• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಅರ್ನಾಬ್​ಗೆ ಸುಪ್ರೀಂ ನೀಡಿದ್ದ ಜಾಮೀನನ್ನು ಟ್ವೀಟ್ ಮೂಲಕ ಟೀಕಿಸಿದ್ದ ಕುನಾಲ್​ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್

ಅರ್ನಾಬ್​ಗೆ ಸುಪ್ರೀಂ ನೀಡಿದ್ದ ಜಾಮೀನನ್ನು ಟ್ವೀಟ್ ಮೂಲಕ ಟೀಕಿಸಿದ್ದ ಕುನಾಲ್​ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್

ಕುನಾಲ್ ಕಮ್ರಾ, ಅರ್ನಾಬ್ ಗೋಸ್ವಾಮಿ.

ಕುನಾಲ್ ಕಮ್ರಾ, ಅರ್ನಾಬ್ ಗೋಸ್ವಾಮಿ.

ಟ್ವಿಟ್ಟರ್‌ನಲ್ಲಿ 17 ಲಕ್ಷ ಫಾಲೋವರ್ಸ್ ಹೊಂದಿರುವ ಕುನಾಲ್ ಕಮ್ರಾ ರವರು ಸುಪ್ರೀಂ ಕೋರ್ಟಿನ ಕಾರ್ಯವೈಖರಿಯನ್ನು ಅವರಹೇಳನ ಮಾಡುವ ನಾಲ್ಕು ಟ್ವೀಟ್ ಮಾಡಿದ್ದಾರೆ. ಅವರನ್ನು ಶಿಕ್ಷಿಸದಿದ್ದರೆ ಅವರ ಫಾಲೋವರ್ಸ್ ಕೂಡ ಸುಪ್ರೀಂ ಕೋರ್ಟಿಗೆ ಬೆಲೆ ನೀಡುವುದಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಮುಂದೆ ಓದಿ ...
  • Share this:

ನವ ದೆಹಲಿ (ನವೆಂಬರ್​ 12); ಆತ್ಮಹತ್ಯೆಗೆ ಪ್ರಚೋಧನೆ ನೀಡಿದ್ದ ಆರೋಪದ ಮೇಲೆ ರಿಪಬ್ಲಿಕ್​ ಟಿವಿ ಸಂಪಾದಕ ಅರ್ನಾಬ್​ ಗೋಸ್ವಾಮಿಯನ್ನು ಇತ್ತೀಚೆಗೆ ಮುಂಬೈ ಪೊಲೀಸರು ಬಂದಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಸ್ವಾಮಿ ಅವರಿಗೆ ಜಾಮೀನು ನೀಡಲು ಮುಂಬೈ ಕೋರ್ಟ್​ ನಿರಾಕರಿಸಿತ್ತು. ಆದರೆ, ಆರೋಪಿಯ ಮೇಲ್ಮನವಿಯನ್ನು ಆಲಿಸಿದ್ದ ಸುಪ್ರೀಂ ಕೋರ್ಟ್​ ಗೋಸ್ವಾಮಿ ಅವರಿಗೆ ಕೊನೆಗೂ ನಿನ್ನೆ ಜಾಮೀನು ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್​ನ ಈ ಕಾರ್ಯವೈಖರಿಯನ್ನು ಖಂಡಿಸಿದ್ದ ಖ್ಯಾತ ಸ್ಟಾಂಡಪ್​ ಕಾಮಿಡಿಯನ್ ಕುನಾಲ್ ಕಮ್ರಾ ಈ ಕುರಿತು ಟ್ವೀಟ್​ ಒಂದನ್ನು ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್​  ಕುನಾಲ್​ ಕಮ್ರಾ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಲು ಅನುಮತಿ ನೀಡಿದ್ದಾರೆ. 


ಕುನಾಲ್ ಕಮ್ರಾ ವಿರುದ್ದದ ಅರ್ಜಿಯನ್ನು ಮನ್ನಿಸಿರುವ ಅಟಾರ್ನಿ ಜನರಲ್‌ ಕೆ.ಕೆ ವೇಣುಗೋಪಾಲ್, “ಸುಪ್ರೀಂ ಕೋರ್ಟ್‌ ಘನತೆಯ ಮೇಲೆ ವಿನಾಕಾರಣ ದಾಳಿ ನಡೆಸುವವರು ಶಿಕ್ಷೆಗೆ ಆಹ್ವಾನ ನೀಡುತ್ತಿದ್ದಾರೆ ಎಂದು ಜನರು ಅರ್ಥಮಾಡಿಕೊಳ್ಳುವ ಸಮಯ ಇದಾಗಿದೆ” ಎಂದು ಹೇಳಿದ್ದಾರೆ.



ನ್ಯಾಯಾಂಗ ನಿಂದನೆ ಕಾಯ್ದೆ 1975ರ ಸೆಕ್ಷನ್ 15ರ ರೂಲ್ 3ರ ಅಡಿಯಲ್ಲಿ ಕುನಾಲ್ ಕಮ್ರಾ ವಿರುದ್ದ, ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ವಕೀಲ ರಿಜ್ವಾನ್ ಸಿದ್ದೀಖ್ ಮನವಿ ಮಾಡಿದ್ದರು.


ನ್ಯಾಯಮೂರ್ತಿ ಚಂದ್ರಚೂಡ್​ ವಿರುದ್ಧ ಕುನಾಲ್ ಕಮ್ರಾ ಮಾಡಿದ್ದ ಟ್ವೀಟ್.


ಟ್ವಿಟ್ಟರ್‌ನಲ್ಲಿ 17 ಲಕ್ಷ ಫಾಲೋವರ್ಸ್ ಹೊಂದಿರುವ ಕುನಾಲ್ ಕಮ್ರಾ ರವರು ಸುಪ್ರೀಂ ಕೋರ್ಟಿನ ಕಾರ್ಯವೈಖರಿಯನ್ನು ಅವರಹೇಳನ ಮಾಡುವ ನಾಲ್ಕು ಟ್ವೀಟ್ ಮಾಡಿದ್ದಾರೆ. ಅವರನ್ನು ಶಿಕ್ಷಿಸದಿದ್ದರೆ ಅವರ ಫಾಲೋವರ್ಸ್ ಕೂಡ ಸುಪ್ರೀಂ ಕೋರ್ಟಿಗೆ ಬೆಲೆ ನೀಡುವುದಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.


ಇದನ್ನೂ ಓದಿ : ರಿಪಬ್ಲಿಕ್​ ಟಿವಿಯ ಅರ್ನಾಬ್​ ಗೋಸ್ವಾಮಿ ಬಂಧನ; ಸಾಮಾಜಿಕ ಜಾಲತಾಣಗಳಲ್ಲಿ ಗರಿಗೆದರಿದ ಪರ-ವಿರೋಧ ಚರ್ಚೆ

top videos


    ರಿಪಬ್ಲಿಕ್ ಟಿವಿ ಸ್ಟುಡಿಯೋ ನಿರ್ಮಿಸುವಾಗ ಅನ್ವಯ್ ನಾಯಕ್ ಅವರೇ ಇಂಟೀರಿಯರ್ ಡಿಸೈನಿಂಗ್ ಮಾಡಿಕೊಟ್ಟಿದ್ದರು. ಅದರ ಹಣ ನೀಡದೆ ಸತಾಯಿಸಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಅರ್ನಬ್ ಗೋಸ್ವಾಮಿ ವಿರುದ್ಧ ಕೇಳಿಬಂದಿತ್ತು. 2018ರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅರ್ನಬ್ ಗೋಸ್ವಾಮಿ ವಿರುದ್ಧ ದಾಖಲಾಗಿದ್ದ ಕೇಸನ್ನು 2019ರಲ್ಲಿ ರಾಯಘಡ ಪೊಲೀಸರು ಕ್ಲೋಸ್ ಮಾಡಿದ್ದರು.


    ಆದರೆ, ಅನ್ವಯ್ ನಾಯಕ್ ಅವರ ಪುತ್ರಿ ಅದ್ನಯ ನಾಯಕ್ ನೀಡಿದ್ದ ಹೊಸ ದೂರಿಗೆ ಸಂಬಂಧಪಟ್ಟಂತೆ ಪ್ರಕರಣದ ಮರು ತನಿಖೆ ಮಾಡಲಾಗುವುದು ಎಂದು ಕಳೆದ ಮೇ ತಿಂಗಳಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಘೋಷಿಸಿದ್ದರು. ಇದೇ ದೂರಿನ ಅನ್ವಯ ಅರ್ನಾಬ್​ ಗೋಸ್ವಾಮಿ ಅವರನ್ನು ಕಳೆದ ವಾರ ಬಂಧಿಸಲಾಗಿತ್ತು.

    First published: