Viral Video: ಬಾಹ್ಯಾಕಾಶದಲ್ಲಿ ಪಿಜ್ಜಾ ತಯಾರಿಸಿ ಸವಿದ ಗಗನಯಾತ್ರಿಗಳು

7 ಗಗನಯಾತ್ರಿಗಳ ಗುಂಪು 'ಫ್ಲೋಟಿಂಗ್' ಅಂದರೆ ಗಾಳಿಯಲ್ಲಿ ತೇಲುತ್ತಿರುವ ಪಿಜ್ಜಾ ಪಾರ್ಟಿ ಆನಂದಿಸುತ್ತಿದ್ದು, ನಿಲ್ದಾಣದಲ್ಲಿ ಡೂ ಇಟ್‌ ಯುರ್‌ಸೆಲ್ಫ್‌ (DIY) ಪಿಜ್ಜಾಗಳನ್ನು ತಯಾರಿಸಲಾಗುತ್ತದೆ. ಹೇಗೆ ತಯಾರಿಸುತ್ತಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೀವೇ ನೋಡಿ.

ಬಾಹ್ಯಾಕಾಶದಲ್ಲಿ ಪಿಜ್ಜಾ ಸವಿದ ಗಗನಯಾತ್ರಿಗಳು

ಬಾಹ್ಯಾಕಾಶದಲ್ಲಿ ಪಿಜ್ಜಾ ಸವಿದ ಗಗನಯಾತ್ರಿಗಳು

  • Share this:
ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲಿ ಪಿಜ್ಜಾ ಒಂದು ಜನಪ್ರಿಯ ಖಾದ್ಯ ಎಂಬ ವಿಷಯವನ್ನು ಅಲ್ಲಗಳೆಯುವಂತಿಲ್ಲ. ಪ್ರಪಂಚದಾದ್ಯಂತದ ಆಹಾರಪ್ರಿಯರು ವಿವಿಧ ಆಕಾರಗಳು ಮತ್ತು ರೂಪಗಳಲ್ಲಿ ಇಟಲಿಯ ಮೂಲದ ಪಿಜ್ಜಾದ ರುಚಿಯನ್ನು ಆನಂದಿಸುತ್ತಾ ಸವಿಯುತ್ತಾರೆ. ಇನ್ನುಈ ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಹಲವರು ಮನೆಯಲ್ಲೇ ಪಿಜ್ಜಾ ಮಾಡುವುದನ್ನು ಕಲಿತುಕೊಂಡಿದ್ದು, ತಿನ್ನಬೇಕು ಎನಿಸಿದಾಗಲೆಲ್ಲ ಹೆಚ್ಚಾಗಿ ವೀಕೆಂಡ್‌ಗಳಲ್ಲಿ ಪಿಜ್ಜಾ ಮಾಡಿಕೊಂಡು ತಿನ್ನುತ್ತಾರೆ. ಪಿಜ್ಜಾಗೆ ವಿವಿಧ ರೀತಿಯ ಮೇಲೋಗರ ಅಥವಾ ಟಾಪ್ಪಿಂಗ್ಸ್‌ಗಳನ್ನೂ ಹಾಕಿಕೊಂಡು ತಿನ್ನಬಹುದು. ಆದರೆ, ಬಾಹ್ಯಾಕಾಶದಲ್ಲಿ ಪಿಜ್ಜಾ ತಯಾರಿಕೆ ಮಾಡಿದರೆ ಹೇಗಿರುತ್ತೆ ಅಂತ ಒಮ್ಮೆ ಯೋಚನೆ ಮಾಡಿದ್ದೀರಾ..? ಫ್ರೆಂಚ್ ಗಗನಯಾತ್ರಿ ಥಾಮಸ್ ಪೆಸ್ಕ್ವೆಟ್‌  ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಮ್ಮ ಸಹ ಗಗನಯಾತ್ರಿಗಳ ಪಿಜ್ಜಾ ತಯಾರಿಸಿದ್ದಾರೆ. ಪಿಜ್ಜಾ ತಯಾರಿಕೆಯ ಪುಟ್ಟ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

7 ಗಗನಯಾತ್ರಿಗಳ ಗುಂಪು 'ಫ್ಲೋಟಿಂಗ್' ಅಂದರೆ ಗಾಳಿಯಲ್ಲಿ ತೇಲುತ್ತಿರುವ ಪಿಜ್ಜಾ ಪಾರ್ಟಿ ಆನಂದಿಸುತ್ತಿದ್ದು, ನಿಲ್ದಾಣದಲ್ಲಿ ಡೂ ಇಟ್‌ ಯುರ್‌ಸೆಲ್ಫ್‌ (DIY) ಪಿಜ್ಜಾಗಳನ್ನು ತಯಾರಿಸಲಾಗುತ್ತದೆ. ಹೇಗೆ ತಯಾರಿಸುತ್ತಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೀವೇ ನೋಡಿ.


View this post on Instagram


A post shared by Thomas Pesquet (@thom_astro)


ಅಂತರಿಕ್ಷದಲ್ಲಿ ಗಗನಯಾತ್ರಿಗಳು ಪಿಜ್ಜಾಗಳನ್ನು ತಯಾರಿಸಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಿದ್ದಾರೆ. ಈ ವಿಡಿಯೋವನ್ನು 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 1,49,000ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಅಲ್ಲದೆ, ಸಾವಿರಾರು ನೆಟ್ಟಿಗರು ಈ ವೈರಲ್‌ ವಿಡಿಯೋಗೆ ಕಮೆಂಟ್‌ ಮಾಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ದಲ್ಲಿ ಗಗನಯಾತ್ರಿಗಳು ಇದ್ದಾಗ ಪಿಜ್ಜಾ ತಯಾರಿಸುತ್ತಿರುವ ವಿಡಿಯೋವನ್ನು ರೆಕಾರ್ಡ್‌ ಮಾಡಿರುವುದು ವಿಶೇಷ.

ಇದನ್ನೂ ಓದಿ: Swetha Changappa: ಕೊನೆಗೂ ಈಡೇರಿತು ಕಿರುತೆರೆ ನಟಿ ಶ್ವೇತಾ ಚೆಂಗಪ್ಪ ಆಸೆ..!

ಪಿಜ್ಜಾ ಪಾರ್ಟಿಯ ವಿಡಿಯೋವನ್ನು  @thom_astro ಎಂಬುವರು ಇನ್ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ''ಸ್ನೇಹಿತರೊಂದಿಗೆ ತೇಲಾಡುತ್ತಿರುವ ಪಿಜ್ಜಾ ರಾತ್ರಿ. ಇದು ಭೂಮಿಯ ಮೇಲಿನ ಶನಿವಾರದಂತೆ ಭಾಸವಾಗುತ್ತದೆ. ಒಳ್ಳೆಯ ಬಾಣಸಿಗ ಎಂದಿಗೂ ತಮ್ಮ ರಹಸ್ಯಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಹೇಳುವ ಅವರು, ನಾನು ವಿಡಿಯೋ ಮಾಡಿದ್ದೇನೆ. ಆದ್ದರಿಂದ ನೀವು ಜಡ್ಜ್‌ ಮಾಡಬಹುದು. ಎಲ್ಲವನ್ನೂ ಹಾಕಿ ಅನಾನಸ್‌ ಬಿಟ್ಟರೆ, ಅದು ಇಟಲಿಯಲ್ಲಿ ಗಂಭೀರ ಅಪರಾಧ'' ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Alia Bhatt: ಸಡಕ್ 2 ಚಿತ್ರ ನೆಲ ಕಚ್ಚಿದರೂ ಆಲಿಯಾ ಭಟ್​ ಕೈಯಲ್ಲಿವೆ ಸಾಲು ಸಾಲು ಸಿನಿಮಾಗಳು

ಒಂದು ನಿಮಿಷದ 24 ಸೆಕೆಂಡುಗಳ ಕ್ಲಿಪ್‌ನಲ್ಲಿ, ಗಗನಯಾತ್ರಿಗಳು ತಮ್ಮ ಪಿಜ್ಜಾಗಳನ್ನು ಮೂಲದಿಂದಲೇ ಆರಂಭಿಸುವ ಮೂಲಕ ಅಸೆಂಬಲ್‌ ಮಾಡುವುದನ್ನು ನಾವು ನೋಡುತ್ತೇವೆ. ನಂತರ, ಬೇಸ್‌ಗೆ ಪಿಜ್ಜಾ ಸಾಸ್‌, ಚೀಸ್‌ ಮತ್ತು ಪೆಪ್ಪೆರೋನಿಯಂತಹ ಟಾಪಿಂಗ್ಸ್‌ನೊಂದಿಗೆ ತಯಾರಿಸಿದ್ದಾರೆ. ಈ ಸಂಪೂರ್ಣ ಪಿಜ್ಜಾ ತಯಾರಿಕೆ ವೇಳೆ, ಪಿಜ್ಜಾಗಳು ಬಾಹ್ಯಾಕಾಶದಲ್ಲಿ ತೇಲುತ್ತಿರುವುದರಿಂದ ಈ ವಿಡಿಯೋವನ್ನು ಅತಿವಾಸ್ತವಿಕವಾದ ಗಡಿಯಾರವನ್ನಾಗಿ ಮಾಡುತ್ತದೆ. ನಂತರ ಪಿಜ್ಜಾಗಳನ್ನು ಫಾಯಿಲ್‌ನಲ್ಲಿ ಸುತ್ತಿ ಬೇಯಿಸಲಾಗುತ್ತದೆ. ನಂತರ ಗಗನಯಾತ್ರಿಗಳು ರುಚಿಕರವಾದ ಟ್ರೀಟ್‌ನೊಂದಿಗೆ ಈ ಚಿತ್ರಕ್ಕಾಗಿ ಪೋಸ್ ನೀಡಿದ್ದಾರೆ.

ಇದನ್ನೂ ಓದಿ: Disha Madan: ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕುಲವಧು ಧಾರಾವಾಹಿ ಖ್ಯಾತಿಯ ನಟಿ ದಿಶಾ ಮದನ್​..!

ಪಿಜ್ಜಾ ಕಿಟ್‌ಗಳು ಕಳೆದ ವಾರ ಉಡಾವಣೆಗೊಂಡ ಬಾಹ್ಯಾಕಾಶ ನಿಲ್ದಾಣಕ್ಕೆ ಮರುಪೂರಣದ ಭಾಗವಾಗಿತ್ತು. ತಾಜಾ ಕಿವಿ, ಸೇಬು ಮತ್ತು ಟೊಮ್ಯಾಟೋ ಸೇರಿ 3,700 ಕೆಜಿ ತೂಕದ ವಸ್ತುಗಳನ್ನು ಸಾಗಿಸಲಾಗಿತ್ತು.  ಈ ತೇಲಾಡುತ್ತಿರುವ ಪಿಜ್ಜಾ ಪಾರ್ಟಿಯ ವೈರಲ್‌ ವಿಡಿಯೋ ಕುರಿತು ನಿಮ್ಮ ಅಭಿಪ್ರಾಯವೇನು..?
Published by:Anitha E
First published: