ಚೀನಾ ವಿಭಜನೆಗೆ ಯತ್ನಿಸಿದವರ ಮೂಳೆ ಪುಡಿಪುಡಿ ಮಾಡುತ್ತೇವೆ: ಕ್ಸಿ ಜಿನ್​ಪಿಂಗ್ ಎಚ್ಚರಿಕೆ

ಚೀನಾದ ಸ್ವಾಯತ್ತ ಭಾಗವಾಗಿರುವ ಹಾಂಕಾಂಗ್​ನಲ್ಲಿ ಪ್ರಜಾತಂತ್ರ ಉಳಿಸಿಕೊಳ್ಳುವ ಪ್ರಯತ್ನವಾಗಿ ಹಾಗೂ ಅಲ್ಲಿಯ ಪೊಲೀಸರ ದೌರ್ಜನ್ಯ ವಿರೋಧಿಸಿ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಚೀನಾಗೆ ಹಾಂಕಾಂಗ್ ಅಷ್ಟೇ ಅಲ್ಲದೇ, ಟಿಬೆಟ್, ತೈವಾನ್ ಮತ್ತು ಉಯ್ಗುರ್ ಮುಸ್ಲಿಮರ ಸಮಸ್ಯೆಗಳು ಕಾಡುತ್ತಿವೆ.

Vijayasarthy SN | news18
Updated:October 14, 2019, 12:54 PM IST
ಚೀನಾ ವಿಭಜನೆಗೆ ಯತ್ನಿಸಿದವರ ಮೂಳೆ ಪುಡಿಪುಡಿ ಮಾಡುತ್ತೇವೆ: ಕ್ಸಿ ಜಿನ್​ಪಿಂಗ್ ಎಚ್ಚರಿಕೆ
ಚೀನಾ ಅಧ್ಯಕ್ಷ ಕ್ಸೀ ಜಿನ್​ಪಿಂಗ್
  • News18
  • Last Updated: October 14, 2019, 12:54 PM IST
  • Share this:
ನವದೆಹಲಿ(ಅ. 14): ಚೀನಾವನ್ನು ಯಾರಾದರೂ ವಿಭಜನೆ ಮಾಡಲು ಯತ್ನಿಸಿದರೆ ಅವರ ದೇಹವನ್ನು ತುಂಡುತುಂಡಾಗಿ ಕತ್ತರಿಸುತ್ತೇವೆ, ಮೂಳೆ ಪುಡಿಪುಡಿ ಮಾಡುತ್ತೇವೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಕಟುವಾಗಿ ಎಚ್ಚರಿಕೆ ನೀಡಿದ್ದಾರೆ. ಹಾಂಕಾಂಗ್ ಸ್ವಾಯತ್ತತೆ ಉಳಿಸಿಕೊಳ್ಳಲು ಅಲ್ಲಿ ದೊಡ್ಡ ಮಟ್ಟದ ಹೋರಾಟ ಮತ್ತು ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚೀನೀ ಅಧ್ಯಕ್ಷರು ಈ ಹೇಳಿಕೆ ಕೊಟ್ಟಿರುವ ಶಂಕೆ ಇದೆ. ಕಳೆದ ವಾರಾಂತ್ಯದಲ್ಲಿ ಅವರು ನೇಪಾಳಕ್ಕೆ ಭೇಟಿ ನೀಡಿದ ಹೊತ್ತಲ್ಲಿ ಈ ಕಡು ಸಂದೇಶ ರವಾನಿಸಿದ್ದಾರೆ.

“ಚೀನಾದ ಯಾವುದೇ ಭೂಪ್ರದೇಶವನ್ನು ಯಾರಾದರೂ ವಿಭಜಿಸಲು ಯತ್ನಿಸಿದರೆ, ಅವರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ; ಮೂಳೆ ಪುಡಿಪುಡಿ ಮಾಡುತ್ತೇವೆ. ಚೀನಾ ವಿಭಜನೆಯನ್ನು ಬೆಂಬಲಿಸುವ ಬಾಹ್ಯ ಶಕ್ತಿಗಳ ಪ್ರಯತ್ನ ಬರೀ ಭ್ರಮೆ ಎಂಬುದು ಚೀನೀ ಜನರ ಅನಿಸಿಕೆ” ಎಂದು ನೇಪಾಳದಲ್ಲಿ ಕ್ಸಿ ಜಿನ್​ಪಿಂಗ್ ಹೇಳಿದ್ಧಾರೆ.

ಇದನ್ನೂ ಓದಿ: ಬಿಜೆಪಿಗೆ ಮತ ಹಾಕಿದ್ರೆ ಪಾಕ್ ಮೇಲೆ ಅಣುಬಾಂಬ್ ಬಿದ್ದಂಗೆ; ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಹೇಳಿಕೆ

ಚೀನಾದ ಸ್ವಾಯತ್ತ ಭಾಗವಾಗಿರುವ ಹಾಂಕಾಂಗ್​ನಲ್ಲಿ ಪ್ರಜಾತಂತ್ರ ಉಳಿಸಿಕೊಳ್ಳುವ ಪ್ರಯತ್ನವಾಗಿ ಹಾಗೂ ಅಲ್ಲಿಯ ಪೊಲೀಸರ ದೌರ್ಜನ್ಯ ವಿರೋಧಿಸಿ ಸ್ಥಳೀಯರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಚೀನಾಗೆ ಹಾಂಕಾಂಗ್ ಅಷ್ಟೇ ಅಲ್ಲದೇ, ಟಿಬೆಟ್, ತೈವಾನ್ ಮತ್ತು ಉಯ್ಗುರ್ ಮುಸ್ಲಿಮರ ಸಮಸ್ಯೆಗಳು ಕಾಡುತ್ತಿವೆ.  1949ರಲ್ಲಿ ಸ್ವತಂತ್ರ ರಾಷ್ಟ್ರವೆಂದು ಸ್ವಯಂ ಘೋಷಿಸಿಕೊಂಡಿರುವ ತೈವಾನ್ ದೇಶವನ್ನು ತನ್ನ ಭೂಭಾಗವೆಂದೇ ಚೀನಾ ಈಗಲೂ ಪರಿಗಣಿಸಿದೆ. ಚೀನಾದ ವಾಯುವ್ಯ ಭಾಗದಲ್ಲಿರುವ ಕ್ಸಿನ್​ಜಿಯಾಂಗ್ ಪ್ರಾಂತ್ಯದಲ್ಲಿರುವ ಉಯ್ಗುರ್ ಮುಸ್ಲಿಮರೂ ಕೂಡ ಚೀನಾ ವಿರುದ್ಧ ಹೋರಾಟಕ್ಕೆ ಪ್ರಯತ್ನಿಸುತ್ತಿದ್ದಾರೆ.

ಸಂಪೂರ್ಣ ಸ್ವಾಯತ್ತತೆ ಸ್ಥಾನ ಹೊಂದಿರುವ ಹಾಂಕಾಂಗ್ ಪ್ರದೇಶವನ್ನು ನಿಯಂತ್ರಣಕ್ಕೆ ತರಲು ಚೀನಾ ಗಡಿಪಾರು ಮಸೂದೆ ಮೂಲಕ ಇತ್ತೀಚೆಗೆ ಪ್ರಯತ್ನಿಸಿತ್ತು. ಅದನ್ನು ವಿರೋಧಿಸಿ ಹಾಂಕಾಂಗ್​ನಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದವು. ಪ್ರತಿಭಟನಾಕಾರರನ್ನು ಬಲವಂತವಾಗಿ ಹತ್ತಿಕ್ಕಲು ಅಲ್ಲಿಯ ಪೊಲೀಸರು ಇನ್ನಿಲ್ಲದ ಪ್ರಯತ್ನ ನಡೆಸಿದರು. ಅದು ಸಾಧ್ಯವಾಗದೇ ಹೋದಾಗ ಕಳೆದ ಸೆಪ್ಟೆಂಬರ್​ನಲ್ಲಿ ಗಡೀಪಾರು ಮಸೂದೆಯನ್ನ ಹಿಂಪಡೆಯಿತು. ಆದರೂ ಕೂಡ ಪ್ರತಿಭಟನಾಕಾರರ ಮೇಲೆ ಪ್ರಕರಣಗಳನ್ನ ದಾಖಲಿಸಿ ಪ್ರತಿಭಟನೆಗಳನ್ನ ಮೆತ್ತಗಾಗಿಸಲು ಯತ್ನಿಸಿತು.

ಇದನ್ನೂ ಓದಿ: ಭಾರತದ ಪ್ರಧಾನಿ ಮೋದಿ-ಕ್ಸಿ ಜಿನ್​ಪಿಂಗ್​ ಮಾತುಕತೆ ಫಲಪ್ರದ: ಚೀನಾ ವಿದೇಶಾಂಗ ಸಚಿವ

ಚೀನಾ ತಲೆಹಾಕುವುದನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೂ ಹೋರಾಟ ನಡೆಸಲು ಹಾಂಕಾಂಗ್ ಜನರು ನಿರ್ಧರಿಸಿದಂತಿದೆ. ಅಂತೆಯೇ, ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಪ್ರತಿಭಟನೆಗಳು ನಿಲ್ಲದೇ ಹೋದರೆ ಚೀನೀ ಸೇನೆಯನ್ನು ಕಳುಹಿಸಿ ಬಂದೋಬಸ್ತ್ ಮಾಡುವ ಸಾಧ್ಯತೆಯೂ ದಟ್ಟವಾಗಿದೆ.ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಅವರು ಮೂಳೆ ಪುಡಿಪುಡಿ ಮಾಡುತ್ತೇವೆಂದು ಯಾರನ್ನುದ್ದೇಶಿಸಿ ಎಚ್ಚರಿಕೆ ನೀಡಿದರು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಹಾಂಕಾಂಗ್ ಪ್ರತಿಭಟನೆಗಳ ಹಿಂದೆ ಬಾಹ್ಯ ಶಕ್ತಿಗಳ ಕೈವಾಡ ಇದೆ ಎಂಬುದು ಚೀನಾದ ಬಲವಾದ ಆರೋಪವಾಗಿದೆ.

(ಸುದ್ದಿ ಮೂಲ: ಎಎಫ್​ಪಿ ಸುದ್ದಿ ಸಂಸ್ಥೆ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ