್ನು ಆಡಿದ್ಧಾಳೆ. ಮಗಳು ಕೂಡ ತಾಯಿಯ ಮಾತು ನಂಬಿದ್ದಳು. ಇದಾದ ಬಳಿಕ ಮಗನೊಂದಿಗ  ಬಂದಿದ್ದ ತಾಯಿ, ಮಗಳ ಕೊಲೆಗೆ ಯೋಜನೆ ರೂಪಿಸಿಕೊಂಡು ಮಗನನ್ನು ಕರೆದು ಕೊಂಡು ಬಂದಿದ್ದಾಳೆ.


  ಇದನ್ನು ಓದಿ: ನಾಗಾಲ್ಯಾಂಡ್ ನಾಗರಿಕರ ಮೇಲಿನ ದಾಳಿಗೆ ಕೇಂದ್ರ ವಿಷಾದ; ಎಸ್​ಐಟಿ ಆದೇಶಕ್ಕೆ ಸೂಚನೆ


  ಅಮ್ಮ-ತಮ್ಮನಿಗೆ ಅಡುಗೆ ಮಾಡಲು ಅಡುಗೆ ಕೋಣೆ ಹೊಕ್ಕ ಮಗಳನ್ನು ಕೊಲ್ಲುವಂತೆ ಮಗನಿಗೆ ಸೂಚನೆ ನೀಡಿದ್ದಾಳೆ. ಈ ವೇಳೆ ಆಕೆಯ ಹಿಂದೆಯೇ ನಡೆದ 17 ವರ್ಷದ ತಮ್ಮ ಅಡುಗೆ ಮಾಡುವಾಗ ಹಿಂದಿನಿಂದ ಹೋಗಿ ಅಕ್ಕನ ಕತ್ತನ್ನು ಚಾಕುವಿನಿಂದ ಸೀಳಿದ್ದಾನೆ. ಆಕೆಯ ಕತ್ತನ್ನು ಕತ್ತರಿಸಿದ ಬಳಿಕ ತಾಯಿಗೆ ತಂದು ಒಪ್ಪಿಸಿ, ಇಬ್ಬರು ಆಕೆಯ ರುಂಡದ ಜೊತೆ ಸೆಲ್ಪಿ ಪಡೆದಿದ್ದಾರೆ.


  ಇದನ್ನು ಓದಿ: ದೇಶ ತೊರೆಯುತ್ತಿದ್ದ ನಟಿ ಜಾಕ್ವೆಲಿನ್​​ಗೆ ತಡೆ: ಏರ್​​ಪೋರ್ಟ್​​ನಲ್ಲೇ ವಶಕ್ಕೆ ಪಡೆದ ಅಧಿಕಾರಿಗಳು


  ತಪ್ಪಿಸಿಕೊಂಡ ಮಗಳ ಗಂಡ
  ಮಗಳನ್ನು ಕೊಂದ ತಾಯಿ ಮತ್ತು ಅಪ್ರಾಪ್ತ ಮಗ, ಆಕೆ ಪ್ರೀತಿಸಿ ಮದುವೆಯಾದ ಗಂಡನ ಕೊಲೆಗೂ ಮುಂದಾಗಿದ್ದಾರೆ. ಆದರೆ, ಈ ವೇಳೆ ಹುಡುಗ ಅದೃಷ್ಟವಶಾತ್​ ತಪ್ಪಿಸಿಕೊಂಡು ಬದುಕುಳಿದಿದ್ದಾನೆ.


  ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಾಯಿ ಮತ್ತು 17 ವರ್ಷದ ಮಗನನ್ನು ವಶಕ್ಕೆ ಪಡೆದಿದ್ದಾರೆ. ಯುವತಿಯ ತಲೆ ಮತ್ತು ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಸೆಲ್ಪಿ ಪಡೆದ ಮೊಬೈಲ್​ ಅನ್ನು ವಶಕ್ಕೆ ಪಡೆದಿದ್ದು, ಮೊಬೈಲ್​ನಲ್ಲಿದ್ದ ಫೋಟೋ ಡಿಲೀಟ್​ ಮಾಡಿದ ಪರಿಣಾಮ  ಅದನ್ನು ಫೋರೆನ್ಸಿಕ್​ ವರದಿಗೆ ಕಳುಹಿಸಲಾಗಿದೆ.


  ಗರ್ಭಿಣಿಯಾಗಿದ್ದ ಯುವತಿ
  ಕಳೆದ ಜೂನ್​ನಲ್ಲಿ ಓಡಿಹೋಗಿದ್ದ 19 ವರ್ಷದ ಯುವತಿ ಗರ್ಭಿಣಿ ಯಾಗಿದ್ದಳು ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಅಮ್ಮ ಮಗನನ್ನು ವಶಕ್ಕೆ ಪಡೆದಿದ್ದಾರೆ.

  Published by:Seema R
  First published: