Rape Cases: ದೇಶದಲ್ಲಿ ಪ್ರತಿನಿತ್ಯ 90 ಅಪ್ರಾಪ್ತ ಬಾಲಕಿಯರ ಅತ್ಯಾಚಾರವಾಗ್ತಿದೆಯಂತೆ! ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ?

ದೇಶದಲ್ಲಿ ಪ್ರತಿದಿನ ಕನಿಷ್ಠ 90 ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೀತಿದ್ಯಂತೆ. ಇದರಲ್ಲಿ ಮಧ್ಯಪ್ರದೇಶವು ಅಗ್ರಸ್ಥಾನದಲ್ಲಿದೆ. ಹಾಗಾದರೆ ನಮ್ಮ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ನೋಡೋಣ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಂಗಳೂರು: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಅಂಕಿ-ಅಂಶಗಳ ಪ್ರಕಾರ ಕಳೆದ ವರ್ಷ ದೇಶದಲ್ಲಿ ಪ್ರತಿದಿನ ಕನಿಷ್ಠ 90 ಅಪ್ರಾಪ್ತ ಬಾಲಕಿಯರ (Minor Girls) ಮೇಲೆ ಅತ್ಯಾಚಾರ (Rape) ನಡೆದಿದೆ. ಇವುಗಳು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿಯಲ್ಲಿ (POCSO Act) ಸೆಕ್ಷನ್ 4 (ಸಾಮಾನ್ಯ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಮತ್ತು 6 (ಉಗ್ರವಾದ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಅಡಿಯಲ್ಲಿ ದಾಖಲಿಸಲಾದ ಪ್ರಕರಣಗಳಾಗಿವೆ. ಎನ್‌ಸಿಆರ್‌ಬಿ (NCRB) ಪ್ರಕಾರ, 2021 ರಲ್ಲಿ ದೇಶಾದ್ಯಂತ 33,186 ಅಪ್ರಾಪ್ತ ಬಾಲಕಿಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ.

ಇದರಲ್ಲಿ ಮಧ್ಯಪ್ರದೇಶವು ಅಗ್ರಸ್ಥಾನದಲ್ಲಿದೆ., ಮಹಾರಾಷ್ಟ್ರದಲ್ಲಿ ಒಟ್ಟು 3,522 ಅಪ್ರಾಪ್ತ ಬಾಲಕಿಯರ ಲೈಂಗಿಕ ದೌರ್ಜನ್ಯ ವರದಿಯಾಗಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು (3,435), ಉತ್ತರ ಪ್ರದೇಶ (2,749) ಹಾಗೂ 2,093 ಪ್ರಕರಣಗಳೊಂದಿಗೆ ಕರ್ನಾಟಕ ಐದನೇ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು 
2021ರಲ್ಲಿ ಕರ್ನಾಟಕದಲ್ಲಿ ಪ್ರತಿದಿನ ಕನಿಷ್ಠ ಐವರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ. ದೇಶದಲ್ಲಿ ಕಳೆದ ವರ್ಷ ಒಟ್ಟು 312 ಅಪ್ರಾಪ್ತ ಬಾಲಕರ ಮೇಲೆ ಅತ್ಯಾಚಾರ ನಡೆದಿದೆ.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಕರಣಗಳು (96) ಕಂಡುಬಂದಿವೆ. ಇನ್ನು ಕೇರಳದಲ್ಲಿ (74), ಹರಿಯಾಣ (61), ತಮಿಳುನಾಡು (34), ಪಶ್ಚಿಮ ಬಂಗಾಳ (22) ಮತ್ತು ಉತ್ತರಾಖಂಡ್ (8) ಹೀಗೆ ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

ಇದನ್ನೂ ಓದಿ: Explained: ಅಷ್ಟೊಂದು ಹಿಂಸೆಯಾಗ್ತಿದ್ರೂ ವಿಕಲಚೇತನ ಮಹಿಳೆಯರು ಎಲ್ಲಾ ನೋವು ಸಹಿಸಿಕೊಳ್ತಿರೋದೇಕೆ?

ಪೋಕ್ಸೋ ಕಾಯಿದೆಯಲ್ಲಿ ಯಾವೆಲ್ಲ ಪ್ರಕರಣಗಳನ್ನು ಪರಿಗಣಿಸಲಾಗಿದೆ
ಕರ್ನಾಟಕದಲ್ಲಿ ನಾಲ್ವರು ಬಾಲಕರ ಮೇಲೆ ಅತ್ಯಾಚಾರ ನಡೆದಿದೆ ಎಂದು ವರದಿ ಆಗಿದೆ. ಅಪ್ರಾಪ್ತ ಬಾಲಕಿಯರು ಮನೆ ಬಿಟ್ಟು ಓಡಿ ಹೋಗುವಿಕೆ ಮತ್ತು ಬಾಲ್ಯವಿವಾಹದ ಪ್ರಕರಣಗಳನ್ನು ಪೋಕ್ಸೋ ಪ್ರಕರಣಗಳೆಂದು ಪರಿಗಣಿಸಲಾಗುತ್ತದೆ.

ಸಂತ್ರಸ್ತರ ಪರಿಚಿತರಿಂದಲೇ ನಡೀತಿದೆ ಹೆಚ್ಚಿನ ಅತ್ಯಾಚಾರಗಳು
"ಪೋಕ್ಸೋ ಪ್ರಕರಣಗಳಲ್ಲಿ ದಾಖಲಾಗುವ 99 % ಕ್ಕಿಂತ ಹೆಚ್ಚು ಆರೋಪಿಗಳು ಸಂತ್ರಸ್ತರಿಗೆ ಗೊತ್ತಿರೋರೇ ಆಗಿರುತ್ತಾರೆ. ಸುಮಾರು 1.22% ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತರಿಗೆ ಅಪರಿಚಿತರಾಗಿದ್ದಾರೆ. ಇನ್ನುಳಿದಂತೆ 99 % ಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತರಿಗೆ ಪರಿಚಿತರಾಗಿದ್ದಾರೆ.

ಈ ಮಧ್ಯೆ ಅತ್ಯಾಚಾರ ಪ್ರಕರಣಗಳಲ್ಲಿ ಬಂಧಿತರಾದ ಸುಮಾರು 1% ಆರೋಪಿಗಳು ಸಂತ್ರಸ್ತರಿಗೆ ಪರಿಚಯವಿರುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಆತ್ಯಾಚಾರ ಆರೋಪಿಗಳು ಕುಟುಂಬದ ಸದಸ್ಯರು, ಸ್ನೇಹಿತರು, ನೆರೆಹೊರೆ ಮತ್ತು ಸಂಬಂಧಿಕರೇ ಆಗಿರುತ್ತಾರೆ” ಎಂದು ಅಧಿಕಾರಿ ಹೇಳಿದರು.

ಇದನ್ನೂ ಓದಿ:  Explainer: ಇಡೀ ಕುಟುಂಬದ ಹತ್ಯೆ ಬಳಿಕ ಗ್ಯಾಂಗ್​ರೇಪ್, ದೀರ್ಘಕಾಲದ ಹೋರಾಡಿದ್ರೂ ದೋಷಿಗಳ ಬಿಡುಗಡೆ: ಯಾರು ಈ ಬಿಲ್ಕಿಸ್​ ಬಾನೊ?

ಭಾರತದಲ್ಲಿ ಒಂದು ಗಂಟೆಗೆ 4 ಅತ್ಯಾಚಾರಗಳು ನಡೀತಿದ್ಯಂತೆ!
ಕೊರೋನಾ ಲಾಕ್ ಡೌನ್ ನಂತರ ಕಳ್ಳತನ, ದರೋಡೆ ಪ್ರಕರಣಗಳು ಕಡಿಮೆಯಾಗಿವೆ. ಆದರೆ, ಮಹಿಳೆಯರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳು ಮಾತ್ರ ಹೆಚ್ಚುತ್ತಲೇ ಇವೆ. 2019-20 ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಯ ಅಂಕಿಅಂಶಗಳ ಪ್ರಕಾರ ಗಂಟೆಯೊಂದಕ್ಕೆ 4 ಅತ್ಯಾಚಾರಗಳು ಭಾರತದಲ್ಲಿ ಜರುಗುತ್ತವೆ.

ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಅತ್ಯಾಚಾರಗಳು ನಡೆಯುವ 10 ದೇಶಗಳ ಪಟ್ಟಿಯಲ್ಲಿ ಭಾರತದ ಹೆಸರಿಲ್ಲ ಎಂಬ ಸಮಾಧಾನವನ್ನು ಬಿಟ್ಟರೆ ಇಲ್ಲಿ ಜ್ವಲಂತ ಪ್ರಕರಣಗಳಿಗೇನೂ ಕಡಿಮೆ ಇಲ್ಲ.

ನಾಲ್ಕನೇ ಅತಿದೊಡ್ಡ ಅಪರಾಧ
ಭಾರತೀಯ ಕಾನೂನು ಸುವ್ಯವಸ್ಥೆ ಅಡಿಯಲ್ಲಿ ಗುರುತಿಸಿಕೊಂಡಿರುವ ಅಪರಾಧಗಳ ಪಟ್ಟಿಯಲ್ಲಿ ನಾಲ್ಕನೇ ಅತಿದೊಡ್ಡ ಅಪರಾಧ ಎನಿಸಿಕೊಂಡಿರುವ ಈ ಕೃತ್ಯ ಕೊಲೆಗಿಂತಲೂ ಹೀನಾಯವಾದ ಅಪರಾಧ. ಕೊಲೆಯಾದವರು ಒಮ್ಮೆಗೇ ದೇಹ ತೊರೆದುಬಿಡಬಹುದು. ಆದರೆ ಅತ್ಯಾಚಾರಕ್ಕೊಳಗಾದವರು ದಿನವೂ ಇಂಚಿಂಚು ಸತ್ತಂತೆ ಅನುಭವಿಸುವ ನರಕ ಯಾತನೆ ಅನುಭವಿಸುವವರಿಗೇ ಗೊತ್ತು.

ಬೇರೆ ದೇಶಗಳಾದ ಚೀನಾ ಹಾಗೂ ಇರಾನ್‌ ದೇಶಗಳಲ್ಲಿ ಅತ್ಯಾಚಾರ ಎಸಗಿದ ಆರೋಪಿಗೆ ನೇರ ಗಲ್ಲುಶಿಕ್ಷೆ ವಿಧಿಸುವ ಕಾನೂನಿದೆ. ಆದರೆ ನಮ್ಮ ದೇಶದಲ್ಲಿ ಇದುವರೆಗೂ ಅಂಕಿಅಂಶಗಳ ಪ್ರಕಾರ ಕೇವಲ ಆರು ಜನರಿಗೆ ಮಾತ್ರ ಗಲ್ಲುಶಿಕ್ಷೆಯಾಗಿದೆ.

ಇದನ್ನೂ ಓದಿ: Bilkis Bano Case: ಬಿಲ್ಕಿಸ್ ಬಾನೊ ರೇಪ್​ ಕೇಸ್: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ದೋಷಿಗಳನ್ನು ಬಿಡುಗಡೆಗೊಳಿಸಿದ ಸರ್ಕಾರ!

ಗಂಡಿನ ಸಭ್ಯತೆ ಹಾಗೂ ಸಂಯಮವಲ್ಲದೇ, ಪರಸ್ಪರ ಗೌರವ ಪ್ರೀತಿ ಅಭಿಮಾನಗಳಲ್ಲದೇ ಅತ್ಯಾಚಾರವೆಸಗಬಲ್ಲ ದುಷ್ಟ ಪ್ರವೃತ್ತಿಯ ಬಗೆಗೆ ಗಂಡಿಗೇ ಮೂಡಬಹುದಾದ ಅಸಹ್ಯದಿಂದಲ್ಲದೇ ಕೇವಲ ಶಿಕ್ಷೆ ಅಥವಾ ಬೇರೆ ನೂರು ಮಾರ್ಗಗಳನ್ನು ಅನುಸರಿಸಿದರೂ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಇದಕ್ಕೆ ಸೂಕ್ತ ಪರಿಹಾರವನ್ನು ನಮ್ಮ ಸಮಾಜ ನೀಡಬೇಕಾದ ಅನಿವಾರ್ಯತೆ ಖಂಡಿತ ಇದೆ.
Published by:Ashwini Prabhu
First published: