ರಾತ್ರಿ ವೇಳೆ ಎಟಿಎಂಗಳಿಗೆ ಹಣ ತುಂಬಿಸುವಂತಿಲ್ಲ; ಫೆಬ್ರವರಿಯಿಂದ ಹೊಸ ನಿಯಮ ಜಾರಿ

news18
Updated:August 19, 2018, 6:02 PM IST
ರಾತ್ರಿ ವೇಳೆ ಎಟಿಎಂಗಳಿಗೆ ಹಣ ತುಂಬಿಸುವಂತಿಲ್ಲ; ಫೆಬ್ರವರಿಯಿಂದ ಹೊಸ ನಿಯಮ ಜಾರಿ
news18
Updated: August 19, 2018, 6:02 PM IST
-ನ್ಯೂಸ್​ 18 ಕನ್ನಡ

ನವದೆಹಲಿ,(ಆ.19): ನಗದು ಅಪಮೌಲ್ಯೀಕರಣದ ನಂತರ ಬ್ಯಾಂಕ್​ ವಲಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅನೇಕ ಹೊಸ-ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಗ್ರಾಹಕರು ಬ್ಯಾಂಕಿನ ನಿಯಮಗಳನ್ನು ಅನುಸರಿಸಲೇಬೇಕಾಗುತ್ತದೆ. ಗೃಹ ಸಚಿವಾಲಯವು ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇದೀಗ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ.

ಮೊದಲೆಲ್ಲಾ ಎಟಿಎಂಗಳು ಎನಿ ಟೈಮ್​ ಮನಿ ಎಂಬಂತಿದ್ದವು. ಹಣ ಬೇಕೆಂದಾಗ ಮಧ್ಯರಾತ್ರಿ ಬೇಕಾದರೂ ಎಟಿಎಂಗೆ ಹೋಗಿ ಹಣ ತರುತ್ತಿದ್ದರು. ಆದರೆ ರಾತ್ರಿ ವೇಳೆ ಎಟಿಎಂಗಳಲ್ಲಿ ಹಣ ಖಾಲಿಯಾದರೆ ಮತ್ತೆ ಬೆಳಿಗ್ಗೆಯ ವೇಳೆಗೆ ಕಾಯಬೇಕಿದೆ. ಏಕೆಂದರೆ ಖಾಲಿಯಾದ ಎಟಿಎಂಗಳಿಗೆ ನಗರಪ್ರದೇಶಗಳಲ್ಲಿ ರಾತ್ರಿ 9 ಗಂಟೆಯ ನಂತರ, ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ 6 ಗಂಟೆ ನಂತರ ಹಣ ತುಂಬಿಸಲಾಗುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.

ನಕ್ಸಲ್​ ಪೀಡಿತ ಪ್ರದೇಶಗಳಲ್ಲಿರುವ ಎಟಿಎಂಗಳಿಗೆ ಸಂಜೆ 4 ಗಂಟೆಯ ಮುಂಚೆ ಹಣ ತುಂಬಬೇಕಿದೆ. ಈ ಹೊಸ ನಿಯಮ ಮುಂದಿನ ವರ್ಷ ಫೆಬ್ರವರಿಯಿಂದ ಜಾರಿಗೆ ಬರಲಿದೆ.
ನಗದು ವಾಹನಗಳ ಮೇಲೆ ದಾಳಿ, ಎಟಿಎಂ ಮೋಸದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ. ಎಟಿಎಂಗಳಿಗೆ ಹಣ ತುಂಬಿಸುವ ಖಾಸಗಿ ಏಜೆನ್ಸಿಗಳು ಬ್ಯಾಂಕ್​ಗಳಿಂದ  ಮಧ್ಯಾಹ್ನದ ವೇಳೆಗೆ ನಗದು ಪಡೆದು ಶಸ್ತ್ರಸಜ್ಜಿತ ವಾಹನಗಳಲ್ಲಿ ಸಾಗಿಸಬೇಕು ಎಂದು ತಿಳಿದು ಬಂದಿದೆ.
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...