Viral Video: ಸಾಯೋದಕ್ಕೆ ಅಂತ ಟವರ್ ಏರಿದ ಮಹಿಳೆಯನ್ನು ವಾಪಸ್ ಇಳಿಸಿದ ಜೇನು ನೊಣಗಳು!

ಮಹಿಳೆಯೊಬ್ಬಳು ಬಿಎಸ್‌ಎನ್‌ಎಲ್‌ ಕಚೇರಿ ಬಳಿಯ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸುತ್ತಿರುವ ವಿಚಾರ ಎಲ್ಲಾ ಕಡೆ ಹರಡಿದೆ. ಕೂಡಲೇ ಸ್ಥಳೀಯರು, ಗ್ರಾಮಸ್ಥರೆಲ್ಲ ಸ್ಥಳಕ್ಕೆ ದೌಡಾಯಿಸಿದ್ದಾರೆ. ವಿವಿಧ ರೀತಿಯಲ್ಲಿ ಮಾತನಾಡಿ ಆಕೆ ಮನವೊಲಿಸೋ ಯತ್ನ ಮಾಡಿದ್ದಾರೆ. ಆದರೆ ಆಕೆ ಅದಕ್ಕೆ ಕೇಳದಿದ್ದಾಗ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೇರಳ: ಆಕೆಗೆ ಜೀವನದಲ್ಲಿ (Life) ಅದೇನಾಗಿತ್ತೋ ಏನೋ, ಇನ್ನು ತಾನು ಬದುಕಲೇ ಬಾರದು, ಸಾಯಲೇ (Suicide) ಬೇಕು ಅಂತ ಡಿಸೈಡ್ ಮಾಡಿದಳು. ಹಾಗೆ ನಿರ್ಧಾರ ಮಾಡಿದವಳೇ ತಮ್ಮ ಊರಿನಲ್ಲೇ (Village) ಇರುವ ಬಿಎಸ್‌ಎನ್‌ಎಲ್‌ ಕಚೇರಿ (BSNL Office) ಬಳಿಯ ಮೊಬೈಲ್ ಟವರ್ (Mobile Tower) ಹತ್ತಿರ ಹೋದಳು. ಸರ ಸರ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದಳು. ಅಷ್ಟೇ ನೋಡಿ, ಆಮೇಲೆ ಕಿರುಚುತ್ತಾ, ಕೂಗುತ್ತಾ ಕೇಳಕ್ಕಿಳಿಯಲು ಯತ್ನಿಸಿದ್ದಾಳೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಆತ್ಮಹತ್ಯೆಗೆ ಬಂದವಳು ಕೆಳಕ್ಕೆ ಇಳಿಯಲು ಯತ್ನಿಸಿದ್ದೇಕೆ? ಅವಳು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ನಿರ್ಧರಿಸಿದ್ದೇಕೆ? ಮುಂದೆ ಏನಾಯ್ತು ಗೊತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಕೇರಳದಲ್ಲಿ ಮೊಬೈಲ್‌ ಟವರ್ ಏರಿ ಮಹಿಳೆ ಆತ್ಮಹತ್ಯೆ ಯತ್ನ

ಕೇರಳ ರಾಜ್ಯದ ಇಲ್ಲಿಯ ಆಲಪ್ಪುಳ ಕರಾವಳಿಯ ಕಾಯಂಕುಲಂನಲ್ಲಿ ಮಹಿಳೆಯೊಬ್ಬಳು ಬಿಎಸ್ಎನ್‌ಎಲ್‌ ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿತ್ತು. ಆದರೆ ಆಕೆ ಆತ್ಮಹತ್ಯೆಗೆ ಅಂತ ಟವರ್ ಏರಿದವಳು ಕಿರುಚಿಕೊಂಡು ಕೆಳಕ್ಕೆ ಇಳಿಯುವ ಯತ್ನ ಮಾಡಿದ್ದಾಳೆ.

ಮಗುವನ್ನು ನೋಡಲು ಬಿಡುತ್ತಿಲ್ಲ ಅಂತ ಆತ್ಮಹತ್ಯೆ ಯತ್ನ

ಅಷ್ಟಕ್ಕೂ ಈ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಕ್ಕೂ ಒಂದು ಕಾರಣವಿದೆ. ಅದು ಆಕೆಯ ಮಗು. ಮಗುವನ್ನು ಕರೆದುಕೊಂಡು ಹೋಗಿದ್ದ ನನ್ನ ಪತಿ, ಇದೀಗ ನನಗೆ ಮಗುವನ್ನು ನೋಡಲೇ ಬಿಡುತ್ತಿಲ್ಲ ಅಂತ ಆರೋಪಿಸಿದ್ದಾಳೆ. ಇದೇ ಕಾರಣಕ್ಕೆ ಮಗು ತೋರಿಸದೇ ಹೋದರೆ ಮೊಬೈಲ್‌ ಟವರ್‌ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು.

ಇದನ್ನೂ ಓದಿ: Husband-Wife Clash: ಗಂಡನೊಂದಿಗೆ ಮುನಿಸಿಕೊಂಡು ಕೆರೆ ಮಧ್ಯೆ ಕುಳಿತ ಹೆಂಡತಿ! "ನಾ ಮನೆಗ್ ಹೋಗೋದಿಲ್ಲ" ಅಂತ ರಂಪಾಟ

ಸಾರ್ವಜನಿಕರ ಮನವಿಗೂ ಡೋಂಟ್ ಕೇರ್ ಎಂದ ಮಹಿಳೆ

ಈ ರೀತಿ ಮಹಿಳೆಯೊಬ್ಬಳು ಬಿಎಸ್‌ಎನ್‌ಎಲ್‌ ಕಚೇರಿ ಬಳಿಯ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸುತ್ತಿರುವ ವಿಚಾರ ಎಲ್ಲಾ ಕಡೆ ಹರಡಿದೆ. ಕೂಡಲೇ ಸ್ಥಳೀಯರು, ಗ್ರಾಮಸ್ಥರೆಲ್ಲ ಸ್ಥಳಕ್ಕೆ ದೌಡಾಯಿಸಿದ್ದಾರೆ. ವಿವಿಧ ರೀತಿಯಲ್ಲಿ ಮಾತನಾಡಿ ಆಕೆ ಮನವೊಲಿಸೋ ಯತ್ನ ಮಾಡಿದ್ದಾರೆ. ಆದರೆ ಆಕೆ ಅದಕ್ಕೆ ಕೇಳದಿದ್ದಾಗ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಮಹಿಳೆಯನ್ನು ಕೆಳಕ್ಕೆ ಇಳಿಸಲು ಪೊಲೀಸರ ಹರಸಾಹಸ

ಸ್ಥಳಕ್ಕೆ ಬಂದ ಪೊಲೀಸರೂ ಕೂಡ ಆಕೆಯ ಮನವೊಲಿಸಿ, ಕೆಳಕ್ಕೆ ಇಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಕೆ ನನ್ನ ಗಂಡನೇ ಬಂದು, ಮಗುವಿನ ಜೊತೆ ಮಾತನಾಡಲು ಅವಕಾಶ ನೀಡುವವರೆಗೂ ಕೆಳಕ್ಕೆ ಇಳಿಯಲ್ಲ ಅಂತ ಪಟ್ಟು ಹಿಡಿದ್ದಾಳೆ. ಏನು ಮಾಡುವುದು ಎಂದು ತೋಚದ ಪೊಲೀಸರು ಆಕೆಯನ್ನು ಬಚಾವ್ ಮಾಡಲು ಯೋಜನೆ ರೂಪಿಸುತ್ತಿದ್ದರು. ಒಂದು ವೇಳೆ ಆಕೆ ಮೇಲಿನಿಂದ ಬಿದ್ದರೆ ಏನೂ ಆಗದಂತೆ ನೋಡಿಕೊಳ್ಳುವ ಸಲುವಾಗಿ ಕೆಳಗಿನಿಂದ ದೊಡ್ಡ ಬಲೆಯನ್ನೂ ಹಿಡಿದುಕೊಳ್ಳಲಾಗಿತ್ತು. ಆದರೂ ಯಾವ ಕ್ಷಣ ಏನು ಬೇಕಾದರೂ ಆಗುವ ಸಾಧ್ಯತೆ ಇತ್ತು.

ಮಹಿಳೆಯನ್ನು ಕೆಳಕ್ಕ ಇಳಿಸಿದ ಜೇನು ನೊಣಗಳು!

ಈ ನಡುವೆ ಆಕೆಯ ಮನವನ್ನು ಒಲಿಸಲು ಪೊಲೀಸರು, ಸ್ಥಳೀಯರು ಸಾಕಷ್ಟು ಪ್ರಯತ್ನಿಸುತ್ತಲೇ ಇದ್ದರು. ಆದರೆ ಆ ಮಹಿಳೆ ಮಾತ್ರ ಜಪ್ಪಯ್ಯ ಎಂದರೂ ಕೆಳಕ್ಕೆ ಬರಲು ಒಪ್ಪಿರಲಿಲ್ಲ. ಆದರೆ ಇದೇ ವೇಳೆ ಯುವತಿಯ ರಕ್ಷಣೆಗೆ ಬಂದದ್ದು ಜೇನು ನೊಣಗಳು ಅಂದರೆ ನೀವು ನಂಬಲೇ ಬೇಕು.ಮೊಬೈಲ್ ಟವರ್ ಮೇಲೆ ಮಹಿಳೆಗೆ ಕಚ್ಚಿದ ಜೇನು ನೊಣಗಳು

ಅಷ್ಟಕ್ಕೂ ಅಲ್ಲಿ ಆಗಿದ್ದೇನೆಂದರೆ, ಟವರ್ ಮೇಲುಗಡೆ ಜೇನುಗೂಡು ಕಟ್ಟಿತ್ತು. ಆ ಮಹಿಳೆ ಟವರ್ ಏರಿದಾಗ ಆಕೆಯ ಕೈ ತಗುಲಿ ಜೇನುನೊಣಗಳು ಒಂದೇ ಸಮನೆ ಹೊರಕ್ಕೆ ಹಾರಿ ಆಕೆಯನ್ನು ಕಚ್ಚಲು ಶುರು ಮಾಡಿವೆ. ಜೇನುನೊಣಗಳ ಕಡಿತ ತಾಳದೇ ಹೆದರಿದ ಮಹಿಳೆ ಚೀರುತ್ತಾ, ಜಿಗಿಯುತ್ತಾ ಟವರ್‌ನಿಂದ ಇಳಿಯಲು ಆರಂಭಿಸಿದ್ದಾಳೆ. ಮೇಲಿನಿಂದ ಜಿಗಿಯುವ ಯೋಚನೆ ಬಿಟ್ಟು ಸರಸರನೆ ಟವರ್ ಇಳಿದಿದ್ದಾಳೆ. ಕೆಳಕ್ಕೆ ಸಮೀಪಿಸುತ್ತಿದ್ದಂತೆಯೇ ಕೆಳಗೆ ಜಿಗಿದು, ಅಲ್ಲಿ ಇದ್ದ ನೆಟ್ ಮೇಲೆ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಜನರು, ಪೊಲೀಸರು ಹಿಡಿದುಕೊಂಡಿದ್ದರಿಂದ ಪ್ರಾಣ ಉಳಿದಿದೆ.

ಇದನ್ನೂ ಓದಿ: Wife Missing: ಒಂದೂವರೆ ವರ್ಷದಿಂದ ಪತ್ನಿ ನಾಪತ್ತೆ, ಪುಟ್ಟ ಮಗುವಿನೊಂದಿಗೆ ಪತಿ ಹುಡುಕಾಟ!

ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ

ಕೇರಳದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ತಮಿಳುನಾಡಿನವಳು ಎನ್ನಲಾಗಿದೆ. ಸದ್ಯ ಪತಿಗೂ ವಿಷಯ ಮುಟ್ಟಿಸಲಾಗಿದ್ದು, ಈಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.
Published by:Annappa Achari
First published: