ಪಾಕಿಸ್ತಾನದಲ್ಲಿ ಹಾಲಾಹಲ: 140 ರೂಪಾಯಿಗೆ ಏರಿದ ಹಾಲಿನ ಬೆಲೆ; ಪೆಟ್ರೋಲ್​ಗಿಂತಲೂ ಹಾಲು ದುಬಾರಿ

ಪಾಕಿಸ್ತಾನದಲ್ಲಿ 94 ರೂಪಾಯಿ ಇರುವ ಹಾಲಿನ ಬೆಲೆ ಮೊಹರಂ ದಿನದಂದು ಬರೋಬ್ಬರಿ 140 ರೂಪಾಯಿಗೆ ಏರಿ ಹೊಸ ದಾಖಲೆ ಕಂಡಿದೆ.

Vijayasarthy SN | news18
Updated:September 11, 2019, 2:26 PM IST
ಪಾಕಿಸ್ತಾನದಲ್ಲಿ ಹಾಲಾಹಲ: 140 ರೂಪಾಯಿಗೆ ಏರಿದ ಹಾಲಿನ ಬೆಲೆ; ಪೆಟ್ರೋಲ್​ಗಿಂತಲೂ ಹಾಲು ದುಬಾರಿ
ಹಾಲಿನ ಕ್ಯಾನ್​ನ ಪ್ರಾತಿನಿಧಿಕ ಚಿತ್ರ
  • News18
  • Last Updated: September 11, 2019, 2:26 PM IST
  • Share this:
ಕರಾಚಿ(ಸೆ. 11): ಭಾರತದಲ್ಲಿ ಹಬ್ಬದ ದಿನದಂದು ಹೂವು ಹಣ್ಣುಗಳ ಬೆಲೆ ಗಗನ ಮುಟ್ಟುವಂತೆ ಪಾಕಿಸ್ತಾನದಲ್ಲಿ ಮೊಹರಂ ಹಬ್ಬದಂದು ಹಾಲು ಪೆಟ್ರೋಲ್​ಗಿಂತಲೂ ತುಟ್ಟಿಯಾಗಿದೆ. ಮೊಹರಂ ದಿನದಂದು ಪಾಕಿಸ್ತಾನದಲ್ಲಿ ಹಾಲಿನ ಬೆಲೆ ಹೊಸ ದಾಖಲೆ ಮಟ್ಟಕ್ಕೆ ತಲುಪಿದೆ. ನಿನ್ನೆ ಪಾಕಿಸ್ತಾನದ ಕೆಲವೆಡೆ ಹಾಲಿನ ಬೆಲೆ 140 ರೂಪಾಯಿ(ಪಾಕ್ ಕರೆನ್ಸಿ) ಮುಟ್ಟಿತ್ತು ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಂದರೆ ಭಾರತೀಯ ರೂಪಾಯಿ ಪ್ರಕಾರ ಅಲ್ಲಿ ಒಂದು ಲೀಟರ್ ಹಾಲು ಸುಮಾರು 64 ರೂ ತಲುಪಿದಂತಾಗಿದೆ.

ಸಿಂಧ್ ಪ್ರಾಂತ್ಯದಲ್ಲೇ ಹಾಲಿನ ಬೆಲೆ ಗರಿಷ್ಠ ಮಟ್ಟಕ್ಕೆ ಹೋಗಿತ್ತೆನ್ನಲಾಗಿದೆ. ಕರಾಚಿ ನಗರದ ಹಲವೆಡೆ ಒಂದು ಲೀಟರ್ ಹಾಲು 120-140 ರೂಪಾಯಿಗೆ ಮಾರಾಟವಾಗಿದೆಯಂತೆ.

ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 113 ರೂಪಾಯಿ (ಸುಮಾರು 51 ಭಾರತೀಯ ರೂ) ಮತ್ತು ಡೀಸೆಲ್ ಬೆಲೆ 91 ರೂಪಾಯಿ (ಸುಮಾರು 41 ಭಾರತೀಯ ರೂ) ಇದೆ.

ಇದನ್ನೂ ಓದಿ: ಭಾರತಕ್ಕೆ ನುಸುಳಲು ಅಲ್-ಬದರ್​ನ 45 ಉಗ್ರರು ಸಜ್ಜು: ಕಾಶ್ಮೀರದಲ್ಲಿ ಹೈ ಅಲರ್ಟ್

ಮೊಹರಂ ಹಬ್ಬದಂದು ಹಾಲಿಗೆ ವಿಪರೀತ ಬೇಡಿಕೆ ಇರುತ್ತದೆ. ಭಾರತದಲ್ಲಿ ರಾಮನವಮಿ ಹಬ್ಬದ ಪ್ರಯುಕ್ತ ರಸ್ತೆ ರಸ್ತೆಗಳಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ಕೊಡುವಂತೆ ಮೊಹರಂ ಹಬ್ಬದಂದು ನಡೆಯುವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಜನರಿಗಾಗಿ ಹಲವು ಕಡೆ ಹಾಲು, ಪಾನಕ, ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಕರಾಚಿಯಲ್ಲಿ ಈ ಬಾರಿ ಅತೀ ಹೆಚ್ಚು ಸ್ಥಳಗಳಲ್ಲಿ ಈ ವ್ಯವಸ್ಥೆ ಮಾಡಲಾಗಿತ್ತೆನ್ನಲಾಗಿದೆ. ಹೀಗಾಗಿ, ಹಾಲಿಗೆ ವಿಪರೀತ ಬೇಡಿಕೆ ಬಂದು ಬೆಲೆ ಗಗನಕ್ಕೇರುವಂತಾಯಿತು ಎಂದು ಅಲ್ಲಿಯ ಅಧಿಕಾರಿಗಳು ಹೇಳುತ್ತಾರೆ.

ಪಾಕಿಸ್ತಾನದಲ್ಲಿ ಮಾಮೂಲಿಯ ದಿನಗಳಲ್ಲಿ ಹಾಲಿನ ಬೆಲೆ ಲೀಟರ್​ಗೆ 94 ರೂ ಇದೆ. ಭಾರತೀಯ ರೂಪಾಯಿ ಪ್ರಕಾರ ಅದರ ಬೆಲೆ 43 ರೂ ಇರುತ್ತದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading