Atlas Cycles: ಸವಾರಿ ನಿಲ್ಲಿಸಿದ ಅಟ್ಲಾಸ್​ ಸೈಕಲ್​; ದೇಶದ ಹೆಮ್ಮೆಯ ಸಂಸ್ಥೆಗೆ ಬೀಗ!

Atlas Cycles: ಅಟ್ಲಾಸ್​  ಸೈಕಲ್​ ಕಂಪೆನಿ 1951ರಲ್ಲಿ ಭಾರತದಲ್ಲಿ ಸ್ಥಾಪನೆಯಾಯಿತು. ಹರಿಯಾಣದ ಸೋನಿಪತ್​​ ಪ್ರದೇಶದಲ್ಲಿ ಮೊದಲು ಉತ್ಪಾದನೆ ಆರಂಭವಾಯಿತು. 1965ರ ಹೊತ್ತಿಗೆ ವಿವಿಧ ಕಡೆಗಳಲ್ಲಿ ಘಟಕಗಳನ್ನು ಸ್ಥಾಪಿಸುವ ಮೂಲಕ ದೇಶದೆಲ್ಲಡೆ ಅತಿ ದೊಡ್ಡ ಸೈಕಲ್​ ಉತ್ಪಾದನ ಕಂಪೆನಿಯಾಗಿ ಹೊರಹೊಮ್ಮಿತ್ತು.

ಅಟ್ಲಾಸ್​ ಸೈಕಲ್

ಅಟ್ಲಾಸ್​ ಸೈಕಲ್

 • Share this:
  ಭಾರತದ ಜನಪ್ರಿಯ ಅಟ್ಲಾಸ್​ ಸೈಕಲ್​ ಕಂಪೆನಿ ತನ್ನ ಕೊನೆಯಾ ಉತ್ಪಾದಕ ಘಟಕವನ್ನು ಮುಚ್ಚಿದೆ. ಆರ್ಥಿಕ ನಷ್ಟದಿಂದಾಗಿ ದೆಹಲಿ ಹೊರವಲಯದ ಸಾಹಿಬಾಬಾದ್​​​ನಲ್ಲಿದ್ದ ಕೊನೆಯಾ ಘಟಕಕ್ಕೆ ಬೀಗ ಜಡಿದಿದೆ.

  ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿದ್ದ ಅಟ್ಲಾಸ್​ ಸೈಕಲ್ ಜೂನ್​ 3ರಂದು​ ‘ವಿಶ್ವ ಬೈಸಿಕಲ್‘​​ ದಿನದಂದು ಘಟಕವನ್ನು ಮುಚ್ಚಿದೆ. ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ನೌಕಕರನ್ನು ವಜಾಗೊಳಿಸಿದೆ.

  ಸಾಹಿವಾದ್ ಅಟ್ಲಾಸ್​ ಸೈಕಲ್​​ ಕಂಪೆನಿಯಲ್ಲಿ 431 ಉದ್ಯೋಗಿಗಳನ್ನು ತೆಗೆದ ಹಾಕಿದೆ. ಆದರೆ ಕಂಪೆನಿಯಲ್ಲಿ ಸಾವಿರಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ ಎಂದು ಕಾರ್ಮಿಕ ಸಂಘಟನೆಯ ಮುಖ್ಯಸ್ಥರು ಹೇಳಿದ್ದಾರೆ.

  ಈ ಬಗ್ಗೆ ಅಟ್ಲಾಸ್​ ಕಂಪೆನಿಯ ಸಿಇಓ ಎಸ್​​​ಪಿ ಸಿಂಗ್​ ರಾಣ ಮಾತನಾಡಿ ‘ ಆರ್ಥಿಕ ಮುಗ್ಗಟ್ಟಿನಿಂದಾಗಿ ಕೊನೆಯಾ ಉತ್ಪಾದಕ ಘಟಕವನ್ನು ಮುಚ್ಚುತ್ತಿದ್ದೇವೆ. ಆದರೆ ಇದು ತಾತ್ಕಾಲಿಕ.  ಹೆಚ್ಚುವರಿ ಭೂಮಿಯನ್ನು ಮಾರಾಟ ಮಾಡಿ 50 ಕೋಟಿ ನಿಧಿ ಸಂಗ್ರಹಿಸಿ ಬಳಿಕ ಘಟಕವನ್ನು ತೆರೆಯಲಿದ್ದೇವೆ. ವಜಾಗೊಂಡಿರುವ ನೌಕಕರಿಗೆ ನಿಯಮಾವಳಿ ಅನುಸಾರ ವೇತನ ನೀಡಲಾಗುವುದು. ಎಂದು ಹೇಳಿದ್ದಾರೆ.

  ಏಕಾಏಕಿ ಕಂಪೆನಿಯನ್ನು ಮುಚ್ಚಿದ್ದಕ್ಕಾಗಿ ಅಲ್ಲಿನ ನೌಕಕರು ಬೇಸರಗೊಂಡಿದ್ದಾರೆ. ನೋಟಿಸ್​ ನೀಡದೆ ಈ ರೀತಿ ಮಾಡಿದ್ದಾರೆ ಎಂದು ನೌಕರರ ಸಂಘಟನೆ ಆರೋಪಿಸಿದೆ.  ಅಟ್ಲಾಸ್​​ ಕಂಪೆನಿ ಸ್ಥಾಪನೆ;

  ಅಟ್ಲಾಸ್​  ಸೈಕಲ್​ ಕಂಪೆನಿ 1951ರಲ್ಲಿ ಭಾರತದಲ್ಲಿ ಸ್ಥಾಪನೆಯಾಯಿತು. ಹರಿಯಾಣದ ಸೋನಿಪತ್​​ ಪ್ರದೇಶದಲ್ಲಿ ಮೊದಲು ಉತ್ಪಾದನೆ ಆರಂಭವಾಯಿತು. 1965ರ ಹೊತ್ತಿಗೆ ವಿವಿಧ ಕಡೆಗಳಲ್ಲಿ ಘಟಕಗಳನ್ನು ಸ್ಥಾಪಿಸುವ ಮೂಲಕ ದೇಶದೆಲ್ಲಡೆ ಅತಿ ದೊಡ್ಡ ಸೈಕಲ್​ ಉತ್ಪಾದನ ಕಂಪೆನಿಯಾಗಿ ಹೊರಹೊಮ್ಮಿತ್ತು.

  ವರ್ಷಕ್ಕೆ 40 ಲಕ್ಷ ಸೈಕಲ್​​​ಗಳನ್ನು ಉತ್ಪಾದಿಸುವ ಮೂಲಕ ವಿಶ್ವದಾದ್ಯಂತ ದೊಡ್ಡ ಹೆಸರು ಮಾಡಿತ್ತು. ವಿದೇಶದಿಂದಲೂ ಈ ಸೈಕಲ್​ಗೆ ಭಾರೀ ಬೇಡಿಕೆಯಿತ್ತು. ಆದರೆ ಪೆಟ್ರೋಲ್​, ಡಿಸೇಲ್​​ ಎಂಜಿನ್​ ವಾಹನಗಳ ಬಳಕೆ ಮತ್ತು ಸಾರಿಗೆ ಸೌಲಭ್ಯದಿಂದಾಗಿ ಸೈಕಲ್​​​ ಬಳಕೆ ಮತ್ತು ಬೇಡಿಕೆ ನೆಲಕಚ್ಚಿದೆ. ಅದರಂತೆ ಜನಪ್ರಿಯ ಅಟ್ಲಾಸ್​ ಕಂಪೆನಿಗೂ ದೊಡ್ಡ ಹೊಡೆತ ಬಿದ್ದಿದ್ದು, ತನ್ನ ಕೊನೆಯಾ ಘಟಕಕ್ಕೆ ಬೀಜ ಜಡಿದಿದೆ.

  ಇನ್ನು ಆರ್ಥಿಕ ನಷ್ಟದಿಂದಾಗಿ 2014ರಲ್ಲಿ ಮಧ್ಯಪ್ರದೇಶದ ಮಲನ್​ಪುರದಲ್ಲಿದ್ದ ಉತ್ಪಾದನಾ ಘಟಕವನ್ನು ಮುಚ್ಚಿತು. ನಂತರ ಹರಿಯಾಣದ ಸೋನಿಪತ್​ನಲ್ಲಿದ್ದ ಘಟಕವನ್ನು 2018ರಲ್ಲಿ ಮುಚ್ಚಿತು. ಇದೀಗ ದೆಹಲಿಯ ಸಾಹಿಬಾಬಾದ್​ನಲ್ಲಿದ್ದ ಘಟವನ್ನು ಸ್ಥಗಿತ ಮಾಡಿದೆ.
  First published: