• Home
  • »
  • News
  • »
  • national-international
  • »
  • ಅತ್ತಿಗೆ ಮೇಲಿನ ಹೊಟ್ಟೆಕಿಚ್ಚಿಗೆ ಎರಡು ವರ್ಷದ ಪುಟ್ಟ ಕಂದಮ್ಮ ಬಲಿ

ಅತ್ತಿಗೆ ಮೇಲಿನ ಹೊಟ್ಟೆಕಿಚ್ಚಿಗೆ ಎರಡು ವರ್ಷದ ಪುಟ್ಟ ಕಂದಮ್ಮ ಬಲಿ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಮಗುವಿನ ಅತ್ತೆ ಮತ್ತು ಆಕೆಯ ಸಹೋದರಿ ಮಗುವನ್ನು ಉಸಿರುಗಟ್ಟಿಸಿ ಕೊಂದು ಬಳಿಕ ದೇಹವನ್ನು ಬೆಡ್​ಶೀಟ್​ನಲ್ಲಿ ಸುತ್ತಿ ಕಪಾಟಿನೊಳಗೆ ಇಟ್ಟಿದ್ದರು.

  • Share this:

    ನೋಯ್ಢಾ (ಅ.5): ಅತ್ತಿಗೆ ಮೇಲಿನ ಹೊಟ್ಟೆ ಕಿಚ್ಚಿಗೆ ಆಕೆಯ ಎರಡು ವರ್ಷದ ಪುಟ್ಟ ಮಗುವನ್ನು ಸೋದರತ್ತೆಯರು ಕೊಂದಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ನಡೆದಿದೆ. ಮಗು ನಾಪತ್ತೆಯಾದ ಕುರಿತು ತಾಯಿ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದರು. ಈ ಕುರಿತು ತನಿಖೆ ನಡೆಸಿದಾಗ ಮಗು ಮನೆಯ ಕಪಾಟಿನಲ್ಲಿ ಶವವಾಗಿ ಪತ್ತೆಯಾಗಿತ್ತು. ಮಗುವಿನ ಅತ್ತೆ ಮತ್ತು ಆಕೆಯ ಸಹೋದರಿ ಮಗುವನ್ನು ಉಸಿರುಗಟ್ಟಿಸಿ ಕೊಂದು ಬಳಿಕ ದೇಹವನ್ನು ಬೆಡ್​ಶೀಟ್​ನಲ್ಲಿ ಸುತ್ತಿ ಕಪಾಟಿನೊಳಗೆ ಇಟ್ಟಿದ್ದರು. ಇತ್ತ ಮಗು ಕಾಣಿಸದೇ ಪೋಷಕರು ಕಂಗೆಟ್ಟು ಸೆ.29 ರಂದು ದೂರು ದಾಖಲಿಸಿದ್ದರು. ಈ ವೇಳೆ ತನಿಖೆ ನಡೆಸಿದಾಗ ಹೆಂಗಸರ ನಡುವಿನ ವೈಷಮ್ಯಕ್ಕೆ ಮಗು ಬಲಿಯಾಗಿರುವುದು ಬೆಳಕಿಗೆ ಬಂದಿದೆ.


    ಸೋಹದರನ ಹೆಂಡತಿ ಸ್ವಪ್ನಳ ವರ್ತನೆ ಬಗ್ಗೆ ಅಸಮಾಧಾನ ಹೊಂದಿದೆ. ಹೀಗಾಗಿ ಆಕೆಯ ಮೇಲಿನ ಪ್ರತಿಕಾರಕ್ಕೆ ಮಗುವನ್ನು ಬಲಿತೆಗೆದುಕೊಂಡಿರುವುದಾ ಸ್ವಪ್ನ ನಾದಿನಿ ರಿಂಕಿ ತಿಳಿಸಿದ್ದಾಳೆ. ಇದಕ್ಕೆ ಆಕೆಯ ತಂಗಿ ಕೂಡ ಸಹಕಾರ ನೀಡಿದ್ದಾಳೆ.


    ಮಗುವಿನ ಹತ್ಯೆ ನಿರ್ಧಾರ ಮಾಡಿದ್ದ ರಿಂಕಿ ತವರಿಗೆ ಆಗಮಿಸಿದ್ದಾಳೆ. ಈ ವೇಳೆ ಮಗು ಆಟವಾಡುತ್ತಿದ್ದಾಗ ಅದನ್ನು ಉಸಿರುಕೊಟ್ಟಿಸಿಕೊಂದೆವು. ಈ ಮೂಲಕ ಸ್ವಪ್ನ ಮೇಲಿನ ಪ್ರತೀಕಾರಕ್ಕೆ ಮುಂದಾದೆವು ಎಂದು ತಪ್ಪಿತಸ್ಥರು ಘಟನೆ ಕುರಿತು ವಿವರ ನೀಡಿದ್ದಾರೆ. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

    Published by:Seema R
    First published: