ಪಾಕ್​ ಸ್ವಾತಂತ್ರ್ಯ ದಿನದ ಅಂಗವಾಗಿ ಆಯೋಜಿಸಿದ್ದ ಪರೇಡ್​ನಲ್ಲಿ ಭಾರತೀಯ ಹಾಡು ಹಾಡಿದ ಆತಿಫ್​


Updated:August 10, 2018, 6:15 PM IST
ಪಾಕ್​ ಸ್ವಾತಂತ್ರ್ಯ ದಿನದ ಅಂಗವಾಗಿ ಆಯೋಜಿಸಿದ್ದ ಪರೇಡ್​ನಲ್ಲಿ ಭಾರತೀಯ ಹಾಡು ಹಾಡಿದ ಆತಿಫ್​

Updated: August 10, 2018, 6:15 PM IST
ನ್ಯೂಸ್​ 18 ಕನ್ನಡ

ಇಸ್ಲಮಾಬಾದ್​(ಆ.10): ನ್ಯೂಯಾರ್ಕ್​ನಲ್ಲಿ ಈ ತಿಂಗಳ ಆರಂಭದಲ್ಲಿ ಆಯೋಜಿಸಲಾಗಿದ್ದ ಪಾಕಿಸ್ತಾನೀ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಪ್ರಖ್ಯಾತ ಗಾಯಕ ಆತಿಫ್​ ಅಸ್ಲಮ್​ರನ್ನು ಭಾರತೀಯ ಹಾಡೊಂದನ್ನು ಹಾಡುವ ಮೂಲಕ ಸೋಷಲ್​ ಮೀಡಿಯಾಗಳಲ್ಲಿ ಟ್ರೋಳ್​ ಆಗಿದ್ದಾರೆ. ಇಷ್ಟೇ ಅಲ್ಲದೇ ಇಲ್ಲಿನ ಪ್ರಮುಖ ವಾಹಿನಿಗಳಲ್ಲೂ ಭಾರೀ ಸುದ್ದಿಯಾಗಿದ್ದಾರೆ. ಆತಿಫ್​ ಸ್ಲಮ್​ ಬಾಲಿವುಡ್​ನ ಹಲವಾರು ಸಿನಿಮಾಗಳಿಗೆ ಹಿನ್ನೆಲೆ ಗಾಯನ ಮಾಡಿದ್ದಾರೆ. 2009 ರಲ್ಲಿ ತೆರೆ ಕಂಡಿದ್ದ ರಣ್​ಬೀರ್​ ಕಪೂರ್​ ಹಾಗೂ ಕತ್ರೀನಾ ಕೈಫ್​ರವರ ಸಿನಿಮಾ 'ಅಜಬ್​ ಪ್ರೇಮ್​ ಕೀ ಗಜಬ್​ ಕಹಾನಿ'ಯಲ್ಲಿ ಇವರು ಹಾಡಿದ್ದ ತೇರಾ ಹೋನೆ ಲಗಾ ಹೂಂ ಎಂಬ ಹಾಡು ಬಹಳಷ್ಟು ಫೇಮಸ್​ ಆಗಿತ್ತು.

ಸ್ವಾತಂತ್ರ್ಯ ದಿನದ ಪರೇಡ್​ನಲ್ಲಿ ಭಾರತೀಯ ಹಾಡು ಹಾಡಿದ ಬಳಿಕ ಪಾಕ್​ನ ಹಲವಾರು ಮಂದಿ ಅವರಿಗಿರುವ ದೇಶಭಕ್ತಿಯ ಕುರಿತಾಗಿ ಸವಾಲೆತ್ತಿದ್ದಾರೆ. ಟ್ವಿಟರ್​ ಬಳಕೆದಾರರೊಬ್ಬರು "ಆತಿಫ್​ ಅಸ್ಲಮ್​ಗೆ ಯಾವುದೇ ಗೌರವವಿಲ್ಲ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರೊಬ್ಬರು "ಆತಿಫ್​ ಅಸ್ಲಮ್​ರನ್ನು ಬಹಿಷ್ಕರಿಸಬೇಕು. ನೀವು ಹೃದಯ ಚೂರು ಮಾಡಿದ್ದೀರಿ" ಎಂದು ಬರೆದುಕೊಂಡಿದ್ದಾರೆ.


Loading...

ಹೀಗಿದ್ದರೂ ಗಾಯಕ ಶಫ್ಕತ್​ ಅಮಾನತ್​ ಸೇರಿದಂತೆ ಲವಾರು ಮಂದಿ ಈ ವಿಚಾರವಾಗಿ ಆತಿಫ್​ ಅಸ್ಲಂರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಅಲೀ ಕೂಡಾ ಬಾಲಿವುಡ್​ನ ಹಲವಾರು ಸಿನಿಮಾಗಳಿಗೆ ಹಿನ್ನೆಲೆ ಗಾಯನ ಮಾಡಿದ್ದಾರೆ. ಇನ್ನು ಸಿನಿಮಾ ವಿಮರ್ಶಕ ಉಮರ್​ ಅಲ್ವೀ ಕೂಡ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ "ಬಾಲಿವುಡ್​ ಸಿನಿಮಾ ಹಾಗೂ ಕಾರ್ಯಕ್ರಮಗಳು ಪಾಕಿಸ್ತಾನದ ಸಿನಿಮಾ ಥಿಯೇಟರ್​ಗಳು ಹಾಗೂ ಟಿವಿ ಚಾನೆಲ್​ಗಳಲ್ಲಿ ಪ್ರಸಾರವಾಗುತ್ತವೆ ಎಂಬ ವಿಚಾರವನ್ನು ಇಲ್ಲಿನ ಜನರು ಮರೆಯಬಾರದು. ಸಿನಿಮಾ, ಸಂಗೀತ ಹಾಗೂ ಕಲೆಗೆ ಯಾವುದೇ ಇತಿ ಮಿತಿ ಇರುವುದಿಲ್ಲ" ಎಂದಿದ್ದಾರೆ.


ಇನ್ನು ಭಾರತೀಯ ಹಾಡು ಹಾಡಿದ್ದ ತನ್ನ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿರುವುದನ್ನು ನೀಡಿದ ಆತಿಫ್​ ತಲೆ ಕೆಡಿಸಿಕೊಂಡಿಲ್ಲ. ಅಲ್ಲದೇ ನನ್ನನ್ನು ದ್ವೇಷಿಸುವವರನ್ನು ನಾನು ಪ್ರೀತಿಸುತ್ತೇನೆ ಎನ್ನುವ ಮೂಲಕ ತಾನು ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ಸಂದೇಶ ಸಾರಿದ್ದಾರೆ.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ