ಕೊರೋನಾ(Corona)ದಿಂದ ಸ್ಥಗಿತಕೊಂಡಿದ್ದ ಕಾರ್ಯಕ್ರಮಗಳೆಲ್ಲ ಮತ್ತೆ ಆರಂಭಗೊಳ್ಳುತ್ತಿದೆ. ಮನೆಯಲ್ಲೇ ಕೂತು ಬೋರ್ ಆಗಿದ್ದ ಜನರು ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಅದ್ಧೂರಿಯಾಗಿ ಆರಂಭಗಗೊಂಡ ಅಮೆರಿಕ ಅಸ್ಟ್ರೋವರ್ಲ್ಡ್ ಮ್ಯೂಸಿಕ್ ಫೆಸ್ಟಿವಲ್( US Astro World Music Fest) ಕಾರ್ಯಕ್ರಮದ ಮೊದಲ ದಿನವೇ ಅವಘಡ ಸಂಭವಿಸಿದೆ. ಕಾರ್ಯಕ್ರಮ ಆರಂಭಗೊಂಡ ಕೆಲ ಹೊತ್ತಲ್ಲೇ ಕಾಲ್ತುಳಿತಕ್ಕೆ(Stampede) 8 ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ. ಟೆಕ್ಸಾಸ್(Texas)ನ ಎನ್ಜಿಆರ್(NGR) ಪಾರ್ಕ್ನಲ್ಲಿ 'ಆಸ್ಟ್ರೊವರ್ಲ್ಡ್' ಹೆಸರಿನ ಮ್ಯೂಸಿಕ್ ಫೆಸ್ಟ್ ಆಯೋಜಿಸಲಾಗಿತ್ತು. ಈ ಫೆಸ್ಟ್ಗೆ ನಿರೀಕ್ಷೆಗಿಂತಲೂ ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು(Fans) ಆಗಮಿಸಿದ್ದರು. ಹೀಗಾಗಿ ಭಾರಿ ನೂಕು ನುಗ್ಗಲು ಉಂಟಾಗಿತ್ತು. ಬಳಿಕ ಸ್ಟೇಜ್ಗೆ ಹತ್ತಿರದಲ್ಲಿದ್ದ ಅಭಿಮಾನಿಗಳ ಮೇಲೆ ಒತ್ತಡ ಹೆಚ್ಚಾಗಿ ಎಂಟು ಮಂದಿ ಮೃತಪಟ್ಟಿದ್ದಾರೆ. 17ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಕ ಟ್ರಾವಿಸ್ ಸ್ಕಾಟ್ ಕಾರ್ಯಕ್ರಮದ ವೇಳೆ ಅವಘಡ
ಖ್ಯಾತ ಗಾಯಕ ಟ್ರಾವಿಸ್ ಸ್ಕಾಟ್ ಕಾರ್ಯಕ್ರಮ ನಡೆಸಿಕೊಡುತ್ತಿರುವ ವೇಳೆ ನೂಕು ನುಗ್ಗಲು ಸಂಭವಿಸಿದೆ. ನೂಕು ನುಗ್ಗಲಿನಿಂದ ವೇದಿಕೆ ಹತ್ತಿರದಲ್ಲಿದ್ದ ಹಲವರು ಎದೋ ನೋವಿನಿಂದ ಕುಸಿದು ಬಿದ್ದಿದ್ದಾರೆ. ಇದೇ ವೇಳೆ ಆತಂಕಗೊಂಡ ಜನ ದಿಕ್ಕುಪಾಲಾಗಿ ಕಾರ್ಯಕ್ರಮದಿಂದ ಹೊರಹೋಗಲು ಯತ್ನಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ.ಈ ಸಂಗೀತ ಕಾರ್ಯಕ್ರಮದಲ್ಲಿ 50,000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಕೆಲವರು ವೇದಿಕ ಹತ್ತಿರ ತಮ್ಮ ನೆಚ್ಚಿನ ಗಾಯಕನ ಹಾಡನ್ನು ಕೇಳುತ್ತಾ ಎಂಜಾಯ್ ಮಾಡುತ್ತಿದ್ದರು. ಇದ್ದಕ್ಕಿದ್ದ ಹಾಗೇ ಎದೆನೋವಿನಿಂದ ಕೆಲವರು ಕುಸಿದುಬಿದಿದ್ದಾರೆ. ಮೊದಲೇ ಕಿಕ್ಕಿರಿದು ತುಂಬಿದ್ದ ಕಾರ್ಯಕ್ರಮದಲ್ಲಿ ನುಕು ನುಗ್ಗಲು ಉಂಟಾಗಿತ್ತು.
11 ಮಂದಿಗೆ ಹೃದಯಾಘಾತ
ಆಸ್ಪತ್ರೆಗೆ ದಾಖಲಿಸಿದವರ ಪೈಕಿ 11 ಮಂದಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಇವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತ ಸಂಭವಿಸುತ್ತಿದ್ದಂತೆ US Astroworld Music Fest ಕಾರ್ಯಕ್ರಮ ರದ್ದುಮಾಡಲಾಗಿದೆ. 75 ನಿಮಿಷಗಳ ಸಂಗೀತ ಹಬ್ಬದಲ್ಲಿ ಸ್ಕಾಟ್ ಟ್ರಾವಿಸ್ ಗಾಯನ ಎಲ್ಲರಿಗೂ ಕಿಕ್ ನೀಡುತ್ತಿತ್ತು. ನಿಂತಲ್ಲೇ ಹೆಜ್ಜೆ ಹಾಕುತ್ತಾ ಎಲ್ಲರೂ ಸ್ಕಾಟ್ ಟ್ರಾವಿಸ್ ಹಾಡನ್ನು ಕೇಳಿಸಿಕೊಳ್ಳುತ್ತಿದ್ದರು.
ಇದನ್ನು ಓದಿ : ಅಪರಿಚಿತರಿಂದ ಗುಡ್ ಮಾರ್ನಿಂಗ್, ಹಾಯ್ ಸಂದೇಶಕ್ಕೆ ಉತ್ತರಿಸಿದರೆ ಲಕ್ಷಾಂತರ ಹಣ ಕಳೆದುಕೊಳ್ಳುವುದು ಗ್ಯಾರಂಟಿ!
ಅಭಿಮಾನಿಗಳಿಗೆ ನೆರವು ನೀಡಲು ಸ್ಕಾಟ್ ಮನವಿ
ಹಾಡು ಕೇಳುತ್ತಲೇ ವೇದಿಕೆ ಮುಂಬಾಗವಿದ್ದವರು ಕೆಳಗೆ ಬಿದ್ದಿದ್ದಾರೆ. ಇದನ್ನು ಗಾಯಕ ಸ್ಕಾಟ್ ಟ್ರಾವಿಸ್ ಗಮನಿಸಿದ್ದಾರೆ. ತನ್ನ ತುರ್ತು ಆರೋಗ್ಯ ಸಿಬ್ಬಂದಿಗಳಲ್ಲಿ ಅಸ್ವಸ್ಥಗೊಂಡ ಅಭಿಮಾನಿಗಳಿಗೆ ನೆರವು ನೀಡಲು ಮನವಿ ಮಾಡಿದ್ದರು. ಬಳಿಕ ಸ್ಕಾಟ್ ಟ್ರಾವಿಸ್ ಸಂಗೀತ ರಸ ಸಂಜೆ ಕಾರ್ಯಕ್ರಮ ಮುಂದುವರಿಸಿದ್ದಾರೆ. ಕೆಲ ಹೊತ್ತಲ್ಲೇ ಮತ್ತೆ ಎದನೋವಿನಿಂದ ಹಲವರು ಕುಸಿದು ಬಿದ್ದಿದ್ದಾರೆ. ಈ ಘಟನೆಯಿಂದ ಇತರರು ಗಾಬರಿಗೊಂಡಿದ್ದಾರೆ. ಗಾಬರಿಗೊಂಡ ಜನ ಕಾರ್ಯಕ್ರಮದಿಂದ ಹೊರಗೆ ಓಡಲು ಯತ್ನಿಸಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದೆ.
ಇದನ್ನು ಓದಿ :
ಮೇಕಪ್ ಇಲ್ಲದೇ ಎದುರು ಬಂದ ಹೆಂಡತಿ, ನಿಜ ರೂಪ ಕಂಡು ಡೈವೋರ್ಸ್ ಕೊಟ್ಟ ಪತಿ!
ಸಂತಾಪ ಸೂಚಿಸಿದ ಗಾಯಕ ಸ್ಕಾಟ್
ಘಟನೆ ಕುರಿತು ಗಾಯಕ ಸ್ಕಾಟ್ ಟ್ರಾವಿಸ್ ಪ್ರತಿಕ್ರಿಯೆ ನೀಡಿದ್ದಾರೆ. ಸಂಗೀತ ರಸೆ ಸಂಜೆ ಕಾರ್ಯಕ್ರಮಕ್ಕೆ ಆಗಮಿಸಿ ನಿಧನರಾದ ಸಂಗೀತ ಆಸಕ್ತರ ಕುಟುಂಬಕ್ಕೆ ನನ್ನ ಸಂತಾಪಗಳು. ನನ್ನ ಹೃದಯ ಮಿಡಿಯುತ್ತಿದೆ. ಅನಿರೀಕ್ಷಿತ ಅವವಢ ನೋವು ತಂದಿದೆ. ತಕ್ಷಣವೇ ನೆರವಿಗೆ ಧಾವಿಸಿದ ಸ್ಥಳೀಯ ತುರ್ತು ಆರೋಗ್ಯ ಸಿಬ್ಬಂದಿಗಳಿಗೆ ಧನ್ಯವಾದ ಎಂದು ಸ್ಕಾಟ್ ಟ್ರಾವಿಸ್ ಹೇಳಿದ್ದಾರೆ. ಮುಂದಿನ ಸಂಗೀತ ಹಬ್ಬಗಳಿಗೆ ಇದು ಎಚ್ಚರಿಕೆ ಗಂಟೆ ಎಂದಿದ್ದಾರೆ. ಇದೇ ಪರಿಸ್ಥತಿಯನ್ನು ಹಲವರು ಬಳಸಿಕೊಂಡಿದ್ದಾರೆ. ಎಲ್ಲರು ದಿಕ್ಕಾಪಲಾಗಿ ಓಡುತ್ತಿರುವವ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ