ಕೋಪಗೊಂಡಿದ್ದ ಮನಮೋಹನ್​ ಸಿಂಗ್​ರನ್ನು ಸಮಾಧಾನಪಡಿಸಲು ಹೋಗಿದ್ದರು ವಾಜಪೇಯಿ....!

Precilla Olivia Dias
Updated:August 16, 2018, 11:44 PM IST
ಕೋಪಗೊಂಡಿದ್ದ ಮನಮೋಹನ್​ ಸಿಂಗ್​ರನ್ನು ಸಮಾಧಾನಪಡಿಸಲು ಹೋಗಿದ್ದರು ವಾಜಪೇಯಿ....!
Precilla Olivia Dias
Updated: August 16, 2018, 11:44 PM IST
ಅಂಕಿತ್ ಫ್ರಾನ್ಸಿಸ್, ನ್ಯೂಸ್​ 18 ಕನ್ನಡ

ನವದೆಹಲಿ(ಆ.16): ಅಟಲ್​ ಬಿಹಾರಿ ವಾಜಪೇಯಿಯವರು ವಿಪಕ್ಷದಲ್ಲಿರಲಿ ಅಥವಾ ಆಡಳಿತ ಪಕ್ಷದಲ್ಲಿರಲಿ ಆದರೆ ಬೇರೆ ಪಕ್ಷದ ನಾಯಕರಲ್ಲಿ ಅತ್ಯತ್ತಮ ಸಂಬಂಧ ಉಳಿಸಿಕೊಂಡ ಕೆಲವೇ ನಾಯಕರಲ್ಲಿ ಗುರುತಿಸಲ್ಪಡುತ್ತಾರೆ. ವಿಪಕ್ಷದಲ್ಲಿದ್ದರೂ ಅವರು ಜವಾಹರ್​ಲಾಲ್​ ನೆಹರೂ ಹಾಗೂ ಇಂದಿರಾ ಗಾಂಧಿಯವರನ್ನು ಸಂಸತ್ತಿನಲ್ಲಿ ಹೊಗಳಿದ್ದರು. ನರಸಿಂಹರಾವ್​ರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಅವರು ರಾಜೀವ್​ ಗಾಂಧಿಯವರನ್ನು ಪ್ರಶಂಸೆ ಮಾಡಲು ಯಾವತ್ತೂ ಹಿಂಜರಿದಿರಲಿಲ್ಲ. ಮಾರ್ಕ್ಸ್​ವಾದಿ-ಲೆನಿನ್​ವಾದಿ ಕಮ್ಯುನಿಸ್ಟ್​ ಪಕ್ಷದ ಸಂಸ್ಥಾಪಕ ಚಾರು ಮಜುಮ್ದಾರ್​ರವರ ನಿಧನಸ ಸಂದರ್ಭದಲ್ಲೂ ಅಟಲ್​ ಬಿಹಾರಿ ವಾಜಪೇಯಿಯವರು ಸರ್ವಜನಿಕವಾಗಿಯೇ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದರು. ಒಂದು ಬಾರಿ ಮಾತನಾಡುತ್ತಾ ತಾನು 1952ರಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಆದರೆ ಈವರೆಗೂ ಯಾರೊಬ್ಬರ ಮೇಲೂ ಕೆಸರೆರಚುವ ಮಾತು ಆಡಿಲ್ಲ ಎಂದಿದ್ದರು. ಅವರನ್ನು ರಾಜಕೀಯದಲ್ಲೂ ಮಾನವೀಯ ಮೌಲ್ಯಗಳಿಗೆ ಬೆಲೆ ನೀಡುವ ವ್ಯಕ್ತಿ ಎಂದು ಕರೆಯಲಾಗುತ್ತಿತ್ತು.

ಅಟಲ್​ ಬಿಹಾರಿಯವರನ್ನು ಹೊಗಳಿದ್ದ ನೆಹರೂ:

1957ರಲ್ಲಿ ಅಟಲ್​ ಬಿಹಾರಿ ವಾಜಪೇಯಿ ಬಲರಾಮ್​ಪುರದಿಂದ ಮೊದಲ ಬಾರಿ ಲೋಕಸಭಾ ಸದಸ್ಯರಾಗಿ ಸಂಸತ್ತಿಗೆ ಹೋದಾಗ ಸದನದಲ್ಲಿ ಅವರ ಭಾಷಣವು ಅಂದಿನ ಪ್ರಧಾನ ಮಂತ್ರಿಯಾಗಿದ್ದ ಜವಹರಲಾಲ್​ ನೆಹರೂರನ್ನು ಬಹಳಷ್ಟು ಪ್ರಭಾವಿತಗೊಳಿಸಿತ್ತು. ವಿದೇಶಾಂಗ ವಿಚಾರಗಳಿಗೆ ಸಂಬಂಧಿಸಿದಂತೆ ಅವರಿಗಿದ್ದ ಹಿಡಿತ ಗಮನಿಸಿದ್ದ ನೆಹರೂರವರವರು ಹಲವಾರು ಕಾರ್ಯಕ್ರಮಗಳಲ್ಲಿ ವಾಜಪೇಯಿಯವರನ್ನು ಹೊಗಳಿದ್ದರು. ಹಿರಿಯ ಪತ್ರಕರ್ತ ಕಿಂಶುಕ್​ ನಾಗ್​ ತಮ್ಮ ಪುಸ್ತಕ 'ಅಟಲ್​ ಬಿಹಾರಿ ವಾಜಪೇಯಿ- ಎ ಮ್ಯಾನ್​ ಫಾರ್​ ಆಲ್​ ಸೀಜನ್​' ನಲ್ಲೂ ಈ ವಿಚಾರವನ್ನು ಉಲ್ಲೇಖಿಸಿದ್ದರು. ಕಿಂಶುಕ್​ರವರ ಅನುಸಾರ ಬ್ರಿಟಿಷ್​ ಪ್ರಧಾನಿ ಭಾರತ ಪ್ರವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ನೆಹರೂರವರು ವಾಜಪೇಯಿಯವರನ್ನು ವಿಭಿನ್ನವಾಗಿ ಪರಿಚಯಿಸುತ್ತಾ "ಇವರನ್ನು ಭೇಟಿಯಾಗಿ, ಇವರು ವಿಪಕ್ಷದ ಉದಯೋನ್ಮುಖ ಯುವ ನಾಯಕ. ಇವರು ನನ್ನ ಬಗ್ಗೆ ಯಾವತ್ತೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ ನಾನು ಇವರನ್ನು ಭವಿಷ್ಯದ ಉಜ್ವಲ ನಾಯಕರಾಗಿ ಕಾಣುತ್ತೇನೆ" ಎಂದಿದ್ದರಂತೆ.ಇದೇ ಪುಸ್ತಕದಲ್ಲಿ 1977ರಲ್ಲಿ ನಡೆದ ಒಂದು ಘಟನೆಯನ್ನೂ ಉಲ್ಲೇಖಿಸಲಾಗಿದೆ. ಇದರ ಅನ್ವಯ 1977ರಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾದಾಗ ಕೆಲಸ ನಿರ್ವಹಿಸಲು ಸೌತ್​ ಬ್ಲಾಕ್​ನಲ್ಲಿದ್ದ ತನ್ನ ಕಚೇರಿಗೆ ತೆರಳಿದ್ದರು. ಈ ವೇಳೆ ಅಲ್ಲ ಹಾಕಲಾಗಿದ್ದ ನೆಹರೂರವರ ಫೋಟೋ ತೆಗೆದಿರುವುದು ಅವರ ಗಮನಿಸಿ, ಆ ಕೂಡಲೇ ಈ ಕುರಿತಾಗಿ ಅವರು ತಮ್ಮ ಕಾರ್ಯದರ್ಶಿಯಲ್ಲಿ ಚರ್ಚಿಸಿದರು. ಈ ವೇಳೆ ಕೆಲ ಅಧಿಕಾರಿಗಳು ನೆಹರೂರವರು ವಿಪಕ್ಷ ನಾಯಕರೆಂಬ ಕಾರಣದಿಂದ ಉದ್ದೇಶಪೂರಕವಾಗಿ ಆ ಫೋಟೋಗಳನ್ನು ಅಲ್ಲಿಂದ ತೆಗೆದಿಟ್ಟಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ವೇಳೆ ಆ ಪೋಟೋಗಳನ್ನು ಅದೇ ಸ್ಥಾನದಲ್ಲಿರಿಸುವಂತೆ ವಾಜಪೇಯಿ ಆದೇಶಿಸಿದ್ದರು.

ಇಂದಿರಾ ಗಾಂಧಿಯನ್ನು 'ದುರ್ಗೆ' ಎಂದಿದ್ದ ಅಜಾತ ಶತ್ರು:
Loading...

ಈ ಘಟನೆ 1971ರದ್ದಾಗಿದೆ, ಆಗಷ್ಟೇ ಪಾಕಿಸ್ತಾನ ಹಾಗೂ ಭಾರತದ ನಡುವಿನ ಯುದ್ಧ ಕೊನೆಗೊಂಡು ಬಾಂಗ್ಲಾದೇಶವೆಂಬ ಹೊಸ ರಾಷ್ಟ್ರ ಉದಯವಾಗಿತ್ತು. ಈ ಸಂದರ್ಭದಲ್ಲಿ ಅಟಲ್​ ಬಿಹಾರಿ ವಾಜಪೇಯಿಯವರು ವಿಪಕ್ಷ ನಾಯಕರಾಗಿದ್ದರು ಹಾಗೂ ಇಂದಿರಾ ಗಾಂಧಿ ಪ್ಎರಧಾನ ಮಂತ್ರಿಯಾಗಿದ್ದರು. ಈ ವೇಳೆ ವಾಜಪೇಯಿಯವರು ವಿಪಕ್ಷ ನಾಯಕರಾಗಿ ಒಂದು ಹೆಜ್ಜೆ ಮುಂದೆ ಹೋಗಿ ಇಂದಿತರಾ ಗಾಂಧಿಯನ್ನು 'ದುರ್ಗೆ' ಎಂದಿದ್ದರು. 1971ರ ಯುದ್ಧದಲ್ಲಿ ಪಾಕ್​ನ 90,368 ಸೈನಿಕರು ಹಾಗೂ ನಾಗರಿಕರು ಶರಣಾಗಿದ್ದರು.ಅಟಲ್​ ಬಿಹಾರಿ ವಾಜಪೇಯಿ ಸದನದಲ್ಲಿ ಮಾತನಾಡುತ್ತಾ ಯಾವ ರೀತಿ ಇಂದಿರಾ ಗಾಂಧಿಯವರು ಈ ಯುದ್ಧದಲ್ಲಿ ತಮ್ಮ ಪಾತ್ರ ನಿಭಾಯಿಸಿದ್ದಾರೋ ಅದು ನಿಜಕ್ಕೂ ಪ್ರಶಂಸನೀಯ. ಸದನದಲ್ಲಿ ಯುದ್ಧದ ಕುರಿತಾಗಿ ಚರ್ಚೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ವಾಜಪೇಯಿಯವರು ನಾವು ಚರ್ಚಿಸುವುದನ್ನು ಬಿಟ್ಟು ಇಂದಿರಾ ಗಾಂಧಿಯವರು ತೆಗೆದುಕೊಂಡ ನಿರ್ಧಾರದ ಬಗ್ಗೆ ಚರ್ಚಿಸಬೇಕು, ಅವರ ಪಾತ್ರ 'ದುರ್ಗೆ'ಗಿಂತ ಕಡಿಮೆ ಇರಲಿಲ್ಲ ಎಂದಿದ್ದರು.

ರಾಜೀವ್​ ಗಾಂಧಿಗೆ 'ಧನ್ಯವಾದ' ಎಂದಿದ್ದರು

1987ರಲ್ಲಿ ಅಟಲ್​ ಬಿಹಅರಿ ವಾಜಪೇಯಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಆರ್ಥಿಕ ಸಮಸ್ಯೆಯಿಂದಾಗಿ ದೂರದ ಅಮೆರಿಕಾಗೆ ಹೋಗಿ ಚಿಕಿತ್ಸೆ ಮಾಡಿಸಿಕೊಳ್ಳುವುದು ಕಷ್ಟವಾಗಿತ್ತು. ಆದರೆ ವಾಜಪೇಯಿಗಿದ್ದ ಸಮಸ್ಯೆಯ ಕುರಿತಾಗಿ ಅದ್ಯಾರೋ ಅಂದಿನ ಪ್ರಧಾನ ಮಂತ್ರಿ ರಾಜೀವ್​ ಗಾಂಧಿಯವರಿಗೆ ಮಾಹಿತಿ ನೀಡಿದ್ದರು. ಆ ಕೂಡಲೇ ರಾಜೀವ್​ ಗಾಂಧಿ, ವಾಜಪೇಯಿಯವರಿಗೆ ಕಚೇರಿಗೆ ಬರುವಂತೆ ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ವಿಶ್ವಸಂಸ್ಥೆ ಸಭೆಗೆ ನ್ಯೂಯಾರ್ಕ್​ಗೆ ತೆರಳಲಿರುವ ಪ್ರತಿನಿಧಿಗಳ ಹೆಸರಲ್ಲಿ ನಿಮ್ಮ ಹೆಸರನ್ನೂ ಸೇರಿಸುತ್ತಿದ್ದು, ಈ ಸಂದರ್ಭದ ಲಾಭ ಪಡೆದು ಅಲ್ಲಿ ಚಿಕಿತ್ಸೆ ಪಡೆಯಲು ವಾಜಪೇಯಿಗೆ ಸೂಚಿಸಿದ್ದರು.

ಪ್ರಖ್ಯಾತ ಪತ್ರಕರ್ತ ಕರಣ್ ಥಾಪರ್​ ಇತ್ತೀಚೆಗಷ್ಟೇ ಬಿಡುಗಡೆಗೊಂಡ ತಮ್ಮ ಪುಸ್ತಕ 'ದ ಡೆವಿಲ್ಸ್​ ಅಡ್ವೋಕೇಟ್​'ನಲ್ಲೂ 1991ರಲ್ಲಿ ರಾಜೀವ್​ ಗಾಂಧಿಯವರ ಹತ್ಯೆಯ ಬಳಿಕ, ಅವರನನ್ನು ನೆನಪಿಸಿಕೊಂಡು ಮಾತನಾಡಿದ್ದ ವಾಜಪೇಯಿಯವರು ಮೊದಲ ಬಾರಿ ಸಾರ್ವಜನಿಕ ಸಭೆಯೊಂದರಲ್ಲಿ "ನಾನು ನ್ಯೂಯಾರ್ಕ್​ ಹೋಗಿದ್ದೆರ ಇದೇ ಕಾರಣ ನಾನಿಂದು ಜೀವಂತವಾಗಿದ್ದೇನೆ" ಎಂದಿದ್ದರು. ವಾಸ್ತವವಾಗಿ ವಾಜಪೇಯಿ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ ಬಳಿಕ ಇಬ್ಬರೂ ನಾಯಕರು ಈ ವಿಚಾರವನ್ನು ಎಲ್ಲೂ ಹೇಳಿಕೊಂಡಿರಲಿಲ್ಲ. ಆದರೆ ವಾಜಪೇಯಿಯವರು ಪೋಸ್ಟ್​ಕಾರ್ಡ್​ ಬರೆದು ರಾಜೀವ್​ ಗಾಂಧಿಗೆ ಧನ್ಯವಾದ ತಿಳಿಸಿದ್ದರೆಂಬ ಮಾತುಗಳು ಕೇಳಿ ಬಂದಿದ್ದವು.

ವಿಪಕ್ಷ ನಾಯಕನನ್ನೇ ವಿಶ್ವಸಂಸ್ಥೆಗೆ ಕಳುಹಿಸಿದ್ದ ನರಸಿಂಹರಾವ್​!

1993ರಲ್ಲಿ ಜಿನೆವಾದಲ್ಲಿ ಮಾನವಾಧಿಕಾರ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಆಗ ಅಂದಿನ ಪ್ರಧಾನಿಯಾಗಿದ್ದ ಪಿವಿ ನರಸಿಂಹರಾವ್​ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಲು ವಿಪಕ್ಷ ನಾಯಕ ಅಟಲ್​ ಬಿಹಾರಿ ವಾಜಪೇಯಿಯವರನ್ನು ಕಳುಹಿಸಿದ್ದರು.ನರಸಿಂಹರಾವ್​ರವರ ಈ ನಿರ್ಧಾರದಿಂದ ದೇಶ ಮಾತ್ರವಲ್ಲಿ ವಿದೇಶೀ ನಾಯಕರೂ ಚಕಿತಗೊಂಡಿದ್ದರು. ವಾಸ್ತವವಾಗಿ 1977ರಲ್ಲಿ ಜನತಾ ಪಾರ್ಟಿಯ ಸರ್ಕಾರ ಅಧಿಕಾರಕ್ಕೆ ಬಂದು ವಾಜಪೇಯಿ ವಿದೇಶಾಂಗ ಸಚಿವರಾಗಿದ್ದಾಗ, ವಿಶ್ವಸಂಸ್ಥೆಯಲ್ಲಿ ಅವರು ಹಿಂದಿಯಲ್ಲಿ ಭಾಷಣ ಮಾಡಿದ್ದರು.ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದು ಅದೇ ಮೊದಲು. ವಾಜಪೇಯಿಯ ಈ ನಡೆ ನರಸಿಂಹರಾವ್​ರನ್ನು ಬಹಳಷ್ಟು ಪ್ರೇರೇಪಿಸಿತ್ತು, ಇದೇ ಕಾರಣದಿಂದ ಅವರು ವಾಜಪೇಯಿಯನ್ನು ವಿಶ್ವಸಂಸ್ಥೆಗೆ ಕಳುಹಿಸಿ ವಿಶ್ವವನ್ನೇ ಚಕಿತಗೊಳಿಸಿದ್ದರು.

ಮನಮೋಹನ್​ ಸಿಂಗ್​ರನ್ನು ಸಮಾಧಾನಪಡಿಸಲು ಬಂದಿದ್ದರು ವಾಜಪೇಯಿ!

ಪ್ರಸಿದ್ಧ ಅರ್ಥಶಾಸ್ತ್ರಜ್ಞ ಮನಮೋಹನ್​ ಸಿಂಗ್​ರನ್ನು ರಾಜಕೀಯಕ್ಕೆ ತಂದ ಶ್ರೇಯಸ್ಸು ಮಾಜಿ ಪ್ರಧಾನಿ ಪಿ. ವಿ ನರಸಿಂಹರಾವ್​ರವರಿಗೆ ಸಿಗುತ್ತದೆಯಾದರೂ, ಅವರಿಗೆ ರಾಜಕೀಯದ ಉದ್ದಗಲಗಳನ್ನು ಪರಿಚಯಿಸುವಲ್ಲಿ ಅಟಲ್​ ಬಿಹಾರಿ ವಾಜಪೇಯಿಯವರ ಪಾತ್ರವೂ ಬಹಳಷ್ಟಿದೆ ಎನ್ನಲಾಗುತ್ತದೆ. ನರಸಿಂಹರಾವ್​ ಕ್ಯಾಬಿನೆಟ್​ನಲ್ಲಿ ಹಣಕಾಸು ಸಚಿವರಾಗಿದ್ದ ಮನಮೋಹನ್​ ಸಿಂಗ್​ರವರು, ವಿಪಕ್ಷ ನಾಯಕರಾಗಿದ್ದ ಅಟಲ್​ ಬಿಹಾರಿ ವಾಜಪೇಯಿಯವರ ರಾಜಕೀಯ ದಾಳಿಯನ್ನೆರಿಸಬೇಕಾಗಿತ್ತು. ಇದು ಮನಮೋಹನ್​ ಸಿಂಗ್​ರನ್ನು ಅದೆಷ್ಟು ಕೋಪಗೊಳ್ಳುವಂತೆ ಮಾಡಿತ್ತೆಂದರೆ ಅವರು ಒಂದು ಬಾರಿ ರಾಜೀನಾಮೆ ನಿಡುವ ನಿರ್ಧಾರವನ್ನೂ ಮಾಡಿದ್ದರು.ಹೀಗಿರುವಾಗ ಅಂದು ನರಸಿಂಹ ರಾವ್​ ಖುದ್ದು ಅಟಲ್​ ಬಿಹಾರಿ ವಾಜಪೇಯಿಯವರನ್ನು ಭೇಟಿಯಾದರು ಹಾಗೂ ಮನಮೋಹನ್​ ಸಿಂಗ್​ರನ್ನು ಭೇಟಿಯಾಗಿ ತಿಳುವಳಿಕೆ ಹೇಳುವಂತೆ ಆಗ್ರಹಿಸಿದ್ದರು. ಅಲ್​ ಬಿಹಾರಿ ವಾಜಪೇಯಿ ಮನಮೋಹನ್​ ಸಿಂಗ್​ ಬಳಿ ತೆರಳಿ ಈ ವಿಚಾರವನ್ನು ವೈಯುಕ್ತಿಕವಾಗಿ ತೆಗೆದುಕೊಳ್ಳದಿರುವಂತೆ ಕೇಳಿಕೊಂಡರು. ಅಲ್ಲದೇ ತಾನು ಕೇವಲ ಓರ್ವ ವಿಪಕ್ಷ ನಾಯಕನಾಗಿ ಸರ್ಕಾರದ ಕಾರ್ಯ ವೈಖರಿಯ ಕುರಿತಾಗಿ ಪ್ರಶ್ನಿಸುತ್ತಿದ್ದೆ ಎಂಬುವುದನ್ನು ಸ್ಪಷ್ಟಪಡಿಸಿದ್ದರು. ಪ್ರಧಾನ ಮಂತ್ರಿಯಾಗಿ ಒಂದು ದಶಕ ಕಾರ್ಯ ನಿರ್ವಹಿಸಿದ್ದ ಮನಮೋಹನ್​ ಸಿಂಗ್​ರವರು ಸಂಸತ್ತಿನಲ್ಲಿದ್ದ ಎಲ್ಲಾ ಸಂಸದರ ಸಲಹೆ ಸೂಚನೆ ಹಾಗೂ ಅಭಿಪ್ರಾಯಗಳನ್ನು ಬಹಳಷ್ಟು ಸಮಾಧಾನ ಹಾಗೂ ಗಂಭೀರವಾಗಿ ಆಲಿಸಿದರು, ಆದರೆ ಈ ಕುರಿತಾಗಿ ಬಹಳ ಕಡಿಮೆ ಪ್ರತಿಕ್ರಿಯಿಸಿದರು. ಆದರೆ 2009ರ ಸಾರ್ವತ್ರಿಕ ಚುನಅವಣೆಯ ಸಂದರ್ಭದಲ್ಲಿ ತಮ್ಮ ವಿರುದ್ಧ ಕೇಳಿ ಬಂದಿದ್ದ ಆಕ್ರಮಣಕಅರಿ ಮಾತುಗಳಿಗೆ ಅವರು ತಿರುಗೇಟು ನೀಡಿದ್ದರು. ಅಂದು ಪ್ರಧಾನ ಮಂತ್ರಿ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿದ್ದ ಲಾಲ್​ ಕೃಷ್ಣ ಅಡ್ವಾಣಿಯವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮನಮೋಹನ್​ ಸಿಂಗ್​ರನ್ನು 'ದುರ್ಬಲ ಪ್ರಧಾನಮಂತ್ರಿ' eಎಂದು ಹಿಯಾಳಿಸುತ್ತಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಮನಮೋಹನ್​ ಸಿಂಗ್​ "ಕಾರ್ಗಿಲ್​ ಯುದ್ಧದ ಬಿಸಿಗೆ 'ಉಕ್ಕಿನ ಮನುಷ್ಯ' ತಕ್ಷಣವೇ ಕರಗಿದರು' ಎಂದಿದ್ದರು. ಅಟಲ್​ ಬಿಹಾರಿ ವಾಜಪೇಯಿ ಸರ್ಕಾರವಿದ್ದಾಗ ಗೃಹ ಮಂತ್ರಿಯಾಗಿದ್ದ ಅಡ್ವಾಣಿಯವರನ್ನು ಬಿಜೆಪಿಯು ಅಂದು 'ಉಕ್ಕಿನ ಮನುಷ್ಯ' ಎಂದೇ ಕರೆಯುತ್ತಿದ್ದರು.
First published:August 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ