ಶ್ರೀನಗರದಲ್ಲಿ ಕೇಂದ್ರ ಮೀಸಲು ಭದ್ರತಾ ಪಡೆಯ ಮೇಲೆ ಗ್ರನೈಡ್ ಸ್ಫೋಟಿಸಿದ ಉಗ್ರರು; 6 ಸೈನಿಕರಿಗೆ ಗಾಯ

ಸಿಆರ್​ಪಿಎಫ್​ನ 144ನೇ ಬೆಟಾಲಿಯನ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

HR Ramesh | news18-kannada
Updated:October 26, 2019, 8:21 PM IST
ಶ್ರೀನಗರದಲ್ಲಿ ಕೇಂದ್ರ ಮೀಸಲು ಭದ್ರತಾ ಪಡೆಯ ಮೇಲೆ ಗ್ರನೈಡ್ ಸ್ಫೋಟಿಸಿದ ಉಗ್ರರು; 6 ಸೈನಿಕರಿಗೆ ಗಾಯ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ: ಶ್ರೀನಗರದ ಕರಣ್ ನಗರದಲ್ಲಿ ಶನಿವಾರ ಸಂಜೆ ಉಗ್ರರು ಕೇಂದ್ರ ಮೀಸಲು ಪಡೆಯ (ಸಿಆರ್​ಪಿಎಫ್​) ಮೇಲೆ ಸಿಡಿಸಿದ ಗ್ರನೈಡ್​ ಹಾಗೂ ಗುಂಡಿನ ದಾಳಿ ನಡೆಸಿದ ಪರಿಣಾಮ ಆರು ಮಂದಿ ಸೈನಿಕರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಆರ್​ಪಿಎಫ್​ನ 144ನೇ ಬೆಟಾಲಿಯನ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆ 6.50ರ ಸಮಯದಲ್ಲಿ ಚೆಕ್​ಪಾಯಿಂಟ್​ ಬಳಿ ಸಿಆರ್​ಪಿಎಫ್​ ತಂಡದ ಮೇಲೆ ಈ ದಾಳಿ ನಡೆದಿದೆ. ಗ್ರನೈಡ್ ಸ್ಫೋಟದಿಂದ ಸುತ್ತಮುತ್ತಲ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಉಗ್ರರ ದಾಳಿಗೆ ಭದ್ರತಾ ಪಡೆಯ ಸೈನಿಕರು ಪ್ರತಿದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಇಬ್ಬರು ಟ್ರಕ್​ ಚಾಲಕರು ಬಲಿ, ಮತ್ತೊಬ್ಬರ ಸ್ಥಿತಿ ಗಂಭೀರ

First published: October 26, 2019, 8:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading