• Home
  • »
  • News
  • »
  • national-international
  • »
  • Telangana: ತೆಲಂಗಾಣ ರಾಷ್ಟ್ರೀಯ ಏಕತಾ ವಜ್ರೋತ್ಸವಕ್ಕೆ ಸಿದ್ಧತೆ, ಸಭೆ ನಡೆಸಿ ಮಾತುಕತೆ

Telangana: ತೆಲಂಗಾಣ ರಾಷ್ಟ್ರೀಯ ಏಕತಾ ವಜ್ರೋತ್ಸವಕ್ಕೆ ಸಿದ್ಧತೆ, ಸಭೆ ನಡೆಸಿ ಮಾತುಕತೆ

ವಿಧಾನಸಭೆ ಸ್ಪೀಕರ್ ಪೋಚಾರಂ ಶ್ರೀನಿವಾಸ ರೆಡ್ಡಿ

ವಿಧಾನಸಭೆ ಸ್ಪೀಕರ್ ಪೋಚಾರಂ ಶ್ರೀನಿವಾಸ ರೆಡ್ಡಿ

ತೆಲಂಗಾಣ ವಿಲೀನವನ್ನು (Merger of Telangana) ರಾಷ್ಟ್ರೀಯ ಏಕೀಕರಣ ದಿನವನ್ನಾಗಿ ಆಚರಿಸುವಂತೆ ಸ್ಪೀಕರ್ ಪೋಚಾರಂ ಶ್ರೀನಿವಾಸ ರೆಡ್ಡಿ (Pocharam Srinivasa Reddy) ಕರೆ ನೀಡಿದ್ದಾರೆ. ಶ್ರೀನಿವಾಸ ರೆಡ್ಡಿ ಅವರು ಭನ್ಸುವಾಡದಲ್ಲಿರುವ ಶಾಸಕರ ಕಚೇರಿಯಲ್ಲಿ ತೆಲಂಗಾಣ ರಾಷ್ಟ್ರೀಯ ಏಕತಾ ವಜ್ರೋತ್ಸವದ ಕುರಿತು ಸಭೆ ನಡೆಸಿದರು.

ಮುಂದೆ ಓದಿ ...
  • Share this:

ನಿಜಾಮಾಬಾದ್: ತೆಲಂಗಾಣ (Telangana) ವಿಮೋಚನಾ ದಿನವನ್ನು ಅದ್ಧೂರಿಯಾಗಿ ಆಚರಿಸಲು ಕೇಂದ್ರ ಸರ್ಕಾರ ಈಗಾಗಲೇ ನಿರ್ಧರಿಸಿದೆ. ಈ ಕುರಿತು ತೆಲಂಗಾಣ ವಿಧಾನಸಭೆ ಸ್ಪೀಕರ್ ಕೂಡ ಮಾತನಾಡಿದ್ದು, ತೆಲಂಗಾಣ ವಿಲೀನವನ್ನು (Merger of Telangana) ರಾಷ್ಟ್ರೀಯ ಏಕೀಕರಣ ದಿನವನ್ನಾಗಿ ಆಚರಿಸುವಂತೆ ಸ್ಪೀಕರ್ ಪೋಚಾರಂ ಶ್ರೀನಿವಾಸ ರೆಡ್ಡಿ (Pocharam Srinivasa Reddy) ಕರೆ ನೀಡಿದ್ದಾರೆ. ಶ್ರೀನಿವಾಸ ರೆಡ್ಡಿ ಅವರು ಭನ್ಸುವಾಡದಲ್ಲಿರುವ ಶಾಸಕರ ಕಚೇರಿಯಲ್ಲಿ ತೆಲಂಗಾಣ ರಾಷ್ಟ್ರೀಯ ಏಕತಾ ವಜ್ರೋತ್ಸವದ ಕುರಿತು ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಪೋಚಾರಾಂ, ಭಾರತಕ್ಕೆ ಸ್ವಾತಂತ್ರ್ಯ (Indian Independence) ಬರುವ ವೇಳೆಗೆ ದೇಶದಲ್ಲಿ 584 ಸ್ವಾಯತ್ತ ರಾಜ್ಯಗಳಿದ್ದವು ಎಂದು ವಿವರಿಸಿದರು. 


ಇತಿಹಾಸ ಮೆಲುಕು ಹಾಕಿದ ಸ್ಪೀಕರ್
ನಿಜಾಮರ ಆಳ್ವಿಕೆಯಲ್ಲಿದ್ದ ತೆಲಂಗಾಣದ ಜೊತೆಗೆ ಈಗ ಮಹಾರಾಷ್ಟ್ರದ ವಿದರ್ಭ ಮತ್ತು ಕರ್ನಾಟಕದಲ್ಲಿ ನಿಜಾಮರ ಆಳ್ವಿಕೆಯ ಪ್ರದೇಶಗಳನ್ನು ಸೆಪ್ಟೆಂಬರ್ 17, 1948 ರಂದು ಭಾರತದೊಂದಿಗೆ ವಿಲೀನಗೊಳಿಸಲಾಯಿತು ಎಂದು ಸಭೆಯಲ್ಲಿ ಇತಿಹಾಸವನ್ನು ಮೆಲುಕು ಹಾಕಿದರು. ಭಾರತದ ಸ್ವಾತಂತ್ರ್ಯ ವಜ್ರ ಮಹೋತ್ಸವವನ್ನು 15 ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲಾಯಿತು, ಅಂತೆಯೇ ನಾವು ಕೂಡ ರಾಜ್ಯದಲ್ಲಿ ಈ ದಿನವನ್ನು ಆಚರಿಸಬೇಕು ಎಂದು ಸ್ಪೀಕರ್ ಅಭಿಪ್ರಾಯಪಟ್ಟರು.‌


ಮೂರು ದಿನಗಳ ಕಾಲ ತೆಲಂಗಾಣ ವಿಲೀನ ದಿನ ಆಚರಣೆ
ತೆಲಂಗಾಣ ರಾಷ್ಟ್ರೀಯ ಏಕತಾ ವಜ್ರ ಮಹೋತ್ಸವ ಕಾರ್ಯಕ್ರಮದ ರೂಪುರೇಷೆ ಕುರಿತು ಮಾತನಾಡಿದ ಸ್ಪೀಕರ್‌, ಮೂರು ದಿನಗಳ ಕಾಲ ಈ ದಿನವನ್ನು ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಉತ್ಸವಗಳನ್ನು ಸರ್ಕಾರ ಅಧಿಕೃತವಾಗಿ ಆಯೋಜಿಸಲಿದೆ ಎಂದು ತಿಳಿಸಿದರು.


ಸೆ.16ರಂದು ಭನ್ಸುವಾಡ ಮತಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜನೆಗೊಳ್ಳಲಿದ್ದು, ಎಲ್ಲ ವರ್ಗದ 15 ಸಾವಿರ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಪಟ್ಟಣದ ಭನ್ಸುವಾಡ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಚೇತಬೂನಿ ಪಟ್ಟಣದ ಮುಖ್ಯರಸ್ತೆಯಲ್ಲಿ ಎಲ್ಲರೂ ಸೇರಿ ರಾಷ್ಟ್ರಧ್ವಜ ಹಿಡಿದು ರ್‍ಯಾಲಿ ನಡೆಸಲಿದ್ದಾರೆ ಎಂದು ಕಾರ್ಯಕ್ರಮದ ಬಗ್ಗೆ ವಿವರಿಸಿದರು.


ಸರ್ಕಾರದ ವತಿಯಿಂದ ಊಟದ ವ್ಯವಸ್ಥೆ
ಆ ದಿನ ನಾಲ್ಕು ಕಿಲೋಮೀಟರ್ ಉದ್ದದ ರಾಷ್ಟ್ರಧ್ವಜ ಹಿಡಿದು ಪ್ರದರ್ಶನ ನಡೆಸಲಾಗುವುದು ಎಂದು ತಿಳಿಸಿದರು. ಸರ್ಕಾರಿ ಜೂನಿಯರ್ ಕಾಲೇಜುಗಳಲ್ಲಿ 15 ಸಾವಿರ ಜನರಿಗೆ ಸರ್ಕಾರದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹಕರಿಸಬೇಕು ಎಂದು ಸಭಾಧ್ಯಕ್ಷರು ಸಾರ್ವಜನಿಕರಲ್ಲಿ ವಿನಂತಿಸಿದರು.


ಇದನ್ನೂ ಓದಿ:  Ganeshotsav: 183 ರಸ್ತೆಗುಂಡಿ ಸೃಷ್ಟಿಸಿದ ಆರೋಪ; ಗಣೇಶನಿಗೆ 3.66 ಲಕ್ಷ ದಂಡ!


ಸಭೆಯಲ್ಲಿ ಭನ್ಸುವಾಡ ಆರ್‌ಡಿಒ ರಾಜಗೌಡ, ಜಿಲ್ಲಾ ರೈತಬಂಧು ಅಧ್ಯಕ್ಷ ಅಂಜಿರೆಡ್ಡಿ, ಪುರಸಭೆ ಅಧ್ಯಕ್ಷ ಜಂಗಮ ಗಂಗಾಧರ್, ಕ್ಷೇತ್ರದ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದ್ದರು.


ತೆಲಂಗಾಣಕ್ಕೆ ಸೆಪ್ಟಂಬರ್ 17, ಸ್ವಾತಂತ್ರ್ಯ ದಿನ
ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದ ಸಂಭ್ರಮದಲ್ಲಿ ದೇಶದಲ್ಲಿ ಈ ಬಾರಿಯ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು 1947ರ ಆಗಸ್ಟ್ 15ರಂದು ಆದರೆ ಆದರೆ ನಮ್ಮದೇ ದೇಶದ ಮೂರು ರಾಜ್ಯಗಳ ಕೆಲ ಭಾಗದ ಜನರಿಗೆ ಮಾತ್ರ ಸೆಪ್ಟಂಬರ್ 17ರಂದು ಸ್ವಾತಂತ್ರ್ಯ ಲಭಿಸಿತು.


ಭಾರತದಲ್ಲಿ ವೀಲಿನಗೊಳ್ಳಲು ಒಪ್ಪದೇ ಸ್ವತಂತ್ರ ಆಳ್ವಿಕೆ ನಡೆಸಲು ಬಯಸಿದ್ದ ಹೈದ್ರಾಬಾದ್ ಸಂಸ್ಥಾನದ ನಿಜಾಮನ ನಿರ್ಧಾರದಿಂದಾಗಿ ಹೈದಾರಾಬಾದ್‌ ಸೇರಿ ಕೆಲ ಪ್ರದೇಶಗಳಿಗೆ ಸ್ವಾತಂತ್ರ್ಯ ಸಿಗುವುದು ವಿಳಂಬವಾಯಿತು.


ಇದನ್ನೂ ಓದಿ: ರೆಸ್ಟೋರೆಂಟ್​ನಿಂದ Food​ ಆರ್ಡರ್​ ಮಾಡಿದ ಮಹಿಳೆ, ಪ್ಯಾಕೆಟ್​ ತೆರೆದಾಕೆಗೆ ಸಿಕ್ಕಿದ್ದು 43,000 ರೂ. ಕ್ಯಾಶ್!


ಆದರೆ ನಂತರ ನಡೆದ ಬೆಳವಣಿಗೆಗಳಿಂದಾಗಿ ಹೈದ್ರಾಬಾದ್ ಸೆಪ್ಟಂಬರ್ 17,1948 ರಂದು ಭಾರತದಲ್ಲಿ ವಿಲೀನವಾಯಿತು. ಹೀಗಾಗಿ ಇಲ್ಲಿನ ಜನರಿಗೆ ಸೆಪ್ಟಂಬರ್ 17 ಸ್ವಾತಂತ್ರ ದಿನವಾಗಿದೆ. ತೆಲಂಗಾಣ ಮತ್ತು ಇಂದಿನ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಜಿಲ್ಲೆಗಳು ಹಿಂದಿನ ಹೈದರಾಬಾದ್‌ ರಾಜ್ಯದ ಭಾಗವಾಗಿದ್ದವು.

Published by:Ashwini Prabhu
First published: