ಅಮೆರಿಕಾ ಹಿಮೋಫಿಲಿಯಾ ಬಿ ವಂಶವಾಹಿಗೆ ಹೆಮ್ಜೆನಿಕ್ಸ್ (Hemgenix) ಎಂಬ ಹೆಸರಿನ ಔಷಧಿಯನ್ನು (Medicine) ಅಭಿವೃದ್ಧಿಪಡಿಸಿದ್ದು, ಅನುಮೋದನೆ ಕೂಡ ಪಡೆದುಕೊಂಡಿದೆ. ಮತ್ತು ಇದು ಅತ್ಯಂತ ದುಬಾರಿ ಔಷಧಿ ಎಂದೂ ಸಹ ಹೇಳಲಾಗುತ್ತಿದೆ. ಯುಎಸ್ನಲ್ಲಿ (USA) ಅನುಮೋದನೆ ಪಡೆದುಕೊಂಡ ಹಿಮೋಫಿಲಿಯಾ ಬಿ ಚಿಕಿತ್ಸೆಗೆ ನೀಡುವ ಔಷಧ ಒಂದು ಡೋಸ್ಗೆ 3.5 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿಯಲ್ಲಿ ಇದು ಸುಮಾರು 29 ಕೋಟಿ (₹285,695,900.00) ಆಗಿದೆ.
ಹಿಮೋಫಿಲಿಯಾ ರೋಗಸ್ಥಿತಿ
ಹಿಮೋಫಿಲಿಯಾ ಒಂದು ರಕ್ತಸ್ರಾವ ಕಾಯಿಲೆಯಾಗಿದ್ದು, ದೇಹದಲ್ಲಿ ರಕ್ತಹೆಪ್ಪುಗಟ್ಟುವಿಕೆ ಕ್ರಿಯೆ ನಿಧಾನವಾಗುತ್ತದೆ. ಹಿಮೋಫಿಲಿಯಾದಲ್ಲಿ ಎ, ಬಿ, ಸಿ ಎಂಬ ಮೂರು ವಿಧಗಳಿವೆ. ರಕ್ತಹೆಪ್ಪುಗಟ್ಟಲು ನೆರವಾಗುವ 13 ಫ್ಯಾಕ್ಟರ್ಗಳಲ್ಲಿ 8ನೇ ಫ್ಯಾಕ್ಟರ್ ಅಥವಾ ಘಟಕ ಕಡಿಮೆ ಇದ್ದರೆ ಅದನ್ನು ಟೈಪ್ ಎ ಎಂದು, 9ನೇ ಫ್ಯಾಕ್ಟರ್ ಕಡಿಮೆ ಇದ್ದರೆ ಟೈಪ್ ಬಿ ಎಂದು ಕರೆಯಲಾಗುತ್ತದೆ. ಟೈಪ್ ಎ ಹಿಮೋಫಿಲಿಯಾ ಹೆಚ್ಚಾಗಿ ಕಾಣಿಸುತ್ತದೆ. ಬಿ ಮತ್ತು ಸಿ ಹಿಮೋಫಿಲಿಯಾ ಕಾಯಿಲೆ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಮಾರಣಾಂತಿಕವೂ ಹೌದು. ಹೀಗಾಗಿ ಇದನ್ನು ತ್ವರಿತವಾಗಿ ಪರಿಹರಿಸಲು ಅಮೆರಿಕಾ ದುಬಾರಿ ಔಷಧಿಗೆ ಅನುಮೋದನೆ ಪಡೆದುಕೊಂಡಿದೆ.
ಇದನ್ನೂ ಓದಿ: Vivek Agnihotri: 'ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹುಟ್ಟುಹಬ್ಬ, ವಿವಾದಗಳ ಮೆಟ್ಟಿ ನಿಂತ ನಿರ್ಮಾಪಕ!
ರಕ್ತಸ್ರಾವ ಪ್ರಕರಣಗಳು 54% ರಷ್ಟು ಕಡಿಮೆ
ಇದೀಗ ಹಿಮೋಫಿಲಿಯಾ ಬಿ ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಿಯನ್ನು ಯುಎಸ್ನಲ್ಲಿ ಅನುಮೋದಿಸಲಾಗಿದೆ. ಹೆಮ್ಜೆನಿಕ್ಸ್ ಔಷಧಿಯನ್ನು CSL ಬೆಹ್ರಿಂಗ್ ತಯಾರಿಸಿದೆ. CSL ಬೆಹ್ರಿಂಗ್ನ ಹೆಮ್ಜೆನಿಕ್ಸ್ ಔಷಧಿ ಒಂದು ವರ್ಷದ ಅವಧಿಯಲ್ಲಿ ನಿರೀಕ್ಷಿತ ರಕ್ತಸ್ರಾವದ ಘಟನೆಗಳ ಸಂಖ್ಯೆಯನ್ನು 54% ರಷ್ಟು ಕಡಿತಗೊಳಿಸಿದೆ ಎಂದು ಚಿಕಿತ್ಸೆಯ ಪ್ರಮುಖ ಅಧ್ಯಯನವು ಕಂಡುಹಿಡಿದಿದೆ.
ಪ್ರಸ್ತುತ ಅದನ್ನು ಫ್ಯಾಕ್ಟರ್ IX ನ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ಈ ಚಿಕಿತ್ಸೆ ದುಬಾರಿ ಮತ್ತು ದೀರ್ಘವಾಗಿದೆ. ಈ ಔಷಧವನ್ನು ಈಗ ಹಿಮೋಫಿಲಿಯಾದ ಮಾರಣಾಂತಿಕ ಸ್ಥಿತಿಯನ್ನು ನಿಯಂತ್ರಿಸಲು ಬಳಸಲಾಗುತ್ತದೆ.
"ಬೆಲೆ ಹೆಚ್ಚಿದ್ದರೂ ಫಲಿತಾಂಶ ಉತ್ತಮವಾಗಿದೆ"
"ಬೆಲೆಯು ನಿರೀಕ್ಷೆಗಿಂತ ಸ್ವಲ್ಪ ಹೆಚ್ಚಿದ್ದರೂ, ಇದು ಚಿಕಿತ್ಸೆಯನ್ನು ಯಶಸ್ವಿಯಾಗಿಸುವ ಅವಕಾಶವನ್ನು ಹೊಂದಿದೆ. ಅಸ್ತಿತ್ವದಲ್ಲಿರುವ ಔಷಧಿಗಳೂ ಸಹ ತುಂಬಾ ದುಬಾರಿಯಾಗಿದೆ. ಮತ್ತು ಹಿಮೋಫಿಲಿಯಾ ರೋಗಿಗಳು ಈ ಔಷಧಿಗಳಿಂದ ಹೆಚ್ಚಿನ ಪರಿಣಾಮವನ್ನು ಕಾಣದೇ ನಿರಂತರವಾಗಿ ರಕ್ತಸ್ರಾವದ ಭಯದಲ್ಲಿ ಬದುಕುತ್ತಿದ್ದಾರೆ. ಬೆಲೆ ಹೆಚ್ಚಾದರೂ ಸಹ ಹೆಮ್ಜೆನಿಕ್ಸ್ ಔಷಧಿ ಪರಿಣಾಮಕಾರಿಯಾದ ಫಲಿತಾಂಶ ನೀಡುತ್ತದೆ ಎಂದು ಜೈವಿಕ ತಂತ್ರಜ್ಞಾನ ಹೂಡಿಕೆದಾರರಾದ ಬ್ರಾಡ್ ಲೋನ್ಕಾರ್ ಹೇಳಿದರು.
ಹಿಮೋಫಿಲಿಯಾ ಚಿಕಿತ್ಸೆಯಲ್ಲಿ ಪ್ರಗತಿ ಕಂಡುಬಂದಿದ್ದರೂ, ರಕ್ತಸ್ರಾವವನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಅಗತ್ಯವಿರುವ ಕ್ರಮಗಳು ರೋಗಿಗಳ ಜೀವನದ ಗುಣಮಟ್ಟವನ್ನು ಕುಗ್ಗಿಸಬಹುದು ಎಂದು US ಆಹಾರ ಮತ್ತು ಔಷಧ ಆಡಳಿತದ ಜೈವಿಕ ಮೌಲ್ಯಮಾಪನ ಮತ್ತು ಸಂಶೋಧನೆಯ ಕೇಂದ್ರದ ನಿರ್ದೇಶಕ ಪೀಟರ್ ಮಾರ್ಕ್ಸ್ ಹೇಳಿದ್ದಾರೆ. ಹೆಮ್ಜೆನಿಕ್ಸ್ ಕಾಯಿಲೆಯಿಂದ ಪ್ರಭಾವಿತರಾದ ಜನರಿಗೆ ನವೀನ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಇದು ಪ್ರಮುಖ ಪ್ರಗತಿಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಹೇಳಿದರು.
ಹೆಮ್ಜೆನಿಕ್ಸ್ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಸಾಂಪ್ರದಾಯಿಕ ಹಿಮೋಫಿಲಿಯಾ ಚಿಕಿತ್ಸೆಯು ದೇಹವು ಹೆಪ್ಪುಗಟ್ಟುವಿಕೆಯನ್ನು ರೂಪಿಸಲು ಮತ್ತು ರಕ್ತಸ್ರಾವವನ್ನು ನಿಲ್ಲಿಸಲು ಅಗತ್ಯವಿರುವ ಹೆಪ್ಪುಗಟ್ಟುವಿಕೆ ಅಂಶಗಳು ಎಂದು ಕರೆಯಲ್ಪಡುವ ಕಾಣೆಯಾದ ಪ್ರೋಟೀನ್ಗಳನ್ನು ತುಂಬಿಸುತ್ತದೆ. ಹೆಮ್ಜೆನಿಕ್ಸ್ ಯಕೃತ್ತಿಗೆ ಕಾಣೆಯಾದ ಹೆಪ್ಪುಗಟ್ಟುವಿಕೆಯ ಅಂಶಗಳನ್ನು ಉತ್ಪಾದಿಸುವ ಜೀನ್ ಅನ್ನು ತಲುಪಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ, ಅಲ್ಲಿ ಅದು ಫ್ಯಾಕ್ಟರ್ IX ಪ್ರೊಟೀನ್ ಉತ್ಪತ್ತಿ ಮಾಡಲು ಕೆಲಸ ಪ್ರಾರಂಭಿಸುತ್ತದೆ. ಈ ಔಷಧ ಜೀನ್ ಚಿಕಿತ್ಸೆಗಳು ಅವುಗಳ ಮೂಲ ಕಾರಣಗಳನ್ನು ಸರಿಪಡಿಸುವ ಮೂಲಕ ವಿನಾಶಕಾರಿ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ.
ಯುಎಸ್, ಯೂರೋಪ್ನಲ್ಲಿ ಹಿಮೋಫಿಲಿಯಾ ಕೇಸ್ಗಳು ಹೆಚ್ಚು
uniQure ಪ್ರಕಾರ ಯುಎಸ್ ಮತ್ತು ಯೂರೋಪ್ನಲ್ಲಿ ಸುಮಾರು 16 ಮಿಲಿಯನ್ ಜನರು ಹಿಮೋಫಿಲಿಯಾ B ಯನ್ನು ಹೊಂದಿದ್ದಾರೆ. ಹಿಮೋಫಿಲಿಯಾ ಎ ಹೆಚ್ಚು ಸಾಮಾನ್ಯವಾಗಿದೆ.
ಇದನ್ನೂ ಓದಿ: Bigg Boss Kannada: ನೀವು ಸತ್ತ ಕುದುರೆ ತರ, ಆರ್ಯವರ್ಧನ್-ರೂಪೇಶ್ ರಾಜಣ್ಣ ಮಧ್ಯೆ ಜೋರು ಜಗಳ!
ದುಬಾರಿ ಔಷಧಗಳು
ಶಿಶುಗಳ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯ ಚಿಕಿತ್ಸೆಗಾಗಿ ಇರುವ ನೊವಾರ್ಟಿಸ್ ಎಜಿಯ ಝೊಲ್ಗೆನ್ಸ್ಮಾವು 2019ರಲ್ಲಿ ಅನುಮೋದನೆ ಪಡೆದುಕೊಂಡಾಗ ಅದರ ಬೆಲೆ $ 2.1 ಮಿಲಿಯನ್ ಇತ್ತು. ಹಾಗೆಯೇ ರಕ್ತದ ಅಸ್ವಸ್ಥತೆ ಬೀಟಾ ಥಲಸ್ಸೆಮಿಯಾ ಔಷಧಿಯಾದ ಜಿಂಟೆಗ್ಲೋ ಈ ವರ್ಷದ ಆರಂಭದಲ್ಲಿ $ 2.8 ಮಿಲಿಯನ್ ಬೆಲೆ ಹೊಂದಿತ್ತು. ಆದರೆ ಇವೆಲ್ಲವನ್ನೂ ಮೀರಿ ಈಗ ಅನುಮೋದನೆಗೊಂಡಿರುವ ಹಿಮೋಫಿಲಿಯಾ ಔಷಧಿ ಒಂದು ಡೋಸ್ಗೆ 3.5 ಮಿಲಿಯನ್ ಡಾಲರ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ