Russia-Ukraine War: ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ 2 ತಿಂಗಳ ಮೊದಲೇ ಸುಳಿವು ನೀಡಿತ್ತು ಬೆಂಗಳೂರಿನ ಈ ಪತ್ರಿಕೆ

Astrology magazine: ಉಕ್ರೇನ್ ಮೇಲೆ ದಾಳಿ ನಡೆಸಿ ಬೆಚ್ಚಿಬೀಳಿಸಿರುವ ರಷ್ಯಾ ಮೇಲೂ ಕೂಡ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಮಾಡ್ರನ್ ಅಸ್ಟ್ರಾಲಜಿ ಪತ್ರಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಳೆದ ಡಿಸೆಂಬರ್ ನಲ್ಲಿ (December) ಮೂರು ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (Bipin Rawat) ಅವರು ಸಾವನ್ನಪ್ಪಿದ್ದ ವೇಳೆ ಬೆಂಗಳೂರು (Bengaluru) ಮೂಲದ ಪತ್ರಿಕೆ (News Paper) ಹಾಗೂ ಪತ್ರಿಕೆಯಲ್ಲಿ ಸಂಪಾದಕರೊಬ್ಬರು ಸಾಕಷ್ಟು ಸುದ್ದಿಯಲ್ಲಿದ್ದರು. ಯಾಕಂದ್ರೆ ಜನರಲ್ ಬಿಪಿನ್ ರಾವತ್ ಅವರ ಸಾವಿನ ಬಗ್ಗೆ ಅಗ್ರಣಿ ಪಬ್ಲಿಕೇಷನ್ಸ್​ನಿಂದ ಹೊರ ಬರುವ “ಮಾಡರ್ನ್ ಅಸ್ಟ್ರಾಲಜಿ”(Modern Astrology) ಎಂಬ ಜ್ಯೋತಿಷ ಮಾಸಪತ್ರಿಕೆಯ ಪುಟದಲ್ಲಿ ದೇಶದ ಅತಿ ಉಚ್ಚ ನಾಯಕರ ಮೇಲೆ ಸೇನಾ ಮುಖ್ಯಸ್ಥರೂ ಆಗಬಹುದು ಕನಿಷ್ಠ ಎರಡು ಹಿಂಸಾ ಪ್ರಯತ್ನ ನಡೆಯಬಹುದು ಎಂದು ಇದ್ದ ಲೇಖನವೊಂದು ಪ್ರಕಟವಾಗಿತ್ತು. ಈ ಲೇಖನ ಬಂದ ಕೆಲವೇ ದಿನಗಳಲ್ಲಿ ಹೆಲಿಕಾಪ್ಟರ್ (Helicopter) ದುರಂತದಲ್ಲಿ ಜನರಲ್ ಬಿಪಿನ್ ರಾವತ್ ಅವರು ಸಾವನ್ನಪ್ಪಿದ್ದರು. ಈಗ ಈ ಪತ್ರಿಕೆ ಮತ್ತೆ ಮುನ್ನೆಲೆಗೆ ಬಂದಿದೆ.. ಕಾರಣ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ.

  ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಬಗ್ಗೆ ಮೊದಲೇ ಮಾಹಿತಿ

  ಸದ್ಯ ಕಳೆದೊಂದು ವಾರದಿಂದ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಇರುವುದು ಉಕ್ರೇನ್ ದೇಶದ ಮೇಲೆ ರಷ್ಯಾ ಮಾಡಿರುವ ಆಕ್ರಮಣ. ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿರುವುದನ್ನು ಜಗತ್ತಿನ ಹಲವಾರು ಜ್ಯೋತಿಷಿಗಳು ಮೊದಲೇ ಉಲ್ಲೇಖಿಸಿದ್ದರು ಎಂದು ಹೇಳಲಾಗುತ್ತಿದೆ.. ಅದರಂತೆ ಬಾಬಾ ವಂಗಾ, ನಾಸ್ಟ್ರಾಡಾಮ್ ಅವರ ಹಲವು ಹೇಳಿಕೆಗಳನ್ನು ಕೂಡ ತೆಗೆದುಕೊಂಡು ಕೆಲವರು ರಷ್ಯಾದ ಪ್ರಾಬಲ್ಯದ ಬಗ್ಗೆ ಹೇಳುತ್ತಿದ್ದಾರೆ.. ಅದೇ ರೀತಿ ಈಗ ಬೆಂಗಳೂರಿನ
  ಮಾಡರ್ನ್ ಅಸ್ಟ್ರಾಲಜಿ ಎಂಬ ಪತ್ರಿಕೆ ಕಳೆದೆರಡು ತಿಂಗಳುಗಳ ಹಿಂದೆ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಬಗ್ಗೆ ಬರೆದಿರುವುದು ಈಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

  ಇದನ್ನೂ ಓದಿ: ರಷ್ಯಾ ವಿರುದ್ಧ ತಿರುಗಿಬಿದ್ದ ಪೋಲ್ಯಾಂಡ್, ರಷ್ಯಾ ಜೊತೆಗೆ ಫುಟ್ಬಾಲ್ ಆಡಲ್ಲ ಎಂದು ನಿರ್ಧಾರ

  ರಷ್ಯಾ ಹಾಗೂ ಉಕ್ರೇನ್ ಯುದ್ಧದ ಬಗ್ಗೆ ಏನು ಹೇಳಲಾಗಿತ್ತು..?

  ರಷ್ಯಾವು ಸೇನೆಯು 2022ರ ಆರಂಭ ಹಾಗೂ 2023ರ ಶುರುವಿನಲ್ಲಿ ನೆರೆಯ ದೇಶಗಳಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳಬಹುದು. ಇದಕ್ಕೆ ಯಾವುದೇ ಪರಿಹಾರ ಕಾಣುವುದಿಲ್ಲ. ಆ ಭಾಗದಲ್ಲಿ ಉದ್ವಿಗ್ನತೆಯನ್ನು ಉಳಿಸುವ ರಷ್ಯಾದ ಉದ್ದೇಶವನ್ನು ಸಂಪೂರ್ಣವಾಗಿ ಗೌರವಿಸುವುದು ಸಾಧ್ಯ ಆಗದಿರಬಹುದು.” - ಹೀಗೆ ಬರೆಯಲಾಗಿದೆ. ಅಷ್ಟೇ ಅಲ್ಲ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜನ್ಮ ಜಾತಕದ ಪ್ರಕಾರ, ವರ್ಷದ ಕೊನೆಗೆ ಸಾಗುತ್ತಾ ಬಂದಂತೆ ಅವರು ಇನ್ನಷ್ಟು ಬಲಿಷ್ಠರಾಗುತ್ತಾರೆ. ಪುಟಿನ್ ಆರೋಗ್ಯದ ಬಗ್ಗೆ ಇರುವ ವದಂತಿಗಳು ಈಗಿನ ಸೂಚನೆಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಜಾತಕದಲ್ಲಿ 9ನೇ ಮನೆಯ ಅಧಿಪತಿಯಾಗಿ ಬಲಿಷ್ಠ ಬುಧನ ದಶಾ ಕಾಲದಲ್ಲಿ ಭಾರೀ ಬುದ್ಧಿವಂತಿಕೆಯಿಂದ ಪುಟಿನ್ ತಂತ್ರಗಳನ್ನು ಹೆಣೆಯುತ್ತಾರೆ.

  ಭಾರತದ ಸಂಬಂಧವು ರಷ್ಯಾ ಜತೆಗೆ ಸ್ವಲ್ಪ ಮಟ್ಟಿಗೆ ಬಳಲಲಿದೆ ಎಂದು ಮಾಡ್ರನ್ ಆಸ್ಟ್ರಾಲಜಿ ಪತ್ರಿಕೆಯಲ್ಲಿ ಬರೆಯಲಾಗಿತ್ತು. ಸದ್ಯ ಈ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು ಈ ಪತ್ರಿಕೆಯ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ ಸಾಕಷ್ಟು ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.  ರಷ್ಯಾ ಮೇಲೆ ನಡೆಯುತ್ತಂತೆ ಭಯೋತ್ಪಾದಕ ದಾಳಿ

  ಸದ್ಯ ಉಕ್ರೇನ್ ಮೇಲೆ ದಾಳಿ ನಡೆಸಿ ಬೆಚ್ಚಿಬೀಳಿಸಿರುವ ರಷ್ಯಾ ಮೇಲೂ ಕೂಡ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಮಾಡ್ರನ್ ಅಸ್ಟ್ರಾಲಜಿ ಪತ್ರಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.ಗುರುವಿನ ಸಂಯೋಗ ಆಗುವ ಏಪ್ರಿಲ್ 29, 2022 ಹಾಗೂ ರಾಹು- ಕುಜ ಸಂಯೋಗದ ಆಗಸ್ಟ್ 1, 2022ರಲ್ಲಿ ರಷ್ಯಾದ ಮೇಲೆ ಪ್ರಮುಖ ಭಯೋತ್ಪಾದನೆ ದಾಳಿ ಆಗಬಹುದು. ಆದರೆ ಇದೇ ಅವಧಿಯಲ್ಲಿ ಪುಟಿನ್ ಮೇಲೆ ಯಾವುದೇ ದಾಳಿ ಸಾಧ್ಯತೆಗಳಿಲ್ಲ, ಎಂದು ಹೇಳಲಾಗಿದೆ. ಅಲ್ಲದೇ ರಷ್ಯಾಗೆ ಬಹುದೊಡ್ಡ ಆರ್ಥಿಕ ಸಂಕಷ್ಟ ಕೂಡಾ ಎದುರಾಗಲಿದೆ ಎಂದು ಮಾಡ್ರನ್ ಅಸ್ಟ್ರಾಲಜಿ ಪತ್ರಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.

  ಇದನ್ನೂ ಓದಿ: ಯುದ್ಧ ಸಂಕಷ್ಟದಲ್ಲಿ ಆಶ್ರಯ ನೀಡಿದ್ದ ಕುಟುಂಬವನ್ನು ಬಿಟ್ಟು ಭಾರತಕ್ಕೆ ಬರಲಾರೆ ಎಂದ ದಿಟ್ಟ ಹುಡುಗಿ! ಯಾರವಳು?

  ಯಾವುದು ಮಾಡ್ರನ್ ಅಸ್ಟ್ರಾಲಜಿ ಪತ್ರಿಕೆ..?

  ಸದ್ಯ ಸಾಕಷ್ಟು ಸಂಚಲನ ಮೂಡಿಸಿರುವ ಮಾಡ್ರನ್ ಅಸ್ಟ್ರಾಲಜಿ ಪತ್ರಿಕೆ ಬೆಂಗಳೂರಿನಿಂದಲೇ ಪ್ರಕಟವಾಗುತ್ತಿದ್ದು, ಗಾಯತ್ರಿದೇವಿ ವಾಸುದೇವ್ ಎಂಬುವವರು ಇದರ ಪ್ರಧಾನ ಸಂಪಾದಕರಾಗಿದ್ದಾರೆ.. ಸತತ 30 ವರ್ಷಗಳ ಕಾಲ ಜ್ಯೋತಿಷ್ಯಶಾಸ್ತ್ರ ಅಧ್ಯಯನ ಮಾಡಿರುವ ಗಾಯತ್ರಿ ವಾಸುದೇವ್ ಅವರು ಜ್ಯೋತಿಷ ಶಾಸ್ತ್ರದಲ್ಲಿ ಭಾರತಕ್ಕೆ ಮಾತ್ರ ಅಲ್ಲ, ವಿದೇಶಗಳಲ್ಲೂ ಖ್ಯಾತರಾಗಿದ್ದ ಬಿ.ವಿ. ರಾಮನ್ ಅವರ ಮಗಳೇ ಗಾಯತ್ರಿ ವಾಸುದೇವ್.
  Published by:ranjumbkgowda1 ranjumbkgowda1
  First published: