ಆಫ್ರಿಕಾ: ವಾಯವ್ಯ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (Northwestern Democratic Republic of Congo) ಭೀಕರ ಬೋಟ್ ಅಪಘಾತ (Boat Accident) ಸಂಭವಿಸಿದ್ದು, 145 ಮಂದಿ ನೀರಿನಲ್ಲಿ (Water) ಮುಳುಗಿ ಸಾವನ್ನಪ್ಪಿದ್ದಾರೆ ಮತ್ತು 55 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳವಾರ ಮಧ್ಯರಾತ್ರಿ ಈ ದುರಂತ ಸಂಭವಿಸಿದೆ. 200 ಪ್ರಯಾಣಿಕರಿದ್ದ ಮೋಟಾರ್ ಬೋಟ್ ಮಂಗಳವಾರ ಲುಲೋಂಗಾ ನದಿಯಲ್ಲಿ ಮುಳುಗಿದೆ. ಈಕ್ವಟೂರ್ ಪ್ರಾಂತ್ಯದ ಬಸಂಕುಸು ಪಟ್ಟಣದ ಬಳಿ ಅಪಘಾತ ಸಂಭವಿಸಿದೆ. ಬೋಟ್ನಲ್ಲಿ ಒವರ್ ಲೋಡ್ ಆಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೋಟ್ ಅವಘಡದಲ್ಲಿ 145 ಮಂದಿ ಸಾವು
ದೋಣಿಯಲ್ಲಿ ಪ್ರಯಾಣಿಕರು, ಸರಕುಗಳು ಮತ್ತು ಜಾನುವಾರುಗಳನ್ನು ಅಧಿಕವಾಗಿ ತುಂಬಿದ್ದರು. ಇದರಿಂದಾಗಿ ದೋಣಿ ನದಿಯಲ್ಲಿ ಮುಳುಗಿತು. ಈಜು ಬಾರದವರು ನೀರಿನಲ್ಲಿ ಮುಳುಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈಜಲು ಬಂದವರೂ ಸಹ ಸಾವನ್ನಪ್ಪಿದ್ದಾರೆ. ಈ ಅವಘಡದಲ್ಲಿ 145 ಮಂದಿ ಜಲಸಮಾಧಿಯಾಗಿದ್ದಾರೆ. ಅದೃಷ್ಟವಶಾತ್ 55 ಮಂದಿ ಬದುಕುಳಿದಿದ್ದಾರೆ.
ಒವರ್ ಲೋಡ್ನಿಂದ ಬೋಟ್ ಮುಳುಗಡೆ
ಕಾಂಗೋದ ಈಕ್ವಟೂರ್ ಪ್ರಾಂತ್ಯವು ಕಳಪೆ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ಇದರಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಕೆಲವೊಮ್ಮೆ ಬೋಟ್ನಲ್ಲಿಯೇ ಜನ ಆಶ್ರಯ ಪಡೆಯಬೇಕಾಗುತ್ತದೆ. ಅಲ್ಲದೇ ಬೋಟ್ ನಿರ್ವಾಹಕರು ಹಣಕ್ಕಾಗಿ ಹೆಚ್ಚು ಪ್ರಯಾಣಿಕರನ್ನು ಬೋಟ್ಗೆ ಹತ್ತಿಸಿಕೊಳ್ಳುತ್ತಾರೆ. ಇದರಿಂದ ಆಗಾಗ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಈ ಹಿಂದೆ ಕಳೆದ ಅಕ್ಟೋಬರ್ನಲ್ಲಿ ಬೋಟ್ ಮುಳುಗಿ 40 ಮಂದಿ ಸಾವನ್ನಪ್ಪಿದ್ದರು.
ಕಾಂಗೋದಲ್ಲಿ ರಸ್ತೆಗಳಿಲ್ಲದ ಕಾರಣ ದೋಣಿಯಲ್ಲಿ ಪ್ರಯಾಣಿಸೋ ಜನ
ಕಾಂಗೋದಲ್ಲಿ ರಸ್ತೆಗಳಿಲ್ಲದ ಕಾರಣ ಜನರು ದೋಣಿಗಳಲ್ಲಿ ಪ್ರಯಾಣಿಸುತ್ತಾರೆ. ಅಲ್ಲಿನ ಜನರು ಜೀವನೋಪಾಯಕ್ಕಾಗಿ ನಿತ್ಯ ಬೇರೆಡೆಗೆ ಹೋಗುತ್ತಾರೆ. ಈಜು ಗೊತ್ತಿಲ್ಲದಿದ್ದರೂ ದೋಣಿಗಳಲ್ಲಿ ಪ್ರಯಾಣಿಸುವಾಗ ಅಪಘಾತಕ್ಕೀಡಾಗುತ್ತಾರೆ. ಅಪಾಯದ ಅರಿವಾದ ಬಳಿಕ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.
ಈ ಹಿಂದೆ ಲಿಬಿಯಾ ಬೋಟ್ ದುರಂತದಲ್ಲಿ 22 ಮಂದಿ ಸಾವು
ಈ ಹಿಂದೆ ಲಿಬಿಯಾ ಕರಾವಳಿಯಲ್ಲಿ ಸಂಭವಿಸಿದ ಬೋಟ್ ದುರಂತದಲ್ಲಿ ಮಾಲಿ ದೇಶದ 22 ಮಂದಿ ವಲಸಿಗರು ಮೃತಪಟ್ಟಿದ್ದರು. 2022ರ ಜೂನ್ 22ರಂದು ವಲಸಿಗರು ಲಿಬಿಯಾದ ಝುವರಾ ನಗರದಿಂದ ರಬ್ಬರ್ ಬೋಟ್ನಲ್ಲಿ ಪ್ರಯಾಣಿಸುತ್ತಿದ್ದರು. ಘಟನೆ ನಡೆದ 9 ದಿನಗಳ ಬಳಿಕ 61 ಮಂದಿಯನ್ನು ಲಿಬಿಯಾ ಕರಾವಳಿ ಪಡೆ ರಕ್ಷಿಸಿ ತೀರಕ್ಕೆ ಕರೆತಂದಿತ್ತು. ಬದುಕುಳಿದವರಲ್ಲಿ ಬಹುತೇಕರು ಮಾಲಿ ದೇಶದವರಾಗಿದ್ದರು.
ಪಾಕಿಸ್ತಾನದಲ್ಲಿ ಸರ್ಕಾರದ ವಿರುದ್ಧ ಬಂಡಾಯವೆದ್ದ ಜನ
ಮತ್ತೊಂದೆಡೆ ಗಿಲ್ಗಿಟ್ ಬಲೂಚಿಸ್ತಾನ್ನಲ್ಲಿ ಎದ್ದಿರುವ ಬಂಡಾಯದ ಧ್ವನಿ ಪಾಕಿಸ್ತಾನವನ್ನು ಆತಂಕಕ್ಕೀಡು ಮಾಡಿದೆ. ಬಲೂಚಿಸ್ತಾನ್ ಭಾರತದೊಂದಿಗೆ ಏಕೀಕರಣಕ್ಕೆ (ವಿಲೀನ) ಒತ್ತಾಯಿಸುತ್ತಿದ್ದಾರೆ. ಈ ರೀತಿ ಮುಂದೊಂದು ದಿನ ಬೇಡಿಕೆ ಬರುತ್ತದೆ ಎಂದು ಇಸ್ಲಾಮಾಬಾದ್ ಊಹಿಸಿರಲಿಲ್ಲ.
ಇದನ್ನೂ ಓದಿ: Best Travel Plan: ಕೇರಳಕ್ಕೇ ಹೋಗ್ಬೇಕಂತಿಲ್ಲ, ಕಾರವಾರದಲ್ಲೇ ಇದೆ ಬೋಟ್ ಹೌಸ್!
ಕಾರ್ಗಿಲ್ ಜೊತೆಗೆ ಬಲೂಚಿಸ್ತಾನ್ ಏಕೀಕರಣಕ್ಕೆ ಒತ್ತಾಯ
ನ್ಯೂಸ್ ಪೋರ್ಟಲ್ ಇಸ್ಲಾಂ ಖಬರ್ ಪ್ರಕಾರ, ಪ್ರತಿಭಟನಾಕಾರರು ಹಲವಾರು ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ ಜನರು ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ವಿರುದ್ಧ ಘೋಷಣೆಗಳನ್ನು ಕೂಗುವುದನ್ನು ಕಾಣಬಹುದಾಗಿದೆ. ಭಾರತದ ಲಡಾಖ್ ಪ್ರದೇಶದಲ್ಲಿ ಬರುವ ಕಾರ್ಗಿಲ್ನೊಂದಿಗೆ ತಮ್ಮ ಪ್ರದೇಶವನ್ನು ಏಕೀಕರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪಂಜಾಬ್ ಹೊರತುಪಡಿಸಿ, ಪಾಕಿಸ್ತಾನದ ಬಹುತೇಕ ಎಲ್ಲಾ ಪ್ರಾಂತ್ಯಗಳು ಪಾಕಿಸ್ತಾನದಿಂದ ಬೇರ್ಪಡುವ ಬಯಕೆಯನ್ನು ವ್ಯಕ್ತಪಡಿಸಿವೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ