• Home
  • »
  • News
  • »
  • national-international
  • »
  • Kanpur: IIT ಕಾನ್ಪುರದ ಇಂಜಿನಿಯರ್‌ಗಳಿಂದ 'ಹೃದಯಂತ್ರ' ಎಂಬ ಹೃದಯ ಕಸಿಮಾಡುವ ಉಪಕರಣದ ಅಭಿವೃದ್ಧಿ; ಇಲ್ಲಿದೆ ಹೆಚ್ಚಿನ ವಿವರ

Kanpur: IIT ಕಾನ್ಪುರದ ಇಂಜಿನಿಯರ್‌ಗಳಿಂದ 'ಹೃದಯಂತ್ರ' ಎಂಬ ಹೃದಯ ಕಸಿಮಾಡುವ ಉಪಕರಣದ ಅಭಿವೃದ್ಧಿ; ಇಲ್ಲಿದೆ ಹೆಚ್ಚಿನ ವಿವರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಐಐಟಿ ಕಾನ್ಪುರದ ಇಂಜಿನಿಯರ್‌ಗಳು ಹೃದಯ ಕಸಿಮಾಡುವ ಉಪಕರಣವಾದ ಹೃದಯಂತ್ರವನ್ನು ಅಭಿವೃದ್ಧಿಪಡಿಸಿದ್ದು, ಈ ಸಾಧನ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ. ಹೃದಯದ ಕೆಳಗೆ ಈ ಪರಿಕರವನ್ನು ಅಳವಡಿಸಲಾಗುತ್ತದೆ ಹಾಗೂ ಇದು ಬ್ಯಾಟರಿ ಚಾಲಿತ ಪಂಪಿಂಗ್ ಸಾಧನವಾಗಿದೆ

  • Share this:

ಕಾನ್ಪುರ: ಕೋವಿಡ್ (Covid) ನಂತರ ವೈದ್ಯಕೀಯ ವೆಚ್ಚಗಳಲ್ಲಿ ತೀವ್ರ ಹೆಚ್ಚಳವಾಗಿದ್ದು, ಕೈಗೆಟಕುವ ದರದಲ್ಲಿ ಹೆಚ್ಚಿನ ವೈದ್ಯಕೀಯ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬುದು ಮಧ್ಯಮ ವರ್ಗದವರ ಅಳಲಾಗಿದೆ. ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು ಚಿಕಿತ್ಸೆಗೆ ತಗಲುವ ವೆಚ್ಚಗಳೂ ತುಂಬಾ ಏರಿಕೆಯಾಗಿವೆ ಎಂಬುದು ಜನಸಮಾನ್ಯರ ಚಿಂತೆಯಾಗಿದೆ. ಈ ನಡುವೆ ಹೃದಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಜನರಲ್ಲಿ ಒಂದು ಆಶಾಕಿರಣವನ್ನು ಮೂಡಿಸುವಂತಹ ಉಪಕರಣವನ್ನು ಐಐಟಿ ಕಾನ್ಪುರದ (IIT-Kanpur) ಇಂಜಿನಿಯರ್​ಗಳು (Engineer) ಸಂಶೋಧಿಸಿದ್ದು ಇದನ್ನು ಹೃದಯಂತ್ರ (Hridayantra) ಎಂದು ಕರೆಯಲಾಗಿದೆ.


ಹೃದಯಂತ್ರ ಹೇಗೆ ಕೆಲಸ ಮಾಡುತ್ತದೆ?


ಇದೀಗ ಐಐಟಿ ಕಾನ್ಪುರದ ಇಂಜಿನಿಯರ್‌ಗಳು ಹೃದಯ ಕಸಿಮಾಡುವ ಉಪಕರಣವಾದ ಹೃದಯಂತ್ರವನ್ನು ಅಭಿವೃದ್ಧಿಪಡಿಸಿದ್ದು, ಈ ಸಾಧನ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ. ಹೃದಯದ ಕೆಳಗೆ ಈ ಪರಿಕರವನ್ನು ಅಳವಡಿಸಲಾಗುತ್ತದೆ ಹಾಗೂ ಇದು ಬ್ಯಾಟರಿ ಚಾಲಿತ ಪಂಪಿಂಗ್ ಸಾಧನವಾಗಿದೆ.


ಸಾಂದರ್ಭಿಕ ಚಿತ್ರ


ಇದರಲ್ಲಿರುವ ತಿರುಗುವ ಮೋಟರ್ ದೇಹಾದ್ಯಂತ ರಕ್ತವನ್ನು ಪಂಪ್ ಮಾಡಲು ಸಹಕಾರಿಯಾಗಿದೆ, ಹಾಗಾಗಿ ಇದು ರೋಗಿಗೆ ಹೊಸ ಜೀವ ಜೀವನವನ್ನು ನೀಡುವ ಆಪದ್ಬಾಂಧವ ಎಂದೆನಿಸಿದೆ. ವಿಫಲವಾದ ಹೃದಯಕ್ಕೆ ಸಹಕಾರಿಯಾಗಿರುವ ಕೃತಕ ಪಂಪ್ ಬಳಸುವ ಕಲ್ಪನೆಯು 1920 ರ ದಶಕದಿಂದಲೂ ಜಾರಿಯಲ್ಲಿದೆ.


ಅತ್ಯಂತ ವೆಚ್ಚದಾಯಕ ಪರಿಕರ


ಪ್ರಸ್ತುತ ಹೃದಯಕ್ಕೆ ರಕ್ತ ಪಂಪು ಮಾಡುವ ಕೃತಕ ಪರಿಕರಗಳು ಹಾಗೂ (LVAD) ಇದೊಂದು ಹೃದಯದ ಪರಿಚಲನೆಗೆ ಸಹಾಯ ಮಾಡುವ ಎಲೆಕ್ಟ್ರೋಮೆಕಾನಿಕಲ್ ಸಾಧನ, ಪ್ರಸ್ತುತ ಬಳಕೆಯಲ್ಲಿದೆ. ಆದರೆ ಇವುಗಳ ವೆಚ್ಚ ರೂ 1 ಕೋಟಿಗಿಂತಲೂ ಹೆಚ್ಚು ಹಾಗೂ ಮಧ್ಯಮ ವರ್ಗದವರಿಗೆ ಇದನ್ನು ಬಳಸುವುದು ದೂರದ ಮಾತಾಗಿದೆ ಎಂಬುದು ಐಐಟಿ-ಕಾನ್ಪುರದಲ್ಲಿ ಪ್ರೊಫೆಸರ್ ಹಾಗೂ ಈ ಪರಿಕರವನ್ನು ಅಭಿವೃದ್ಧಿಪಡಿಸಿದ ತಂಡದಲ್ಲಿರುವ ಮುಖ್ಯ ಸಂಶೋಧಕರಾದ ಅಮಿತಾಭ ಬಂಡೋಪಾಧ್ಯಾಯ ತಿಳಿಸಿದ್ದಾರೆ.
LVAD ಪರಿಕರಗಳು ಹೃದಯ ಕಸಿಗೆ ಮುಖ್ಯ ವಾಹಕವಾಗಿ ಬಳಸಲಾಗಿದೆ ಅಂದರೆ ಹೃದಯ ಕಸಿಗೆ ಪರ್ಯಾಯ ಹೃದಯ ಲಭ್ಯವಾಗುವವರೆಗೆ ಇದನ್ನು ತಾತ್ಕಾಲಿಕವಾಗಿ ಬಳಸಲಾಗುತ್ತದೆ. ಹೃದಯಂತ್ರವನ್ನು ಸಂಶೋಧಿಸಿರುವ ತಂಡವು ರೋಗಿಗೆ ದೀರ್ಘ ಸಮಯದವರೆಗೆ ಈ ಪರಿಕರ ಪ್ರಯೋಜನಕಾರಿಯಾಗುವಂತೆ ಮಾಡಲಿದೆ ಎಂಬುದು ಅಮಿತಾಭ್ ಮಾತಾಗಿದೆ.


ದೀರ್ಘ ಸಮಯದವರೆಗೆ ರೋಗಿಗೆ ಉಪಕಾರಿ


ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಕೈಗೆಟಕುವ ಹಾಗೂ ನವೀನ ಮಾದರಿಯ ಪರಿಕರವನ್ನು ಅಭಿವೃದ್ಧಿಪಡಿಸುವ ಇರಾದೆಯನ್ನು ಅಮಿತಾಭ್ ಹಾಗೂ ತಂಡ ಹೊಂದಿತ್ತು. ತಾವು ನಿರ್ಮಿಸುವ ಪರಿಕರ ದೀರ್ಘ ಸಮಯದವರೆಗೆ ರೋಗಿಗೆ ಅನುಕೂಲಕರವಾಗಿರಬೇಕು ಹಾಗೂ ಪ್ರತಿಯೊಬ್ಬರಿಗೂ ದೊರೆಯುವಂತಿರಬೇಕು ಎಂಬುದು ನಮ್ಮ ಗುರಿಯಾಗಿತ್ತು ಎಂದು ಅಮಿತಾಭ್ ತಿಳಿಸಿದ್ದಾರೆ.


best fruits for heart health
ಸಾಂದರ್ಭಿಕ ಚಿತ್ರ


ನಾರಾಯಣ ಹೆಲ್ತ್‌ನ ಸಂಸ್ಥಾಪಕರಾದ ಹೆಸರಾಂತ ಹೃದ್ರೋಗ ತಜ್ಞ ದೇವಿ ಶೆಟ್ಟಿ ಐಐಟಿ-ಕಾನ್ಪುರ ಯೋಜನೆಯಲ್ಲಿ ಕೆಲಸ ಮಾಡಲು ಬಂಡೋಪಾಧ್ಯಾಯ ಹಾಗೂ ತಂಡದವರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.


ಪರಿಣಿತರೊಂದಿಗೆ ಸಮಾಲೋಚನೆ ಆಸ್ಪತ್ರೆಗಳಿಗೆ ಭೇಟಿ


ತಂತ್ರಜ್ಞಾನ ರಂಗದಲ್ಲಿ ಪ್ರಾವೀಣ್ಯತೆ ಹೊಂದಿರುವವರು ಈ ಪರಿಕರದ ನಿರ್ಮಾಣದಲ್ಲಿ ಸಹಕಾರ ನೀಡಿದ್ದು ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಿತಿಗಳನ್ನು ಹೊಂದಿರಲಿಲ್ಲ ಹಾಗಾಗಿ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ ಹಾಗೂ ಪರಿಣಿತರ ಸಲಹೆಗಳನ್ನು ಪಡೆದುಕೊಂಡಿದ್ದಾರೆ.


ಇಂಜಿನಿಯರ್​ಗಳ ತಂಡವು ವೈದ್ಯರು ಹಾಗೂ ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದ್ದು ಯಾವ ರೀತಿಯ ಸಾಧನವನ್ನು ಅಭಿವೃದ್ಧಿಪಡಿಸಬೇಕು ಎಂಬುದನ್ನು ಕಂಡುಕೊಳ್ಳಲು ತೆರೆದ ಹೃದಯ ಶಸ್ತ್ರಚಿಕಿತ್ಸೆ (ಓಪನ್ ಹಾರ್ಟ್ ಸರ್ಜರಿ) ಅನ್ನು ವೀಕ್ಷಿಸಿದ್ದಾರೆ ಎಂದು ಅಮಿತಾಭ್ ತಿಳಿಸಿದ್ದಾರೆ.


bengaluru man s heart problem cured by alcohol treatment
ಸಾಂದರ್ಭಿಕ ಚಿತ್ರ


ಭಾರತದಲ್ಲಿ ಹೃದಯಾಘಾತ ಅತ್ಯಂತ ಸಾಮಾನ್ಯ ಹೃದಯ ಸಮಸ್ಯೆಯಾಗಿದೆ


ಪ್ರತಿ ವರ್ಷ, ಸುಮಾರು ಎಂಟರಿಂದ ಹತ್ತು ಮಿಲಿಯನ್ ರೋಗಿಗಳು ಹೃದಯ ವೈಫಲ್ಯದಿಂದ ಬಳಲುತ್ತಿದ್ದಾರೆ. ಹೃದಯ ವೈಫಲ್ಯ ಕಾರಣದಿಂದಲೇ ಹೆಚ್ಚಿನವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಸ್ಥಿತಿಯಲ್ಲಿ ಹೃದಯ ದುರ್ಬಲಗೊಳ್ಳುತ್ತದೆ ಹಾಗೂ ದೇಹದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗುವುದಿಲ್ಲ.


ಸಾಧನಕ್ಕೆ ಪೇಟೆಂಟ್ ನೀಡಲಾಗಿದೆ


ಸಾಧನದ ವಿನ್ಯಾಸಕ್ಕಾಗಿ ಈಗಾಗಲೇ ಪೇಟೆಂಟ್ ನೀಡಲಾಗಿದೆ ಹಾಗೂ ತಂಡ ಸಾಧನ ಅಂತಿಮ ಹಂತದ ಮಾದರಿಯನ್ನು ನಿರ್ಮಿಸುವತ್ತ ಕಾರ್ಯತತ್ಪರವಾಗಿದೆ. ಪ್ರಾಣಿಗಳ ಮೇಲೆ ಸಾಧನದ ಪ್ರಯೋಗವನ್ನು ಮಾಡುವ ಮೊದಲು ಕೆಲವೊಂದು ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ತಂಡ ತಿಳಿಸಿದೆ. ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟಲು ನಾವು ಲೋಹದ ಸರಿಯಾದ ಲೇಪನ ಅಥವಾ ವಿನ್ಯಾಸವನ್ನು ಕಂಡುಹಿಡಿಯಬೇಕು.
ಇದರೊಂದಿಗೆ ಪ್ಲೇಟ್‌ಲೆಟ್‌ಗಳು ಸಕ್ರಿಯಗೊಳ್ಳದಂತೆ ತಡೆಹಿಡಿಯಬೇಕು ಎಂದು ಬಂಡೋಪಾಧ್ಯಾಯ ವಿವರಿಸಿದ್ದಾರೆ. ಪ್ಲೇಟ್‌ಲೆಟ್‌ಗಳು ಸಕ್ರಿಯಗೊಂಡರೆ ರಕ್ತ ಹೆಪ್ಪುಗಟ್ಟುವಿಕೆ ಮತ್ತಷ್ಟು ತೊಡಕುಗಳಿಗೆ ಕಾರಣವಾಗುತ್ತದೆ ಎಂದು ಬಂಡೋಪಾಧ್ಯಾಯ ವಿವರಿಸಿದರು.


ಸಾಧನವನ್ನು ಬಳಕೆಗೆ ಪ್ರಸ್ತುತಪಡಿಸಲು ಇನ್ನಷ್ಟು ಹಾದಿಗಳನ್ನು ಜಯಿಸಬೇಕಾಗಿದೆ


ಈ ಸವಾಲುಗಳನ್ನು ಸಾಧಿಸಿದ ನಂತರವೂ ಹೃದಯಂತ್ರ ಇನ್ನಷ್ಟು ಸವಾಲುಗಳನ್ನು ಜಯಿಸಬೇಕಾಗಿದೆ. ಸಾಧನ ಲ್ಯಾಬ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ನಂತರ ಪ್ರಾಣಿಗಳ ಮೇಲೆ ಪ್ರಯೋಗಗಳನ್ನು ನಡೆಸಬೇಕಾಗುತ್ತದೆ ಎಂಬುದು ಬಂಡೋಪಾಧ್ಯಾಯ ಹೇಳಿಕೆಯಾಗಿದೆ.

Published by:Monika N
First published: