Astrology Themed Coins: ಜ್ಯೋತಿಷ್ಯಶಾಸ್ತ್ರ ನಂಬಿಕೆ ಹೊಂದಿದ್ದ ಮೊಘಲ್ ಚಕ್ರವರ್ತಿ; ಜಹಾಂಗೀರ್ ಕಾಲದ ನಾಣ್ಯ ಸಾಕ್ಷಿ

ನಾಣ್ಯಗಳಲ್ಲಿ ಚಿನ್ನ, ಬೆಳ್ಳಿ, ಕಂಚು ಮತ್ತು ತಾಮ್ರಗಳಂತಹ ಲೋಹಗಳನ್ನು ಬಳಸಿರುವ ಆಧಾರದ ಮೇಲೆ ಆ ಸಾಮ್ರಾಜ್ಯದ ಆರ್ಥಿಕ ಸ್ಥಿತಿಯನ್ನು ಅಳೆಯಲಾಗುತ್ತಿತ್ತು. ಹೀಗೆ ನಾಣ್ಯಗಳು ನಮ್ಮ ಇತಿಹಾಸ ತಿಳಿಯಲು ಬಹಳ ಮುಖ್ಯವಾಗಿದೆ. ನಾವಿಂದು ಆ ನಾಣ್ಯಗಳ ಕುರಿತು ಕೆಲವು ವಿಷಯಗಳನ್ನು ಹಂಚಿಕೊಳ್ಳೋಣ ಬನ್ನಿ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.

ಜಹಾಂಗೀರ್ ಕಾಲದ ಜ್ಯೋತಿಷ್ಯಶಾಸ್ತ್ರದ ನಾಣ್ಯಗಳು

ಜಹಾಂಗೀರ್ ಕಾಲದ ಜ್ಯೋತಿಷ್ಯಶಾಸ್ತ್ರದ ನಾಣ್ಯಗಳು

 • Share this:
  ಹಳೆ ಕಾಲದ ನಾಣ್ಯಗಳು (Coins) ಒಂದೊಂದು ವಿಶೇಷತೆಯನ್ನು ಹೊಂದಿರುವುದು ನಮಗೆಲ್ಲ ಗೊತ್ತಿರುವ ವಿಚಾರವಾಗಿದೆ. ನಮ್ಮ ಇತಿಹಾಸ (History) ತಿಳಿಯಲು ಈ ನಾಣ್ಯಗಳು ಸಹ ಮೂಲ ಆಧಾರಗಳಾಗಿವೆ ಎಂಬುದು ಸುಳ್ಳಲ್ಲ. ಈ ನಾಣ್ಯಗಳಲ್ಲಿ ಇರುವ ಚಿತ್ರಗಳು, ಸಂಕೇತಗಳು, ವರ್ಷ ಇವೆಲ್ಲವೂಗಳ ಆಧಾರದ ಮೇಲೆ ಆ ವರ್ಷದಲ್ಲಿ ಯಾವ ಸಾಮ್ರಾಜ್ಯ ಆಳ್ವಿಕೆ (Empire rule) ನಡೆಸಿತ್ತು ಎಂಬುದು ಕೂಡ ಪತ್ತೆಯಾಗುತ್ತದೆ. ನಾಣ್ಯಗಳಲ್ಲಿ ಚಿನ್ನ, ಬೆಳ್ಳಿ, ಕಂಚು ಮತ್ತು ತಾಮ್ರಗಳಂತಹ ಲೋಹಗಳನ್ನು ಬಳಸಿರುವ ಆಧಾರದ ಮೇಲೆ ಆ ಸಾಮ್ರಾಜ್ಯದ ಆರ್ಥಿಕ ಸ್ಥಿತಿಯನ್ನು (Financial status) ಅಳೆಯಲಾಗುತ್ತಿತ್ತು. ಹೀಗೆ ನಾಣ್ಯಗಳು ನಮ್ಮ ಇತಿಹಾಸ ತಿಳಿಯಲು ಬಹಳ ಮುಖ್ಯವಾಗಿದೆ. ನಾವಿಂದು ಆ ನಾಣ್ಯಗಳ ಕುರಿತು ಕೆಲವು ವಿಷಯಗಳನ್ನು ಹಂಚಿಕೊಳ್ಳೋಣ ಬನ್ನಿ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.

  ಚಕ್ರವರ್ತಿ ಜಹಾಂಗೀರ್ ಕಾಲದ ರಾಶಿಚಕ್ರದ ನಾಣ್ಯಗಳು
  ಲೆನಿನ್ಗ್ರಾಡ್ ಸ್ಕಾರ್ಪಿಯೋ, ದಿ ಲಾಹೋರ್ ಕ್ಯಾಪ್ರಿಕೋನ್‌, ಆಗ್ರಾ ಅಕ್ವೇರಿಯಸ್‌, ಈ ಹೆಸರುಗಳನ್ನು ಕೇಳಿದರೆ ನಿಮಗೆ ಅನಿಸುವುದೇನು? ಇವೆಲ್ಲ ಪತ್ತೆದಾರಿ ಕಾದಂಬರಿಗಳ ಶಿರ್ಷಿಕೆಗಳು ಇರಬಹುದು ಎಂದು ಅನಿಸುತ್ತದೆಯೇ? ಆ ರೀತಿ ಅನಿಸಿದರೆ ನಿಮ್ಮ ಕಲ್ಪನೆ ತಪ್ಪು. ಇವು ವಿಂಟೇಜ್ ಪತ್ತೇದಾರಿ ಕಾದಂಬರಿಗಳ ಶೀರ್ಷಿಕೆಗಳಲ್ಲ. 1931 ರಲ್ಲಿ ಬ್ರಿಟಿಷ್ ನಾಣ್ಯಶಾಸ್ತ್ರಜ್ಞ ಆರ್‌.ಬಿ .ವೈಟ್‌ಹೆಡ್ ಅವರ ಪೋರ್ಟ್ರೇಟ್ ಮೆಡಲ್ಸ್ ಮತ್ತು ಚಕ್ರವರ್ತಿ ಜಹಾಂಗೀರ್ ರಾಶಿಚಕ್ರದ ನಾಣ್ಯಗಳ ಶೀರ್ಷಿಕೆಯ ಲೇಖನದಲ್ಲಿ ಕಂಡುಬರುವ ಉಲ್ಲೇಖಗಳು ಆಗಿವೆ.

  ಇದು ಮೊಘಲ್ ಚಕ್ರವರ್ತಿ ಜಹಾಂಗೀರ್ (1569-1627) ಹೊರಡಿಸಿದ ಜ್ಯೋತಿಷ್ಯ-ವಿಷಯದ ನಾಣ್ಯಗಳ ಅಸಾಮಾನ್ಯ ಸರಣಿಯ ಒಂದು ವಿಶಿಷ್ಟ ಸಾಧನೆಯಾಗಿದೆ. ಅವರು ವಿಶ್ವ ಇತಿಹಾಸದಲ್ಲಿ ರಾಶಿಚಕ್ರದ ನಾಣ್ಯಗಳ ಬಗ್ಗೆ ತಿಳಿದವರಲ್ಲಿ ಎರಡನೆ ರಾಜನಾಗಿದ್ದರು ಎಂಬುದು ತಿಳಿದು ಬಂದಿದೆ. ಮೊದಲನೆಯ ವ್ಯಕ್ತಿ ಎಂದರೆ ವೈಟ್‌ಹೆಡ್ ಆಗಿದ್ದನು ಎಂಬುದು ಇತಿಹಾಸದಲ್ಲಿದೆ.

  ಈ ನಾಣ್ಯಗಳನ್ನೇಕೆ ಚಲಾವಣೆಗೆ ತರಲಾಯಿತು
  17ನೇ ಶತಮಾನದ ಜಹಾಂಗೀರ್ ಚಕ್ರವರ್ತಿಯು ಹೊರಡಿಸಿದ ಈ ನಾಣ್ಯಗಳ ಬಗ್ಗೆ ಹಲವು ಪ್ರಶ್ನೆಗಳಿವೆ. ಅವುಗಳನ್ನು ಏಕೆ ಚಲಾವಣೆಗೆ ತರಲಾಯಿತು? ಮೊಘಲ್ ಚಕ್ರವರ್ತಿ ಆ ನಾಣ್ಯಗಳಿಗೆ ಯಾವ ಅರ್ಥವನ್ನು ನೀಡಲು ಬಯಸಿದನು? ಈ ನಾಣ್ಯಗಳು ಅಪರೂಪವಾಗಿವೆ ಮತ್ತು ಗಮನಾರ್ಹವಾದವುಗಳು ಆಗಿವೆ.

  ಇದನ್ನೂ ಓದಿ: Mohenjo-daro: ನಶಿಸಿಹೋಗುತ್ತಿದೆ ಮೊಹೆಂಜೋದಾರೋ ಕುರುಹು! ಕಳಚಿ ಹೋಗುತ್ತಾ ಐತಿಹಾಸಿಕ ಕೊಂಡಿ?  "ಈ ಚಿನ್ನದ ನಾಣ್ಯಗಳ ಒಂದು ಬದಿಯಲ್ಲಿ ನನ್ನ ಹೆಸರನ್ನು ಕೆತ್ತಲಾಗಿದೆ. ಇನ್ನೊಂದು ಬದಿಯಲ್ಲಿ ಟಂಕಿಸುವ ಸ್ಥಳದ ಹೆಸರು, ತಿಂಗಳು ಮತ್ತು ಆಳ್ವಿಕೆಯ ವರ್ಷವನ್ನು ಕೆತ್ತಲಾಗಿದೆ. ಪ್ರತಿ ತಿಂಗಳಿಗೆ ಒಂದು ಆ ತಿಂಗಳು ಪ್ರತಿನಿಧಿಸುವ ನಕ್ಷತ್ರಪುಂಜದ ಆಕೃತಿಯನ್ನು ಚಿತ್ರಿಸಲಾಗಿದೆ. ಪ್ರತಿ ತಿಂಗಳು ನಾಣ್ಯವನ್ನು ಮುದ್ರಿಸಿದಾಗ ಒಂದು ಬದಿಯು ಸೂರ್ಯ ಉದಯಿಸಿದ ನಕ್ಷತ್ರಪುಂಜದ ಚಿತ್ರವನ್ನು ಹೊಂದಿರುತ್ತದೆ. ಈ ವಿಧಾನವು ವಿಶಿಷ್ಟವಾಗಿದೆ. ಇದು ನನ್ನದೇ ಆಗಿದೆ. ಈ ವಿಧಾನವನ್ನು ಈ ಹಿಂದೆ ಯಾರು ಬಳಸಿಲ್ಲ” ಎಂದು ಆಗ ಜಹಾಂಗೀರ್ ನೂರ್-ಉದ್-ದಿನ್ ಮುಹಮ್ಮದ್ ಜಹಾಂಗೀರ್ ದಾಖಲಿಸಿದ್ದಾರೆ. ಇದರ ಅನುವಾದವನ್ನು ವೀಲರ್ .ಎಂ. ಥ್ಯಾಕ್ಸ್ಟನ್ ಮಾಡಿದ್ದಾರೆ.

  12 ರಾಶಿಚಕ್ರ ಚಿಹ್ನೆಗಳನ್ನು ಒಳಗೊಂಡ ನಾಣ್ಯಗಳು
  1618 ಮತ್ತು 1625 ರ ನಡುವೆ ಮುದ್ರಿತವಾಗಿರುವ ಚಿನ್ನ ಮತ್ತು ಬೆಳ್ಳಿಯ ಮೊಘಲ್‌ ಚಕ್ರವರ್ತಿ ಜಹಾಂಗೀರ್‌ನ ನಾಣ್ಯಗಳು ಸೂರ್ಯನಿಂದ ಪ್ರಭಾವಿತವಾಗಿರುವ 12 ರಾಶಿಚಕ್ರ ಚಿಹ್ನೆಗಳನ್ನು ಒಳಗೊಂಡಿವೆ. ಬ್ರಿಟಿಷ್ ನಾಣ್ಯಶಾಸ್ತ್ರಜ್ಞ ವೈಟ್‌ಹೆಡ್‌ನ ನಾಣ್ಯಗಳ ಸಮಗ್ರ ಅಧ್ಯಯನವು ಅವುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತದೆ.

  ತೂಕ ಮತ್ತು ಗಾತ್ರದ ವಿಷಯದಲ್ಲಿ, ಜಹಾಂಗಿರ್‌ನ ಅವಧಿಯ ಕೊನೆಯಲ್ಲಿ ಚಲಾವಣೆಯಲ್ಲಿದ್ದ ಸಾಮಾನ್ಯ ನಾಣ್ಯಗಳಂತೆಯೆ ಅವು ಇದ್ದವು. ಬಹುಪಾಲು, ಚಿನ್ನದ ನಾಣ್ಯಗಳನ್ನು ಆಗ್ರಾದಲ್ಲಿ ಮತ್ತು ಬೆಳ್ಳಿಯ ನಾಣ್ಯಗಳನ್ನು ಅಹಮದಾಬಾದ್‌ನಲ್ಲಿ ಮುದ್ರಿಸಲಾಗುತ್ತಿತ್ತು. ಆದರೂ ಸರಿಸುಮಾರು 25 ಅಜ್ಮೀರ್, ಉರ್ದು ಕ್ಯಾಂಪ್, ಫತೇಪುರ್, ಕಾಶ್ಮೀರ ಮತ್ತು ಲಾಹೋರ್‌ನಲ್ಲಿ ನಾಣ್ಯವನ್ನು ಮುದ್ರಿಸುವ ಸ್ಥಳಗಳಿದ್ದವು. ಈ ಕೊನೆಯ ಎರಡು ಸ್ಥಳಗಳಲ್ಲಿ, ಕೆಲವು ನಾಣ್ಯಗಳು ಸಾಮ್ರಾಟಿಣಿ ನೂರ್ ಜಹಾನ್ ಅವರ ಹೆಸರನ್ನು ಸಹ ಒಳಗೊಂಡಿವೆ.

  ಇತಿಹಾಸವನ್ನು ಮೆಲಕು ಹಾಕಿದ ಈ ಜ್ಯೋತಿಷ್ಯಶಾಸ್ತ್ರದ ನಾಣ್ಯಗಳು 
  ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿನ ಇಸ್ಲಾಮಿಕ್ ಆರ್ಟ್ ವಿಭಾಗದ ಮಾಸ್ಟರ್‌ಪೀಸ್‌ನ ಕ್ಯಾಟಲಾಗ್‌ನಲ್ಲಿ, ನ್ಯೂಯಾರ್ಕ್ ಮ್ಯೂಸಿಯಂನಲ್ಲಿ ಮೊಘಲ್‌ ಚರ್ಕವರ್ತಿ ಜಹಾಂಗೀರ್‌ನ ಕಾಲದಲ್ಲಿನ ಅಂತಹ 10 ನಾಣ್ಯಗಳ ಸಂಗ್ರಹವು ಆಗೀನ ಇತಿಹಾಸವನ್ನು ಮೆಲಕು ಹಾಕುವಂತೆ ಮಾಡುತ್ತದೆ.  ಇದನ್ನೂ ಓದಿ:  Beauty of Shivamogga: ಮಲೆನಾಡಿನ ಪ್ರಕೃತಿ ಸೌಂದರ್ಯವಷ್ಟೇ ರೋಚಕವಾಗಿದೆ ಅಲ್ಲಿನ ಇತಿಹಾಸ ಮತ್ತು ಸಂಸ್ಕೃತಿ

  “ಈ ನಾಣ್ಯಗಳು ಭಾರತೀಯ ಮತ್ತು ಇಸ್ಲಾಮಿಕ್ ನಾಣ್ಯಶಾಸ್ತ್ರದ ಸಂದರ್ಭದಲ್ಲಿ ಮುದ್ರಿತವಾದ ವಿಶಿಷ್ಟ ನಾಣ್ಯಗಳು ಆಗಿವೆ. ಏಕೆಂದರೆ ಇವುಗಳನ್ನು ಮುಸ್ಲಿಂ ಆಡಳಿತಗಾರರು ಹೊರಡಿಸಿದಂತೆ ಕಾಣಿಸುವುದೇ ಇಲ್ಲ. ಮುಸ್ಲಿಂ ಸಮುದಾಯದ ಯಾವುದೇ ಆಕೃತಿಯ ಅಲಂಕಾರವನ್ನು ಹೊಂದಿಲ್ಲ ಮತ್ತು ಇತರ ಯಾವುದೇ ಭಾರತೀಯ ನಾಣ್ಯಗಳು ಕೂಡ ಜ್ಯೋತಿಷ್ಯ ಹೇಳುವ ಚಿತ್ರವನ್ನು ಹೊಂದಿಲ್ಲ” ಎಂದು ಮ್ಯೂಸಿಯಂನ ವರದಿ ಹೇಳುತ್ತದೆ.
  Published by:Ashwini Prabhu
  First published: