OTTಯಲ್ಲಿ ಬೇಕಾಬಿಟ್ಟಿ ಕಂಟೆಂಟ್ ಹಾಕೋಹಾಗಿಲ್ಲ! ಸಚಿವ ಅನುರಾಗ್ ಠಾಕೂರ್ ಖಡಕ್ ವಾರ್ನಿಂಗ್

ಅನುರಾಗ್ ಠಾಕೂರ್

ಅನುರಾಗ್ ಠಾಕೂರ್

“ಒಟಿಟಿ ಪ್ಲಾಟ್ಫಾರ್ಮ್ ಗಳಲ್ಲಿನ ವಿಷಯಗಳಲ್ಲಿ ಅಶ್ಲೀಲತೆ ಮತ್ತು ನಿಂದನಾತ್ಮಕ ಭಾಷೆಯ ದೂರುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಮತ್ತು ಈ ಪ್ರವೃತ್ತಿಯನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ” ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

  • Share this:

ಮೊದಲೆಲ್ಲಾ ನಮ್ಮ ಜನರು ಸಿನೆಮಾ (Cinema) ಅಂತ ಹೇಳಿದರೆ ಸಿನೆಮಾ ಥಿಯೇಟರ್​ಗೆ (Theater) ಹೋಗಿ ಅಲ್ಲಿರುವ ದೊಡ್ಡ ದೊಡ್ಡ ಕ್ಯೂಗಳಲ್ಲಿ ಗಂಟೆಗಟ್ಟಲೆ ನಿಂತು ಹಣ ಕೊಟ್ಟು ಟಿಕೆಟ್ (Ticket) ಖರೀದಿಸಿ ಸಿನೆಮಾ ನೋಡುವವರು. ಆದರೆ ಸುಮಾರು ಎರಡೂವರೆ ವರ್ಷದಿಂದ ಈ ಕೋವಿಡ್-19 (Covid-19) ಸಾಂಕ್ರಾಮಿಕ ರೋಗದ (Viral Fever) ಹಾವಳಿಯಿಂದಾಗಿ ಬಹುತೇಕವಾಗಿ ಎಲ್ಲಾ ಸಿನೆಮಾ ಥಿಯೇಟರ್​ಗಳು ಬೀಗ ಹಾಕಿದ್ದಾಗ, ನಮ್ಮ ಜನರು ಮನೋರಂಜನೆಗೆ (Entertainment) ಪರ್ಯಾಯ ಅಂತ ಆರಿಸಿಕೊಂಡಿದ್ದು ಈ ಒಟಿಟಿಗಳನ್ನ (OTT) ಅಂತ ಹೇಳಬಹುದು. ಹೀಗೆ ಹುಟ್ಟಿಕೊಂಡ ಒಟಿಟಿ ಪ್ಲಾಟ್ಫಾರ್ಮ್ ಗಳಲ್ಲಿ ಈಗಂತೂ ಅನೇಕ ಭಾಷೆಯ ಸಿನೆಮಾಗಳು, ವೆಬ್ ಸಿರೀಸ್ ಗಳು, ಡಾಕ್ಯುಮೆಂಟರಿಗಳು ಮತ್ತು ಅನೇಕ ರೀತಿಯ ರಿಯಾಲಿಟಿ ಶೋಗಳನ್ನು ನಾವು ನೋಡಬಹುದು.


ಈಗಂತೂ ಜನರು ಈ ವಾರ ಯಾವೆಲ್ಲಾ ಹೊಸ ಚಿತ್ರಗಳು ಮತ್ತು ವೆಬ್ ಸಿರೀಸ್ ಗಳು ಒಟಿಟಿ ಯಲ್ಲಿ ಬಿಡುಗಡೆಯಾಗುತ್ತವೆ ಅಂತ ಕಾದು ಕುಳಿತ್ತಿರುತ್ತಾರೆ.


ಈ ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅನೇಕ ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳನ್ನು ಒಟಿಟಿ ಯಲ್ಲಿ ಬಿಡುಗಡೆ ಮಾಡಿದ ಉದಾಹರಣೆಗಳು ಸಹ ಸಾಕಷ್ಟಿವೆ.


Attic content on OTT is not like that Minister Anurag Thakur Khadak warning
ಅನುರಾಗ್ ಠಾಕೂರ್


ಒಟಿಟಿ ಯಲ್ಲಿ ಬಳಸುತ್ತಿರುವ ಅಶ್ಲೀಲ ಮತ್ತು ನಿಂದನಾತ್ಮಕ ಭಾಷೆಗೆ ಬೀಳುತ್ತಾ ಬ್ರೇಕ್?


ಒಟ್ಟಿನಲ್ಲಿ ಹೇಳುವುದಾದರೆ ಈ ಒಟಿಟಿಗಳು ಸಿನೆಮಾ ಥಿಯೇಟರ್​ಗೆ ಹೋಗಿ ಸಿನೆಮಾ ನೋಡುವ ಅರ್ಧದಷ್ಟು ಜನರನ್ನು ಕಡಿಮೆ ಮಾಡಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಆದರೆ ಇವುಗಳಲ್ಲಿ ಇಂತಹದೇ ಸಿನೆಮಾ ಅಥವಾ ವೆಬ್ ಸಿರೀಸ್ ಗಳನ್ನು ಬಿಡುಗಡೆ ಮಾಡಬೇಕು ಅಂತ ನಿಯಮಗಳಿಲ್ಲ ನೋಡಿ, ಆದ್ದರಿಂದಲೇ ಇಲ್ಲಿ ಅನೇಕ ಸಿನೆಮಾಗಳಲ್ಲಿ, ವೆಬ್ ಸಿರೀಸ್​ಗಳಲ್ಲಿ ಅಶ್ಲೀಲತೆ, ನಿಂದನಾತ್ಮಕ ಭಾಷೆ ಮತ್ತು ವಿಷಯ ವಸ್ತುಗಳು ಅಡ್ಡಾತಿಡ್ಡಿಯಾಗಿ ಬಳಸಿರುವುದನ್ನು ನಾವು ನೋಡಬಹುದು.


ಆದರೆ ಇನ್ಮುಂದೆ ಈ ರೀತಿಯ ಅಶ್ಲೀಲ ಮತ್ತು ನಿಂದನಾತ್ಮಕ ಭಾಷೆಯು ಪ್ರಸಾರವಾಗುವ ವಿಷಯಗಳ ವಿರುದ್ಧದ ದೂರುಗಳ ಬಗ್ಗೆ ಕಠಿಣ ನಿಲುವನ್ನು ತೆಗೆದುಕೊಂಡ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್ ಠಾಕೂರ್ ಭಾನುವಾರ ಕ್ರಿಯೆಟಿವಿಟಿ ಅನ್ನೋ ಹೆಸರಿನಲ್ಲಿ ಅಶ್ಲೀಲತೆ ಮತ್ತು ನಿಂದನಾತ್ಮಕ ಭಾಷೆಯನ್ನು ಇನ್ಮುಂದೆ ಸ್ವೀಕರಿಸಲಾಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.


ಒಟಿಟಿ ಯಲ್ಲಿ ಬಳಸುವ ಅಶ್ಲೀಲ ಭಾಷೆಯ ಬಗ್ಗೆ ಏನಂದ್ರು ಸಚಿವರು?


ಇತ್ತೀಚೆಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅನುರಾಗ್ ಠಾಕೂರ್ ಅವರು “ಒಟಿಟಿ ಪ್ಲಾಟ್ಫಾರ್ಮ್​ಗಳಲ್ಲಿನ ವಿಷಯಗಳಲ್ಲಿ ಅಶ್ಲೀಲತೆ ಮತ್ತು ನಿಂದನಾತ್ಮಕ ಭಾಷೆಯ ದೂರುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಮತ್ತು ಈ ಪ್ರವೃತ್ತಿಯನ್ನು ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ.


"ಈ ವೇದಿಕೆಗಳಿಗೆ ಸೃಜನಶೀಲತೆಗಾಗಿ ಸ್ವಾತಂತ್ರ್ಯವನ್ನು ನೀಡಲಾಯಿತು ಮತ್ತು ಅಶ್ಲೀಲತೆಗೆ ಅಲ್ಲ ಮತ್ತು ಅವರು ಆ ಮಿತಿಯನ್ನು ಮೀರಿದಾಗ, ಸೃಜನಶೀಲತೆಯ ಹೆಸರಿನಲ್ಲಿ ನಿಂದನೆಗಳನ್ನು ಸ್ವೀಕರಿಸಲಾಗುವುದಿಲ್ಲ.


“ನಿಯಮಗಳನ್ನು ಬದಲಾಯಿಸುವ ಅಗತ್ಯವಿದ್ದರೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಿಂಜರಿಯುವುದಿಲ್ಲ. ಅಶ್ಲೀಲತೆ ಮತ್ತು ನಿಂದನಾತ್ಮಕ ಭಾಷೆಯನ್ನು ತಡೆಯಲು ಇದು ಕಠಿಣ ಕ್ರಮ ತೆಗೆದುಕೊಳ್ಳುತ್ತದೆ.


ಇದನ್ನೂ ಓದಿ:Pathaan OTT: ಮನೆಯಲ್ಲೇ ನೋಡಿ ಪಠಾಣ್, ಶಾರುಖ್ ಸಿನಿಮಾ ಶೀಘ್ರ ಒಟಿಟಿಗೆ


ಜನವರಿಯಲ್ಲಿ, ಠಾಕೂರ್ ಸೃಜನಶೀಲ ಸ್ವಾಯತ್ತತೆ ಬಗ್ಗೆ ಮಾತಾಡಿ ಒಟಿಟಿ ಪ್ಲಾಟ್ಫಾರ್ಮ್ ಗಳಲ್ಲಿನ ವಿಷಯವನ್ನು ಮೇಲ್ವಿಚಾರಣೆ ಮಾಡಲು ಸಾಕಷ್ಟು ಸುರಕ್ಷತಾ ಕ್ರಮಗಳು ಜಾರಿಯಲ್ಲಿವೆ ಎಂದು ಹೇಳಿದ್ದರು.


"ಸೃಜನಶೀಲತೆಯನ್ನು ನಿಯಂತ್ರಿಸಬಾರದು, ಅದಕ್ಕೆ ಸ್ವಾಯತ್ತತೆ ಇರಬೇಕು. ಆದರೆ ಮನಸ್ಸಿಗೆ ತೊಚ್ಚಿದ್ದನ್ನ ತೋರಿಸಲು ಸಾಧ್ಯವಾಗುವಷ್ಟು ಹೆಚ್ಚು ಇರಬಾರದು. ನಾವು ಸಾಕಷ್ಟು ನಿಬಂಧನೆಗಳನ್ನು ಇಟ್ಟುಕೊಂಡಿದ್ದೇವೆ ಮತ್ತು ಇಲ್ಲಿಯವರೆಗೆ ಅವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ " ಎಂದು ಠಾಕೂರ್ ಹೇಳಿದ್ದರು.


ದೂರುಗಳು ಸರ್ಕಾರಕ್ಕೆ ತಲುಪಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದು ಗ್ಯಾರೆಂಟಿಯಂತೆ..


ಒಟಿಟಿ ಪ್ಲಾಟ್ಫಾರ್ಮ್​​ಗಳಲ್ಲಿನ ವಿಷಯವನ್ನು ವ್ಯವಹರಿಸಲು ಮೂರು ಹಂತದ ಕಾರ್ಯವಿಧಾನವಿದೆ ಎಂದು ಠಾಕೂರ್ ಹೇಳಿದ್ದಾರೆ.


top videos    "ಪ್ರಸ್ತುತ ಕಾರ್ಯವಿಧಾನದ ಪ್ರಕಾರ, ನಿರ್ಮಾಪಕರು ಮೊದಲು ವಿಷಯದ ಬಗ್ಗೆ ದೂರುಗಳನ್ನು ಪರಿಹರಿಸಬೇಕು ಮತ್ತು ನಂತರ ಅವರು ತಮ್ಮ ಸಂಘದಲ್ಲಿ ಅದನ್ನು ಚರ್ಚಿಸಬೇಕು. ದೂರು ಸರ್ಕಾರಕ್ಕೆ (ವಾರ್ತಾ ಮತ್ತು ಪ್ರಸಾರ ಇಲಾಖೆ) ತಲುಪಿದಾಗ, ನಿಯಮಗಳ ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ" ಎಂದು  ಹೇಳಿದರು.

    First published: