Up Elections: ಇಂದು ವಾರಣಾಸಿಯಲ್ಲಿ ಪ್ರಧಾನಿ ಮೋದಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪ್ರಚಾರ

ಪ್ರಧಾನಿ ಮೋದಿ ಇಂದು ಮತ್ತು ನಾಳೆ ಎರಡೂ ದಿನ‌ ವಾರಣಾಸಿಯಲ್ಲೇ ಠಿಕಾಣಿ‌ ಹೂಡಲಿದ್ದಾರೆ. ರಾಹುಲ್ ಗಾಂಧಿ ಕಾಶಿ‌ ವಿಶ್ವೇಶ್ವರನ‌ ದರ್ಶನ‌ ಪಡೆಯಲಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಕಾಶಿಯಲ್ಲೇ ಪ್ರಚಾರ ಮಾಡಲಿದ್ದಾರೆ. ನಾಳೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ.

ನರೇಂದ್ರ ಮೋದಿ

ನರೇಂದ್ರ ಮೋದಿ

  • Share this:
ನವದೆಹಲಿ(ಮಾ. 4): ದೇಶಾದ್ಯಂತ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಐದು ಹಂತದ ಮತದಾನ ಮುಗಿದಿದ್ದು ಚುನಾವಣಾ ಕಣ ಈಗ ಇನ್ನಷ್ಟು ಬಿಸಿ‌ಯಾಗಿದೆ. ಇತರೆ ರಾಜ್ಯಗಳ ಚುನಾವಣಾ ಕೆಲಸ ಮುಗಿದಿದ್ದು ಘಟಾನುಘಟಿ ನಾಯಕರು ಉತ್ತರ ಪ್ರದೇಶದ ಕಡೆ ಸಂಪೂರ್ಣವಾಗಿ ಗಮನ ಹರಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಕೂಡ ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ (Varanasi) ಇಂದು ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಇದೇ ವಾರಣಾಸಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಮತ್ತು ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Uttar Pradesh Congress In charge and AICC General Secretary Priyanka Gandhi) ಅವರು ಕೂಡ ಪ್ರಚಾರ ನಡೆಸಲಿದ್ದಾರೆ.

ಮೋದಿ 2 ದಿನ ವಾರಣಾಸಿಯಲ್ಲೇ‌ ಠಿಕಾಣಿ

ಇಂದಿನಿಂದ 2 ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಾವು ಲೋಕಸಭೆಗೆ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ವಾರಣಾಸಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯು ಹಲವಾರು ಸಾರ್ವಜನಿಕ ಸಭೆಗಳು ಮತ್ತು ರೋಡ್‌ ಶೋಗಳನ್ನು ಆಯೋಜಿಸುತ್ತಿದೆ.

ಎರಡೂ ದಿನಗಳ ವೇಳಾಪಟ್ಟಿ

ಇಂದು ಪ್ರಧಾನಿ ಮೋದಿ ವಾರಣಾಸಿ ನಗರದ 3 ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ನಗರದ ಎಲ್ಲಾ ಮೂರು ಸ್ಥಾನಗಳಾದ ವಾರಣಾಸಿ ಕ್ಯಾಂಟ್, ವಾರಣಾಸಿ ಉತ್ತರ ಮತ್ತು ವಾರಣಾಸಿ ದಕ್ಷಿಣ ಕ್ಷೇತ್ರಗಳ ಮೂಲಕ ಹಾದು ಹೋಗಲಿದೆ. ಮಧ್ಯಾಹ್ನ 2 ಗಂಟೆಗೆ ಮಾಲ್ದಾಹಿಯಾ ಛೇದಕದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮೋದಿ ಮಾಲಾರ್ಪಣೆ ಮಾಡಲಿದ್ದಾರೆ.

ಕಾಶಿ ವಿಶ್ವನಾಥನ ದರ್ಶನ

ನಂತರ ಲಾಹುರಾಬೀರ್, ಮೈದಾಗಿನ್, ಚೌಕ್‌ನಿಂದ ಗೊದೌಲಿಯಾವರೆಗೆ ರೋಡ್ ಶೋ ನಡೆಯಲಿದೆ. ಇದೇ ವೇಳೆ ಕಾಶಿ ವಿಶ್ವನಾಥನ ದರ್ಶನಕ್ಕೆ ಪಡೆಯಲಿದ್ದಾರೆ. ನಾಳೆ ರಾಜತಾಲಬ್‌ನ ಖಜೂರಿ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು ಸಂಜೆವರೆಗೂ ದೆಹಲಿಗೆ ತೆರಳಲಿದ್ದಾರೆ.

ಇದನ್ನೂ ಓದಿ:

ಇಂದು ರಾಹುಲ್ ಗಾಂಧಿ ಕೂಡ ವಾರಣಾಸಿಗೆ ಭೇಟಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡ ಇಂದು ವಾರಣಾಸಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕಾಶಿ ವಿಶ್ವನಾಥನ ದರ್ಶನ ಪಡೆಯಲಿರುವ ರಾಹುಲ್ ಗಾಂಧಿ ನಂತರ ಮಧ್ಯಾಹ್ನ 1 ಗಂಟೆಗೆ ವಾರಣಾಸಿಯ ಪಿಂದ್ರಾದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡ ವಾರಣಾಸಿಯಲ್ಲೇ ಉಳಿದುಕೊಂಡು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

ಇದನ್ನೂ ಓದಿ:

ಮಾರ್ಚ್ 7ರಂದು ಉತ್ತರ ಪ್ರದೇಶದಲ್ಲಿ ಕಡೆಯ ಮತ್ತು 7ನೇ ಹಂತದ ಮತದಾನ ಆಗಲಿದೆ. ಮಾರ್ಚ್ 10ರಂದು ಉತ್ತರ ಪ್ರದೇಶವೂ ಸೇರಿದಂತೆ ಗೋವಾ, ಪಂಜಾಬ್, ಉತ್ತರಖಂಡಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶವೂ ಪ್ರಕಟಗೊಳ್ಳಲಿದೆ. 403 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಪ್ರದೇಶದಲ್ಲಿ 7ನೇ ಹಂತದಲ್ಲಿ 54 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
Published by:Divya D
First published: