• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Atiq Ahmed: 17 ವರ್ಷಕ್ಕೆ ಮೊದಲ ಕೊಲೆ, ಶಾಸಕನಾದ ಮೂರೇ ತಿಂಗಳಿಗೆ ರೌಡಿ ಹತ್ಯೆ! ಇದು ಟಾಂಗಾ ಚಾಲಕನ ಮಗ ಗ್ಯಾಂಗ್‌ಸ್ಟರ್‌ ಆದ ಕರಾಳ ಕಥೆ

Atiq Ahmed: 17 ವರ್ಷಕ್ಕೆ ಮೊದಲ ಕೊಲೆ, ಶಾಸಕನಾದ ಮೂರೇ ತಿಂಗಳಿಗೆ ರೌಡಿ ಹತ್ಯೆ! ಇದು ಟಾಂಗಾ ಚಾಲಕನ ಮಗ ಗ್ಯಾಂಗ್‌ಸ್ಟರ್‌ ಆದ ಕರಾಳ ಕಥೆ

ಅತೀಕ್ ಅಹ್ಮದ್

ಅತೀಕ್ ಅಹ್ಮದ್

ಅತೀಕ್​ ತನಗೆ 18 ವರ್ಷ ತುಂಬುವುದರೊಳಗೆ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ. ಕೇವಲ 17ನೇ ವಯಸ್ಸಿನಲ್ಲಿ, 1979 ರಲ್ಲಿ ಅತೀಕ್ ಮೇಲೆ ಮೊದಲ ಕೊಲೆ ಆರೋಪ ಹೊರಿಸಲಾಗಿತ್ತು. ನಂತರ ಅಪರಾಧ ಜಗತ್ತಿನಲ್ಲಿ ಅತೀಕ್ ತನ್ನದೇ ಹೆಸರು ಮಾಡಲು ಪ್ರಾರಂಭಿಸಿದ್ದನು.

 • News18 Kannada
 • 4-MIN READ
 • Last Updated :
 • Uttar Pradesh, India
 • Share this:

ಪ್ರಯಾಗ್​ರಾಜ್: ಮೊನ್ನೆಯವರೆಗೆ ಉತ್ತರ ಪ್ರದೇಶಕ್ಕೆ (Uttar Pradesh) ಸೀಮಿತವಾಗಿದ್ದ ಅತೀಕ್​ ಅಹ್ಮದ್( Atiq Ahmed) ಸುದ್ದಿ, ಇಂದು ದೇಶಾದ್ಯಂತ ಚರ್ಚೆಗೆ ಬಂದಿದೆ. ಕಾರಣ ಪೊಲೀಸರ (Police) ಸಮ್ಮುಖದಲ್ಲೇ, ಜೊತೆಗೆ ಮಾಧ್ಯಮದ ಜೊತೆ ಲೈವ್​ನಲ್ಲಿದ್ದಾಗಲೇ ಮೂವರು ದುಷ್ಕರ್ಮಿಗಳು ಅತೀಕ್​ ಅಹ್ಮದ್​ನನ್ನು ಹತ್ಯೆ ಮಾಡಿದ್ದರು. ಅತೀಕ್​ ಅಹ್ಮದ್​ ಜೊತೆಗೆ ಆತನ ಸಹೋದರ ಅಶ್ರಫ್ ಅಹ್ಮದ್​ನನ್ನೂ ಕೊಲ್ಲಲಾಗಿದೆ. ಈ ಘಟನೆ ಇಡೀ ದೇಶವನ್ನೇ ಉತ್ತರ ಪ್ರದೇಶದತ್ತ ತಿರುಗುವಂತೆ ಮಾಡಿದೆ. ಒಂದು ಕಡೆ ನೂರಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅತೀಕ್​ನನ್ನು ಕೊಂದಿದ್ದಕ್ಕೆ ಸಂಭ್ರಮಿಸುತ್ತಿದ್ದರೆ, ಮತ್ತೊಂದು ಕಡೆ ಪೊಲೀಸ್ ಸಮ್ಮುಖದಲ್ಲೇ ಇಂತಹ ಘಟನೆ ನಡೆದಿರುವುದರಿಂದ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ (Law and Order) ಯಾವ ಮಟ್ಟಕ್ಕಿದೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.


ಅತೀಕ್ ಅಹ್ಮದ್​ ಯಾರು?


ಅತೀಕ್ ಅಹ್ಮದ್ 1962 ರಲ್ಲಿ ಅಂದಿನ ಅಲಹಾಬಾದ್ ಅಂದರೆ ಈಗಿನ ಪ್ರಯಾಗ್ ರಾಜ್​ನ ಚಾಕಿಯಾ ಪ್ರದೇಶದಲ್ಲಿ ಜನಿಸಿದ. ತಂದೆ ಫಿರೋಜ್ ಅಹಮದ್ ಜೀವನೋಪಾಯಕ್ಕಾಗಿ ಟಾಂಗಾ ನಡೆಸುತ್ತಿದ್ದರು. ಅತೀಕ್ 10ನೇ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ, ನಂತರ ಓದನ್ನು ಸಂಪೂರ್ಣವಾಗಿ ತೊರೆದಿದ್ದ ಆತ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ.


17ನೇ ವಯಸ್ಸಿನಲ್ಲಿ ಮೊದಲ ಕೊಲೆ ಆರೋಪ


ಓದನ್ನು ನಿಲ್ಲಿಸಿದ ಅತೀಕ್,​ ತನಗೆ 18 ವರ್ಷ ತುಂಬುವುದರೊಳಗೆ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ. ಕೇವಲ 17ನೇ ವಯಸ್ಸಿನಲ್ಲಿ, ಅಂದರೆ 1979 ರಲ್ಲಿ ಅತೀಕ್ ಮೇಲೆ ಮೊದಲ ಕೊಲೆ ಆರೋಪ ಹೊರಿಸಲಾಗಿತ್ತು. ನಂತರ ಅಪರಾಧ ಜಗತ್ತಿನಲ್ಲಿ ಅತೀಕ್ ತನ್ನದೇ ಹೆಸರು ಮಾಡಲು ಪ್ರಾರಂಭಿಸಿದ.


ಇದನ್ನೂ ಓದಿ: Atiq Ahmed Killers: ಅತೀಕ್ ಅಹ್ಮದ್ ಶೂಟೌಟ್‌ನ ಮೂವರು ಆರೋಪಿಗಳಿಗಿದೆ ಖತರ್ನಾಕ್ ಇತಿಹಾಸ!


ಚಾಂದ್​ ಬಾಬಾನಿಗೆ ಪ್ರತಿಸ್ಪರ್ಧಿ


ಅತೀಕ್ ಅಲಹಾಬಾದ್​ನಲ್ಲಿ ಮಾಫಿಯಾ ಜಗತ್ತಿಗೆ ಕಾಲಿಡುವ ಹೊತ್ತಿಗೆ ಈ ಪ್ರದೇಶದಲ್ಲಿಯೇ 'ಚಾಂದ್ ಬಾಬಾ' ತನ್ನದೇ ಆದ ಗ್ಯಾಂಗ್ ಸೃಷ್ಟಿಸಿಕೊಂಡಿದ್ದ. ಅವನ ಹೆಸರು ಎಷ್ಟು ದೊಡ್ಡದಾಗಿತ್ತೆಂದರೆ, ಪೊಲೀಸರು ಕೂಡ ಚಾಂದ್ ಬಾಬಾ ತಂಟೆಗೆ ಹೋಗದೇ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಚಾಂದ್ ಬಾಬಾನ ಕ್ರಿಮಿನಲ್ ಪಾರಮ್ಯಕ್ಕೆ ಪೊಲೀಸರಷ್ಟೇ ಅಲ್ಲ, ರಾಜಕಾರಣಿಗಳೂ ಹೆದರಿದ್ದರು. ಇಂತಹ ಸಂದರ್ಭದಲ್ಲಿ ಚಾಂದ್ ಬಾಬಾನ ಕೊಲೆ ಮಾಡಲು ಪೊಲೀಸರು ಹಾಗೂ ಸ್ಥಳೀಯ ರಾಜಕೀಯ ಮುಖಂಡರು ಅತೀಕ್​ನನ್ನು ಎತ್ತಿಕಟ್ಟಿದ್ದರು ಎನ್ನಲಾಗಿದೆ. 1980ರ ದಶಕದಲ್ಲಿ ಅತೀಕ್ ಮತ್ತು ಚಾಂದ್​ ಬಾಬಾ ಗ್ಯಾಂಗ್‌ಗಳ ನಡುವೆ ಸಾಕಷ್ಟು ಘರ್ಷಣೆ ನಡೆದಿತ್ತು.
ಶಾಸಕನಾದ ತಕ್ಷಣ ಚಾಂದ್​ ಬಾಬಾ ಹತ್ಯೆಗೈದ ಅತೀಕ್​


1989ರಲ್ಲಿ ಪ್ರಥಮ ಬಾರಿಗೆ ವಿಧಾನಸಭೆಗೆ ಟಿಕೆಟ್ ಪಡೆದಿದ್ದ ಅತೀಕ್ ಅದೇ ವರ್ಷ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದ​ ಚಾಂದ್ ಬಾಬಾನನ್ನು ಸೋಲಿಸಿದ್ದ. ರಾಜಕೀಯದಲ್ಲಿ ಮೊದಲ ಯಶಸ್ಸು ಸಿಗುತ್ತಿದ್ದಂತೆ, ಕೇವಲ ಮೂರೇ ತಿಂಗಳಲ್ಲಿ ಹಾಡ ಹಗಲೇ ಚಾಂದ್​ ಬಾಬಾನನ್ನು ಕೊಲೆಯಾಗಿತ್ತು. ಇದರ ಹಿಂದೆ ಅತೀಕ್​ ಕೈವಾಡವಿದೆ ಎಂಬುದು ಇಡೀ ಅಲಹಾಬಾದ್​ನಲ್ಲಿ ಜಗ್ಗಜಾಹೀರಾಗಿತ್ತು. ಅಲ್ಲದೆ ಚಾಂದ್​ ಬಾಬಾನ ಹತ್ಯೆಯ ನಂತರ ಆತನ ಸಂಪೂರ್ಣ ಗ್ಯಾಂಗ್ ಕೂಡ ಅಂತ್ಯವಾಯಿತು. ಅಂದಿನಿಂದ ಅತೀಕ್ ಆ ಪ್ರದೇಶದ ಡಾನ್​ ಆದ. ನಂತರ ಆತನ ಹಾದಿ ಸುಲಭವಾಗಿ ಅಪರಾಧ ಜಗತ್ತಿನಲ್ಲಿ ಎದುರಾಳಿಗಳಿಲ್ಲದೆ ಮೆರೆದಾಡಲು ಶುರುಮಾಡಿದ್ದ.


ಇದನ್ನೂ ಓದಿ: Atiq Ahmed: ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್, ಸಹೋದರ ಗುಂಡೇಟಿಗೆ ಬಲಿ! ಪೊಲೀಸರ ಮುಂದೆಯೇ ಲೈವ್ ಶೂಟೌಟ್


ಚಾಂದ್ ಬಾಬಾ ನಂತರ ಅತೀಕ್‌ಗೆ ಸವಾಲ್ ಹಾಕಿದ್ದ ರಾಜು ಪಾಲ್


ಒಂದು ಕಡೆ ಅಪರಾಧ ಜಗತ್ತಿನಲ್ಲಿ ಮುಂದುವರಿಯುತ್ತಿದ್ದರೂ, ಆತನ ರಾಜಕೀಯ ಸ್ಥಾನಮಾನ ಕಡಿಮೆಯಾಗಲಿಲ್ಲ. ಚಾಂದ್ ಬಾಬಾ ಹತ್ಯೆಯ ನಂತರ, ಅತೀಕ್ ಅಹ್ಮದ್ ಅಲಹಾಬಾದ್ ಪಶ್ಚಿಮದಿಂದ 1989 ರಿಂದ 2002 ರವರೆಗೆ 5 ಬಾರಿ ಶಾಸಕನಾಗಿದ್ದ. ಈ ಕ್ಷೇತ್ರದಲ್ಲಿ ಅತನಿಗೆ ಸವಾಲೊಡ್ಡುವ ಯಾವೊಬ್ಬ ಎದುರಾಳಿ ಇರಲಿಲ್ಲ.


ಎದುರಾಳಿಯಾಗಿ ಬೆಳೆದ ರಾಜುಪಾಲ್ ಹತ್ಯೆ


ಆದರೆ 2004ರಲ್ಲಿ ಅಲಹಾಬಾದ್ ಪಶ್ಚಿಮ ಕ್ಷೇತ್ರದಲ್ಲಿ ಅತೀಕ್ ಹಿನ್ನಡೆ ಅನುಭವಿಸುವಂತಾಯಿತು. 2004ರಲ್ಲಿ ಫುಲ್‌ಪುರದಿಂದ ಲೋಕಸಭೆ ಚುನಾವಣೆಯಲ್ಲಿ ಅತೀಕ್‌ಗೆ ಟಿಕೆಟ್ ನೀಡಿದ್ದರಿಂದ ಸಂಸದರಾಗಿ ಆಯ್ಕೆಯಾಗಿದ್ದ. ಸಂಸದರಾದ ನಂತರ, ಅತೀಕ್ ಅಲಹಾಬಾದ್ ಪಶ್ಚಿಮ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನು ಮತ್ತು ಆ ಜಾಗಕ್ಕೆ ತಮ್ಮ ಸಹೋದರ ಅಶ್ರಫ್ ಅವರನ್ನು ಕಣಕ್ಕಿಳಿಸಿದ್ದ. ಆದರೆ 2004ರ ಕೊನೆಯಲ್ಲಿ ನಡೆದ ಉಪಚುನಾವಣೆಯಲ್ಲಿ, ಒಂದು ಕಾಲದಲ್ಲಿ ಅತೀಕ್ ಅವರ ನಿಕಟವರ್ತಿಯಾಗಿದ್ದ ರಾಜು ಪಾಲ್ ಅವರು ಅಶ್ರಫ್ ಮುಂದೆ ಬಿಎಸ್‌ಪಿಯಿಂದ ಕಣಕ್ಕಿಳಿದಿದ್ದರು. ರಾಜುಪಾಲ್‌ ಕೂಡ ಗೂಂಡಾಗಿರಿಗೆ ಹೆಸರಾಗಿದ್ದರು. ಕೊನೆಗೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅಲಹಾಬಾದ್ ಪಶ್ಚಿಮದ ಮೇಲೆ ಅತೀಕ್ ಅವರ 15 ವರ್ಷಗಳ ಪ್ರಾಬಲ್ಯವು ಕೊನೆಗಾಣಿಸಿದ್ದರು.


ಅತೀಕ್ ಕ್ಷೇತ್ರದಲ್ಲಿ ರಾಜು ಪಾಲ್ ಗೆದ್ದಿದ್ದರಿಂದ ಮುಂದೆ ಏನಾಗಬಹುದು ಎಂದು ಇಡೀ ಕ್ಷೇತ್ರದಲ್ಲಿ ಕುತೂಹಲ ಹೆಚ್ಚಾಗಿತ್ತು. ಇದೇ ಕಾರಣದಿಂದ ಕೇವಲ ಮೂರು ತಿಂಗಳಲ್ಲಿ ಹಾಡ ಹಗಲೇ ಗುಂಡಿನ ಸುರಿಮಳೆಗೈದು ರಾಜು ಪಾಲ್​ನನ್ನು ಕೊಲ್ಲಲಾಗಿತ್ತು. ರಾಜುಪಾಲ್ ಪತ್ನಿ ಅತೀಕ್ ಅಹಮದ್ ಮತ್ತು ಆತನ ಸಹೋದರ ಅಶ್ರಫ್ ವಿರುದ್ಧ ದೂರು ನೀಡಿದ್ದರು. ಉಮೇಶ್ ಪಾಲ್ ಈ ಕೊಲೆಗೆ ಸಾಕ್ಷಿಯಾಗಿದ್ದರು. ಈತನನ್ನು ಕಿಡ್ನಾಪ್ ಮಾಡಿ ಸಾಕ್ಷಿ ಹೇಳದಂತೆ ಬೆದರಿಸಿದ್ದ, ಆದರೆ ಉಮೇಶ್​ ಪಾಲ್ ಪೊಲೀಸರಿಗೆ ರಾಜು ಪಾಲ್ ಕೊಲೆ ತಾನೇ ಸಾಕ್ಷಿ ಎಂದು ಹೇಳಿದ್ದ. ಈ ಕಾರಣದಿಂದಲೇ ಆತನ್ನು ಇದೇ ವರ್ಷ ಫೆಬ್ರವರಿಯಲ್ಲಿ ಕೊಲ್ಲಲಾಗಿತ್ತು.


ಇದನ್ನೂ ಓದಿ: Asad Ahmad Encounter: ಅತೀಕ್ ಅಹ್ಮದ್​ ಯಾರು ? ಗ್ಯಾಂಗ್​ಸ್ಟರ್​ನ ಮಗ ಎನ್​ಕೌಂಟರ್​ನಲ್ಲಿ ಬಲಿಯಾಗಿದ್ದೇಕೆ?

 ಐಎಸ್‌ಐ ಏಜೆಂಟ್


ಈ ಕೊಲೆ ಪ್ರಕರಣದಲ್ಲಿ ಅಈಕ್ ಮತ್ತು ಅಶ್ರಫ್ ಅವರನ್ನು ಬಂಧಿಸಲಾಗಿತ್ತು. ಪ್ರಯಾಗ್‌ರಾಜ್‌ನ ಸಿಜಿಎಂ ಕೋರ್ಟ್ ಏಪ್ರಿಲ್​ 13 ರಿಂದ 17 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿತ್ತು. ವಿಚಾರಣೆ ವೇಳೆ ಇಬ್ಬರಿಗೂ ಸುಮಾರು 200 ಪ್ರಶ್ನೆಗಳನ್ನು ಕೇಳಲಾಗಿತ್ತು. ವಿಶೇಷವೆಂದರೆ ಅತೀಕ್ ಪಾಕಿಸ್ತಾನದ ಜೊತೆಗಿನ ಸಂಪರ್ಕವನ್ನು ಒಪ್ಪಿಕೊಂಡಿದ್ದ. ಜೊತೆಗೆ ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ತಾನು ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದ ಎಂದು ಹೇಳಲಾಗುತ್ತಿದೆ.


ಅಲ್ಲದೆ ಆತ ಅಹಮದಾಬಾದ್ ಜೈಲಿನಿಂದ ಐಎಸ್​ಐ ಏಜೆಂಟ್​ಗೆ ಕರೆ ಮಾಡಿದ್ದ, ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ. ಅಲ್ಲದೆ ಅತೀಕ್ ತನ್ನ ಮಗನನ್ನು ಅಂತ್ಯಕ್ರಿಯೆಗೆ ಕರೆದುಕೊಂಡು ಹೋಗುವಂತೆ ಮನವಿ ಮಾಡುತ್ತಲೇ ಇದ್ದ. ಆದರೆ ಏಪ್ರಿಲ್ 14ರಂದು ಇದ್ದಕ್ಕಿದ್ದಂತೆ ಆತನ ಆರೋಗ್ಯ ಹದಗೆಟ್ಟಿತ್ತು. ಹಾಗಾಗಿ ಏಪ್ರಿಲ್ 15 ರಂದು ರಾತ್ರಿ ಪ್ರಯಾಗರಾಜ್‌ನಲ್ಲಿರುವ ಕ್ಯಾಲ್ವಿನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಆತನನ್ನು ಮಾಧ್ಯಮದ ಮುಂದೆಯೇ ಗುಂಡಿಕ್ಕಿ ಕೊಲ್ಲಲಾಗಿದೆ.


ಅತೀಕ್ ಅಹ್ಮದ್ ಮತ್ತು ಅವನ ಕುಟುಂಬದ


ಉತ್ತರ ಪ್ರದೇಶ ಪೊಲೀಸರ ಪ್ರಕಾರ, ಮಾಜಿ ಗ್ಯಾಂಗ್​ಸ್ಟರ್​, ಈಗ ರಾಜಕಾರಣಿಯಾಗಿರುವ ಅತೀಕ್ ಅಹ್ಮದ್ ಮತ್ತು ಆತನ ಕುಟುಂಬದ ವಿರುದ್ಧ 160 ಕ್ಕೂ ಹೆಚ್ಚು ಕ್ರಿಮಿನಲ್ ದೂರುಗಳನ್ನು ದಾಖಲಾಗಿವೆ. ಅತೀಕ್ 100 ಪ್ರಕರಣಗಳಲ್ಲಿ ಬಾಗಿಯಾಗಿದ್ದರೆ, ಆತನ ಸಹೋದರ ಅಶ್ರಫ್ ವಿರುದ್ಧ 52 ಪ್ರಕರಣಗಳು, ಪತ್ನಿ ಶೈಸ್ತಾ ಪ್ರವೀನ್ ವಿರುದ್ಧ ಮೂರು ಪ್ರಕರಣಗಳು ಮತ್ತು ಅವರ ಮಕ್ಕಳಾದ ಅಲಿ ಮತ್ತು ಉಮರ್ ಅಹ್ಮದ್ ವಿರುದ್ಧ ಕ್ರಮವಾಗಿ ನಾಲ್ಕು ಮತ್ತು ಒಂದು ಪ್ರಕರಣಗಳು ದಾಖಲಾಗಿವೆ.


11,684 ಕೋಟಿ ಆಸ್ತಿ

top videos


  ವರದಿಗಳ ಪ್ರಕಾರ ಅತೀಕ್ ಮತ್ತು ಅವರ ಕುಟುಂಬದ ಬರೋಬ್ಬರಿ 11,684 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಉತ್ತರ ಪ್ರದೇಶ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಆತನ ವಿರುದ್ಧದ 54 ಪ್ರಕರಣಗಳು ಪ್ರಸ್ತುತ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ.

  First published: