Ayodhya Verdict: 93ರ ವಯಸ್ಸಿನಲ್ಲಿ ಹಿಂದುಗಳ ಪರ ವಾದ ಮಂಡಿಸಿದ ಪರಾಸರನ್​ ಮತ್ತವರ ಅಗಾಧ ಜ್ಞಾಪಕ ಶಕ್ತಿ

ಮಾಜಿ ಅಟಾರ್ನಿ ಜನರಲ್ ಪರಾಸರನ್ ಅವರು ರಾಮಜನ್ಮಭೂಮಿ ಪ್ರಕರಣ ಸುಪ್ರೀಕೋರ್ಟ್​ಗೆ ವಿಚಾರಣೆಗೆ ಬಂದಂದಿನಿಂದಲೂ ಎಡೆಬಿಡದೇ ಇವೇ ಕೆಲಸಗಳಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ತೀವ್ರ ಪೈಪೋಟಿ ಕಂಡ ಈ ಪ್ರಕರಣದಲ್ಲಿ ಹಿಂದೂಗಳ ಪರವಾಗಿ ವಕಾಲತು ವಹಿಸಿದ ಪರಾಸರನ್​ ಅವರ ದಕ್ಷತೆ ಎಲ್ಲರ ಗಮನ ಸೆಳೆದಿದೆ.

Seema.R | news18-kannada
Updated:November 9, 2019, 3:02 PM IST
Ayodhya Verdict: 93ರ ವಯಸ್ಸಿನಲ್ಲಿ ಹಿಂದುಗಳ ಪರ ವಾದ ಮಂಡಿಸಿದ ಪರಾಸರನ್​ ಮತ್ತವರ ಅಗಾಧ ಜ್ಞಾಪಕ ಶಕ್ತಿ
ವಕೀಲರೊಂದಿಗೆ ಪರಸರನ್​
  • Share this:
ನವದೆಹಲಿ(ನ. 09): ಸುಪ್ರೀಂ ಕೋರ್ಟ್​ನಲ್ಲಿ ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ಹತ್ತಿರದಿಂದ ನೋಡಿದವರಿಗೆ 93 ವರ್ಷದ ಹಿರಿಯ ವಕೀಲ ಕೆ. ಪರಾಸನ್ ಚಿರಪರಿತರೇ ಆಗಿರುತ್ತಾರೆ. ಹಿಂದೂಗಳಿಗೆ ವಿವಾದಿತ ಬಾಬರಿ ಮಸೀದಿಯ ಜಾಗ ದಕ್ಕಲು ಹಗಲೂ ರಾತ್ರಿ ಶ್ರಮಿಸಿದವರಲ್ಲಿ ಅವರು ಪ್ರಮುಖರು. ಪ್ರಕರಣದ ವಾದಪ್ರತಿವಾದ ಮುಕ್ತಾಯಗೊಂಡ ನಂತರದ ದಿನಗಳಲ್ಲಿ 93 ವರ್ಷದ ಹಿರಿಯ ವಕೀಲ ಕೆ ಪರಾಸರನ್​ ಅವರಿಗೆ ಹೇಗೆ ದಿನದೂಡಬೇಕೆಂಬುದೇ ಗೊತ್ತಾಗುತ್ತಿರಲಿಲ್ಲವಂತೆ. ಅಷ್ಟರಮಟ್ಟಕ್ಕೆ ಅವರು ರಾಮಜನ್ಮಭೂಮಿಗಾಗಿ ಕಾನೂನಾತ್ಮಕ ಹೋರಾಟಗಳಲ್ಲಿ ಮುಳುಗಿಹೋಗಿದ್ದರು. ಕಳೆದ 8 ತಿಂಗಳಲ್ಲಿ ಅವರು ನ್ಯಾಯಾಲಯದ ಮುಂದೆ ಹಿಂದೂಗಳ ಪರವಾಗಿ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸಿದ್ದರು.

ಮಾಜಿ ಅಟಾರ್ನಿ ಜನರಲ್ ಪರಾಸರನ್ ಅವರು ರಾಮಜನ್ಮಭೂಮಿ ಪ್ರಕರಣ ಸುಪ್ರೀಕೋರ್ಟ್​ಗೆ ವಿಚಾರಣೆಗೆ ಬಂದಂದಿನಿಂದಲೂ ಎಡೆಬಿಡದೇ ಇವೇ ಕೆಲಸಗಳಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಅತ್ಯಂತ ತೀವ್ರ ಪೈಪೋಟಿ ಕಂಡ ಈ ಪ್ರಕರಣದಲ್ಲಿ ಹಿಂದೂಗಳ ಪರವಾಗಿ ವಕಾಲತು ವಹಿಸಿದ ಪರಾಸರನ್​ ಅವರ ದಕ್ಷತೆ ಎಲ್ಲರ ಗಮನ ಸೆಳೆದಿದೆ.

parasaran
ಹಿರಿಯ ವಕೀಲ ಪರಸರಣ್​


ಕೋರ್ಟ್​ನಲ್ಲಿ ಪ್ರತೀ ದಿನ 10:30ಕ್ಕೆ ವಿಚಾರಣೆ ಪ್ರಾರಂಭವಾಗುವುದಕ್ಕೆ ಮುಂಚೆ ಹಾಗೂ ದಿನಾಂತ್ಯದ ಬಳಿಕ ಅವರು ಈ ಪ್ರಕರಣದ ಪ್ರತಿಯೊಂದು ಆಯಾಮದ ಬಗ್ಗೆಯೂ ಗಮನ ಕೊಟ್ಟು ಕೆಲಸ ಮಾಡುತ್ತಿದ್ದರು. ಇವರ ಈ ಕೈಂಕರ್ಯಕ್ಕೆ ಬೆನ್ನೆಲುಬಾಗಿ ಕಿರಿಯ ವಕೀಲರ ಪಡೆಯನ್ನೇ ಕಟ್ಟಿಕೊಂಡಿದ್ದರು. ಕಿರಿಯ ವಕೀಲರಾದ ಪಿ.ವಿ. ಯೋಗೇಶ್ವರನ್, ಅನಿರುದ್ಧ್ ಶರ್ಮಾ, ಶ್ರೀಧರ್ ಪೋತ್ತರಾಜು, ಅದಿತಿ ದಾನಿ, ಅಶ್ವಿನ್ ಕುಮಾರ್ ಡಿಎಸ್ ಮತ್ತು ಭಕ್ರಿ ವರ್ಧನ್ ಸಿಂಗ್ ಅವರು ಪರಾಸರನ್ ಪ್ರಯತ್ನಗಳಿಗೆ ಶಕ್ತಿ ತುಂಬುತ್ತಿದ್ದರು. ಆದ್ಯಾತ್ಮಿಕವಾಗಿ ಶ್ರೀ ರಾಮ ದೇವರೊಂದಿಗೆ ಭಕ್ತಿಪರವಶಗೊಂಡಿದ್ದ ಪರಾಸರನ್​ಗೆ ಅವರ ಇಳಿವಯಸ್ಸಿನಲ್ಲಿ ಲವಲವಿಕೆಯಿಂದ, ಶ್ರದ್ಧೆಯಿಂದ ಕೆಲಸ ಮಾಡಲು ಪ್ರೇರೇಪಿಸುತ್ತಿದ್ದುಂತೂ ನಿಜ. ಪರಾಸರ್ ಅವರ ಅಗಾಧ ಶಕ್ತಿ ಕಂಡು ಅವರ ತಂಡ ಸೋಜಿಗಗೊಂಡಿತ್ತು. ಅವರ ನೆನಪಿನ ಶಕ್ತಿ ಬೆಕ್ಕಸ ಬೆರಗುಗೊಳಿಸಿತ್ತು. ಎಲ್ಲಾ ಪ್ರಮುಖ ಪ್ರಕರಣಗಳ ತಲೆ ಬುಡ ಎಲ್ಲವೂ ಅವರ ತಲೆಯಲ್ಲಿರುತ್ತಿದ್ದವು.

ಇದನ್ನು ಓದಿ: Ayodhya Verdict: ಅಯೋಧ್ಯೆ ತೀರ್ಪಿನ ಕುರಿತು ಪ್ರಧಾನಿ ಮೋದಿ, ಅಮಿತ್​ ಶಾ ಪ್ರತಿಕ್ರಿಯೆ

ಸರ್ವೊಚ್ಚ ನ್ಯಾಯಾಲಯದಲ್ಲಿ ಪರಾಸರನ್​ಗೆ ಎದುರಾಗಿ ಮುಸ್ಲಿಮರ ಪರ ವಾದ ಮಂಡಿಸುತ್ತಿದ್ದುದು ರಾಜೀವ್ ಧವನ್. ಭಾರೀ ಕೋಪಿಷ್ಠರಾದ ರಾಜೀವ್ ಧವನ್ ಅವರು ಸಾಕಷ್ಟು ದಾಖಲೆಗಳ ಸಂಗ್ರಹದ ಜೊತೆಗೆ ಕೋರ್ಟ್ ರೂಮ್​ನಲ್ಲಿ ರೌದ್ರಾವತಾರವನ್ನೇ ತೋರುತ್ತಿದ್ದ ವ್ಯಕ್ತಿತ್ವದವರಾಗಿದ್ದರು. ಒಮ್ಮೆ ಅವರು ದಾಖಲೆಗಳನ್ನೇ ಹರಿದುಹಾಕಿದ್ದುಂಟು. ಹಿಂದೂಗಳ ಪರ ವಕೀಲರ ವಾದ ಮೂರ್ಖತನದ್ದು ಎಂದು ಆರ್ಭಟಿಸಿದ್ದುಂಟು. ಆದರೂ ಕೂಡ ಕಳೆದ 40 ದಿನದಲ್ಲಿ ಪರಾಸರನ್ ಒಮ್ಮೆಯೂ ಸಹನೆ ಕಳೆದುಕೊಂಡದ್ದಿಲ್ಲ.

ಅಕ್ಟೋಬರ್ 16ರಂದು ವಾದ ಪ್ರತಿವಾದ ಮುಕ್ತಾಯವಾದಾಗ ಪರಾಸರನ್ ಅವರು ಕೋರ್ಟ್​ನ ಹೊರಗೆ 15 ನಿಮಿಷ ಕಾದು ರಾಜೀವ್ ಧವನ್ ಅವರನ್ನು ಭೇಟಿಯಾಗಿ ಜೊತೆಯಾಗಿ ನಿಂತು ಫೋಟೋ ಕೂಡ ತೆಗೆಸಿಕೊಂಡಿದ್ದರು. ವಕೀಲರು ಕೋರ್ಟ್ ರೂಮಲ್ಲಿ ಎಷ್ಟೇ ಕಿತ್ತಾಡಿದರೂ ಹೊರಗೆ ಅವರು ಸಹಜವಾಗಿಯೇ ಇರುತ್ತಾರೆ ಎಂಬ ಓಪನ್ ಸೀಕ್ರೆಟ್ ಈ ಘಟನೆಯಿಂದ ಸ್ಪಷ್ಟವಾಗುತ್ತದೆ. ಹಾಗೆಯೇ, ಕೋರ್ಟ್​ನ ತೀರ್ಪು ಏನೇ ಬಂದರೂ ಪ್ರಕರಣದ ಉಭಯ ಪಕ್ಷಗಳು ಪರಸ್ಪರ ಸಾಮರಸ್ಯದಿಂದ ಇರಬೇಕೆಂಬ ಸಂದೇಶವೂ ಈ ಘಟನೆಯ ಹಿಂದಿದೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕಿದೆ.
First published:November 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading