New York Fire Accident: ಭೀಕರ ಅಗ್ನಿ ದುರಂತಕ್ಕೆ 19 ಮಂದಿ ಬಲಿ- 13 ಜನರ ಸ್ಥಿತಿ ಚಿಂತಾಜನಕ

New York Fire Accident: ಒಟ್ಟು 63 ಮಂದಿ ಗಾಯಗೊಂಡಿದ್ದು, 32 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹದಿಮೂರು ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಮೇಯರ್‌ ಹಿರಿಯ ಸಲಹೆಗಾರ ಸ್ಟೀಫನ್ ರಿಂಗೆಲ್ ತಿಳಿಸಿದ್ದಾರೆ

ಆಗ್ನಿ ಅವಗಢವಾದ ಅಪಾರ್ಟ್​ಮೆಂಟ್

ಆಗ್ನಿ ಅವಗಢವಾದ ಅಪಾರ್ಟ್​ಮೆಂಟ್

  • Share this:
ನ್ಯೂಯಾರ್ಕ್ ನಗರದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ (New York City Apartment) ಬೆಂಕಿ (Fire) ಕಾಣಿಸಿಕೊಂಡಿದ್ದು, 9 ಮಕ್ಕಳು ಸೇರಿದಂತೆ ಹತ್ತೊಂಬತ್ತು ಜನರು ಸಾವನ್ನಪ್ಪಿದ್ದಾರೆ, ಇದನ್ನು ನಗರದ ಅಗ್ನಿಶಾಮಕ ಆಯುಕ್ತರು (Fire Department Commissioner) ಇತ್ತೀಚಿನ ದಿನಗಳಲ್ಲಿ ನಡೆದ ಅತ್ಯಂತ ಕೆಟ್ಟ ಬೆಂಕಿ ಅವಗಢ ಎಂದು ವರ್ಣಿಸಿದ್ದಾರೆ.  ಇನ್ನೂ 32 ಜನ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ  ಸೇರಿಸಲಾಗಿದೆ. ಗಾಯಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ನ್ಯೂಯಾರ್ಕ್ ಮೇಯರ್  ಎರಿಕ್ ಆಡಮ್ಸ್ ಮಾಹಿತಿ ನೀಡಿದ್ದಾರೆ.  ಅಗ್ನಿಶಾಮಕ ಇಲಾಖೆಯ ಕಮಿಷನರ್ ಡೇನಿಯಲ್ ನಿಗ್ರೋ ಅವರು 19 ನೇ ಅಂತಸ್ತಿನ ಬ್ಲಾಕ್‌ನ ಪ್ರತಿ ಮಹಡಿಯಲ್ಲಿ ಹಲವಾರು ಗಾಯಾಳುಗಳನ್ನು ಕಾಪಾಡಲಾಗಿದ್ದು, ಹೊಗೆ ಊಹಿಸಲು ಸಾಧ್ಯವಾಗದ ರೀತಿ ಇತ್ತು ಎಂದು ವರ್ಣಿಸಿದ್ದಾರೆ.  

ಮಾಧ್ಯಮದ ಜೊತೆ ಮಾತನಾಡಿದ ಅವರು ಈ 30 ವರ್ಷಗಳಿಂದ ನ್ಯೂಯಾರ್ಕ್‌ನಲ್ಲಿ ಇಂತಹ ಕೆಟ್ಟ ಬೆಂಕಿ ಅವಗಢವನ್ನು ಮತ್ತು ಸಾವನ್ನು ನೋಡಿರಲಿಲ್ಲ ಎಂದಿದ್ದಾರೆ. ಫಿಲಡೆಲ್ಫಿಯಾದಲ್ಲಿನ ಅಪಾರ್ಟ್‌ಮೆಂಟ್ ಬೆಂಕಿಯಲ್ಲಿ 12 ಮಂದಿ ಸಾವನ್ನಪ್ಪಿದ ಕೆಲವು ದಿನಗಳ ನಂತರಈ ಘಟನೆ ನಡೆದಿದ್ದು, ಸತ್ತವರಲ್ಲಿ ಎಂಟು ಮಕ್ಕಳು  ಸೇರಿದ್ದಾರೆ.

ವಿದ್ಯುತ್ ಹೀಟರ್‌ನಿಂದ ಹೊತ್ತಿಕೊಂಡ ಕಿಡಿ

ಭಾನುವಾರದಂದು ಬ್ರಾಂಕ್ಸ್ ಅಪಾರ್ಟ್‌ಮೆಂಟ್ ಬ್ಲಾಕ್‌ನ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಸ್ಥಳೀಯ ಸಮಯ 11:00 ಕ್ಕೆ (16:00 GMT) ಕ್ಕೆ ಬೆಂಕಿ ವ್ಯಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಬೆಂಕಿಯನ್ನು ನಿಭಾಯಿಸಲು ಸುಮಾರು 200 ಅಗ್ನಿಶಾಮಕ ಸಿಬ್ಬಂದಿಯನ್ನು ಕಳುಹಿಸಲಾಗಿದೆ, ಇದು ಅಸಮರ್ಪಕ ವಿದ್ಯುತ್ ಹೀಟರ್‌ನಿಂದ ಕಿಡಿ ಹೊತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎರಡು ಮಹಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಆದರೆ ಹೊಗೆ ಎಲ್ಲೆಡೆ ವ್ಯಾಪಿಸಿದೆ ಎಂದು ಆಯುಕ್ತ ನಿಗ್ರೋ ತಿಳಿಸಿದ್ದಾರೆ.  ಬೆಂಕಿ ಹೊತ್ತಿಕೊಂಡ ಅಪಾರ್ಟ್‌ಮೆಂಟ್‌ನ ಬಾಗಿಲು ತೆರೆದಿದ್ದು, ನಂತರ ಹೊಗೆ ಪ್ರತಿ ಮಹಡಿಗೂ ವ್ಯಾಪಿಸಿದೆ ಎಂದು ಆಯುಕ್ತ ನಿಗ್ರೋ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಜನರು ಬೆಂಕಿಯ ಜ್ವಾಲೆ ವ್ಯಾಪಿಸುತ್ತಿದ್ದಂತೆ  ಕಿಟಕಿಗಳಿಂದ ಕೈ ಬೀಸಿ ಸಹಾಯಕ್ಕೆ ಕರೆಯುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯಾಗಿರುವ ಕಟ್ಟಡದ ಸಮೀಪದಲ್ಲಿ ವಾಸಿಸುವ ಜಾರ್ಜ್ ಕಿಂಗ್​ ಎನ್ನುವವರು ತಿಳಿಸಿದ್ದಾರೆ.   .ನಾನು ಹೊಗೆ ಬರುತ್ತಿದ್ದನ್ನ ನೋಡಿದೆ, ಬಹಳಷ್ಟು ಜನರು ಭಯಭೀತರಾಗಿದ್ದರು ಎಂದು ಅವರು ಹೇಳಿದ್ದಾರೆ.

1990ರ ನಂತರ ನಡೆದ ಭೀಕರ ಅಗ್ನಿ ಅಪಘಾತವಿದು

ನಮ್ಮಲ್ಲಿ ಇತ್ತೀಚೆಗೆ ಇಂಥದ್ದೊಂದು ಅಗ್ನಿ ದುರಂತ ನಡೆದಿರಲಿಲ್ಲ. ಊಹಿಸಲೂ ಸಾಧ್ಯವಾಗದಷ್ಟು ಭೀಕರವಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ತುಂಬ ಹೆಚ್ಚಾಗಿದೆ ಎಂದು ಹೇಳಿದ್ದಾರೆ. 1990ರಲ್ಲಿ ಹ್ಯಾಪಿ ಲ್ಯಾಂಡ್ ಸೋಷಿಯಲ್​ ಕ್ಲಬ್​​ನಲ್ಲಿ ಇಂಥದ್ದೇ ಒಂದು ಅಗ್ನಿ ದುರಂತ ನಡೆದಿತ್ತು. ಅದರಲ್ಲಿ 87 ಮಂದಿ ಮೃತಪಟ್ಟಿದ್ದರು.  ಅದು ಬಿಟ್ಟರೆ ಈ ಅವಘಡವೇ ಬಹುದೊಡ್ಡ ಪ್ರಮಾಣದಲ್ಲಿ ಆಗಿದೆ ಎಂದೂ ಹೇಳಿದ್ದಾರೆ.

ಒಟ್ಟು 63 ಮಂದಿ ಗಾಯಗೊಂಡಿದ್ದು, 32 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹದಿಮೂರು ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಮೇಯರ್‌ ಹಿರಿಯ ಸಲಹೆಗಾರ ಸ್ಟೀಫನ್ ರಿಂಗೆಲ್ ತಿಳಿಸಿದ್ದಾರೆ.  ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೊಚುಲ್ ಭಾನುವಾರದ ಘಟನೆಗಳನ್ನು "ದುರಂತದ ರಾತ್ರಿ" ಎಂದು ಕರೆದಿದ್ದು ಬದುಕುಳಿದವರಿಗೆ ಸಹಾಯ ಮಾಡಲು ಸಂತ್ರಸ್ತರ ಪರಿಹಾರ ನಿಧಿಯನ್ನು ರಚಿಸುವುದಾಗಿ ವಾಗ್ದಾನ ಮಾಡಿದ್ದಾರೆ.

ಹೊಸ ವಸತಿ, ಸಮಾಧಿ ವೆಚ್ಚಗಳು ಮತ್ತು ನಮಗೆ ಬೇಕಾದುದನ್ನು ಕಂಡುಕೊಳ್ಳಲು ಹಣದ ಅವಶ್ಯಕತೆ ಇರುತ್ತದೆ ಏಕೆಂದರೆ ನಾವು ನ್ಯೂಯಾರ್ಕ್‌ನಲ್ಲಿ ಅದನ್ನೇ ಮಾಡಬೇಕಾಗುತ್ತದೆ ಎಂದಿದ್ದಾರೆ.  ಬೆಂಕಿ ಅವಗಢ ಉಂಟಾದ ಬ್ರಾಂಕ್ಸ್‌ನ ಪ್ರದೇಶವು ದೊಡ್ಡ ಮುಸ್ಲಿಂ ವಲಸಿಗರು ನೆಲೆಸಿದ್ದು, ಬೆಂಕಿಗೆ ಬಲಿಯಾದ ಹಲವರು ಮೂಲತಃ ಗ್ಯಾಂಬಿಯಾದಿಂದ US ಗೆ ಬಂದವರು ಎಂದು ಹೇಳಲಾಗಿದೆ.  ಶ್ರೀ ಆಡಮ್ಸ್ ಬೆಂಕಿಯಿಂದ ತೊಂದರೆಗೊಳಗಾದ ಜನರು ವಲಸೆ ಬಂದವರು ಎಂದು ಯೋಚಿಸಿದರೆ ಅಧಿಕಾರಿಗಳಿಂದ ಸಹಾಯವನ್ನು ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.
Published by:Sandhya M
First published: