Aurangabad Accident: ಔರಂಗಾಬಾದ್‌ನಲ್ಲಿ ರೈಲ್ವೆ ಹಳಿಯ ಮೇಲೆ ಮಲಗಿದ್ದ 17 ವಲಸೆ ಕಾರ್ಮಿಕರ ಮೇಲೆ ಹರಿದ ರೈಲು

Aurangabad Death: ಔರಂಗಾಬಾದ್‌ನ ಜಲ್ನಾ ರೈಲ್ವೆ ಟ್ರಾಕ್ ಬಳಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಮೃತಪಟ್ಟ ಎಲ್ಲಾ ಕಾರ್ಮಿಕರು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಅಪಘಾತ ನಡೆದಿರುವ ಸ್ಥಳ.

ಅಪಘಾತ ನಡೆದಿರುವ ಸ್ಥಳ.

  • Share this:
ಔರಂಗಾಬಾದ್‌ (ಮೇ 08);  ರೈಲ್ವೆ ಹಳಿಯ ಮೇಲೆ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಇಂದು ಬೆಳಗ್ಗೆ ಗೂಡ್ಸ್‌ ರೈಲು ಹರಿದಿದ್ದು ಕನಿಷ್ಟ 17 ಜನ ಮೃತಪಟ್ಟಿದ್ದು, ನಾಲ್ಕು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಔರಂಗಾಬಾದ್‌ನಲ್ಲಿ ನಡೆದಿದೆ. ಔರಂಗಾಬಾದ್‌ನ ಜಲ್ನಾ ರೈಲ್ವೆ ಟ್ರಾಕ್ ಬಳಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಮೃತಪಟ್ಟ ಎಲ್ಲಾ ಕಾರ್ಮಿಕರು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.ಲಾಕ್‌ಡೌನ್‌ನಿಂದಾಗಿ ಕಾರ್ಖಾನೆ ಮುಚ್ಚಲ್ಪಟ್ಟಿತ್ತು. ಹೀಗಾಗಿ ಕೆಲಸವಿಲ್ಲದ ಕಾರಣ ಕಾರ್ಮಿಕರು ರೈಲ್ವೆ ಹಳಿಯ ದಾರಿ ಹಿಡಿದು ಊರಿಗೆ ಹೊರಟಿದ್ದರು. ಆದರೆ, ಮಾರ್ಗಮದ್ಯೆ ನಿನ್ನೆ ರಾತ್ರಿ ಕರ್ಮದ್ ಬಳಿಯ ರೈಲ್ವೆ ಹಳಿ ಮೇಲೆ ಮಲಗಿದ್ದಾರೆ. ಮಧ್ಯರಾತ್ರಿ ಗೂಡ್ಸ್‌ ರೈಲೊಂದು ಇದೇ ಮಾರ್ಗವಾಗಿ ಸಂಚರಿಸಿದ ಕಾರಣ ಇಂತಹ ದುರ್ಘಟನೆ ನಡೆದಿದೆ. ಪರಿಣಾಮ ಊರಿಗೆ ಹೊರಟಿದ್ದ 17 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ : ಶಿವಾಜಿನಗರ ನಾಲ್ವರಲ್ಲಿ ಕೊರೋನಾ ಸೋಂಕು; ಬೆಂಗಳೂರಿನ ಬಹುತೇಕ ಕಡೆ ಅಡ್ಡಾಡಿರುವ ಸೋಂಕಿತರು
First published: