Atal Bihari Vajpayee: ಅಟಲ್ ಬಿಹಾರಿ ವಾಜಪೇಯಿಗೆ ಅಜಾತಶತ್ರು ಎಂಬ ಬಿರುದು ಬಂದಿದ್ದೇಗೆ?

Atal Bihari Vajpayee Death Anniversary: ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ 3 ನೇ ವರ್ಷದ ಪುಣ್ಯತಿಥಿ ಅಂಗವಾಗಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪಾಧ್ಯಕ್ಷ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ದೆಹಲಿಯಲ್ಲಿರುವ 'ಸದೈವ್ ಅಟಲ್' ಗೆ ಭೇಟಿ ನೀಡಿ ಶ್ರೀಯುತ ಅಟಲ್ ಅವರಿಗೆ ಗೌರವ ಸಲ್ಲಿಸಿದರು.

ಅಟಲ್ ಬಿಹಾರಿ ವಾಜಪೇಯಿ

ಅಟಲ್ ಬಿಹಾರಿ ವಾಜಪೇಯಿ

  • Share this:
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರ (Atal Bihari Vajpayee) 3 ನೇ ವರ್ಷದ ಪುಣ್ಯತಿಥಿ ಅಂಗವಾಗಿ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu), ಉಪಾಧ್ಯಕ್ಷ ಜಗದೀಪ್ ಧಂಖರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ದೆಹಲಿಯಲ್ಲಿರುವ 'ಸದೈವ್ ಅಟಲ್' ಗೆ ಭೇಟಿ ನೀಡಲು ಅಟಲ್ ಅವರಿಗೆ ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಸಭೆಯ ಸಭಾನಾಯಕ ಪಿಯೂಷ್ ಗೋಯಲ್ ಅವರು ಭಾರತ ರತ್ನ ವಾಜಪೇಯಿ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಹಾಗಾದರೆ ವಾಜಪೇಯಿ ಅವರಿಗೆ ಅಜಾತಶತ್ರು ಎಂಬ ಬಿರುದು ಬಂದಿದ್ದೇಗೆ? ಅವರ ಜೀವನ ಹೇಗಿತ್ತು? ಇಲ್ಲಿದೆ ವಿವರ

ವಾಜಪೇಯಿಯವರ ವ್ಯಕ್ತಿತ್ವ, ಪ್ರೀತಿಯ ಸ್ವಭಾವ, ಹಾಸ್ಯಪ್ರಜ್ಞೆಗೆ ಹೆಸರುವಾಸಿಯಾದವರು. ಅಜಾತ ಶತ್ರು ಎಂದೇ ಖ್ಯಾತರಾದವರು. ವಾಜಪೇಯಿ ಕುರಿತು ಇನ್ನಷ್ಟು ಆಸಕ್ತಿಕರ ಅಂಶಗಳನ್ನು ತಿಳಿದುಕೊಳ್ಳೋಣ.

ವಾಜಪೇಯಿಯವರ ಸ್ಮರಣಾರ್ಥ ನಿರ್ಮಿಸಲಾದ ಸದೈವ್ ಅಟಲ್ ಸ್ಮಾರಕ
ವಾಜಪೇಯಿಯವರ ಸ್ಮರಣಾರ್ಥ ಸದೈವ್ ಅಟಲ್ ಸ್ಮಾರಕವನ್ನು ನಿರ್ಮಿಸಲಾಗಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿಯವರು ಆಗಸ್ಟ್ 16, 2018 ರಂದು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ಆಸ್ಪತ್ರೆಯಲ್ಲಿ ನಿಧನರಾದರು. ವಾಜಪೇಯಿ ಅವರಿಗೆ 2015 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಲಾಯಿತು.

ತಮ್ಮ ಸೋಲಿನಲ್ಲೂ ನಕ್ಕ ವಾಜಪೇಯಿ ಇತರರಿಗೆ ಮಾದರಿ ಏಕೆ?
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ಪ್ರಸಿದ್ದ ಕಥೆಗಳಿವೆ. ತಮ್ಮ ಸೋಲಿನಲ್ಲೂ ನಕ್ಕು ಸೋಲೇ ಗೆಲುವಿನ ಸೋಪಾನ ಎಂಬ ಉಪಖ್ಯಾನವನ್ನು ನಿಜಗೊಳಿಸಿದ ಅಜಾತ ಶತ್ರು ಇವರು. 1984 ರ ಲೋಕ ಸಭೆಯ ಚುನಾವಣೆಯ ಸಮಯದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಅಟಲ್ ಅವರು ಗ್ವಾಲಿಯರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಮಾಧವರಾಯ್ ಸಿಂಧಿಯಾ ಅವರೊಂದಿಗೆ ಸ್ಪರ್ಧಿಸಿದ್ದರು.

ಇದನ್ನೂ ಓದಿ: Explained: ಪಂಜಾಬ್, ಬಂಗಾಳದ 1947ರ ಗಡಿ ಆಯೋಗದ ತೀರ್ಪು ಭಾರತಕ್ಕೆ ಸವಾಲಾಗಿದ್ದು ಹೇಗೆ?

ಚುನಾವಣೆಯಲ್ಲಿ ಅಟಲ್ ಸೋತರೂ ಸೋತ ದುಃಖ ಅವರಲ್ಲಿ ಒಂದಿನಿತೂ ಇಲ್ಲದಂತೆ ಬಾಯ್ತುಂಬಾ ನಕ್ಕರು. ಈ ನಗುವಿಗೆ ಕಾರಣವೇನು ಎಂದು ಅಟಲ್ ಅವರನ್ನು ಪ್ರಶ್ನಿಸಿದಾಗ, ನನ್ನ ಸೋಲಿಗೆ ನಾನು ಪಶ್ಚತ್ತಾಪ ಪಡುತ್ತಿಲ್ಲ. ಏಕೆಂದರೆ ತಾಯಿ-ಮಗನ ಬಂಡಾಯವು ಬೀದಿಗೆ ಬರುವುದನ್ನು ತಪ್ಪಿಸಿದ್ದೇನೆ. ಗ್ವಾಲಿಯರ್‌ನಿಂದ ನಾನು ಸ್ಪರ್ಧಿಸದೇ ಇದ್ದಿದ್ದರೆ ಮಾಧವರಾವ್ ಸಿಂಧಿಯಾ ವಿರುದ್ಧ ಅವರ ತಾಯಿ ರಾಜಮಾತೆ ಸ್ಪರ್ಧಿಸುತ್ತಿದ್ದರು ಹಾಗಾಗುವುದು ನನಗೆ ಇಷ್ಟವಿರಲಿಲ್ಲ ಎಂದು ಅಟಲ್ ತಿಳಿಸಿದರು.

ಧರ್ಮಪುತ್ರ ಅಟಲ್ ಬಿಹಾರಿ ವಾಜಪೇಯಿ ಎಂದು ಏಕೆ ಕರೆಯಲಾಗಿದೆ?
ರಾಜಮಾತೆಯವರು ಅಟಲ್ ಅವರನ್ನು ಧರ್ಮಪುತ್ರ ಎಂದು ಪರಿಗಣಿಸಿದ್ದಾರೆ. 2005 ರ ಗ್ವಾಲಿಯರ್ ಸೋಲಿನ ಕುರಿತು ಮತ್ತೊಮ್ಮೆ ಪ್ರಸ್ತಾಪಿಸಿದ ಅಟಲ್ ಜೀಯವರು, ಗ್ವಾಲಿಯರ್‌ನ ನನ್ನ ಸೋಲಿನ ಹಿಂದೆ ಇತಿಹಾಸವೊಂದು ಅಡಗಿದೆ. ಈ ಇತಿಹಾಸ ನನ್ನ ಜೊತೆಗೇ ನಿರ್ಗಮಿಸುತ್ತದೆ ಎಂಬುದಾಗಿ ಸಾಹಿತ್ಯ ಸಭೆಯಲ್ಲಿ ಒಂದೊಮ್ಮೆ ತಿಳಿಸಿದ್ದರು.

ಇದನ್ನೂ ಓದಿ:  India@75: ಇವರೇ ನೋಡಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ 7 ವಿದೇಶಿಯರು

ವಾಸ್ತವವಾಗಿ, ವಿಜಯ ರಾಜೇ ಸಿಂಧಿಯಾ, ಗ್ವಾಲಿಯರ್‌ನ ಸಿಂಧಿಯಾ ಘರಾನಾದ ರಾಜಮಾತೆ ಮತ್ತು ಅಟಲ್ ಬಿಹಾರಿ ವಾಜಪೇಯಿ ಸಂಘದ ಕಾಲದಿಂದಲೂ ಜೊತೆಯಾಗಿ ಕೆಲಸ ಮಾಡಿದವರು. ವಿಜಯ ರಾಜೇ ಸಿಂಧಿಯಾ ಅಟಲ್‌ಜಿಯನ್ನು ತನ್ನ ಧರ್ಮ ಪುತ್ರನೆಂದೇ ಉಲ್ಲೇಖಿಸಿದ್ದಾರೆ. ಈ ಕಾರಣದಿಂದಾಗಿ ವಾಜಪೇಯಿ ರಾಜಮಾತೆ ಹಾಗೂ ಮಾಧವರಾವ್ ಸಿಂಧಿಯಾ ಅವರ ನಡುವಿನ ಜಗಳ ನನಗೆ ಇಷ್ಟವಿಲ್ಲ ಎಂದು ತಿಳಿಸಿದ್ದರು ಎಂಬ ಮಾತನ್ನು ಪುಷ್ಟೀಕರಿಸುತ್ತದೆ.
Published by:Ashwini Prabhu
First published: