News18 India World Cup 2019

ಮಕ್ಕಳ ಉಳಿವಿಗಾಗಿ ಕಂಡು ಹಿಡಿದ ಈ ಔಷಧ ಬೆಲೆ ಬರೋಬ್ಬರಿ 14 ಕೋಟಿ; ಯಾವುದು ಈ ಮೆಡಿಸಿನ್​​?

ಎಳೆಯ ಮಕ್ಕಳಲ್ಲಿ ಕಂಡು ಬರುವ ಈ ಸ್ಪಿನಲ್​​​ ಮಸ್ಕೂಲರ್​ ರೋಗ ಶಿಶುವಿನ ಮಾಂಸ ಖಂಡ ಮತ್ತು ಕೇಂದ್ರೀಯ ನರಮಂಡಲ ಮೇಲೆ ಪರಿಣಾಮ ಬೀರುತ್ತಿದೆ. ಅಂತೆಯೇ ಈ ರೋಗದ ಪರಿಣಾಮ ಮಕ್ಕಳು ನಡೆಯಲು, ಆಹಾರ ಸೇವಿಸಲು ಪರದಾಡುತ್ತಾರೆ. ಹಾಗೆಯೇ ಇವರಲ್ಲಿ ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳಲು ಆರಂಭವಾಗುತ್ತದೆ.

news18
Updated:May 25, 2019, 7:11 PM IST
ಮಕ್ಕಳ ಉಳಿವಿಗಾಗಿ ಕಂಡು ಹಿಡಿದ ಈ ಔಷಧ ಬೆಲೆ ಬರೋಬ್ಬರಿ 14 ಕೋಟಿ; ಯಾವುದು ಈ ಮೆಡಿಸಿನ್​​?
ಔಷಧ
news18
Updated: May 25, 2019, 7:11 PM IST
ನವದೆಹಲಿ(ಮೇ.25): ಅಮೆರಿಕದಲ್ಲಿ ಹುಟ್ಟುವ ಶಿಶುಗಳಲ್ಲಿ ಯಥೇಚ್ಛವಾಗಿ ಕಾಣಿಸಿಕೊಳ್ಳುವ ರೋಗವೆಂದರೆ ಸ್ಪಿನಲ್​​​ ಮಸ್ಕೂಲರ್​​​ ಅಟ್ರೊಫಿ. ಈ ರೋಗಕ್ಕೆ ಮುಕ್ತಿ ಕಾಣಿಸಲು ಕೊನೆಗೂ ಔಷಧ ಕಂಡು ಹಿಡಿಯಲಾಗಿದೆ. ಈ ಔಷಧಿಯ ಬೆಲೆ 14 ಕೋಟಿ ಆಗಿದ್ದು, ಈಗಾಗಲೇ ಅಮೆರಿಕ ಸರ್ಕಾರ ಮಾರಾಟಕ್ಕೆ ಅನುಮತಿ ನೀಡಿದೆ.

ಸ್ಪಿನಲ್​​ ಮಸ್ಕೂಲರ್​ ರೋಗ ಕಾಣಿಸಿಕೊಳ್ಳುತ್ತಿರುವ ಕಾರಣ ದಿನೇದಿನೇ ಸಾವಿಗೆ ತುತ್ತಾಗುತ್ತಿರುವ ಎಳೆಯ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ವರ್ಷಕ್ಕೆ ಸುಮಾರು 400 ಮಕ್ಕಳು ಈ ರೋಗದಿಂದ ಬಳಲುತ್ತಿದ್ದಾರೆ ಎನ್ನುತ್ತಿವೆ ಆಸ್ಪತ್ರೆ ಮೂಲಗಳು.

ಎಳೆಯ ಮಕ್ಕಳಲ್ಲಿ ಕಂಡು ಬರುವ ಈ ಸ್ಪಿನಲ್​​​ ಮಸ್ಕೂಲರ್​ ರೋಗ ಶಿಶುವಿನ ಮಾಂಸ ಖಂಡ ಮತ್ತು ಕೇಂದ್ರೀಯ ನರಮಂಡಲ ಮೇಲೆ ಪರಿಣಾಮ ಬೀರುತ್ತಿದೆ. ಅಂತೆಯೇ ಈ ರೋಗದ ಪರಿಣಾಮ ಮಕ್ಕಳು ನಡೆಯಲು, ಆಹಾರ ಸೇವಿಸಲು ಪರದಾಡುತ್ತಾರೆ. ಹಾಗೆಯೇ ಇವರಲ್ಲಿ ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳಲು ಆರಂಭವಾಗುತ್ತದೆ.

ಇದನ್ನೂ ಓದಿ: ಬೆತ್ತಲೆ ಫೋಟೋ ಕಳಿಸಿ ಎಂದವನಿಗೆ ‘ನ್ಯೂಡ್ಸ್ ಪಿಕ್​’ ಕಳಿಸಿದ ಗಾಯಕಿ..!

ಇದೇ ರೋಗಕ್ಕೆ ಸದ್ಯ ಔಷಧ ಕಂಡು ಹಿಡಿಯಲಾಗಿದೆ. ಅಮೆರಿಕಾ ಮೂಲದ ನೋವರ್ಟಿಸ್ ಎಂಬ ಔಷಧ ಸಂಶೋಧನಾ ಸಂಸ್ಥೆ ಈ ಮೆಡಿಸಿನ್ ಕಂಡು ಹಿಡಿದಿದೆ.

ಅಮೆರಿಕದ ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌ (ಎಫ್‌ಡಿಎ) ಕೂಡ ಈಗಾಗಲೇ ಈ ಔಷಧ ಬಳಕೆಗೆ ಅನುಮತಿ ನೀಡಿದೆ. ಸ್ಪಿನಲ್​​​ ಮಸ್ಕೂಲರ್​​​ ಅಟ್ರೊಫಿ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಈ ಔಷಧ ಬಳಸಬಹುದಾಗಿದೆ. ಇವರಿಗೆ ನೀಡುವ ಚಿಕಿತ್ಸೆಗೆ ‘Zolgensma ‘ ಎಂದು ಕೂಡ ಕರೆಯಲಾಗಿದೆ. ಜೆನಿಟಿಕ್​​ ಪರೀಕ್ಷೆ ಮೂಲಕ ರೋಗ ದೃಢಪಡಿಸಿದ ಬಳಿಕ ಈ ಚಿಕಿತ್ಸೆ ಮಕ್ಕಳಿಗೆ ನೀಡಬಹುದು ಎಂದು ಹೇಳಲಾಗುತ್ತಿದೆ.
Loading...

ಒಟ್ನಲ್ಲಿ ಮಕ್ಕಳ ಉಳಿವಿಗಾಗಿ ಔಷಧ ಕಂಡು ಹಿಡಿದರೂ, ಇದರ ಬೆಲೆ ಮಾತ್ರ ಭಾರೀ ದುಬಾರಿ. ಸುಮಾರು 14 ಕೋಟಿ ಬೆಲೆಯುಳ್ಳ ಈ ಔಷಧ ಮಕ್ಕಳ ಪ್ರಾಣ ಉಳಿಸುತ್ತದಾದರೂ, ಯಾರು ಖರೀದಿ ಮಾಡುತ್ತಾರೆ ಎಂಬುದು ಯಕ್ಷಪ್ರಶ್ನೆ.

First published:May 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...