ಬಲೂಚಿಸ್ತಾನ: ಭೀಕರ ಬಾಂಬ್ ಸ್ಫೋಟಕ್ಕೆ (Bomb Blast) ನಾಲ್ಕು ಮಂದಿ ಸಾವನ್ನಪ್ಪಿ, (Four Death) 14ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾದ ಘಟನೆ ಪಾಕಿಸ್ತಾನದ (Pakistan) ಬಲೂಚಿಸ್ತಾನ (Balochistan) ಪ್ರಾಂತ್ಯದಲ್ಲಿ ನಡೆದಿದೆ. ಬಲೂಚಿಸ್ತಾನ ಪ್ರಾಂತ್ಯದ ಮಾರುಕಟ್ಟೆಯೊಂದರಲ್ಲಿ (Balochistan Rakhni Market) ಭಾನುವಾರ ಬೆಳಗ್ಗೆ ಸ್ಫೋಟ ಸಂಭವಿಸಿದ್ದು, ಈ ಸ್ಪೋಟದ ತೀವ್ರತೆಗೆ (Terror Attack) ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಲೂಚಿಸ್ತಾನ ಪ್ರಾಂತ್ಯದ ರಖ್ನಿ ಮಾರುಕಟ್ಟೆ ಪ್ರದೇಶದಲ್ಲಿ ಮೋಟಾರ್ ಸೈಕಲ್‌ವೊಂದರಲ್ಲಿ ಐಇಡಿ ಬಾಂಬ್ (ಸುಧಾರಿತ ಸ್ಫೋಟಕ ಸಾಧನ) ಅನ್ನು ಅಳವಡಿಸಲಾಗಿತ್ತು. ಈ ಬಾಂಬ್ ಸ್ಫೋಟಗೊಂಡು ಅವಘಡ ಸಂಭವಿಸಿದೆ ಎಂದು ಬರ್ಖಾನ್ ಡೆಪ್ಯುಟಿ ಕಮಿಷನರ್ ಅಬ್ದುಲ್ಲಾ ಖೋಸೊ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರ ದೌಡು
ಭೀಕರ ಸ್ಫೋಟಕ್ಕೆ ಗುರಿಯಾಗಿ ಗಂಭೀರ ಗಾಯಗೊಂಡಿರುವ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸ್ ತಂಡವು ಭೇಟಿ ನೀಡಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆಗಾಗಿ ಘಟನೆ ನಡೆದ ಸ್ಥಳವನ್ನು ಪೊಲೀಸರು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಎಂದು ಬರ್ಖಾನ್ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸಜ್ಜದ್ ಅಫ್ಜಲ್ ಹೇಳಿದ್ದಾರೆ.
ಎಲ್ಲವೂ ಚೆಲ್ಲಾಪಿಲ್ಲಿ!
ಬಾಂಬ್ ಸ್ಫೋಟಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಕ್ಕಪಕ್ಕದಲ್ಲಿ ಇದ್ದ ಸಿಸಿ ಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ಈ ದೃಶ್ಯದಲ್ಲಿ ಬಾಂಬ್ ಸ್ಫೋಟಗೊಂಡ ನಂತರ ಅಲ್ಲಿದ್ದವರ ದೇಹ ಛಿದ್ರ ಛಿದ್ರಗೊಂಡಿದ್ದು, ಅಲ್ಲಿದ್ದ ವಾಹನಗಳು ಚೆಲ್ಲಾಪಿಲ್ಲಿ ಆಗಿವೆ. ತರಕಾರಿಗಳು ಕೂಡ ಸುಟ್ಟು ರಸ್ತೆಯ ಮೇಲೆಲ್ಲಾ ಚೆಲ್ಲಿಕೊಂಡಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ ರಕ್ತಸಿಕ್ತ ದೇಹದಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ: Pakistan: ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡುವುದರಲ್ಲೂ ಕಳ್ಳಾಟ, ಟರ್ಕಿ ನೀಡಿದ್ದ ಸಾಮಗ್ರಿಯನ್ನೇ ರೀಪ್ಯಾಕ್ ಮಾಡಿ ಕಳಿಸಿದ ಪಾಕ್!
'ಅಮಾಯಕರ ರಕ್ತ ಸುರಿಸುವವರು ಮಾನವೀಯತೆಯ ವೈರಿಗಳು'
ಉಗ್ರರ ವಿಧ್ವಂಸಕ ಕೃತ್ಯವನ್ನು ಬಲೂಚಿಸ್ತಾನದ ಮುಖ್ಯಮಂತ್ರಿ ಮೀರ್ ಅಬ್ದುಲ್ ಖುದೂಸ್ ಬಿಜೆಂಜೊ ಅವರು ಖಂಡಿಸಿದ್ದು, ಕೂಡಲೇ ಅಪರಾಧಿಗಳನ್ನು ಬಂಧಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ, ಅಮಾಯಕರ ರಕ್ತ ಸುರಿಸುವವರು ಮಾನವೀಯತೆಯ ವೈರಿಗಳು ಎಂದು ಕಿಡಿಕಾರಿದ್ದಾರೆ. ಜೊತೆಗೆ, ಭಯೋತ್ಪಾದಕರು ತಮ್ಮ ದುಷ್ಟ ಗುರಿಗಳನ್ನು ಸಾಧಿಸಲು ಅನಿಶ್ಚಿತತೆಯನ್ನು ಸೃಷ್ಟಿಸುತ್ತಿದ್ದಾರೆ. ಆದರೆ, ನಾವು ರಾಜ್ಯ ವಿರೋಧಿ ಕೃತ್ಯಗಳನ್ನು ಯಶಸ್ವಿಯಾಗಲು ಬಿಡುವುದಿಲ್ಲ. ಸರ್ಕಾರವು ಪರಿಣಾಮಕಾರಿ ಭಯೋತ್ಪಾದನಾ ನಿಗ್ರಹ ತಂತ್ರವನ್ನು ಅಳವಡಿಸಿಕೊಳ್ಳಲಿದೆ ಎಂದು ಅಬ್ದುಲ್ ಖುದೂಸ್ ಬಿಜೆಂಜೊ ಹೇಳಿದ್ಧಾರೆ.
ಇದನ್ನೂ ಓದಿ: Pakistan: ಪಾಕಿಸ್ತಾನದ ಮಸೀದಿಯೊಳಗೆ ಉಗ್ರರ ದಾಳಿ; ಬಾಂಬ್ ಸ್ಫೋಟದಲ್ಲಿ 28 ಮಂದಿ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ
ಇನ್ನು ಈ ದುರ್ಘಟನೆಯಲ್ಲಿ ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಒದಗಿಸಲು ಅಬ್ದುಲ್ ಖುದೂಸ್ ಬಿಜೆಂಜೊ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಮೃತ ಅಮಾಯಕರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ