Atal Bimit Kalyan Yojana: ಅಟಲ್​ ಬಿಮಿಟ್ ಕಲ್ಯಾಣ ಯೋಜನೆಯಡಿ ನಿರುದ್ಯೋಗ ಪರಿಹಾರ ಹಣ ಪಡೆಯಲು ಹೀಗೆ ಮಾಡಿ

ಸದ್ಯದ ಮಾರ್ಗಸೂಚಿಗಳ ಪ್ರಕಾರ, ಈ ಮೊದಲು ನಿರುದ್ಯೋಗ ಪರಿಹಾರ ಪಡೆಯಲು ತಮ್ಮ ಸಂಸ್ಥೆ ಅಥವಾ ಕಂಪನಿಯ ಮ್ಯಾನೇಜರ್/ಬಾಸ್ ಮೂಲಕವೇ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಈಗ ಇಎಸ್​ಐ ಸದಸ್ಯರು ತಾವೇ ನೇರವಾಗಿ ಗೊತ್ತುಪಡಿಸಿದ ಇಎಸ್​ಐಸಿ ಶಾಖಾ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಕಾರ್ಮಿಕ ಸಚಿವ ಗಂಗ್ವಾರ್ ಹೇಳಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನವದೆಹಲಿ(ಸೆ.18): ನೌಕರರ ರಾಜ್ಯ ವಿಮಾ ನಿಗಮವು(ಇಎಸ್​​​ಐಸಿ) ಅಟಲ್ ಬಿಮಿಟ್ ಕಲ್ಯಾಣ ಯೋಜನೆ ಅಡಿಯಲ್ಲಿ ಉದ್ಯೋಗ ಕಳೆದುಕೊಂಡವರು ಪರಿಹಾರ ಪಡೆಯಲು ಅರ್ಜಿ ಸಲ್ಲಿಸಲು ಸೂಚನೆ ನೀಡಿದೆ. ಉದ್ಯೋಗ ಕಳೆದುಕೊಂಡ ಇಎಸ್​ಐ ಸದಸ್ಯರಿಗೆ ಈ ಯೋಜನೆಯಡಿಯಲ್ಲಿ ಈ ಪರಿಹಾರದ ಹಣ ನೀಡಲಾಗುತ್ತದೆ. ಇತ್ತೀಚೆಗೆ ವಿಸ್ತರಿಸಿದ ಅಟಲ್​ ಬಿಮಿಟ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಕೆಲಸ ಕಳೆದುಕೊಂಡವರು ಪರಿಹಾರ ಪಡೆಯಬಹುದಾಗಿದೆ. ಉದ್ಯೋಗ ಕಳೆದುಕೊಂಡವರು ಪರಿಹಾರದ ಹಣ ಪಡೆಯಬೇಕಾದರೆ ಮೊದಲಿಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು. www.esic.in ಈ ವೆಬ್​ಸೈಟ್​​​ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಆಧಾರ್​ ಕಾರ್ಡ್​​​ನ ಫೋಟೋ ಕಾಪಿ ಮತ್ತು ಬ್ಯಾಂಕ್ ಖಾತೆ ವಿವರಗಳು ಬೇಕಾಗುತ್ತದೆ. ಈ ದಾಖಲೆಗಳನ್ನು ಗೊತ್ತುಪಡಿಸಿದ ಇಎಸ್​​ಐಸಿ ಶಾಖಾ ಕಚೇರಿಗೆ ಅಂಚೆ ಮೂಲಕ ಅಥವಾ ವೈಯಕ್ತಿಕವಾಗಿ ಸಲ್ಲಿಸಬಹುದಾಗಿದೆ.

  ಅಟಲ್ ಬಿಮಿಟ್ ಕಲ್ಯಾಣ್​ ಯೋಜನೆಯನ್ನು ಇನ್ನೂ ಒಂದು ವರ್ಷ ವಿಸ್ತರಿಸುವ ನಿರ್ಧಾರವನ್ನು ಇಎಸ್​​ಐ ಕಾರ್ಪೋರೇಷನ್​ ತೆಗೆದುಕೊಂಡಿದೆ. ಅಂದರೆ 2020ರ ಜುಲೈ 1ರಿಂದ 2021ರ ಜೂನ್​ 30ರವರೆಗೆ ಅಟಲ್ ಬಿಮಿಟ್ ಕಲ್ಯಾಣ್​ ಯೋಜನೆಯನ್ನು ವಿಸ್ತರಿಸಲು ಮುಂದಾಗಿದೆ. ಈ ಯೊಜನೆಯಡಿ ನೀಡಲಾಗುವ ನಿರುದ್ಯೋಗ ಪರಿಹಾರದ ದರವನ್ನು ಹಿಂದಿನ ದರ ಶೇ.25ರಿಂದ ಶೇ.50ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಕೊರೋನಾ ಮತ್ತು ಲಾಕ್​ಡೌನ್​ ಕಾರಣಗಳಿಂದಾಗಿ ಉದ್ಯೋಗ ಕಳೆದುಕೊಂಡ ಇಎಸ್​ಐ ಸದಸ್ಯರಿಗೆ ಈ ಯೋಜನೆ ಅನುಕೂಲವಾಗಲಿದೆ.

  ದಾನಿಗಳು ಕರುಣೆ ತೋರಿದ್ರೂ ಕ್ರೂರತೆ ಮೆರೆದ ವಿಧಿ; ಮಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ

  ಸದ್ಯದ ಮಾರ್ಗಸೂಚಿಗಳ ಪ್ರಕಾರ, ಈ ಮೊದಲು ನಿರುದ್ಯೋಗ ಪರಿಹಾರ ಪಡೆಯಲು ತಮ್ಮ ಸಂಸ್ಥೆ ಅಥವಾ ಕಂಪನಿಯ ಮ್ಯಾನೇಜರ್/ಬಾಸ್ ಮೂಲಕವೇ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಈಗ ಇಎಸ್​ಐ ಸದಸ್ಯರು ತಾವೇ ನೇರವಾಗಿ ಗೊತ್ತುಪಡಿಸಿದ ಇಎಸ್​ಐಸಿ ಶಾಖಾ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಕಾರ್ಮಿಕ ಸಚಿವ ಗಂಗ್ವಾರ್ ಹೇಳಿದ್ದಾರೆ.

  ಈ ನಿರುದ್ಯೋಗ ಪರಿಹಾರದ ಷರತ್ತುಗಳು 2020ರ ಮಾರ್ಚ್​ 24ರಿಂದ 2020ರ ಡಿಸೆಂಬರ್ 31ರವರೆಗೆ ಅನ್ವಯವಾಗುತ್ತವೆ. ಈ ಉದ್ದೇಶದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈಗ ನಿರುದ್ಯೋಗ ಪರಿಹಾರವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್​ ಖಾತೆಗಳಿಗೆ ಪಾವತಿಸಲಾಗುತ್ತದೆ. ಸುಮಾರು 3.49 ಕೋಟಿ ಕಾರ್ಮಿಕರು ಈ ಯೋಜನೆಯ ಫಲಾನುಭವಿಗಳಾಗಿದ್ದು, ಪರಿಹಾರ ನೀಡಲಾಗುತ್ತಿದೆ ಎಂದು ಕಾರ್ಮಿಕ ಸಚಿವರು ಹೇಳಿದರು.
  Published by:Latha CG
  First published: