ವಾಷಿಂಗ್ಟನ್: ಅಮೆರಿಕದ (America) ಕ್ಯಾಲಿಫೋರ್ನಿಯಾದ (California) ಲಾಸ್ ಏಂಜಲೀಸ್ (Los Angeles) ಸಮೀಪದಲ್ಲಿರುವ ಮಾಂಟೆರಿ ಪಾರ್ಕ್ ನಗರದಲ್ಲಿ (Monterey Park City) ಶನಿವಾರ ನಡೆದ ಚೀನಿಯರ (Chinese) ಹೊಸ ವರ್ಷ (New Year) ಸಂಭ್ರಮಾಚರಣೆ ವೇಳೆ ಗುಂಡಿನ ದಾಳಿ ನಡೆದಿದ್ದು, ಸುಮಾರು ಹತ್ತು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಲಾಸ್ ಏಂಜಲೀಸ್ನ ಪೂರ್ವಕ್ಕೆ 13 ಕಿಮೀ ದೂರದಲ್ಲಿರುವ ಮಾಂಟೆರಿ ಪಾರ್ಕ್ ನಗರದಲ್ಲಿ ಹೊಸ ವರ್ಷವನ್ನು ಆಚರಿಸಲು ಸಾವಿರಾರು ಮಂದಿ ಜಮಾಯಿಸಿದ್ದರು. ಈ ವೇಳೆ ಘಟನೆ ನಡೆದಿದೆ.
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಸಾವಿರಾರು ಮಂದಿ ಭಾಗಿ
ರಾತ್ರಿ 10 ಗಂಟೆಗೆ ಇಲ್ಲಿ ಬಂದೂಕುಧಾರಿ ದಾಳಿ ನಡೆಸಿದ್ದಾನೆ. ಇದಕ್ಕೂ ಮುನ್ನ ಈ ಸ್ಥಳದಲ್ಲಿ ನಡೆದ ಚೀನೀಯರ ಹೊಸ ವರ್ಷದ ಸಂಭ್ರಮದ ಉತ್ಸವದಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಪೊಲೀಸ್ ಕಾರುಗಳು ಸುತ್ತುವರಿದಿರುವ, ನಿರ್ಬಂಧಾಜ್ಞೆಗಳು ಜಾರಿಯಾಗಿರುವ ಪ್ರದೇಶದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
Just In: Possible mass casualty incident in Monterey Park, California. Early reports indicate the shooting happened at a Lunar New Year festivity. Unconfirmed reports: 10 fatalities.
Details scarce at the moment. Check back…#montereypark #lunarnewyear #california #masshooting pic.twitter.com/rnEtXeHZg0
— Arpit Sharma. (@ArpitSharrma) January 22, 2023
ಗುಂಡಿನ ದಾಳಿಯಲ್ಲಿ ಅನೇಕ ಮಂದಿ ಸಾವು
ಸಾಮೂಹಿಕ ಗುಂಡಿನ ದಾಳಿಯಲ್ಲಿ ಅನೇಕರು ಸಾವಿಗೀಡಾಗಿದ್ದಾರೆ ಎಂದು ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಎಷ್ಟು ಮಂದಿ ಬಲಿಯಾಗಿದ್ದಾರೆ, ದಾಳಿ ನಡೆಸಿದವರು ಯಾರು? ಎಷ್ಟು ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ? ಅವರು ಸಿಕ್ಕಿದ್ದಾರೆಯೇ ಇತ್ಯಾದಿ ಮಾಹಿತಿಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಈ ದಾಳಿಯಲ್ಲಿ 12ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಒಂದು ಮೂಲ ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ
ರೆಸ್ಟೋರೆಂಟ್ಗೆ ನುಗ್ಗಿ ಬಾಗಿಲು ಮುಚ್ಚುವಂತೆ ದುಷ್ಕರ್ಮಿಯಿಂದ ಧಮ್ಕಿ
ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಕ್ಲಾಮ್ ಹೌಸ್ ಸೀಫುಡ್ ಬಾರ್ಬೆಕ್ಯೂ ರೆಸ್ಟೋರೆಂಟ್ನ ಮಾಲೀಕ ಸೆಯುಂಗ್ ವೊನ್ ಚೋಯ್, ವ್ಯಾಪಾರದ ವೇಳೆ ಮೂವರು ಹೋಟೆಲ್ಗೆ ನುಗ್ಗಿ ಬಾಗಿಲು ಹಾಕುವಂತೆ ಧಮ್ಕಿ ಹಾಕಿದರು. ಅಲ್ಲದೇ ದುಷ್ಕರ್ಮಿಗಳು ಕೈಯಲ್ಲಿ ಮಷಿನ್ ಗನ್ ಹಿಡಿದುಕೊಂಡಿದ್ದನು. ಗನ್ಮ್ಯಾನ್ ಬಳಿ ಹಲವು ಸುತ್ತುಗಳ ಗುಂಡುಗಳಿತ್ತು. ಆತನ ಗುಂಡುಗಳು ಖಾಲಿಯಾದ ನಂತರ ಮತ್ತೆ ತುಂಬಿಸಿದ್ದ ಎನಿಸುತ್ತದೆ. ನಂತರ ಲೋಡ್ ಮಾಡಿದ ಗನ್ ಹಿಡಿದು ಡ್ಯಾನ್ಸ್ ಕ್ಲಬ್ಗೆ ನುಗ್ಗಿ ಶೂಟ್ ಮಾಡಿದ್ದಾನೆ. ರಾತ್ರಿ 10 ಗಂಟೆಯ ನಂತರ ಗುಂಡಿನ ದಾಳಿ ನಡೆದಿದೆ ಎಂದು ತಿಳಿಸಿದ್ದಾರೆ.
ಜುಲೈ 4 ರ ಹೈಲ್ಯಾಂಡ್ ಪಾರ್ಕ್ ಮೆರವಣಿಗೆ ವೇಳೆ ಗುಂಡಿನ ದಾಳಿ
ಈ ಹಿಂದೆ ಜುಲೈ 4 ರ ಹೈಲ್ಯಾಂಡ್ ಪಾರ್ಕ್ ಮೆರವಣಿಗೆ ವೇಳೆ ದುಷ್ಕರ್ಮಿಯಿಂದ ಶೂಟೌಟ್ ನಡೆದಿತ್ತು. ಹೈಲ್ಯಾಂಡ್ ಪಾರ್ಕ್, ಇಲ್ (ಎಪಿ) - ಸೋಮವಾರ ಉಪನಗರ ಚಿಕಾಗೋದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆಯ ಮೇಲೆ ಛಾವಣಿಯ ಮೇಲೆ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ್ದನು. ಈ ಘಟನೆಯಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದರು. ಕನಿಷ್ಠ 30 ಮಂದಿ ಗಾಯಗೊಂಡಿದ್ದರು. ಮೆರವಣಿಗೆಯಲ್ಲಿ ಭಾಗಿಯಾದ ನೂರಾರು ಜನರು ಪೋಷಕರು ಮತ್ತು ಮಕ್ಕಳನ್ನು ಬೈಸಿಕಲ್ಗಳಲ್ಲಿ ಕಳುಹಿಸಿದ್ದರು.
ಘಟನೆ ಬಳಿಕ ಆರೋಪಿಯನ್ನು ಬಂಧಿಸಿದ್ದ ಪೊಲೀಸರು
ಚಿಕಾಗೋದ ಉತ್ತರ ತೀರದಲ್ಲಿರುವ ಹೈಲ್ಯಾಂಡ್ ಪಾರ್ಕ್ನಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ಗಂಟೆಗಳ ಕಾಲ ಶೂಟೌಟ್ ನಡೆದಿತ್ತು. ಇದಾದ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: Somalia: ಸೊಮಾಲಿಯಾದಲ್ಲಿ ಅತೀ ದೊಡ್ಡ ಭಯೋತ್ಪಾದಕ ದಾಳಿ, 10 ನಾಗರಿಕರ ಹತ್ಯೆ, ಉಗ್ರರ ವಶದಲ್ಲಿ ಹೋಟೆಲ್!
ನಂತರ ಜನರನ್ನು ಮನೆರಗೆ ಕಳುಹಿಸಿದ್ದ ಪೊಲೀಸ್ರು
ಅಮೆರಿಕ ಸ್ವಾತಂತ್ರ್ಯ ಪಡೆದ ದಿನವಾದ ಜು.4ರಂದು ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆ ಆರಂಭವಾದ 10 ನಿಮಿಷದಲ್ಲಿ ಬಂದೂಕುದಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದನು. ದಾಳಿಯ ನಂತರ ಇಲ್ಲಿರುವುದು ಸುರಕ್ಷಿತವಲ್ಲ. ಮನೆಗಳಿಗೆ ತೆರಳಿ ಎಂದು ಜನರಿಗೆ ಸೂಚನೆ ನೀಡಿದ್ದರು. ಅಲ್ಲದೇ ಸ್ವಾತಂತ್ರ್ಯೋತ್ಸವ ಮೆರವಣಿಗೆಯನ್ನು ರದ್ದುಗೊಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ