Dehradun: ಉತ್ತರಾಖಂಡದ ದೂರದ ಹಳ್ಳಿಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಮೇಘ ಸ್ಪೋಟಕ್ಕೆ ಕನಿಷ್ಠ ಮೂರು ಜನರು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ನಾಪತ್ತೆಯಾಗಿದ್ದಾರೆ. ರಾಜ್ಯ ರಾಜಧಾನಿ ಡೆಹ್ರಾಡೂನ್ ನಿಂದ ಸುಮಾರು 600 ಕಿಲೋಮೀಟರ್ ದೂರದಲ್ಲಿರುವ ಪಿಥೋರಘರ್ ಜಿಲ್ಲೆಯ ಜುಮ್ಮಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ರಕ್ಷಣಾ ತಂಡಗಳು ಗ್ರಾಮವನ್ನು ತಲುಪಿದ್ದು, ಬದುಕುಳಿದವರಿಗಾಗಿ ಶೋಧ ನಡೆಸುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಗ್ರಾಮವು ನೇಪಾಳದಿಂದ ಭಾರತಕ್ಕೆ ಹರಿಯುವ ಕಾಳಿ ನದಿಯ ದಡದಲ್ಲಿದೆ. ನದಿಯ ತೀರದಲ್ಲಿ ಮೋಡದ ಸ್ಫೋಟ ಸಂಭವಿಸಿದ್ದು ನೇಪಾಳದಲ್ಲಿಯೂ ಗಣನೀಯ ಪ್ರಮಾಣದ ಮೇಲೆ ಪರಿಣಾಮ ಬೀರಿದೆ.
"ರಾಜ್ಯ ವಿಪತ್ತು ನಿರ್ಹಣಾ ಪಡೆ (SDRF) ತಂಡವು ಗ್ರಾಮವನ್ನು ತಲುಪಿದೆ ಮತ್ತು ಅವಶೇಷಗಳಲ್ಲಿ ಬದುಕುಳಿದವರನ್ನು ಹುಡುಕುತ್ತಿದೆ" ಎಂದು SDRF ಡಿಐಜಿ ರಿಧಿಮ್ ಅಗರ್ವಾಲ್ ನ್ಯೂಸ್ 18 ಗೆ ತಿಳಿಸಿದರು.
ಮೂರು ಮೃತದೇಹಗಳನ್ನು ಗ್ರಾಮಸ್ಥರು ಹೊರತೆಗೆದಿದ್ದಾರೆ. ಕೊಲೆಯಾದವರು 9 ರಿಂದ 15 ವರ್ಷದೊಳಗಿನ ಮೂವರು ಹುಡುಗಿಯರು. ಇಬ್ಬರು ಹದಿಹರೆಯದ ಹುಡುಗಿಯರನ್ನು ರಕ್ಷಿಸಲಾಗಿದ್ದು, 40 ರ ಹರೆಯದ ಒಬ್ಬ ಪುರುಷ ಮತ್ತು ಮಹಿಳೆ ಸೇರಿದಂತೆ ಇನ್ನಿಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಎಲ್ಲಾ ಬೆಳವಣಿಗೆಗಳ ಮೇಲೆ ನಿಗಾವಹಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿದೆ ಮತ್ತು ಮಕ್ಕಳಿಗೆ ಪಡಿತರ, ಔಷಧಗಳು ಮತ್ತು ಹಾಲಿನ ಪೂರೈಕೆಯನ್ನು ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಗ್ರಾಮಗಳ ಭೇಟಿಗೆ ಉದ್ದೇಶಿಸಿದ್ದ ಸಿಎಂ ಅವರ ಕಾರ್ಯಕ್ರಮವು ಕೆಟ್ಟ ಹವಾಮಾನದ ಕಾರಣ ರದ್ದಾಗಿದ್ದಾವೆ ಎಂದು ಹೇಳಲಾಗಿದೆ.
ಮೇಘಸ್ಫೋಟ ಮತ್ತು ನಿರಂತರ ಮಳೆಯಿಂದಾಗಿ ಗಡಿ ಗ್ರಾಮದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ ಎಂದು ನ್ಯೂಸ್ 18 ಜೊತೆ ಹಂಚಿಕೊಂಡ ಹಳ್ಳಿಯ ದೃಶ್ಯಗಳು ಘೋರ ಕತೆಯನ್ನು ಹೇಳುತ್ತಿವೆ. ಎಲ್ಲೆಂದರಲ್ಲಿ ಚೆಲ್ಲಿದ ಕೆಸರಿನಲ್ಲಿ ಹಲವಾರು ಮನೆಗಳು ಹೂತು ಹೋಗಿವೆ, ಹಾನಿಯಾಗಿದೆ. ಈ ಮಧ್ಯೆ, ಅವಶೇಷಗಳಲ್ಲಿ ಸಿಲುಕಿರುವವರನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನಿಸುತ್ತಿದ್ದಾರೆ.
ಈ ಗ್ರಾಮವು ಧಾರ್ಚುಲಾ ಉಪ ವಿಭಾಗದ ವ್ಯಾಪ್ತಿಗೆ ಬರುತ್ತದೆ. ಕಳೆದ ಒಂದು ವಾರದಿಂದ ಈ ಆಯಕಟ್ಟಿನ ಪ್ರಮುಖ ಪ್ರದೇಶದ ಹಲವಾರು ಹಳ್ಳಿಗಳು ಹೊರಗಿನ ಪ್ರಪಂಚದ ಸಂಪರ್ಕಕ್ಕೆ ಸಿಕ್ಕಿಲ್ಲ ಮತ್ತು ನಿಯಮಿತ ಮಳೆಯ ನಂತರ ಭೂಕುಸಿತದ ಘಟನೆಗಳು ಸ್ಥಳೀಯರಿಗೆ ಮತ್ತು ಆಡಳಿತವನ್ನು ಕಂಗೆಡಿಸಿವೆ.
ಇದನ್ನೂ ಓದಿ: Explainer: ಡ್ರಗ್ ಜಾಲದಲ್ಲಿ 30 ಜನ ಸೆಲೆಬ್ರಿಟಿಗಳು? ಯಾರಿದು ಸೋನಿಯಾ ಅಗರ್ವಾಲ್; ಇಲ್ಲಿದೆ ಮಾಹಿತಿ
ಚೀನಾ ಮತ್ತು ನೇಪಾಳದ ಗಡಿಯಾಗಿರುವ ಉತ್ತರಾಖಂಡದ ಮೂರು ಜಿಲ್ಲೆಗಳಲ್ಲಿ ಪಿಥೋರಘರ್ ಕೂಡ ಒಂದು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ